ಬೆಂಗಳೂರು : ಸಂಗೀತ ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಲಘುಸ್ಪೋಟ ಉಂಟಾಗಿದ್ದು ಶಾಸಕ ಹ್ಯಾರಿಸ್ ಸೇರಿ ನಾಲ್ಕೈದು ಮಂದಿಗೆ ಗಾಯವಾಗಿರೋ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಶಾಸಕ ಹ್ಯಾರಿಸ್ ಸೇರಿದಂತೆ ನಾಲ್ಕೈದು ಜನರಿಗೆ ಗಾಯವಾಗಿದೆ. ಯಾವ ಕಾರಣಕ್ಕೆ ಸ್ಪೋಟ ಸಂಭವಿಸಿದೆ ಅನ್ನೋದು ತಿಳಿದುಬಂದಿಲ್ಲ. ಗಾಯಗೊಂಡಿರೋ ಶಾಸಕ ಹ್ಯಾರಿಸ್ ಅವರನ್ನು ಸೈಂಟ್ ಫಿನೋಮಿನಾ ಆಸ್ಪತ್ರೆಗೆ ದಾಖಲಾಗಿದೆ. ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹ್ಯಾರಿಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಪಟಾಕಿಯನ್ನು ಸಿಡಿಸಲಾಗುತ್ತಿದ್ದು, ಪಟಾಕಿಯೇ ಸಿಡಿದಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರೋ ಅಶೋಕ ನಗರ ಹಾಗೂ ವಿವೇಕನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣಕ್ಕೆ ಸ್ಪೋಟ ಸಂಭವಿಸಿದೆ ಅನ್ನೋ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಲಘು ಸ್ಪೋಟ ಶಾಸಕ ಎನ್.ಎ.ಹ್ಯಾರಿಸ್ ಗೆ ಗಾಯ
- Advertisement -