Karkada Jayashree Murder Case : ಸಾಲಿಗ್ರಾಮ : ಅವರಿಬ್ಬರಿಗೂ ಮದುವೆಯಾಗಿ ಕೇವಲ 9 ತಿಂಗಳು ಕಳೆದಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ದಿನ ಕಳೆಯುತ್ತಲೇ ಪತಿ, ಪತ್ನಿಯ ನಡುವೆ ಜಗಳ ಶುರುವಾಗಿತ್ತು. ಕೊನೆಗೆ ಗಂಢ ಹೆಂಡತಿ ಜಗಳ ಅಂತ್ಯವಾಗಿದ್ದು ಕೊಲೆಯಲ್ಲಿ. ಕಾರ್ಕಡದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ ಸಿಕ್ಕಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಸಮೀಪದ ಕಾರ್ಕಡದಲ್ಲಿ ನಡೆಯಬಾರದ ಘಟನೆ ಯೊಂದು ನಡೆದು ಹೋಗಿತ್ತು. ಗಂಡ, ಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾರೆ ಆದ್ರಿಲ್ಲಿ, ಗಂಡ ಹೆಂಡತಿ ಜಗಳ ರಾತ್ರಿಯಿಂದ ಬೆಳಗಿನವರೆಗೂ ಸಾಗಿ, ಬೆಳಗಿನ ಜಾವ ಕೊಲೆಯಲ್ಲಿ ಅಂತ್ಯ ಕಂಡಿದೆ. ಹೀಗೆ ಸಾವನ್ನಪ್ಪಿರುವಾಕೆಯ ಹೆಸರು ಜಯಶ್ರೀ (34 ವರ್ಷ). ಬೀದರ್ ಜಿಲ್ಲೆಯ ದಂಬಳಾಪುರದ ನಿವಾಸಿಯಾಗಿರುವ ಜಯಶ್ರೀಗೆ ಕಳೆದ ಒಂಬತ್ತು ತಿಂಗಳ ಹಿಂದೆಯಷ್ಟೇ ಬ್ರಹ್ಮಾವರ ತಾಲೂಕಿನ ಗುಂಡ್ಮಿಯ ನಿವಾಸಿಯಾಗಿರುವ ಕಿರಣ್ ಉಪಾದ್ಯ (Kiran Upadhya Gundmi) ಅವರನ್ನು ಮದುವೆಯಾಗಿದ್ದರು.
ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ದಿನ ಕಳೆದಂತೆ ಪತಿ ಪತ್ನಿಯ ನಡುವೆ ಜಗಳ ಶುರುವಾಗಿತ್ತು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಕಾರ್ಕಡದ ಪಡುಹೋಳಿ ಸಮೀಪದಲ್ಲಿರುವ ಕಡಿದ ಹೆದ್ದಾರಿ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿ ವಾಸವಾಗಿದ್ದರು. ಮದುವೆಯಾದ ದಿನದಿಂದಲೂ ಪತ್ನಿ ವಿಪರೀತ ಮೊಬೈಲ್ ಬಳಕೆ ಮಾಡುತ್ತಿದ್ದಳು. ಪತ್ನಿಯ ರೀಲ್ಸ್ ಹುಚ್ಚಿಗೆ ಪತಿ ಹಾಗೂ ಪತ್ನಿಯ ನಡುವೆ ಪದೇ ಪದೇ ಜಗಳವಾಗುತ್ತಲೇ ಇತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ : ಮುಂಗಾರು, ನವಭಾರತ ಪತ್ರಿಕೆಯ ಹಿರಿಯ ಪತ್ರಕರ್ತ ಸಿದ್ದಕಟ್ಟೆ ಹಿ೦ಗಾಣಿ ಚಂದ್ರಶೇಖರ್ ಎರ್ಮಾಳ್ ವಿಧಿವಶ
ರೀಲ್ಸ್ ಜೊತೆಗೆ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ ಜಯಶ್ರೀಯ ನಡವಳಿಕೆ ಪತಿ ಕಿರಣ್ ಉಪಾಧ್ಯಾಗೆ ಇಷ್ಟವಾಗುತ್ತಿರಲಿಲ್ಲ. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿತ್ತು ಎನ್ನಲಾಗುತ್ತದೆ. ಇಬ್ಬರ ಜಗಳ ಶುಕ್ರವಾರ ಬೆಳಗಿನ ವರೆಗೂ ಮುಂದುವರಿದಿತ್ತು.

ಜಗಳ ವಿಪರೀತಕ್ಕೆ ತೆರಳುತ್ತಿದ್ದಂತೆಯೇ ಕಿರಣ್ ಉಪಾಧ್ಯ ಕತ್ತಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯವಾಗಿದೆ. ಇದರಿಂದಾಗಿ ಜಯಶ್ರೀ ಸಾವನ್ನಪ್ಪಿದ್ದಾಳೆ. ಪತ್ನಿಯನ್ನು ಕೊಲೆಗೈದು ಪತಿ ಕಿರಣ್ ಮನೆಯಲ್ಲಿಯೇ ಉಳಿದುಕೊಂಡಿದ್ದ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು, ಶವವನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೊಲೆ ಆರೋಪಿ ಕಿರಣ್ ಉಪಾಧ್ಯನನ್ನು ವಶಕ್ಕೆ ಪಡೆದುಕೊಂಡಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ : ಸಾಲಿಗ್ರಾಮ : ಕ್ಷುಲಕ ಕಾರಣಕ್ಕೆ ಜಗಳ : ಪತ್ನಿ ಕೊಲೆ, ಪತಿ ಅರೆಸ್ಟ್
ಸದ್ಯ ಕೋಟ ಠಾಣೆಯ (Kota Police Station) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರೋದಕ್ಕೆ ಸಾಧ್ಯ. ಕ್ಷುಲಕ ಕಾರಣಕ್ಕೆ ಕೊಲೆಗೈದ ಪತಿ ಇದೀಗ ಜೈಲು ಸೇರಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಪ್ರಕರಣ : ನಟ ಚಿಕ್ಕಣ್ಣಗೆ ಎದುರಾಯ್ತು ಸಂಕಷ್ಟ
Udupi News Karkada Jayashree Murder Case Big twist in Kannada News