ಮಂಗಳೂರು : bjp leader murder case : ರಾಜ್ಯದಲ್ಲಿ ರಾಜಕೀಯದ ಹೆಸರಿನಲ್ಲಿ ಯುವಕರ ಕೊಲೆಗೆ ಅಂತ್ಯವೇ ಇಲ್ಲ ಎಂಬಂತಾಗಿದೆ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ದಕ್ಷಿಣ ಕನ್ನಡದಲ್ಲಿ ನೆತ್ತರು ಹರಿದಿದೆ . ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಿಜೆಪಿ ಯುವ ಮೋರ್ಛಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಎಂಬವರು ಕೊಲೆಯಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಕರಾವಳಿ ಜಿಲ್ಲೆಯಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.
ದುಷ್ಕರ್ಮಿಗಳಿಂದ ಅತ್ಯಂತ ಭೀಕರವಾಗಿ ಹತ್ಯೆಯಾದ ಪ್ರವೀನ್ ನೆಟ್ಟಾರು ಈ ಭಾಗದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದ್ದರು. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಪುತ್ತೂರು , ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕೊಲೆಯಾದ ಪ್ರವೀಣ್ ಮೃತದೇಹವನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆಗೆಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.ಇದೀಗ ಪ್ರವೀಣ್ ನೆಟ್ಟಾರು ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು ಮೆರವಣಿಗೆ ಮೂಲಕ ಪ್ರವೀಣ್ ಮೃತದೇಹವನ್ನು ಸ್ವಗ್ರಾಮ ಬೆಳ್ಳಾರೆಗೆ ಕರೆತರಲಾಗ್ತಿದೆ.
ಹಿಂದೂ ಪರ ಸಂಘಟನೆಗಳು ಪ್ರವೀಣ್ ನಿಟ್ಟೂರು ಹತ್ಯೆಯನ್ನು ಖಂಡಿಸಿ ಪುತ್ತೂರು, ಸುಳ್ಯ ಹಾಗೂ ಕಡಬ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬಂದ್ಗೆ ಕರೆ ನೀಡುತ್ತಿವೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಲು ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಸುಳ್ಯ, ಕಡಬ ಬೆಳ್ಳಾರೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ : Praveen Nettaru murder : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ : ಸಿಎಂ ಬೊಮ್ಮಾಯಿ ಖಂಡನೆ, ಯಾರು ಈ ಪ್ರವೀಣ್ ನೆಟ್ಟಾರು ?
ಇದನ್ನೂ ಓದಿ : Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ
three taluks of Dakshin kannada district of bund over bjp leader murder case