ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 22-09-2020

ನಿತ್ಯಭವಿಷ್ಯ : 22-09-2020

- Advertisement -

ಮೇಷರಾಶಿ
ಸಾರ್ವಜನಿಕ ರಂಗದಲ್ಲಿ ನಿಮ್ಮ ಪ್ರತಿಷ್ಠೆಯು ಹೆಚ್ಚುವುದು. ನಿಮ್ಮ ಮಾತಿಗೆ ಗೌರವ, ಬೆಲೆ ಕಂಡು ಬರುವುದು. ಆರ್ಥಿಕವಾಗಿ ನೀವು ತುಂಬಾ ಗಟ್ಟಿಯಾಗಿರುತ್ತೀರಿ. ಆದರೆ ವೈಯಕ್ತಿಕ ಜೀವನದಲ್ಲಿ ಸಮಾಧಾನವಿರದು. ಮಿತ್ರರಲ್ಲಿ ಸ್ನೇಹ ವೃದ್ಧಿ ಅನಿರೀಕ್ಷಿತವಾಗಿ ಲಾಭ ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ ಶತ್ರು ಬಾಧೆ.

ವೃಷಭರಾಶಿ
ಕಾರ್ಯಸಾಧನೆಗಾಗಿ ತಿರುಗಾಟ, ನಿಮ್ಮ ಶಾಂತ, ಸ್ವಭಾವದ ಹಿಂದಿರುವ ಹಠವು ನಿಮ್ಮನ್ನು ಹಾಳು ಮಾಡುವುದು. ಇತರರು, ಹಿರಿಯರ ಮಾತನ್ನು ಆಲಿಸಿದರೆ ಉತ್ತಮ. ಆರೋಗ್ಯದಲ್ಲಿ ಸುಧಾರಣೆ ಇದ್ದರೂ ತುಂಬಾ ಕೃಶರಾಗುವಿರಿ. ಪರಸ್ಥಳ ವಾಸ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.

ಮಿಥುನರಾಶಿ
ಮನಸ್ಸಿನಂತೆಯೇ ನಡೆದರೆ ಉತ್ತಮ ಪರಿಣಾಮವು ದೊರಕುವುದು. ಇತರರ ಮಾತನ್ನು ಶಾಂತಚಿತ್ತದಿಂದ ಕೇಳಿಸಿಕೊಳ್ಳಿರಿ. ಆದರೆ ಇಚ್ಛೆ ನಿಮ್ಮದೇ ಇರಲಿ. ಮನೆಯಲ್ಲಿ ಶಾಂತಿ, ಸಮಧಾನವಿರುವುದು. ಯತ್ನ ಕಾರ್ಯಭಂಗ, ಮನಕ್ಲೇಷ, ಸಾಲಬಾಧೆ, ಅಶಾಂತಿ, ಹಣದ ತೊಂದರೆ.

ಕಟಕರಾಶಿ
ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಏರಿಳಿತ ಕಂಡು ಬಂದರೂ ಅಂತಿಮ ತೀರ್ಪು ನಿಮ್ಮಪರವಾಗಿರು ತ್ತದೆ. ಮನೆಯಲ್ಲಿ ಪತ್ನಿ, ಮಕ್ಕಳೊಂದಿಗೆ ಸಂತಸದಿಂದ ಸಮಯ ಕಳೆಯುವಿರಿ. ಕಿರು ಸಂಚಾರ ಮೂಡಿ ಬಂದೀತು. ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀ ಲಾಭ, ಅಧಿಕಾರಿಗಳಲ್ಲಿ ಕಲಹ, ಮಾನಸಿಕ ಒತ್ತಡ.

ಸಿಂಹರಾಶಿ
ವಾಹನದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಮನಸ್ಸಿನಲ್ಲಿ ಸಂಕಟ. ತಳಮಳ, ಉದ್ವೇಗಗಳೇ ತುಂಬಿ ಬಿಟ್ಟಿರುತ್ತವೆ. ಮನೆಯಲ್ಲಿ ಅನಾರೋಗ್ಯವು ಕಂಡು ಬಂದು ತುಂಬಾ ಬೇಸರವಾದೀತು. ನಂಬಿದ ದೈವ ಕೈ ಬಿಡಲಾರದು. ಎಂಬ ವಿಶ್ವಾಸ ನಿಮಗಿರಲಿ. ಶೇರು ಮಾರುಕಟ್ಟೆಯಲ್ಲಿ ಲಾಭ, ಸಂಧ್ಯಾ ಸಮಯದಲ್ಲಿ ಲಾಭ.

ಕನ್ಯಾರಾಶಿ
ಚೋರಭಯ, ಉತ್ತಮ ದೈವಬಲದ ನಿಮಗೆ ಇನ್ನು ಉತ್ತಮ ದಿನಗಳು ಇವೆ. ಮನಸ್ಸಿನ ದುರ್ಬಲತೆಯನ್ನು ದೂರ ಮಾಡಿರಿ. ಸತ್ಸಂಗ, ಪ್ರವಚನ ಮುಂತಾದ ಕಡೆ ಸ್ವಲ್ಪ ಮನಸ್ಸನ್ನು ಮಾಡಿರಿ. ಮುಂದೆ ಒಳ್ಳೆದಾದೀತು. ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಕೋಪ, ಗುರುಗಳಿಂದ ಬೋಧನೆ.

