ಬುಧವಾರ, ಜೂನ್ 18, 2025
Homehoroscopeನಿತ್ಯಭವಿಷ್ಯ : 18-12-2020

ನಿತ್ಯಭವಿಷ್ಯ : 18-12-2020

- Advertisement -

ಮೇಷರಾಶಿ
ಆರ್ಥಿಕವಾಗಿ ಏಳಿಗೆ ಕಂಡು ಬಂದರೂ ಖರ್ಚು ವೆಚ್ಚವು ಅಷ್ಟೇ ರೂಪದಲ್ಲಿ ಕಂಡು ಬರುವುದು, ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಕಂಡುಬಂದೀತು, ಮನೆಯ ರಿಪೇರಿ ಖರ್ಚು ಬಂದೀತು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿ ಒಲಿಯುವ ಸಂಭವ, ಆಕಸ್ಮಿಕ ಅವಘಡಗಳು ಮತ್ತು ತೊಂದರೆ.

ವೃಷಭರಾಶಿ
ಆರೋಗ್ಯವು ಸುಧಾರಿಸುತ್ತಾ ಹೋಗಲಿದೆ. ಆದರೂ ಆಗಾಗ ವೈದ್ಯರ ಸಲಹೆಯು ಅಗತ್ಯವಿರುತ್ತದೆ, ವ್ಯಾಪಾರಸ್ಥರು ಮತ್ತು ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಖರ್ಚುವೆಚ್ಚಗಳು ಅಧಿಕವಿರುತ್ತದೆ, ಮಕ್ಕಳ ವಿಷಯದಲ್ಲಿ ತುಂಬಾ ಚಿಂತೆಯು ನಿಮಗೆ ಕಂಡುಬರಲಿದೆ.

ಮಿಥುನರಾಶಿ
ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ, ಆಕಸ್ಮಿಕ ಧನಯೋಗ, ಜೀವನದಲ್ಲಿ ಅತೀ ಸಂತೋಷ, ಸಂಭ್ರಮದ ದಿನವಿದು, ನಿಮ್ಮ ವ್ಯಾಪಾರ, ವ್ಯವಹಾರವು ಅತೀ ಚೆನ್ನಾಗಿ ನಡೆಯುವುದು,ಗೃಹದಲ್ಲಿ ತುಂಬಾ ಅತಿಥಿಗಳು ಬಂದಾರು, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ಅನಗತ್ಯ ಮಾತು ಮತ್ತು ನಿಂದನೆ.

ಕಟಕರಾಶಿ
ಮನೆಯಲ್ಲಿ ಹಿರಿಯರ ಮನಸ್ಸನ್ನು ಅರಿತು ನಡೆಯಿರಿ, ಶುಭ ಕಾರ್ಯಗಳಿಗೆ ಅವಕಾಶ ಕೂಡಿಬರುವುದು, ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆಯಾಗಲಿದೆ, ಆದರೆ ಚಿಂತೆ ಬಿಟ್ಟು ಮುನ್ನಡೆದು ಪ್ರಯತ್ನಪಟ್ಟಲ್ಲಿ ಶ್ರೇಯಸ್ಸು ಖಂಡಿತವಿದೆ, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮತ್ತು ದುರಾಚಾರ ಗಳಿಗೆ ಮನಸ್ಸು.

ಸಿಂಹರಾಶಿ
ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು ಆಧ್ಯಾತ್ಮದ ಕಡೆ ತಿರುಗಿಸಿಟ್ಟುಕೊಂಡರೆ ಉತ್ತಮ, ನಿಮ್ಮ ಮನಸ್ಸು ಅತೀ ಉದ್ವೇಗ ಹಾಗೂ ಉದ್ವಿಗ್ನತೆಯಿಂದ ಕೂಡಿರುತ್ತದೆ. ಹಾಗೂ ನಿದ್ರೆಯಿಲ್ಲದೆ ಚಿಂತೆಗೊಳಗಾಗುವಿರಿ, ಅಧಿಕ ನಷ್ಟ, ಋಣ ರೋಗಬಾಧೆಗಳಿಗೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ, ಸೋಮಾರಿತನ, ಕೆಲಸ ಕಾರ್ಯಗಳಿಗೆ ಅಡೆತಡೆ, ಪರಿಹಾರ ಬಿಳಿಯ ವಸ್ತ್ರಧರಿಸಿ.

ಕನ್ಯಾರಾಶಿ
ಸ್ನೇಹಿತರಿಂದ ಲಾಭ, ನಿಮ್ಮ ಮನಸ್ಸು ಬೇಸರದಿಂದ ಭಾರವಾದೀತು. ಆದರೆ ಜೀವನದಲ್ಲಿ ನೀವು ಮುಂದೆ ಸಾಗಲಿದ್ದೀರಿ, ನಿಮ್ಮನ್ನು ಅರಿತು ಬಾಳುವ ಪತ್ನಿ ನಿಮಗೆ ದೊರೆತು ಸಂತಸ ವಾಗಲಿದೆ, ಪರ ಊರಿಗೆ ಹೊಂದಿಕೊಳ್ಳಿ ರಿ, ಗೃಹ ಸ್ಥಳ ಮತ್ತು ಉದ್ಯೋಗ ಬದಲಾವಣೆಗೆ ಅಡೆತಡೆ, ಮಾನ ಅಪಮಾನಗಳಿಗೆ ಗುರಿಯಾಗುವಿರಿ.

ತುಲಾರಾಶಿ
ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು, ಉದ್ಯೋಗರಂಗದಲ್ಲಿ ನಿಮಗೆ ಏರುಪೇರು ಕಂಡು ಬರಲಿದೆ, ಗೃಹದಲ್ಲಿ ಹೊಸ ಹೊಸ ಉಪಕರಣಗಳ ಖರೀದಿ ಇದ್ದೀತು, ಆರೋಗ್ಯದಲ್ಲಿ ಅಭಿವೃದ್ಧಿ ಇದೆ, ಉದ್ಯೋಗ ದೊರಕುವುದು, ಆತ್ಮಗೌರವಕ್ಕೆ ಚ್ಯುತಿ, ತಾಯಿಯಿಂದ ಅನುಕೂಲ.

ವೃಶ್ಚಿಕರಾಶಿ
ಮನೆಯಲ್ಲಿ ಮಂಗಲ ಕಾರ್ಯವು ನಡೆದು ಸಂಭ್ರಮ ತಂದೀತು, ವ್ಯಾಪಾರ, ವ್ಯವಹಾರವು ಅಭಿವೃದ್ಧಿ ರೀತಿಯಲ್ಲಿ ಮುನ್ನಡೆಯುವುದು, ಜಾಗದ ವಿಚಾರದಲ್ಲಿ ಸಹೋದರರೊಳಗೆ ಸಣ್ಣಪುಟ್ಟ ಮನಸ್ತಾಪ ಎದ್ದೀತು, ದೇವತಾ ಕಾರ್ಯಗಳಿಗೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಬಹುಮಾನ ಮತ್ತು ಭಕ್ಷಿಸು ಲಭಿಸುವುದು,

ಧನಸ್ಸುರಾಶಿ
ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗುಪ್ತ ವಿಷಯಗಳಲ್ಲಿ ತೊಂದರೆ, ಮಾನ ಅಪಮಾನಗಳು, ಕೌಟುಂಬಿಕ ಸಂಕಷ್ಟಗಳಿಂದ ಹಾಸಿಗೆ ಹಿಡಿಯುವಿರಿ, ಪತ್ನಿಯ ವೃತ್ತಿಯಲ್ಲಿ ಏಳುಬೀಳುಗಳು ಕಂಡು ಬರುವುದು, ಅದನ್ನು ಪರಿಗಣಿಸದೆ ಮುನ್ನಡೆದರೆ ಉತ್ತಮ ಫ‌ಲವು ದೊರಕಲಿದೆ, ಸ್ವಲ್ಪ ಎಡರುತೊಡರುಗಳಿದ್ದರೂ ನಿಸ್ಸಂದೇಹವಾಗಿ ಮುನ್ನಡೆಯಿರಿ.

ಮಕರರಾಶಿ
ನಿಮ್ಮ ಆರೋಗ್ಯದ ಬಗ್ಗೆ ನೀವು ಅತೀ ಜಾಗ್ರತೆ ಮಾಡಬೇಕಾಗುವುದು, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಬಂಧುಗಳು ಮಕ್ಕಳು ಆಗಮಿಸುವರು, ಅದೃಷ್ಟವನ್ನು ದೂರ ಮಾಡಿಕೊಳ್ಳುವಿರಿ, ಮಕ್ಕಳಿಂದ ತುಂಬಾ ಸಂತೋಷ ದೊರಕಲಿದೆ, ಗೃಹ ನಿರ್ಮಾಣ ಯಾ ಜಾಗದ ಖರೀದಿಯ ಕುರಿತು ಮಾತುಕತೆ ನಡೆಯಲಿದೆ. ಶುಭವಿದೆ.

ಕುಂಭರಾಶಿ
ನಿಮ್ಮ ಮನಸ್ಸು ಎಣಿಕೆ ಮಾಡಿದಂತೆ ಎಲ್ಲಾ ಕೆಲಸಗಳು ನಡೆದು ಸಂತಸ ಉಂಟಾಗಲಿದೆ. ಪರ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಒತ್ತಡ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ಭೂಮಿ ನಷ್ಟ.

ಮೀನರಾಶಿ
ವೈದ್ಯಕೀಯ ರಂಗದವರಿಗೆ ಏಳಿಗೆಯು ಕಂಡುಬರುವುದು. ಭಡ್ತಿಯು ದೊರೆತು ಸಂತೋಷ ವಾದೀತು. ಗೃಹದಲ್ಲಿ ಶುಭಮಂಗಲ ಕಾರ್ಯದ ತಯಾರಿ ನಡೆಯಲಿದೆ. ಆರೋಗ್ಯವು ಸುಧಾರಿಸಲಿದೆ, ಮಾನ ಸನ್ಮಾನ, ಉನ್ನತ ವಿದ್ಯೆಗೆ ಉತ್ತಮ ಸಂದರ್ಭ, ಪ್ರಯಾಣದಿಂದ ಮತ್ತು ತಂದೆಯಿಂದ ನಷ್ಟ, ವಾಹನ ಕೊಳ್ಳುವ ಆಲೋಚನೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular