ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 14-10-2020

ನಿತ್ಯಭವಿಷ್ಯ : 14-10-2020

- Advertisement -

ಮೇಷರಾಶಿ
ಯತ್ನ ಕಾರ್ಯ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ಲಾಭ, ಕುಟುಂಬ ಸೌಖ್ಯ. ಅರ್ಧಕ್ಕೆ ನಿಂತ ಕೆಲಸಕಾರ್ಯಗಳಿಗೆ ಚಾಲನೆ ದೊರೆತು ಪುನಃ ಆರಂಭವಾಗಿ ಜಯಪ್ರದವಾಗಲಿದೆ. ಅಥ್ಯ ಗೌರವಾನ್ವಿತ ವ್ಯಕ್ತಿಗಳಾದ ನಿಮಗೆ ಬೇಸರವಾಗುವ ಸ್ಥಿತಿಯು ಉಂಟಾದೀತು. ಆತ್ಮವಿಶ್ವಾಸ ದೃಢವಾಗಿಟ್ಟುಕೊಳ್ಳಿರಿ.

ವೃಷಭರಾಶಿ
ಆರೋಗ್ಯದಲ್ಲಿ ಉತ್ತಮ ಸುಧಾರಣೆಯು ಕಂಡು ಬರಲಿದೆ. ಮಂಗಳ ಕಾರ್ಯಗಳಲ್ಲಿ ಭಾಗಿ, ವ್ಯವಹಾರದಲ್ಲಿ ಸಾಧಾರಣ ಪ್ರಗತಿ, ಮನಕ್ಲೇಷ, ಅಧಿಕ ಖರ್ಚು. ಶತ್ರುಗಳಿಂದ ಮುಕ್ತಿ ಸಿಗಲಿದೆ. ದೈಹಿಕ ಹಾಗೂ ಮಾನಸಿಕ ವ್ಯಥೆಯು ಕಡಿಮೆಯಾಗಲಿದೆ ಸಂತಾನದ ಚಿಂತೆಯು ನಿಮ್ಮ ಮನಸ್ಸನ್ನು ಕೆಡಿಸಲಿದೆ.

ಮಿಥುನರಾಶಿ
ಅಧಿಕ ಖರ್ಚು, ವಾದ-ವಿವಾದಗಳಲ್ಲಿ ಸೋಲು, ಸ್ಥಳ ಬದಲಾವಣೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ. ಉದ್ಯೋಗ, ವ್ಯವಹಾರದಲ್ಲಿ ತೀವ್ರ ಪ್ರತಿಸ್ಪರ್ಧೆಯು ಇದ್ದೀತು. ಶತ್ರುಗಳಿಂದ ಕಿರುಕುಳವು ಕಂಡು ಬರಲಿದೆ. ಮಾನಸಿಕ ಉದ್ವೇಗ, ಪ್ರಯಾಣದಿಂದ ಕಷ್ಟನಷ್ಟಗಳು ಎದುರಾಗಲಿವೆ. ಮಿತ್ರರಿಂದ ಸಹಾಯವಿದೆ.

ಕಟಕರಾಶಿ
ತಾಯಿಯಿಂದ ಧನ ಸಹಾಯ, ಅನಿರೀಕ್ಷಿತ ಲಾಭ, ದೃಷ್ಟಿ ದೋಷದಿಂದ ತೊಂದರೆ, ರೋಗಗಳು. ಮಂಗಲಕಾರ್ಯದ ಪ್ರಸಕ್ತ ಸಾಂಸಾರಿಕ ಸುಖ, ಇಚ್ಛಿಥ ಕಾರ್ಯಗಳಲ್ಲಿ ಜಯ-ಲಾಭಾದಿಗಳು ದೊರಕಲಿವೆ. ಉದ್ಯೋಗದಲ್ಲಿ ಪ್ರಗತಿ ಹಾಗೂ ಲಾಭವಿದೆ. ದೈಹಿಕ ಸುಖವು ಉತ್ತಮ ವಿರುವುದು. ಶತ್ರುಪೀಡೆ ಕಂಡು ಬಂದೀತು.

