ಭಾನುವಾರ, ಏಪ್ರಿಲ್ 27, 2025
HomeCrimeUS crime : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ : 5 ಮಕ್ಕಳು ಸೇರಿ, 7...

US crime : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ : 5 ಮಕ್ಕಳು ಸೇರಿ, 7 ಮಂದಿಗೆ ಗುಂಡಿಕ್ಕಿ ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

- Advertisement -

ಯುಎಸ್‌ : (US crime) ತನ್ನ ಪತ್ನಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ ಅನ್ನೋ ಕಾರಣಕ್ಕೆ ಕೋಪಗೊಂಡ ವ್ಯಕ್ತಿವೋರ್ವ ತನ್ನ ಐದು ಮಕ್ಕಳನ್ನು ಸೇರಿ, ಕುಟುಂಬದ 7 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ. ನಂತರದಲ್ಲಿ ತಾನು ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನೋಚ್‌ ಸಿಟಿಯ ಉತಾಹ್‌ ವಸಾಹತಿನಲ್ಲಿ ನಡೆದಿದೆ.

ಎನೋಚ್‌ ಸಿಟಿಯ ಸಣ್ಣ ಉತಾಹ್‌ ವಸಾಹತಿಯಲಿ ಪೊಲೀಸರಿಗೆ ಒಂದೇ ಕುಟುಂಬದ ಎಂಟು ಶವಗಳು (US crime) ಒಂದೇ ಮನೆಯಲ್ಲಿ ಪತ್ತೆಯಾಗಿದ್ದು, ಅವುಗಳಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಐದು ಮಕ್ಕಳು ಹಾಗೂ ಮೂವರು ವಯಸ್ಕರ ಮೃತ ದೇಹಗಳು ಪತ್ತೆಯಾಗಿವೆ. ಮೃತ ದೇಹಗಳ ಮೇಲೆ ಗುಂಡೇಟು ಬಿದ್ದಿರುವ ಗಾಯದ ಗುರುತುಗಳಿದ್ದು, ಎಂಟು ಮಂದಿಯೂ ಸಾವನ್ನಪ್ಪಿದ್ದಾರೆ.

42 ವರ್ಷದ ಮೈಕೆಲ್ ಹೈಟ್ ಎನ್ನುವಾತ ತನ್ನ ಪತ್ನಿ ವಿಚ್ಚೇದನಕ್ಕೆ ಅರ್ಜಿ ನೀಡಿದ್ದಾಳೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದು ಮನೆಯಲ್ಲಿದ್ದ ಏಳು ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರದಲ್ಲಿ ತಾನು ಕೂಡ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಮೃತರಲ್ಲಿ ಮೈಕೆಲ್‌ ಹೈಟ್‌, ಆತನ ಪತ್ನಿ, ಅತ್ತೆ, ಹಾಗೂ ಆತನ ಐದು ಮಂದಿ ಮಕ್ಕಳು ಸೇರಿದ್ದಾರೆ.

ವಿಷಯ ತಿಳಿದ ಪೊಲೀಸರು ತನಿಖೆಗೆ ಇಳಿದಾಗ ಒಂದೇ ಮನೆಯಲ್ಲಿ ಎಂಟು ಮಂದಿಯ ಮೃತದೇಹ ಸಿಕ್ಕಿದೆ. ಅದರಲ್ಲಿ ನಾಲ್ಕು ವರ್ಷದ ಮಗು ಕೂಡ ಸೇರಿದೆ ಎಂದಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : 2 Month baby died: ಕಪಿಚೇಷ್ಟೆಗೆ ಹಾರಿಹೊಯ್ತು ಹಸುಳೆಯ ಪ್ರಾಣ : ಮಹಡಿಯಿಂದ ಮಗುವನ್ನು ಎಸೆದ ವಾನರ ಸೈನ್ಯ

ಇದನ್ನೂ ಓದಿ : Belagavi Accident-6 died: ಪಾದಯಾತ್ರೆಗಳ ಪಾಲಿಗೆ ಯಮನಂತೆ ಬಂದ ಬೊಲೆರೊ : ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ 6 ಮಂದಿ ಸಾವು

ಇದನ್ನೂ ಓದಿ : Mumbai Lift collapse: ಬಹುಮಹಡಿ ಕಟ್ಟಡದ ಲಿಫ್ಟ್‌ ಕುಸಿತಕ್ಕೆ ಯುವಕ ಬಲಿ

ಸಮಾಜದಲ್ಲಿ ದಿನೇ ದಿನೇ ಇಂತಹ ಘಟನೆಗಳು ನಡೆಯುತ್ತಿದ್ದು, ಕೊಲೆ ಮಾಡುವುದು ಎಂದರೇ ನೀರು ಕುಡಿದ ಹಾಗೆ ಆಗಿದೆ. ಜೀವಕ್ಕೆ ಬೆಲೆಯೇ ಇಲ್ಲದಂತೆ ಅಗಿದೆ.

An angry man shot dead 7 family members including his five children after his wife filed for divorce.

RELATED ARTICLES

Most Popular