ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯ ಭವಿಷ್ಯ : 04-10-2020

ನಿತ್ಯ ಭವಿಷ್ಯ : 04-10-2020

- Advertisement -

ಮೇಷರಾಶಿ
ಆರ್ಥಿಕವಾಗಿ ನೀವು ಹೆಚ್ಚು ಅಭಿವೃದ್ಧಿಯನ್ನು ಸಾಧಿಸುವಿರಿ. ಪುಣ್ಯಕ್ಷೇತ್ರ ದರ್ಶನ, ಬಂಧುಗಳ ಆಗಮನ, ಅಧಿಕ ಖರ್ಚು, ವಿದ್ಯಾರ್ಥಿಗಳಿಗೆ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ವೃಥಾ ತಿರುಗಾಟ. ಆದರೆ ಖರ್ಚುವೆಚ್ಚಗಳು ಅಷ್ಟೇ ರೀತಿಯಲ್ಲಿ ಹೆಚ್ಚಲಿವೆ. ಮನೆಯಲ್ಲಿ ಕುಟುಂಬದ ಮಿತ್ರವರ್ಗದವರ ಆಗಮನದಿಂದ ಸಂತಸವಾಗಲಿದೆ.

ವೃಷಭರಾಶಿ
ವ್ಯವಹಾರಗಳಲ್ಲಿ ಲಾಭ, ದಾಯಾದಿಗಳ ಕಲಹ, ಅತಿಯಾದ ಭಯ, ಮನಕ್ಲೇಷ, ಋಣಭಾದೆ, ದುಷ್ಟರಿಂದ ದೂರವಿರಿ, ಕಾರ್ಯಸಾಧನೆ ಗಾಗಿ ತಿರುಗಾಟ, ಬಂಧುಮಿತ್ರರ ವಿರೋಧ. ಆರೋಗ್ಯದ ಏರುಪೇರಿಗಾಗಿ ತುಂಬಾ ಉದ್ವೇಗ ಪಡುವಿರಿ. ಆದರೆ ಭಯಪಡುವ ಅವಶ್ಯಕತೆ ಇಲ್ಲ. ದಿನಾಂತ್ಯದಲ್ಲಿ ಮನೆಯಲ್ಲಿ ಬಂಧುಗಳು ಅಗಮಿಸಲಿದ್ದಾರೆ. ಮಕ್ಕಳ ಪ್ರಗತಿಯ ಬಗ್ಗೆ ಹೆಮ್ಮೆ ಇದೆ.

ಮಿಥುನರಾಶಿ
ಗೃಹಕೃತ್ಯದಲ್ಲಿ ತುಂಬಾ ಬದಲಾವಣೆ ಕಂಡು ಬರಲಿದೆ. ಮಾನಸಿಕ ಒತ್ತಡ, ವ್ಯವಹಾರದಲ್ಲಿ ತೊಂದರೆ, ಮನಸ್ಸಿನಲ್ಲಿ ಗೊಂದಲ, ವಿವಾಹ ಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನಲಾಭ, ತಾಯಿಯಿಂದ ಧನಸಹಾಯ. ಆದರೂ ಅದರಿಂದ ತುಂಬಾ ಒಳ್ಳೆಯದಿದೆ. ಮನಸ್ಸಿಗೆ ಹಿತವಾಗುವ ಬೋಧನೆಯಿಂದ ಸಮಾಧಾನ ಸಿಗಲಿದೆ. ಮಕ್ಕಳು ದೂರದೂರದಿಂದ ಅಗಮಿಸುವರು.

ಕಟಕರಾಶಿ
ಪತಿಯಿಂದ ಸ್ವಲ್ಪ ತಲೆಬಿಸಿ ಕಂಡು ಬಂದೀತು. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನಲಾಭ, ಮಹಿಳೆಯರಿಗೆ ಅನುಕೂಲ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ. ಮನೆ ಎಂದಾಕ್ಷಣ ಸಣ್ಣ ಪುಟ್ಟ ಬದಲಾವಣೆ ಕಂಡು ಬರುವುದು. ಅದನ್ನು ಅರ್ಥೈಸಿಕೊಂಡು ಮುನ್ನಡೆಯಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದೀತು.