ಸಿಂಹರಾಶಿ
ಆರೋಗ್ಯದಲ್ಲಿ ಏರಿಳಿತಗಳು ಕಂಡು ಬಂದರೂ ಚಿಂತೆ ಮಾಡುವುದು ಅವಶ್ಯವಿಲ್ಲಾ. ಸ್ಥಿರಾಸ್ತಿ ಪ್ರಾಪ್ತಿ, ಭೋಗ ವಸ್ತುಗಳ ಪ್ರಾಪ್ತಿ, ಕೃಷಿಯಲ್ಲಿ ಲಾಭ, ಬಂಧುಗಳಲ್ಲಿ ವಿರೋಧ. ಸಂಚಾರಯೋಗವು ಕಂಡು ಬಂದರೂ ಕೈಗೂಡುವುದಿಲ್ಲಾ. ಹೆಚ್ಚಿನ ಕೆಲಸಗಳು ಅನಾಯಾಸವಾಗಿ, ಪೂರ್ಣವಾಗಿ ದಕ್ಷತೆ ಹೆಚ್ಚಿಸಲಿವೆ.

ಕನ್ಯಾರಾಶಿ
ನೂತನ ವಸ್ತು ಖರೀದಿ, ಸ್ತ್ರೀಯರಿಂದ ಲಾಭ, ವ್ಯಾಸಂಗಕ್ಕೆ ತೊಂದರೆ, ಶತ್ರು ಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ. ಸಾಂಸಾರಿಕವಾಗಿ ನೆಮ್ಮದಿ ಕಂಡು ಬರುವುದು. ವಿದ್ಯಾಪ್ರಗತಿಯು ಅಷ್ಟೊಂದು ಕಂಡುಬಾರದು. ಖರ್ಚು ಅಧಿಕ ರೀತಿಯಲ್ಲಿ ಕಂಡು ಬಂದರೂ ಧನಾರ್ಜನೆಯ ಮಾರ್ಗವೂ ಕಂಡು ಬರುವುದು. ದೈವಬಲದಿಂದ ಸಂತೋಷ.

ತುಲಾರಾಶಿ
ಬಂಧು ಮಿತ್ರರ ಸಮಾಗಮ, ಕೀರ್ತಿ, ಲಾಭ, ವಸ್ತ್ರ ಖರೀದಿ, ಅನಾರೋಗ್ಯ, ಹಿತ ಶತ್ರುಗಳಿಂದ ತೊಂದರೆ. ಸಂಚಾರದಿಂದ ಉಪಯೋಗವಾಗದು. ದೈಹಿಕವಾಗಿ ಸುಧಾರಣೆ ಕಂಡು ಬಂದರೂ ಮಾನಸಿಕವಾಗಿ ಸಮಾಧಾನವಿರದು. ಮಿತ್ರರಿಂದ ಲಾಭ, ಬಂಧುಗಳೊಂದಿಗೆ ಮನಸ್ತಾಪವು ಕಂಡು ಬಂದೀತು. ಶುಭವಿದೆೆ.

ವೃಶ್ಚಿಕರಾಶಿ
ಆತ್ಮೀಯರನ್ನು ದ್ವೇಷಿಸುವಿರಿ, ಅನ್ಯ ಜನರಲ್ಲಿ ವೈಮನಸ್ಸು, ಅಕಾಲ ಭೋಜನ, ವಿಪರೀತ ಖರ್ಚು, ಧನ ನಷ್ಟ. ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆ ಅನಿರೀಕ್ಷಿತವೆಂಬಂತೆ ನಿಮಗೆ ಅರಿವಿಗೆ ಬಾರದೆ ನಡೆಯಲಿದೆ. ನೀವು ಯಾರದೋ ತಪ್ಪಿಗೆ ಬಲಿಪಶುವಾಗದಿರಿ. ಅಧೈರ್ಯವು ಸರಿಯಲ್ಲ ಮುನ್ನಡೆಯಿರಿ.

