ಚಿಕ್ಕಮಗಳೂರು : ಗಾಂಜಾ ಮತ್ತಲ್ಲಿ ಯುವಕನೋರ್ವ ಕಾರು ಚಲಾಯಿಸಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ಸಮೀಪದ ಕೈಮರದಲ್ಲಿ ನಡೆದಿದೆ. ಘಟನೆಯಲ್ಲಿ ಐದಕ್ಕೂ ಅಧಿಕ ಕಾರುಗಳು ಜಖಂಗೊಂಡಿದ್ದು, ಗಾಂಜಾ ಮತ್ತಲ್ಲಿ ಕಾರು ಚಲಾಯಿಸಿದ ಸರ್ಪರಾಜ್ ಎಂಬಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸರ್ಪರಾಜ್ ನಿನ್ನೆ ರಾತ್ರಿ ಹಲವು ಗಂಟೆಗಳ ಕಾಲ ರಂಪಾಟ ನಡೆಸುತ್ತಿದ್ದಾಗ, ಆತನನ್ನು ತಡೆಯೋದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಸ್ಥಳೀಯರು ಟ್ರ್ಯಾಕ್ಟರ್ ಅನ್ನು ಅಡ್ಡ ಇಟ್ಟು ಯುವಕನ ಕಾರು ತಡೆದಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮತ್ತಲ್ಲಿ ಯುವಕನ ರಂಪಾಟ ಹೇಗಿತ್ತು ನೀವೇ ನೋಡಿ ..