ಸಿಂಹರಾಶಿ
ಮನೆಯಲ್ಲಿ ಹಿರಿಯರ ಆರೋಗ್ಯದ ಏರುಪೇರು ಕಂಡು ಉದ್ವೇಗಗೊಳ್ಳುವಿರಿ. ನೆಮ್ಮದಿ ಇಲ್ಲ, ಗಣ್ಯ ವ್ಯಕ್ತಿಯ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ತಾಳ್ಮೆ ಅಗತ್ಯ, ಮಾತಿನಿಂದ ಕಲಹ, ಯತ್ನ ಕಾರ್ಯದಲ್ಲಿ ವಿಳಂಬ, ಮಾನಸಿಕ ಒತ್ತಡ. ಶ್ರೀದೇವರ ಅನುಗ್ರಹ ತುಂಬಾ ಇರುವ ನಿಮಗೆ ತಲೆಬಿಸಿಬೇಡ. ಅದರೂ ವೈದರ ತಪಾಸಣೆ ಮಾಡಿಸುವುದು ಅಗತ್ಯವಾಗಿದೆ.

ಕನ್ಯಾರಾಶಿ
ಮಹಿಳೆಯರಿಗೆ ಶುಭ, ವ್ಯಾಪಾರಗಳಿಗೆ ಲಾಭ, ಶೇರು ವ್ಯವಹಾರಗಳಲ್ಲಿ ನಷ್ಟ, ನೆರೆಹೊರೆಯವರೊಡನೆ ಸುತ್ತಾಟ, ಅನಗತ್ಯ ಹಣ ಖರ್ಚು, ಕೃಷಿಯಲ್ಲಿ ಲಾಭ, ಗೆಳೆಯರಿಂದ ಅನರ್ಥ. ಮಾತಾಪಿತೃವರ್ಗದಿಂದ ಹಿತನುಡಿಗಳು ಕೇಳಿ ಬರಲಿದೆ. ಎಲ್ಲಾ ಕಾರಣಕ್ಕೂ ಸಿಡಿಮಿಡಿಗೊಳ್ಳುವ ನಿಮ್ಮ ಅಭ್ಯಾಸವು ಇತರರಿಗೆ ಬೇಸರ ತಂದೀತು. ಸ್ವಲ್ಪ ಸಮಾಧಾನ, ತಾಳ್ಮೆ ವಹಿಸುವ ಅಗತ್ಯವಿರುತ್ತದೆೆ.

ತುಲಾರಾಶಿ
ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚು ಏರಿಳಿತಗಳಿರುವುದಿಲ್ಲಾ. ಯಂತ್ರೋಪಕರಣಗಳಿಂದ ಲಾಭ, ಮಿತ್ರರಿಂದ ನಿಂದನೆ, ಗೌರವಕ್ಕೆ ಅಪಮಾನ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಅಧಿಕವಾದ ಖರ್ಚು, ಶೀತ ಸಂಬಂಧಿತ ರೋಗ, ಕೆಟ್ಟ ಆಲೋಚನೆ, ದೂರ ಪ್ರಯಾಣ. ಹೆಚ್ಚಿನ ಜವಾಬ್ದಾರಿಯು ತಲೆಗೇ ಬಂದೀತು. ಆದರೆ ಸಮಾಧಾನ ವಹಿಸುವ ಅಗತ್ಯವಿದೆ. ಮನೆಯಲ್ಲಿ ಗೃಹಿಣಿಗೆ ಅಸೌಖ್ಯ ಕಂಡು ಬಂದೀತು.

ವೃಶ್ಚಿಕರಾಶಿ
ಮನೆಯಲ್ಲಿ ಶುಭಮಂಗಲ ಕಾರ್ಯದ ಬಗ್ಗೆ ಹೆಚ್ಚಿನ ಜವಾಬ್ದಾರಿ ತಲೆಯ ಮೇಲೆ ಬೀಳಲಿದೆ. ಕುಟುಂಬದಲ್ಲಿ ಅಹಿತಕರ ಘಟನೆ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಶತ್ರುಗಳ ಭಾದೆ, ಶುಭವಾರ್ತೆ ಕೇಳುವಿರಿ. ಆದರೂ ಎಲ್ಲಾ ವಿಷಯದಲ್ಲೂ ಸಮತೋಲನ ಸಾಧಿಸುವ ನೀವು ತಣ್ಣಗಾಗಿ ಸ್ವೀಕರಿಸಿರಿ. ಮಕ್ಕಳಿಂದ ಮನೆಯಲ್ಲಿ ಸಂತಸ.

