ಉತ್ತರ ಪ್ರದೇಶ: Twist in murder case: ಕಳೆದ 7 ವರ್ಷಗಳ ಹಿಂದೆ ಆಲಿಗಢದಲ್ಲಿ ನಡೆದಿತ್ತು ಎನ್ನಲಾದ ಬಾಲಕಿ ಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಅಂದು ಕೊಲೆಯಾಗಿ ಸತ್ತಿದ್ದಾಳೆ ಎಂದೇ ನಂಬಲಾಗಿದ್ದ ಆ ಬಾಲಕಿ ಇದೀಗ ದಿಢೀರನೇ ಪ್ರತ್ಯಕ್ಷಳಾಗಿ ಪೊಲೀಸರಿಗೆ ಸೇರಿದಂತೆ ಮನೆಮಂದಿಗೆಲ್ಲಾ ಶಾಕ್ ನೀಡಿದ್ದಾಳೆ. ಅತ್ತ ತಪ್ಪೇ ಮಾಡದ ಯುವಕನೊಬ್ಬ ಬಾಲಕಿ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿದ್ದಾನೆ.
7 ವರ್ಷಗಳ ಹಿಂದೆ ನಡೆದಿದ್ದೇನು..?
2015ರಲ್ಲಿ ಉತ್ತರ ಪ್ರದೇಶದ ಆಲಿಗಢ್ ನಲ್ಲಿ 14 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ಆಗ್ರಾದಲ್ಲಿ 14 ವರ್ಷದ ಹುಡುಗಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಕಾಣೆಯಾಗಿದ್ದ ಹುಡುಗಿ ಮೃತಪಟ್ಟಿರಬಹುದು ಎಂಬ ಶಂಕೆಯಿಂದ ಪೊಲೀಸರು ಕಾಣೆಯಾಗಿದ್ದ ಬಾಲಕಿಯ ಹೆತ್ತವರನ್ನು ಮೃತದೇಹದ ಬಳಿ ಕರೆದುಕೊಂಡು ಹೋಗಿದ್ದರು. ಮೃತದೇಹ ಕಂಡ ಪಾಲಕರು ಇದು ತಮ್ಮದೇ ಮಗಳು ಎಂದು ಒಪ್ಪಿಕೊಂಡಿದ್ದರು. ಬಳಿಕ ತನಿಖೆ ನಡೆದು ವಿಚಾರಣೆ ವೇಳೆ ಪಕ್ಕದ ಮನೆಯ ಹುಡುಗನೊಬ್ಬನ ಮೇಲೆ ಬಾಲಕಿಯ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ಆತನ ಮೇಲೆ ಅಪಹರಣ ಮತ್ತು ಕೊಲೆ ಕೇಸ್ ದಾಖಲಿಸಿದ್ದರು. ಅಷ್ಟೆ ಅಲ್ಲದೇ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವೂ ಸಾಬೀತಾಗಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ಆತನನ್ನು ಜೈಲಿಗೆ ಕಳಿಸಲಾಗಿತ್ತು.
ಈ ಘಟನೆ ನಡೆದು 7 ವರ್ಷಗಳೇ ಕಳೆದಿವೆ. ಆದರೆ ಇದೀಗ ಈ ಪ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ. ಅಂದು ಕೊಲೆಯಾಗಿದ್ದಾಳೆ ಎಂದೇ ನಂಬಲಾಗಿದ್ದ ಬಾಲಕಿ ಬದುಕಿರುವ ಸತ್ಯ ಬಯಲಾಗಿದೆ. ಆರೋಪಿ ಎಂದು ಶಿಕ್ಷೆ ಅನುಭವಿಸುತ್ತಿರುವ ಹೆತ್ತವರ ಕಣ್ಣಿಗೆ ಆಕೆ ಕಾಣಿಸಿಕೊಂಡಿದ್ದಾಳೆ. ಹೀಗಾಗಿ ಅವರು ಆಲಿಗಢ್ ಪೊಲೀಸ್ ಠಾಣೆಗೆ ತೆರಳಿ 2015ರಲ್ಲಿ ನಾಪತ್ತೆಯಾಗಿ, ಕೊಲೆಯಾಗಿದ್ದಾಳೆ ಎಂದು ಹೇಳಲಾಗಿದ್ದ ಬಾಲಕಿ ಹತ್ರಾಸ್ ನಲ್ಲಿ ಬದುಕಿದ್ದಾಳೆ. ಆಕೆಗೆ ಮದುವೆ ಆಗಿ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ತನ್ನ ಗಂಡ- ಮಕ್ಕಳ ಜೊತೆ ಆಕೆ ಖುಷಿಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದ ಪೊಲೀಸರೇ ಗೊಂದಲಕ್ಕೊಳಕ್ಕಾಗಿದ್ದು, ತನಿಖೆಯನ್ನು ಮತ್ತೆ ಕೈಗೆತ್ತಿಕೊಂಡಿದ್ದಾರೆ.
ಇನ್ನು ಆರೋಪಿ ಎಂದೇ ಶಿಕ್ಷೆ ಅನುಭವಿಸುತ್ತಿರುವ ಯುವಕನ ಪೋಷಕರು ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಹತ್ರಾಸ್ ಗೆ ತೆರಳಿ ಹುಡುಗಿಯನ್ನು ಕರೆತಂದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಲಿಗಢ್ ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಣಗ್ ಅವರು, ಯುವತಿಯ ಡಿಎನ್ ಎ ಪ್ರೊಫೈಲಿಂಗ್ ನಡೆಸಿ, ಅದರ ಆಧಾರದ ಮೇಲೆ ಮುಂದಿನ ತನಿಖೆ ನಡೆಸಲಾಗುವುದು. ಹಾಗೆಯೇ ಆರೋಪಿ ವಿರುದ್ಧದ ಪ್ರಕರಣವನ್ನೂ ಪ್ರತ್ಯೇಕ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Polytechnic College Violence : ಎಸ್ಎಫ್ಐ ನಾಯಕಿ, ಪೊಲೀಸರ ಮೇಲೆ ಹಲ್ಲೆ ಪ್ರಕರಣ : ಡ್ರಗ್ಸ್ ಮಾಫಿಯಾದ ಐವರ ಬಂಧನ
ಕಾಣೆಯಾಗಿದ್ದ ಬಾಲಕಿಗೆ ಇದೀಗ 21 ವರ್ಷ ವಯಸ್ಸಾಗಿದ್ದು, ಯುವಕನ ಮೇಲೆ ಕೇಸ್ ದಾಖಲಾಗಿದ್ದಾಗ ಆತನಿಗೆ 20 ವರ್ಷ ವಯಸ್ಸಾಗಿತ್ತು. ಆತ ಕಾರ್ಮಿಕನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ನಡೆದು 3 ವರ್ಷಗಳ ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ. ಆದರೆ ಕೋರ್ಟ್ ವಿಚಾರಣೆಗೆ ಹಾಜರಾಗದಿದ್ದ ಹಿನ್ನೆಲೆ ಆತನಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿತ್ತು. ಬಳಿಕ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Twist in murder case: Minor girl murdered in 2015 allegedly found alive and well in Hathras accused still in prison