ಮೇಷರಾಶಿ
ಆರ್ಥಿಕ ಅನುಕೂಲ, ಕುಟುಂಬದಲ್ಲಿ ಗೊಂದಲಗಳು, ಸಂಗಾತಿಯ ಹಟಮಾರಿತನ, ವೃತ್ತಿರಂಗದಲ್ಲಿ ಅಭಿವೃದ್ಧಿಕಾರಕ ಬೆಳವಣಿಗೆಯು ಕಂಡು ಬರಲಿದೆ. ಕಾರ್ಮಿಕ ವರ್ಗದವರು ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಿದೆ. ಶುಭಮಂಗಲ ಕಾರ್ಯಕ್ಕೆ ಇದು ಸುಸಮಯ. ಸ್ವಂತ ಉದ್ಯಮದಲ್ಲಿ ಪ್ರಗತಿ, ದುಡುಕಿನ ಮಾತು, ಪಾಲುದಾರಿಕೆಯಲ್ಲಿ ಸಮಸ್ಯೆ.
ವೃಷಭರಾಶಿ
ವ್ಯವಹಾರದಲ್ಲಿ ಗೊಂದಲಗಳು, ದೈವ ನಿಂದನೆ, ಧರ್ಮನಿಂದನೆ, ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬರಲಿದೆ. ವಿದ್ಯಾರ್ಥಿಗಳು ಉತ್ತಮ ಫಲ ಪಡೆಯಲಿದ್ದಾರೆ ಕಾಂಟ್ರಾಕ್ಟ್ ವೃತ್ತಿಯವರಿಗೆ ಇದು ಉತ್ತಮ ಕಾಲ. ಸದುಪಯೋಗಿಸಿಕೊಳ್ಳಿರಿ. ಅನಿರೀಕ್ಷಿತವಾಗಿ ಶುಭವಾರ್ತಾ ಶ್ರವಣ. ಗುಪ್ತ ವ್ಯಾಧಿ, ಕಫ ಸೋಂಕು, ಆರ್ಥಿಕವಾಗಿ ಮೋಸ ಸಾಧ್ಯತೆ, ಆತುರದ ನಿರ್ಧಾರ, ಕೆಲಸಗಾರರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ.

ಮಿಥುನರಾಶಿ
ಪ್ರೀತಿ-ಪ್ರೇಮದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ, ಜೂಜಿನಲ್ಲಿ ನಷ್ಟ, ಆರೋಗ್ಯದಲ್ಲಿ ಅತೀ ಜಾಗ್ರತೆ ವಹಿಸಿರಿ. ಕೆಲಸಕಾರ್ಯಗಳು ನಿಮ್ಮಿಚ್ಛೆಯಂತೆ ನಡೆಯಲಾರದು. ದಾಯಾದಿಗಳು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹರಡಿಯಾರು. ವೈವಾಹಿಕ ಪ್ರಸ್ತಾವಗಳು ಹೊಂದಿಕೆಯಾದೀತು. ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ಗೊಂದಲಗಳು, ಮೋಜು ಮಸ್ತಿಯಿಂದ ತೊಂದರೆ, ಸೌಂದರ್ಯವರ್ಧಕಗಳಿಂದ ತೊಂದರೆ.
ಕಟಕರಾಶಿ
ಲಾಭದ ಪ್ರಮಾಣ ಕುಂಠಿತ, ಸ್ಥಿರಾಸ್ತಿ, ವಾಹನದಲ್ಲಿ ಮೋಸ, ಮಿತ್ರರು ದೂರವಾಗುತ್ತಾರೆ, ಮಾನಸಿಕ ಗೊಂದಲಗಳು, ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಹೊಂದುವರು. ಮಿತ್ರ ಸಮೂಹದಲ್ಲಿ ಸಣ್ಣ ಸಣ್ಣ ವಿಚಾರದಲ್ಲಿ ಅಭಿಪ್ರಾಯ ಬೇಧ ಉಂಟಾದೀತು. ಅದನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ. ದೂರ ಸಂಬಂಧಿಯು ಬಂದಾರು. ಸ್ವಂತ ವ್ಯವಹಾರದಲ್ಲಿ ಅಲ್ಪ ಚೇತರಿಕೆ, ಮಾತಿನಿಂದ ಸಮಸ್ಯೆ, ಮಹಿಳೆಯರಿಂದ ನೋವು ನಿರಾಸೆ.