ಧನಸ್ಸುರಾಶಿ
ಪತಿ, ಪತ್ನಿಯೊಳಗೆ ತುಂಬಾ ಅನ್ಯೋನ್ಯತೆಯು ಕಂಡು ಬರುವುದು. ಆತ್ಮೀಯರ ಆಗಮನ, ಮನಸ್ಸಿಗೆ ಅಶಾಂತಿ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಪ್ರತಿಭೆಗೆ ತಕ್ಕ ಫಲ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ. ಪತ್ನಿಯ ಉದ್ಯೋಗದ ಬಗ್ಗೆ ಹೆಚ್ಚು ಚಿಂತಿಸುವುದು ಬೇಡ. ಆದಷ್ಟು ಬೇಗ ಉದ್ಯೋಗವು ದೊರಕಲಿದೆ. ತಂದೆ ತಾಯಿಯಿಂದ ಸಮಾಧಾನ ತೋರಿ ಬರುವುದು.

ಮಕರರಾಶಿ
ಮನಸ್ಸು ಉದ್ವೇಗಗೊಳ್ಳಲಿದೆ. ದಿನದಿಂದ ದಿನಕ್ಕೆ ಹೆಚ್ಚಿನ ಅಭಿವೃದ್ಧಿಯು ಕಂಡು ಬರಲಿದೆ. ತಾಯಿಯಿಂದ ನೆರವು, ಅಮೂಲ್ಯ ವಸ್ತುಗಳ ಕಳವು, ಅಪಕೀರ್ತಿ, ಸ್ಥಳ ಬದಲಾವಣೆ, ಸ್ತ್ರೀಯರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ. ಮನಸ್ಸಿನಲ್ಲಿ ಉದ್ವೇಗವು ಆಗಲಿದೆ. ಸಮಾಧಾನ ಚಿತ್ತದಿಂದ ಮುಂದುವರಿಯುವುದು. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ.

ಕುಂಭರಾಶಿ
ಮನೆ ಹಾಗೂ ಉದ್ಯೋಗರಂಗದಲ್ಲಿ ಸುಧಾರಣೆ ತೋರಿ ಬಂದೀತು. ಕೆಲಸ ಕಾರ್ಯಗಳಲ್ಲಿ ಜಯ, ಹಿತಶತ್ರುಗಳಿಂದ ತೊಂದರೆ, ಉತ್ತಮ ಬುದ್ಧಿಶಕ್ತಿ, ವೃತ್ತಿ ರಂಗದಲ್ಲಿ ಯಶಸ್ಸು, ಸಂಗಾತಿಯಿಂದ ಸಲಹೆ, ದಾಂಪತ್ಯದಲ್ಲಿ ಸಂತಸ. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿಯು ತೋರಿ ಬರಲಿದೆ. ಕೋರ್ಟು ಕಚೇರಿ ವ್ಯವಹಾರದಲ್ಲಿ ಜಯ ಸಾಧಿಸುವಿರಿ. ಮೀನುಗಾರರಿಗೆ ಸ್ವಲ್ಪ ಕಷ್ಟದ ದಿನಗಳಿವು.

ಮೀನರಾಶಿ
ದ್ರವ್ಯಲಾಭ, ತೀರ್ಥಕ್ಷೇತ್ರ ದರ್ಶನ, ಹಣಕಾಸು ಖರ್ಚು, ಋಣ ವಿಮೋಚನ, ಶತ್ರು ಭಾದೆ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ. ಮನೆಯ ಮಗಳ ಭವಿಷ್ಯದ ಬಗ್ಗೆ ಸ್ವಲ್ಪ ಚಿಂತೆ ಆದೀತು. ಮಕ್ಕಳಿಗೆ ಹಿರಿಯರ ತಳಮಳ ಆರ್ಥೈಸಿಕೊಳ್ಳಲಾಗದು. ಆರೋಗ್ಯದ ಸುಧಾರಣೆ ಇದ್ದರೂ ಜಾಗ್ರತೆ ಅಗತ್ಯವಿದೆ. ತಂದೆ ತಾಯಿಯರ ಆರೋಗ್ಯ ಜಾಗ್ರತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular