ಖರಗ್‌ಪುರ: (video viral) ಪ್ರಯಾಣಿಕ ಟಿಕೆಟ್ ಪರೀಕ್ಷಕ (ಟಿಟಿಇ) ಅಧಿಕಾರಿಯೊಬ್ಬರು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದಾಗ ಅವರ ತಲೆಯ ಮೇಲೆ ಹೈಟೆನ್ಶನ್ ತಂತಿಯೊಂದು ತುಂಡಾಗಿ ತಲೆಯ ಮೇಲೆ ಬಿದ್ದಿದ್ದು, ಆತ ಸುಟ್ಟ ಗಾಯಗಳಿಂದ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಖರಗ್‌ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಘಟನೆಯ ವಿಡೀಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ಹೈಟೆನ್ಶನ್ ತಂತಿಯೊಂದು ಬಿದ್ದಾಗ ಟಿಕೆಟ್ ಕಲೆಕ್ಟರ್‌ಗೆ ವಿದ್ಯುತ್ ಸ್ಪರ್ಶವಾಗಿದೆ. ಇದರ ಪರಿಣಾಮ ಸುಟ್ಟ ಗಾಯಗಳಾಗಿ ಆತ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದಾನೆ. ಅಲ್ಲೆ ಇದ್ದ ರೈಲ್ವೆ ಸಿಬ್ಬಂದಿ ಹಾಗೂ ಪ್ರಯಾಣಿಕರು ಆತನನ್ನು ರಕ್ಷಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವವರನ್ನು ಸುಜನ್ ಸಿಂಗ್ ಸರ್ದಾರ್ ಎಂದು ಗುರುತಿಸಲಾಗಿದೆ. ಇದೀಗ ಅವರ ಮೇಲೆ ಹೈ ವೋಲ್ಟೇಜ್ ಲೈವ್ ವೈರ್ ಬಿದ್ದು, ಅವರು ಹಳಿಯ ಮೇಲೆ ಬೀಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (video viral) ಆಗುತ್ತಿದೆ.
ರೈಲ್ವೇ ಅಧಿಕಾರಿಯೊಬ್ಬರು “ಒಂದು ವಿಲಕ್ಷಣವಾದ ಅಪಘಾತ – ಒಂದು ಉದ್ದನೆಯ ಸಡಿಲವಾದ ಕೇಬಲ್ ಹೇಗೋ ಓಎಚ್‌ಇ ತಂತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಅದರ ಇನ್ನೊಂದು ತುದಿಯು ತುಂಡಾಗಿ ಟಿಟಿಇ ಯ ತಲೆ ಮೇಲೆ ಬಿದ್ದಿದೆ.ಪರಿಣಾಮ ಅವರಿಗೆ ಸುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಮತ್ತು ಚಿಕಿತ್ಸೆಯಲ್ಲಿದ್ದಾರೆ” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Gas Cylinder Blast: ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ: ನಾಲ್ಕು ಮಂದಿ ಸಾವು, 60 ಮಂದಿ ಗಾಯ
ಇದನ್ನೂ ಓದಿ : Brahmavara Road accident: ಟೂರಿಸ್ಟ್ ಬಸ್ ಚಾಲಕನ ಅಜಾಗರೂಕತೆಗೆ ಓರ್ವ ಬಲಿ
ಖರಗ್‌ಪುರದ ಡಿಆರ್‌ಎಂ ಮೊಹಮ್ಮದ್ ಸುಜಾತ್ ಹಶ್ಮಿ ಅವರು ವರದಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ನಮಗೆ ನಿಖರವಾದ ಕಾರಣ ತಿಳಿದಿಲ್ಲ ಆದರೆ ಕೆಲವು ಅಲಂಕಾರಿಕ ತಂತಿಗಳು ಬಹುಶಃ ಟಿಟಿಇಯನ್ನು ಗಾಯಗೊಳಿಸಿದವು. ಅದೃಷ್ಟವಶಾತ್, ಅವರು ಸ್ಥಿರರಾಗಿದ್ದಾರೆ. ಅಧಿಕಾರಿ ಚೆನ್ನಾಗಿದ್ದಾರೆ ಮತ್ತು ನಾವು ಅವರೊಂದಿಗೆ ಮಾತನಾಡಿದ್ದೇವೆ.” ಎಂದಿದ್ದಾರೆ.
(video viral) A passenger ticket examiner (TTE) officer was standing on the platform when a piece of high tension wire fell on his head and he was severely injured with burn injuries at Kharagpur railway station in West Bengal. The video of the incident is now going viral on social media.