- Advertisement -
ಮಂಗಳೂರು : ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಪತ್ತೆಯಾದ ಸಜೀವ ಬಾಂಬ್ ಇರಿಸಲಾಗಿದ್ದ ವಾಹನವನ್ನು ಕೆಂಜಾರು ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಸಿಕ್ಕ ಬ್ಯಾಗ್‌ನ್ನ ಬಾಂಬ್ ಪ್ರೂಫ್ ವಾಹನದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇರಿಸಲಾಗಿತ್ತು.

ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಇರಿಸಲಾಗಿದ್ದ ಬಾಂಬ್ ಪ್ರೂಫ್ ವಾಹನವನ್ನು ಇದೀಗ ಕೆಂಜಾರು ಮೈದಾನಕ್ಕೆ ಸಾಗಿಸಲಾಗಿದೆ. ಅಲ್ಲದೇ ಬಾಂಬ್ ನಿಷ್ಕ್ರೀಯ ದಳದ ಅಧಿಕಾರಿಗಳು ಸಜೀವ ಬಾಂಬ್ ನ್ನು ನಿಷ್ಕ್ರೀಯಗೊಳಿಸೋ ಕಾರ್ಯವನ್ನು ಆರಂಭಿಸಿದ್ದಾರೆ.