ಬೆಂಗಳೂರು: wife torture: ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋದನ್ನು ಕೇಳಿರ್ತೇವೆ. ಆದ್ರೆ ಬೆಂಗಳೂರಲ್ಲೊಂದು ನಡೆದ ಅಚ್ಚರಿಯ ಘಟನೆಯಲ್ಲಿ ಬಡವಾಗಿದ್ದು ಕೂಸಲ್ಲ.. ಖುದ್ದು ಪತಿರಾಯ.. ಪತ್ನಿಯ ಕಿರುಕುಳ ತಾಳಿ, ನೊಂದು ಬೆಂದು ಹೋದ ಪತಿ ತನ್ನನ್ನು ಕಾಪಾಡಿ ಅಂತ ಪ್ರಧಾನಿ ಮೋದಿ ಮೊರೆ ಹೋಗಿದ್ದಾನೆ.
ಹೆಂಡತಿ ಕಾಟ ತಾಳಲಾರದೇ ತನಗೆ ನ್ಯಾಯ ಕೊಡಿಸುವಂತೆ ಆತ ಪ್ರಧಾನಿ ಮೋದಿ, ಕಾನೂನು ಸಚಿವರು ಹಾಗೂ ಬೆಂಗಳೂರು ಪೊಲೀಸರ ಮೊರೆ ಹೋಗಿದ್ದಾನೆ. ಟ್ವಿಟರ್ ಮೂಲಕ ತನ್ನ ಸಮಸ್ಯೆಗೆ ಮುಕ್ತಿ ನೀಡುವಂತೆ ಕೇಳಿಕೊಂಡಿದ್ದಾನೆ.
ಇದನ್ನೂ ಓದಿ: Hide and Seek Dies : ಲಿಫ್ಟ್‌ನಲ್ಲಿ ಕಣ್ಣಾಮುಚ್ಚಾಲೆ ಆಟ : 16 ವರ್ಷದ ಬಾಲಕಿ ಸಾವು
ಬೆಂಗಳೂರಿನ ಯದುನಂದನ್ ಆಚಾರ್ಯ ಎಂಬಾತ ತನ್ನ ಪತ್ನಿಯಿಂದಲೇ ತಾನು ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ತನ್ನ ಪತ್ನಿ ತನಗೆ ಪದೇ ಪದೇ ಕಿರುಕುಳ ನೀಡುತ್ತಿರುತ್ತಾಳೆ. ಚಾಕುವಿನಿಂದ ಹಲ್ಲೆ ಮಾಡುತ್ತಾಳೆ. ನನಗೆ ಯಾರಾದರೂ ಸಹಾಯ ಮಾಡುತ್ತೀರಾ..? ಇಂಥ ಘಟನೆಗಳು ನಡೆದಾಗ ಯಾರಾದರೂ ರಕ್ಷಣೆ ನೀಡುತ್ತೀರಾ..? ಇಲ್ಲ. ನನಗೆ ಯಾರೂ ಸಹಾಯ ಮಾಡುವುದಿಲ್ಲ. ಯಾಕೆಂದರೆ ನಾನೊಬ್ಬ ಪುರುಷ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೈ ಹಸ್ತದಿಂದ ರಕ್ತ ಸುರಿಯುತ್ತಿರುವ ಫೋಟೋ ಪೋಸ್ಟ್ ಮಾಡಿರುವ ಆತ ನನ್ನ ಪತ್ನಿ ಚಾಕುವಿನಿಂದ ಹಲ್ಲೆ ಮಾಡುತ್ತಾಳೆ. ಇದೇನಾ ನೀವು ಹೇಳುವ ನಾರಿಶಕ್ತಿ..? ಇದಕ್ಕಾಗಿ ನಾನು ಆಕೆಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಬಹುದಾ? ಎಂದು ಬರೆದುಕೊಂಡಿದ್ದಾನೆ.
Would anyone help me? Or did anyone help me when this happened?
— Yadunandan Acharya (@yaadac) October 29, 2022
No, Because I am a man!
My wife attacked me with knife, Is this the naari shakti you boost about? Can I put a domestic violence case against her for this? No!@PMOIndia @KirenRijiju @NyayPrayaas@CPBlr#MenToo pic.twitter.com/VNqtTQ5kPK
ಅಷ್ಟಕ್ಕೆ ಸುಮ್ಮನಾಗದ ಆತ ತನ್ನ ಟ್ವೀಟ್ ಅನ್ನು ಪ್ರಧಾನಿ ಮೋದಿ, ಕಾನೂನು ಸಚಿವ ಕಿರಣ್ ರಿಜಿಜು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾನೆ. ಈ ಮೂಲಕ ಪತ್ನಿ ಕಿರುಕುಳದಿಂದ ತನಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾನೆ.
ಇದನ್ನೂ ಓದಿ: Pathaan Teaser: 4 ವರ್ಷಗಳ ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿದ ಬಾದ್ ಶಾ.. ‘ಪಠಾಣ್’ ಟೀಸರ್ ಹೇಗಿದೆ ನೋಡಿ..
ಇನ್ನು ಈತನ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತರು, ಘಟನೆಯ ಪೂರ್ತಿ ಮಾಹಿತಿ ಮತ್ತು ದೂರವಾಣಿ ಸಂಖ್ಯೆಯನ್ನು ಮೆಸೇಜ್ ಮಾಡುವಂತೆ ತಿಳಿಸಿದ್ದಾರೆ. ಇದಕ್ಕೆ 2 ವರ್ಷಗಳ ಹಿಂದಿನ ಮೆಸೇಜ್ ಸ್ಕ್ರೀನ್ ಶಾಟ್ ಒಂದನ್ನು ಲಗತ್ತಿಸಿದ್ದಾನೆ. ಕಳೆದೆರಡು ವರ್ಷಗಳ ಹಿಂದೆಯೂ ತಾನು ಸಹಾಯ ಬೇಡಿದರೂ ಪೊಲೀಸರು ಅಥವಾ ಯಾರೂ ತನಗೆ ನ್ಯಾಯ ಒದಗಿಸಿಕೊಟ್ಟಿಲ್ಲ ಎಂದಿದ್ದಾನೆ. ಸದ್ಯ ಈತನ ಟ್ವಿಟರ್ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.
Wife torture: Wife stabs and harasses; husband asked the Prime Minister, the police to save him