ಸಿಂಹರಾಶಿ
ಉದ್ಯೋಗ ಲಾಭ, ಬಂಧುಗಳ ಆಗಮನ, ಮಿತ್ರರಿಂದ ಅನುಕೂಲ, ಶ್ರೀದೇವತಾ ಕಾರ್ಯಗಳಿಗಾಗಿ ಓಡಾಟ ತರಲಿದೆ. ಅರ್ಚಕ ವೃತ್ತಿಯವರಿಗೆ ಉತ್ತಮ ಸಂಪಾದನೆಯು ಇರುತ್ತದೆ. ಆಗಾಗ ಅಡೆತಡೆಗಳು ಕಂಡು ಬಂದರೂ ನಿಶ್ಚಿತ ರೂಪದಲ್ಲಿ ಕಾರ್ಯಸಾಧನೆ ಆಗಿ ಸಮಾಧಾನವಾದೀತು. ನೆರೆಹೊರೆಯವರಿಂದ ಕಿರಿಕಿರಿ, ಸ್ಥಳ ಬದಲಾವಣೆಯಿಂದ ಸಮಸ್ಯೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ.
ಕನ್ಯಾರಾಶಿ
ಪ್ರಯಾಣದಲ್ಲಿ ಅನುಕೂಲ, ದೂರದಿಂದ ಧನಾಗಮನ, ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾ ಇರಲಿ. ಆಗಾಗ ನೆರೆಹೊರೆಯವರಿಂದ ಕೆಟ್ಟ ಮಾತು ಕೇಳುವಿರಿ. ಮಾಡುವಂಥ ಉದ್ಯೋಗ, ವ್ಯವಹಾರದಲ್ಲಿ ತುಸು ಚೇತರಿಕೆ ಸಮಾಧಾನ ತರಲಿದೆ. ಭೂ ಖರೀದಿಗೆ ಉತ್ತಮಕಾಲ.
ಉದ್ಯೋಗದಲ್ಲಿ ಅನುಕೂಲ, ಪ್ರಯಾಣದಲ್ಲಿ ಕಾರ್ಯ ಜಯ, ಮಾತಿನಲ್ಲಿ ಹಿಡಿತ ಇರುವುದು ಒಳಿತು, ಆತುರದ ನಿರ್ಧಾರದಿಂದ ಕಾರ್ಯ ವಿಘ್ನ.

ತುಲಾರಾಶಿ
ವ್ಯವಹಾರದಲ್ಲಿ ಯಶಸ್ಸು, ಅನಾವಶ್ಯಕವಾಗಿ ಹಣವು ವ್ಯಯವಾಗುತ್ತದೆ. ಆರ್ಥಿಕವಾಗಿ ಹೆಚ್ಚಿನ ಜವಾಬ್ದಾರಿ ವಹಿಸುವುದು ಅತೀ ಅಗತ್ಯವಿದೆ. ಶ್ರೀದೇವತಾ ಕಾರ್ಯಗಳಿಗಾಗಿ ಖರ್ಚು ತರಲಿದೆ. ಎಷ್ಟೇ ಹಣ ಖರ್ಚಾದರೂ ಕಾರ್ಯಸಾಧನೆಯಾದೀತು. ಅಧಿಕ ಸಿಟ್ಟು ಕೋಪತಾಪಗಳು, ಆಯುಷ್ಯದ ಭೀತಿ, ಸೋಂಕು, ಸುಸ್ತು, ಸೊಂಟ ಬಾಧೆ, ಆರ್ಥಿಕ ಚೇತರಿಕೆ, ಮಕ್ಕಳಿಂದ ನೋವು, ಪ್ರಯಾಣದಲ್ಲಿ ತೊಂದರೆ, ಸ್ವಯಂಕೃತ ಅಪರಾಧಗಳು.
ವೃಶ್ಚಿಕರಾಶಿ
ದಾಂಪತ್ಯದಲ್ಲಿ ಕಲಹ, ಸಂಶಯಗಳು, ದಾಯಾದಿಗಳು ನಿಮ್ಮ ಮಾತಿಗೆ ಬೆಲೆ ಕೊಡಲಾರರು. ಆಗಾಗ ನೆಂಟರಿಷ್ಟರ ಕೆಟ್ಟಮಾತನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕಾರ್ಯಾಚಾರಣೆಗೆ ದೇವರು ಅನುಗ್ರಹ ಮಾಡಲಿದ್ದಾರೆ ಶುಭಮಂಗಲ ಕಾರ್ಯಕ್ಕಾಗಿ ಓಡಾಟವಿದೆ. ಪಾಲುದಾರಿಕೆಯಲ್ಲಿ ಸಮಸ್ಯೆ, ಆಕಸ್ಮಿಕ ಖರ್ಚುಗಳು, ತಪ್ಪು ವ್ಯವಹಾರ ಮತ್ತು ನಿರ್ಧಾರಗಳು, ಶುಭಕಾರ್ಯ ವಿಘ್ನ, ಮಕ್ಕಳ ಭವಿಷ್ಯದ ಚಿಂತೆ, ಅಪವಾದಗಳು.