ಧನಸ್ಸುರಾಶಿ
ಆಪ್ತರಿಂದ ಸಹಾಯ, ಅನರ್ಥ, ದೂರಾಲೋಚನೆ, ಮನಸ್ಸಿಗೆ ಚಿಂತೆ, ನೆಮ್ಮದಿ ಇಲ್ಲದ ಜೀವನ. ದೈವಬಲ ಇಲ್ಲದ ನಿಮಗೆ ಕೆಲವು ವಿಘ್ನಗಳು ಎದುರಾದಾವು. ಆರೋಗ್ಯವು ತುಸು ಮಟ್ಟಿಗೆ ಸುಧಾರಿಸುತ್ತಾ ಹೋಗಲಿದೆ. ಬಂಧುಗಳೊಂದಿಗೆ ವಾದ, ವಿವಾದ ಸರಿಯಲ್ಲಾ. ಜವಾಬ್ದಾರಿಯು ವೃತ್ತಿರಂಗದಲ್ಲಿ ಹೆಚ್ಚಲಿದೆ.

ಮಕರರಾಶಿ
ಸ್ವಂತ ಉದ್ಯಮಿಗಳಿಗೆ ಪ್ರಗತಿಯು ಕಂಡು ಬರುವುದು. ಋಣಭಾದೆ, ಧನವ್ಯಯ, ಅಭಿವೃದ್ಧಿ ಕುಂಠಿತ, ಅನಾರೋಗ್ಯ, ಶೀತ ಸಂಬಂಧ ರೋಗಗಳು. ವಿವಿಧ ಮೂಲಗಳಿಂದ ಧನಪ್ರಾಪ್ತಿಯಾಗಲಿದೆ. ಮೇಲಧಿಕಾರಿಗಳೊಂದಿಗೆ ವಾಗ್ವಾದಕ್ಕೆ ನಿಲ್ಲದಿರಿ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಕಿರು ಸಂಚಾರವಿದೆ.

ಕುಂಭರಾಶಿ
ಮನೋವ್ಯಥೆ, ದುಷ್ಟ ಜನರ ಸಹವಾಸ, ಉನ್ನತ ಅಧಿಕಾರಿಗಳಿಂದ ತೊಂದರೆ, ಸಾಲ ಮರುಪಾವತಿ. ಸ್ವಜನ ಹಾಗೂ ಬಂಧುವರ್ಗದವರಿಂದ ಸಂತಸ ಹಾಗೂ ಸಮಾಧಾನ ಕಂಡು ಬರಲಿದೆ. ಧನ ಸಮೃದ್ಧಿ ಇದ್ದು ವಿವಾಹ ಕಾರ್ಯವು ಸಾಂಗವಾಗಿ ನೆರವೇರಲಿದೆ. ದಾಂಪತ್ಯದಲ್ಲಿ ಉತ್ತಮ ಸುಖ ವಿರುತ್ತದೆ. ತಾಳ್ಮೆ ಅಗತ್ಯ.

ಮೀನರಾಶಿ
ಭೂಮಿ ಖರೀದಿಸುವ ಯೋಗ, ಸಹೋದರರ ಜೊತೆಯಲ್ಲಿ ಕಲಹ, ಶೀತ ಸಂಬಂಧ ರೋಗಗಳು. ಸಮಾಜದಲ್ಲಿ ಗೌರವ, ಗೃಹಲಾಭ, ಮಕ್ಕಳ ಸುಖ ಇತ್ಯಾದಿ ಶುಭಫ‌ಲಗಳು ಅನುಭವಕ್ಕೆ ಬರುವುದು. ಅಲ್ಲದೆ ವೃತ್ತಿರಂಗದಲ್ಲಿ ಒಳ್ಳೆಯ ಹೆಸರು ಮಾಡುವಿರಿ. ಆದಾಯವೃದ್ಧಿ ಇರುತ್ತದೆ. ಇಷ್ಟ ಸಿದ್ದಿಯಾಗಲಿದೆ. ಶುಭವಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular