ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ(02-11-2020)

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ(02-11-2020)

- Advertisement -

ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ದ್ವಿತೀಯ ತಿಥಿ, ಕೃತಿಕಾ ನಕ್ಷತ್ರ, ವಾರಿಯಾನ್, ತೈತುಲ ಕರಣ, ನವೆಂಬರ್ 02 , ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಬದುಕನ್ನ ಕಟ್ಟಿಕೊಳ್ಳಲು ಋಷಿಗಳು ಮಹರ್ಷಿಗಳು ನಮಗೆ ಹಲವಾರು ಮಾರ್ಗಗಳನ್ನೂ ತಿಳಿಸಿಕೊಟ್ಟಿದ್ದಾರೆ ಆದರೆ ಅದನ್ನು ನಾವು ಅಳವಡಿಸಿಕೊಳ್ಳುವಲ್ಲಿ ಎಡವಿದ್ದೇವೆ ಎಡವಟ್ಟು ಮಾಡಿದ್ದೇವೆ. ಅಮ್ಮನ ಹಾಗೆ ರುಚಿಯಾಗಿ ಅಡುಗೆ ಮಾಡಿ ಹಸಿವೆಯನ್ನು ತಿಳಿದವಳು ಈ ಪ್ರಪಂಚದಲ್ಲಿ ಮತ್ತೊಬ್ಬಳ್ಯಾರು ಇಲ್ಲ ಮತ್ತು ಹಾಗೆಯೆ ಹೆಂಡತಿಯ ಹಾಗೆ ಊಟವನ್ನು ಬಡಿಸುವವಳು ಪ್ರಪಂಚದಲ್ಲಿ ಮತ್ತೊಬ್ಬಳು ಯಾರೂ ಇಲ್ಲ. ನಮ್ಮವರು ಕೋಪದಲ್ಲಿ ಅಚಾನಕ್ಕಾಗಿ ಮಾತನ್ನಾಡಿದ ಅಥವಾ ಮಾಡಿದ 1 ತಪ್ಪನ್ನು ಪದೇ ಪದೇ ಎತ್ತಿ ಹೇಳಲು ಹೋಗಬೇಡಿ.

ಒಳ್ಳೆಯದನ್ನ ಮಾತ್ರ ನೆನೆಸಿಕೊಳ್ಳಿ. ಜೀವನದಲ್ಲಿ ರಾಮರನ್ನು ಪೂಜಿಸುವುದರ ಜೊತೆಗೆ ಅವರ ಆದರ್ಶ ಆಚರಣೆಗಳನ್ನು ಅಳವಡಿಸಿಕೊಳ್ಳಿ ಜೀವನ ಸುಖಮಯವಾಗಿರುತ್ತದೆ. ಮನುಷ್ಯರು ಎಂದ ಮೇಲೆ ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ಅದನ್ನೇ ಬೆಳಸಿಕೊಂಡು ಹೋಗಬಾರದು. ಶುದ್ಧ ಎಂಬುದು ಜಗತ್ತಿನಲ್ಲಿ ಯಾವುದೂ ಇಲ್ಲ. ಮೊದಲು ಇನ್ನೊಬ್ಬರನ್ನು ಅವಹೇಳನ ಮಾಡುವುದನ್ನು ನಿಲ್ಲಿಸಿ, ನೀವು ಬದಲಾಗಿ ಆಗ ಎಲ್ಲವೂ ಸುಂದರವಾಗಿ ಚೆನ್ನಾಗಿರುತ್ತದೆ. ಇಷ್ಟವಿಲ್ಲವೆಂದಾದರೆ ಸುಮ್ಮನಾಗಿ ಬಿಡಿ. ನಿಮಗೆ ಸಿಗಬೇಕು ಎಂದಾದರೆ ಅದು ನಿಮಗೆ ಸಿಕ್ಕೇ ಸಿಗುತ್ತದೆ. ನಮ್ಮದಲ್ಲದನ್ನ ಕಿತ್ತುಕೊಳ್ಳಲು ಹೋದರೂ ಕೂಡ ಅದು ನಮಗೆ ಸಿಗುವುದಿಲ್ಲ.

ಮೇಷರಾಶಿ
ಚೆನ್ನಾಗಿದೆ, ಸೂರ್ಯ ವಿಶೇಷವಾಗಿ ಕೇಂದ್ರದಲ್ಲಿರುವುದರಿಂದ ಸ್ವಂತ ನಿರ್ಧಾರಗಳಿಗೆ ಸ್ವಲ್ಪ ಎಳೆದಾಟ ವಾದರೂ ತಕ್ಕಮಟ್ಟಿಗೆ ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯುವ ದಿನ.

ವೃಷಭರಾಶಿ
ಸ್ವಲ್ಪ ಎಚ್ಚರಿಕೆ ಭೂಮಿ ಮನೆ ಆಳು ಕಾಳು ತೆಗೆದುಕೊಳ್ಳುವುದು ಕೊಡುವುದು ಸ್ವಲ್ಪ ಒತ್ತಡದ ಛಾಯೆ ಇಲ್ಲೊ ಒಂದು ಕಲಬೆರಕೆ ಕೂಡ ಉಂಟು. ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ.

ಮಿಥುನರಾಶಿ
ಚೆನ್ನಾಗಿದೆ ತಂದೆ ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ಇಂದು ವೈರಾಗ್ಯದ ಭಾವ ಶಿವನ ನಾಮಸ್ಮರಣೆ ಮಾಡಿಕೊಳ್ಳಿ.

ಕರ್ಕಾಟಕರಾಶಿ
ಚೆನ್ನಾಗಿದೆ ಮುನ್ನುಗ್ಗಿ ಅಂದುಕೊಳ್ಳುವ ಕೆಲಸ ಕಾರ್ಯಗಳಲ್ಲೆಲ್ಲಾ ಪ್ರಗತಿ.

ಸಿಂಹರಾಶಿ
ಚೆನ್ನಾಗಿದೆ ಅಂದ್ರೆ ಸೂರ್ಯ ನೀಚನಾಗಿರುವುದರಿಂದ ಮುಂದೆ ಹೋಗಲು ಹಿಂಜರಿಯುತ್ತೀರ. ನಿಮ್ಮಿಂದ ಇನ್ನೊಬ್ಬರಿಗೆ ಉಪಯೋಗ.

ಕನ್ಯಾರಾಶಿ
ಸೂರ್ಯ ಭಾವದಲ್ಲಿ ಚಂದ್ರನಿದ್ದು, ನಿಮಗೆ ಮಿತ್ರ ಕಾರಕ. ಮಿತ್ರರಿಂದ, ಆತ್ಮೀಯರಿಂದ, ಸ್ನೇಹಿತರಿಂದ, ನಿಮಗೆ ಸಹಕಾರ.

ತುಲಾರಾಶಿ
ತುಂಬ ಪರಿಶ್ರಮದ ದಿನ ಎಂದೆನಿಸುತ್ತದೆ ಅಂಥದ್ದೇನೂ ಇಲ್ಲ ಅದು ನಿಮ್ಮ ಬರೀ ಯೋಚನೆ ಅಷ್ಟೆ.

ವೃಶ್ಚಿಕರಾಶಿ
ಚೆನ್ನಾಗಿದೆ ಪರಿಶ್ರಮದಿಂದ ಅಧಿಕಾರವನ್ನು ಪಡೆಯುವಂತಹ ದಿನ.

ಧನಸ್ಸುರಾಶಿ
ಚೆನ್ನಾಗಿದೆ, ತೊಂದರೆಯೇನು ಇಲ್ಲ, ಎಂತಹ ಶತ್ರುವನ್ನಾದರೂ ಕೂಡ ಮಣಿಸುವಂತಹ ದಿನ, ಲಾಭಕರವಾದ ದಿನ.

ಮಕರರಾಶಿ
ಉದ್ಯೋಗದಲ್ಲಿ ಎಳೆದಾಟ, ಸ್ವಂತ ವ್ಯವಹಾರದಲ್ಲಿ ಪರಿಶ್ರಮ.

ಕುಂಭರಾಶಿ
ಸ್ನೇಹಿತರು, ಬಂಧುಗಳು, ಆತ್ಮೀಯರು, ಗೊತ್ತಿರುವವರ ಮುಖೇನ ಮಾಡುತ್ತಿರುವ ವ್ಯವಹಾರಗಳಲ್ಲಿ ಯಶಸ್ಸು. ಸೂರ್ಯ ನೀಚನಾದ ಕಷ್ಟ ನಿಮಗೆ ಬಲ ಜಾಸ್ತಿ.

ಮೀನರಾಶಿ
ಸರ್ಪ್ರೈಸ್ ಗುಡ್ ನ್ಯೂಸ್ ಒಂದನ್ನು ಕೇಳುವಂತಹ ಅದ್ಭುತವಾದ ದಿನ. ಶತ್ರುಗಳ ಶತ್ರು ಮಿತ್ರ ಎಂಬ ಬದಲಾವಣೆಯನ್ನು ಕೇಳುವಂತಹ ದಿನ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular