ಮೇಷರಾಶಿ
ಆಧ್ಯಾತ್ಮ ವಿಷಯಗಳತ್ತ ಚಿತ್ತ, ಪಾಲುದಾರಿಕೆಯಲ್ಲಿ ಅನುಕೂಲ, ಸಾಂಸಾರಿಕ ಜೀವನದಲ್ಲಿ ಏರಿಳಿತ, ಅನಾರೋಗ್ಯ ಸಮಸ್ಯೆ, ಮಾತಿನಿಂದ ಸಮಸ್ಯೆ. ಶುಭದಿನ.
ವೃಷಭರಾಶಿ
ದಂಪತಿಗಳಿಗೆ ಶುಭದಿನ, ಸ್ವಯಂಕೃತಾಪರಾಧದಿಂದ ಸಮಸ್ಯೆ, ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ನೆಮ್ಮದಿಗೆ ಭಂಗ ಬರಲಿದೆ, ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಮಕ್ಕಳಿಂದ ಸಂಕಷ್ಟ.
ಮಿಥುನರಾಶಿ
ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ, ಸಾಲದ ನೆರವು, ಪ್ರೀತಿ ಪ್ರೇಮ ವಿಷಯಗಳಿಗೆ ತೊಂದರೆ, ಕಣ್ಣೆದುರೆಲ್ಲೇ ನಡೆಯುವ ಮೋಸ ಕಂಗೆಡಿಸಲಿದೆ, ಸ್ನೇಹಿತರೊಂದಿಗೆ ಮೋಜುಮಸ್ತಿಯಲ್ಲಿ ತೊಡಗುವಿರಿ.
ಕರ್ಕಾಟಕರಾಶಿ
ಸೋಲನ್ನು ಒಪ್ಪಿಕೊಂಡ್ರೆ ಗೆಲುವಿನ ದಾರಿ ಸುಗಮ, ಸಾಮಾಜಿಕವಾಗಿ ಗೌರವ, ಸಾಲದ ಚಿಂತೆ, ಆರೋಗ್ಯ ವ್ಯತ್ಯಾಸಗಳು, ಮಿತ್ರರಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ,
ಸಿಂಹರಾಶಿ
ಕಂಕಣಬಲ ಕೂಡಿಬರಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ, ಸ್ನೇಹಿತರಿಂದ ಹಣಕಾಸಿನ ನೆರವು, ನೆಮ್ಮದಿ ಭಂಗ, ಉದ್ಯೋಗ ಮತ್ತು ಸಾಂಸಾರಿಕ ಜೀವನದಲ್ಲಿ ನಿರಾಸಕ್ತಿ.
ಕನ್ಯಾರಾಶಿ
ದುಂದು ವೆಚ್ಚಗಳ ಮೇಲೆ ಕಡಿವಾಣ ಹಾಕಿ, ವಿದ್ಯಾಭ್ಯಾಸದ ಬಗ್ಗೆ ಶಿಸ್ತುಪಾಲನೆ, ಐಶಾರಾಮದಿಂದ ದೈಹಿಕ ಪೀಡನೆ, ವಾಹನ ಮತ್ತು ಭೂಮಿಯಿಂದ ಲಾಭ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ.
ತುಲಾರಾಶಿ
ವ್ಯವಹಾರದಲ್ಲಿ ಕೊಂಚ ಪ್ರಗತಿ, ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ, ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ, ಆರೋಗ್ಯ ದ ಬಗ್ಗೆ ಕಾಳಜಿಯಿರಲಿ,ಮಾತಿನಿಂದ ಸಮಸ್ಯೆ.
ವೃಶ್ಚಿಕರಾಶಿ
ಮನಸಿನ ನೆಮ್ಮದಿಗಾಗಿ ಆಧ್ಯಾತ್ಮದತ್ತ ಒಲವು, ಆರ್ಥಿಕವಾಗಿ ಸಂಪನ್ಮೂಲ ಸಂಗ್ರಹ, ತಂದೆಯಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ದ್ವಂದ್ವ ಸ್ಥಿತಿಯಲ್ಲಿರುವುದು.
ಧನಸ್ಸುರಾಶಿ
ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಹಿತಶತ್ರುಗಳು ನಿಮ್ಮ ಸೋಲಿಗೆ ಕಾಯುತ್ತಿದ್ದಾರೆ. ಅನುಕೂಲಕರ ದಿವಸ, ಉದ್ಯೋಗ ಅಥವಾ ವ್ಯವಹಾರದಲ್ಲಿ ಅತಂತ್ರ, ನೀರು ಮತ್ತು ಆಹಾರ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ.
ಮಕರರಾಶಿ
ನಿಮ್ಮ ಪಾಲಿಗಿಂದು ಅದೃಷ್ಟದ ದಿನ, ಕುಟುಂಬ ಸದಸ್ಯರ ಆಗಮನದಿಂದ ಸಂತಸ, ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಆಲೋಚನೆ ಮತ್ತು ಕೆಟ್ಟ ನಿರ್ಧಾರ ಗಳು, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ.
ಕುಂಭರಾಶಿ
ಮನೆಯಲ್ಲಿ ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ. ಸಾಲದ ಸಹಾಯ ಲಭಿಸುವುದು, ವ್ಯವಹಾರದಲ್ಲಿ ಪ್ರಗತಿ, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಉತ್ತಮ ಅವಕಾಶ, ಮಿತ್ರರಿಂದ ಮತ್ತು ಸಹೋದರನಿಂದ ಸಮಸ್ಯೆ.
ಮೀನರಾಶಿ
ಸಾಂಸಾರಿಕವಾಗಿ ಹೊಂದಾಣಿಕೆ ಅತ್ಯಗತ್ಯ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ, ಸಾಲಗಾರರ ಕಾಟ ನಿಮ್ಮನ್ನು ಕಂಗೆಡಿಸಲಿದೆ, ವೃತ್ತಿರಂಗದಲ್ಲಿ ಮುನ್ನಡೆ ಕಂಡುಬರಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದವರಿಗೆ ಅನುಕೂಲ.