ಮಂಗಳೂರು : ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರೋ ಪ್ರಕರಣದ ಆರೋಪಿಯಾಗಿರೋ ಆದಿತ್ಯ ರಾವ್ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾನೆ. ಮಲ್ಪಿಮೀಡಿಯಾ ಕಂಪೆನಿಯೊಂದರಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಉದ್ಯೋಗಿ ಗಿಟ್ಟಿಸಿಕೊಂಡಿದ್ದ. ಅಲ್ಲದೇ ಸೀಮಿತ ತಿಂಗಳುಗಳ ಕಾಲ ಕಂಪೆನಿಗಳಲ್ಲಿ ಕೆಲಸ ಮಾಡಿ ನಂತರ ಕೆಲಸವನ್ನು ಬಿಡುತ್ತಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ ಅನ್ನೋದಾಗಿ ಆದಿತ್ಯ ರಾವ್ ಹೇಳಿಕೊಂಡಿದ್ದಾನೆ. ಆಳ್ವಾಸ್, ಎಸ್.ಡಿಎಂ ಕಾಲೇಜುಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿಯೂ ಕೆಲಸ ಮಾಡಿದ್ದಾನೆ. ಅಲ್ಲದೇ ಹೋಟೆಲ್ ನಲ್ಲಿಯೂ ಕೆಲಸ ಗಿಟ್ಟಿಸಿಕೊಂಡಿದ್ದ. ಬೆಂಗಳೂರು ಏರ್ ಪೋರ್ಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ ಆದಿತ್ಯ ರಾವ್ ಗೆ ವಿಮಾನ ನಿಲ್ದಾಣದವರು ಕೆಲಸ ನಿರಾಕರಿಸಿದ್ದಾರೆ. ತದನಂತರ ಏರ್ ಪೋರ್ಟ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದಾನೆ ಎಂದು ಆದಿತ್ಯ ರಾವ್ ವಿಚಾರಣೆಯ ವೇಳೆ ಬಾಯ್ಬಿಟ್ಟಿರೋ ವಿಚಾರಗಳನ್ನು ತಿಳಿಸಿದ್ದಾರೆ.
ಈ ಹಿಂದೆ ಒಂದೆರಡು ಬಾರಿ ಹುಸಿಬಾಂಬ್ ಕರೆ ಮಾಡಿದ್ದ. ಇದೀಗ ಬಾಂಬ್ ಇಟ್ಟಿರೋ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬಾಂಬರ್ ಆದಿತ್ಯರಾವ್ ವಿಚಾರಣೆ : ಕಮಿಷನರ್ ಡಾ.ಹರ್ಷ ಹೇಳಿದ್ದೇನು ಗೊತ್ತಾ ?
- Advertisement -