ಉತ್ತರಕನ್ನಡ : ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಇಚ್ಛಿಸಿರುವ ಯುವಕರಿಗೆ ಸೂಕ್ತ ಹೆಣ್ಣು ಸಿಗುತ್ತಿಲ್ಲ (Uttara Kannada suicide case) ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕನೊಬ್ಬ (Uttara Kannada suicide case) ಈ ವಿಚಾರಕ್ಕೆ ಮನನೊಂದು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾನೆ.
ಸದ್ಯ ಈ ದುರಂತ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಮೃತ ದುರ್ದೈವಿ ನಾಗರಾಜ ಗಣಪತಿ ಗಾಂವ್ಕರ್ (35 ವರ್ಷ) ಯಲ್ಲಾಪುರದ ತೇಲಂಗಾರ ಕಿರಗಾರಿಮನೆ ನಿವಾಸಿ ಎಂದು ಗುರುತ್ತಿಸಲಾಗಿದೆ.
ಮೃತ ನಾಗರಾಜ್ ಅವರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಎಲ್ಲರಂತೆಯೇ ತಾನು ಮದುವೆಯಾಗಬೇಕೆಂದು ಕನಸು ಕಟ್ಟಿಕೊಂಡಿದ್ದರು. ಅಂತಯೇ ಹಲವು ಸಮಯದಿಂದ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇನ್ನು ಹತ್ತಿರದ ಸಂಬಂಧೀಕರು, ಬ್ರೋಕರ್‌ಗಳ ಬಳಿ ಹೆಣ್ಣು ಹುಡುಕಿಕೊಡುವಂತೆ ಹೇಳಿದ್ದರೂ ಕೂಡ ಎಲ್ಲಿಯೂ ಮೃತ ನಾಗರಾಜ್ ಮದುವೆ ಆಗಲೂ ಹೆಣ್ಣು ಸಿಗದೇ ಆತ್ಮಹತ್ಯೆಗೆ ಶರಣಾರಾಗಿದ್ದಾರೆ.
ಇದನ್ನೂ ಓದಿ : Chandrashekhar Azad : ಭೀಮ್ ಆರ್ಮಿ ಸಮಾಜದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ
ಪ್ರತಿನಿತ್ಯ ಯಾಕೆ ನನಗೆ ಹೆಣ್ಣು ಸಿಗುತ್ತಿಲ್ಲ ಎಂದು ಚಿಂತೆಗೊಳ್ಳದ ನಾಗರಾಜ್ ತೀವ್ರ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ತನ್ನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Uttara Kannada suicide case: A young man committed suicide because he was not able to find a girl to marry.