ಧನಸ್ಸುರಾಶಿ
ಸಾಲಗಾರರ ಕಾಟ ಮತ್ತು ಚಿಂತೆ, ವೃತ್ತಿರಂಗದಲ್ಲಿ ಉತ್ತಮ ಬೆಳವಣಿಕೆ ಇದೆ. ಆರ್ಥಿಕವಾಗಿ ಖರ್ಚುವೆಚ್ಚವನ್ನು ಸಮರ್ಥವಾಗಿ ನಿಭಾಯಿಸುವುದು. ಸಾಂಸಾರಿಕವಾಗಿ ಮನದನ್ನೆಯ ಮಾತು ಕೇಳಿಸಿಕೊಳ್ಳಿರಿ. ವೈಯಕ್ತಿಕ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಅನಾರೋಗ್ಯದ ಸಮಸ್ಯೆ, ಸಂಗಾತಿಯೊಂದಿಗೆ ಮನಸ್ತಾಪ, ಪ್ರೀತಿ-ಪ್ರೇಮದಲ್ಲಿ ತೊಂದರೆಗಳು, ಬಾಡಿಗೆದಾರರಿಂದ ಸಮಸ್ಯೆ, ಕಾರ್ಮಿಕರಿಂದ ತೊಂದರೆ, ಸೇವಕರ ಅಲಭ್ಯ, ಶುಭಕಾರ್ಯ ಯಶಸ್ಸು, ಮಿತ್ರವಿಂದ ಅನುಕೂಲ.
ಮಕರರಾಶಿ
ಭಾವನಾತ್ಮಕ ಸೋಲು, ಜೂಜಿನಲ್ಲಿ ಸೋಲು, ಆಗಾಗ ಆರ್ಥಿಕವಾಗಿ ಏರುಪೇರು ಕಂಡು ಬರಲಿದೆ. ಲಾಭಸ್ಥಾನಗತನಾದ ರಾಹು ಹೆಚ್ಚಿನ ಸಮಸ್ಯೆ ತಂದು ಕೊಡಲಾರನು. ಪತಿ, ಪತ್ನಿಯರಲ್ಲಿ ಹೆಚ್ಚಿನ ಹೊಂದಾಣಿಕೆ ಅಗತ್ಯವಿದೆ. ರಾಹುಬಲದಿಂದ ಧೈರ್ಯ ವಹಿಸಿರಿ. ಪ್ರೀತಿಯಲ್ಲಿ ಗೊಂದಲ, ಮಕ್ಕಳು ದೂರ, ಸೇವಾ ಉದ್ಯೋಗದಲ್ಲಿ ಲಾಭ, ಒಳ್ಳೆಯತನದಿಂದ ಕಾರ್ಯ ಹಿನ್ನಡೆ.

ಕುಂಭರಾಶಿ
ಆಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಂದ ಲಾಭ, ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚ ಕಂಡು ಬಂದರೂ ಶನಿಯು ಸ್ವಕ್ಷೇತ್ರಾಧಿಪತಿಯಾದುದರಿಂದ ಹೆಚ್ಚಿನ ಸಮಸ್ಯೆ ಇರದು. ಹಿತಶತ್ರುಗಳ ಕಾಟದಿಂದ ಮನಸ್ಸು ರೋಸಿ ಹೋದೀತು. ಉದ್ವೇಗಬೇಡ. ಮಾನಸಿಕ ಗೊಂದಲಗಳು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಯಶಸ್ಸು, ಪವಿತ್ರ ಕ್ಷೇತ್ರ ದರ್ಶನದ ಆಲೋಚನೆ, ಹಿರಿಯರಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ, ಉನ್ನತ ಆಲೋಚನೆಗಳು.
ಮೀನರಾಶಿ
ವಾಹನ ಅಪಘಾತಗಳು, ಕೋರ್ಟ್ ಕೇಸ್‍ಗಳಿಂದ ಆಘಾತ, ಮಿಶ್ರ ಫಲದಿಂದಲೇ ಮುನ್ನಡೆ ತೋರಿ ಬಂದೀತು. ಅನಾವಶ್ಯಕವಾಗಿ ಋಣಾತ್ಮಕ ಚಿಂತೆ ಮಾಡದಿರಿ. ಶನಿಯ ಅನುಗ್ರಹವು ನಿಮಗೆ ನಾನಾ ರೀತಿಯಲ್ಲಿ ಕಾಪಾಡಲಿದೆ. ಆರ್ಥಿಕವಾಗಿ ಉತ್ತಮಗಳಿಕೆಯಿಂದ ಹರುಷ. ದುಡುಕಿನ ನಿರ್ಧಾರಗಳು, ನೀರಿನಿಂದ ತೊಂದರೆ, ಭವಿಷ್ಯದ ಆತಂಕಗಳು, ಅಪಕೀರ್ತಿ, ನಿರಾಸೆ, ಮಾನಹಾನಿ, ಉದ್ಯೋಗ ಬದಲಾವಣೆಯಿಂದ ತೊಂದರೆ.