ತುಲಾರಾಶಿ
ಕಾರ್ಯಕ್ಷೇತ್ರದಲ್ಲಿ ನಿರಂತರ ದುಡಿಮೆ ಇರುತ್ತದೆ. ದುಡಿಮೆಗೆ ತಕ್ಕ ಪ್ರತಿಫ‌ಲ ಸಿಕ್ಕಿಲ್ಲಾ ಎಂದು ಬೇಸರಿಸುವುದು ಬೇಡ. ಫ‌ಲ ಸಿಕ್ಕೇ ಸಿಗಲಿದೆ. ಆರ್ಥಿಕವಾಗಿ ಅನೇಕ ಖರ್ಚುಗಳು ಕಂಡು ಬರಲಿವೆ. ಭೂ ಸಂಬಂಧ ವ್ಯವಹಾರಗಳಲ್ಲಿ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ.

ವೃಶ್ಚಿಕರಾಶಿ
ಮನೆಯ ಆಲಂಕಾರ ಹಾಗೂ ವಿಲಾಸೀ ಸಾಮಗ್ರಿಗಳ ಖರೀದಿಗಾಗಿ ಖರ್ಚುವೆಚ್ಚ ಕಂಡು ಬಂದೀತು. ಮನೆಯಲ್ಲಿ ಗೃಹಿಣಿಯ ಮುನಿಸು ಇರುತ್ತದೆ. ಸಮಾಧಾನದಿಂದ ಆಲಿಸಿರಿ, ಮೇಲಾಧಿಕಾರಿಗಳಿಂದ ಕಿರುಕುಳ, ಈ ದಿನ ಸ್ಥಾನ ಭ್ರಷ್ಟ ಧನವ್ಯಯ, ಸಜ್ಜನ ವಿರೋಧ, ಅಲ್ಪ ಲಾಭ ಅಧಿಕ ಖರ್ಚು. . ದಿನಾಂತ್ಯದಲ್ಲಿ ಶುಭವಾರ್ತೆ ಇದೆ.

ಧನಸ್ಸುರಾಶಿ
ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾತಾಪಿತೃತರ ಸೇವಾಭಾಗ್ಯವು ದೊರಕಲಿದೆ. ಪಿತೃ ಆರೋಗ್ಯವು ಕೆಟ್ಟು ಹೋದೀತು. ಮನೆಯಲ್ಲಿ ಪತ್ನಿಯಿಂದ ಸಮಾಧಾನ ಹಾಗೂ ಸಾಂತ್ವನ ಸಿಗಲಿದೆ. ದಿನವಿಡೀ ದುಡಿಯುವ ನಿಮಗೆ ಆರಾಮದ ಅಗತ್ಯವಿದೆ. ಮನಸ್ಸಿನಲ್ಲಿ ಭಯಭೀತಿ, ಎಲ್ಲಿ ಹೋದರೂ ಅಶಾಂತಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು.

ಮಕರರಾಶಿ
ಮಕ್ಕಳಿಂದ ಮನೋರಂಜನೆಯು ನಿಮಗೆ ಸಂತಸ ನೀಡಲಿದೆ. ಪಠ್ಯೇತರ ವಿಷಯದಲ್ಲಿ ಸಮಾಧಾನ ನೀಡುವರು. ಆರ್ಥಿಕವಾಗಿ ಅಧಿಕ ಖರ್ಚುವೆಚ್ಚ ಬಂದರೂ ಸರಿತೂàಗಿಸಬಹುದಾಗಿದೆ. ಸ್ಥಿರಾಸ್ತಿ ಸಂಪಾದನೆ, ಶತ್ರುಗಳನ್ನು ಸದೆ ಬಡಿಯುವರು, ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ ಮಾಡುವಿರಿ.

ಕುಂಭರಾಶಿ
ಶುಭಮಂಗಲ ಕಾರ್ಯಕ್ಕಾಗಿ ಓಡಾಟ ವಿರುತ್ತದೆ. ಹಲವು ಬಂಧು ಜನರ ಭೇಟಿಯು ಸಮಾಧಾನ ನೀಡಲಿದೆ. ಮನೆಯಲ್ಲಿ ಮಕ್ಕಳಿಂದ ಶುಭವಿದೆ. ಅಕ್ಕಪಕ್ಕದವರ ಹಿತನುಡಿಯು ನಿಮಗೆ ಸಹಾಯವಾಗಲಿದೆ, ವಿನಾಕಾರಣ ದ್ವೇಷ, ಮಾತಾಪಿತರ ಸೇವೆ, ಎಲ್ಲಾ ಕೆಲಸ ಕಾರ್ಯಗಳನ್ನು ಮನಃಪೂರ್ವಕವಾಗಿ ಮಾಡುವರು.

ಮೀನರಾಶಿ
ಅಪಕೀರ್ತಿ ಪಾಪಕಾರ್ಯ, ಕಾರ್ಯರಂಗದಲ್ಲಿ ಸಮಾಧಾನದ ವಾತಾವರಣ. ಉತ್ತಮ ಗೆಳೆಯರ ಸಹವಾಸದಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ. ಆರ್ಥಿಕವಾಗಿ ತುಂಬಾ ಪ್ರಗತಿ ಯನ್ನು ಕಾಣುವಿರಿ. ಮಂಗಲಕಾರ್ಯದ ಯೋಗ ವಿರುತ್ತದೆ, ವಿವಾಹಕ್ಕೆ ಅಡಚಣೆ ಹಿತಶತ್ರುಗಳಿಂದ ತೊಂದರೆ ಮನಕ್ಲೇಷ,

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular