ಮೇಷರಾಶಿ
ಸ್ವತಃ ವ್ಯಾಪಾರ ವ್ಯವಹಾರಗಳಲ್ಲಿ ಗೆಲುವು, ಕೌಟುಂಬಿಕ ವಿಚಾರಗಳಲ್ಲಿ ಒತ್ತಡ ನಿವಾರಣೆ, ಹಣಕಾಸಿನ ವಿಷಯದಲ್ಲಿ ಎಚ್ಚರ, ಜಮೀನು ವಿಷಯಗಳು ಇತ್ಯರ್ಥ, ಪ್ರಯತ್ನ ಬಲದಿಂದ ಗೆಲುವು, ಉನ್ನತ ವ್ಯಾಸಂಗಕ್ಕೆ ದೂರ ಪ್ರಯಾಣ.
ವೃಷಭರಾಶಿ
ಆರ್ಥಿವಾಗಿ ಅಭಿವೃದ್ದಿ, ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ವಾತಾವರಣ, ಶುಭ ಸಮಾರಂಭಗಳಿಗೆ ಹೆಚ್ಚಿನ ಖರ್ಚು, ನಾನಾ ಮೂಲಗಳಿಂದ ವರಮಾನ, ಆರೋಗ್ಯದಲ್ಲಿ ವ್ಯತ್ಯಾಸ, ವಿದೇಶ ವ್ಯವಹಾರಗಳಿಂದ ಲಾಭ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮಿಥುನರಾಶಿ
ಕೌಟುಂಬಿಕ ವಿಚಾರಗಳಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ, ಕಿರು ಸಂಚಾರ ಭಾಗ್ಯ, ಸ್ತ್ರೀಯರಿಗೆ ತೊಂದರೆ, ಉತ್ಪನ್ನ ವಹಿವಾಟುದಾರರಿಗೆ ಅಧಿಕ ಲಾಭ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ.
ಕಟಕರಾಶಿ
ಕೆಲಸ ಕಾರ್ಯಗಳಲ್ಲಿ ಚುರುಕು ಕಂಡುಬರಲಿದೆ, ಸಾಂಸಾರಿಕವಾಗಿ ನೆಮ್ಮದಿ, ಆದಾಯದಲ್ಲಿ ಪ್ರಗತಿ, ಅನಗತ್ಯ ತಿರುಗಾಟ, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ, ಹಿರಿಯರ ಭೇಟಿ
ಸಿಂಹರಾಶಿ
ಇಷ್ಟ ಕಾರ್ಯ ಸಿದ್ಧಿ, ಚಿಂತಿತ ಕಾರ್ಯಗಳು ಹಂತ ಹಂತವಾಗಿ ನೆರವೇರಲಿದೆ, ಅದೃಷ್ಟ ಬಲದಿಂದ ಹೂಡಿಕೆಗಳಲ್ಲಿ ಲಾಭ, ಮಿತ್ರರಿಂದ ವಿರೋಧ, ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ, ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು.
ಕನ್ಯಾರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಮುನ್ನಡೆ, ಹದಿ ಹರೆಯದವರ ಬಗ್ಗೆ ಜಾಗ್ರತೆವಹಿಸಿ, ಭೂ ಸಂಬಂಧ ಕೆಲಸದವರಿಗೆ ಲಾಭ, ದಾಂಪತ್ಯದಲ್ಲಿ ನೆಮ್ಮದಿ, ಶಾಂತಿ, ಅನಾವಶ್ಯಕ ಖರ್ಚು ಕಡಿಮೆ ಮಾಡಿ, ಮಕ್ಕಳಿಂದ ಸಂತಸ, ದಾಯಾದಿಗಳ ಆಗಮನ ಕಿರಿಕಿರಿ ತರಲಿದೆ.
ತುಲಾರಾಶಿ
ಶುಭಮಂಗಲ ಕಾರ್ಯಗಳು ನಡೆಯಲಿವೆ, ಉದ್ಯ, ವ್ಯವಹಾರಗಳಲ್ಲಿ ಹೊಸ ಆದಾಯವು ತೆರೆಯಲಿದೆ, ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣ, ಹಿರಿಯರ ಹಿತನುಡಿ, ವ್ಯವಹಾರಗಳನ್ನು ತಾಳ್ಮೆಯಿಂದ ನಿಭಾಯಿಸಿ, ರಾಜಕೀಯ ವ್ಯಕ್ತಿಗಳಿಗೆ ಸುಸಮಯ.
ವೃಶ್ಚಿಕರಾಶಿ
ಅನಾರೋಗ್ಯ ನಿಮ್ಮನ್ನು ಕಾಡಲಿದೆ, ಹೆಚ್ಚಿನ ಕಾಳಜಿಯನ್ನುವಹಿಸಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ವಾಸ ಗೃಹದಲ್ಲಿ ತೊಂದರೆ, ಕೊಂಡು ಕೊಳ್ಳುವ ವ್ಯವಹಾರದಲ್ಲಿ ಯಶಸ್ಸು, ಅಶಾಂತಿ, ಸಂತಾನ ಪ್ರಾಪ್ತಿ, ಪ್ರಿಯ ಜನರ ಭೇಟಿ, ಸಮಸ್ಯೆಗಳು ಹಂತ ಹಂತವಾಗಿ ಬಗೆ ಹರಿಯಲಿದೆ.
ಧನಸ್ಸುರಾಶಿ
ವಿರೋಧಿಗಳಿಂದ ದೂರವಿರಿ, ವೃತ್ತಿರಂಗದಲ್ಲಿ ಪ್ರತಿಷ್ಠಿತರ ಸಹಯೋಗ ದೊಂದಿಗೆ ಕಾರ್ಯ ಸಿದ್ದಿ, ಹಣಕಾಸಿನ ವಿಚಾರದಲ್ಲಿ ಚಿಂತಿಸಬೇಕಾ ಗುತ್ತದೆ, ರಾಜಕೀಯವಾಗಿ ಮುನ್ನಡೆಯ ದಿನಗಳಿವು, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ನಿಂತು ಹೋದ ಕೆಲಸಗಳಿಗೆ ಮರು ಚಾಲನೆ.
ಮಕರರಾಶಿ
ಸಾಮಾಜಿಕ ರಂಗದಲ್ಲಿ ಜನಪ್ರಿಯತೆ ಹೆಚ್ಚಲಿದೆ, ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಅವಕಾಶಗಳು ಒದಗಿ ಬರಲಿವೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಅನಗತ್ಯ ಅಲೆದಾಟ, ಅಲ್ಪ ಕಾರ್ಯಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು.
ಕುಂಭರಾಶಿ
ನಿಮ್ಮ ಪ್ರಯತ್ನಗಳಿಗೆಲ್ಲ ಉತ್ತಮ ಫಲ, ಖರ್ಚಿನ ಬಗ್ಗೆ ನಿಯಂತ್ರಣ ವಿರಲಿ, ವ್ಯಾಪಾರ ವ್ಯವಹಾರಗಳಲ್ಲಿ ಏರಿಳಿತಗಳು ಕಂಡುಬರಲಿದೆ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಗುರಿ ಸಾಧನೆ, ದೂರ ಪ್ರಯಾಣ.
ಮೀನರಾಶಿ
ನೂತನ ಕಾರ್ಯಾರಂಭಕ್ಕೆ ಸಕಾಲ, ಮಾನಸಿಕ ಚಿಂತೆಗಳು ನಿಮ್ಮನ್ನು ಕಾಡಲಿವೆ, ವೃತ್ತಿರಂಗದಲ್ಲಿ ಕೈಲಾಗದ ಪರಿಸ್ಥಿತಿ ಎದುರಿಸಬೇಕಾಗ ಬಹುದು, ಸ್ನೇಹಿತರಿಂದ ಬೆಂಬಲ, ಪಾಲುದಾರರೊಡನೆ ಚರ್ಚೆ, ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ.
ನಿತ್ಯಭವಿಷ್ಯ : 23-11-2020
- Advertisement -