ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜೀ (01-11-2020)

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜೀ (01-11-2020)

- Advertisement -

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಪ್ರಥಮಿ ತಿಥಿ, ಭರಣಿ ನಕ್ಷತ್ರ, ವ್ಯತಿ ಪಾತ ಯೋಗ, ಬಾಲವ ಕರಣ, ನವೆಂಬರ್ 01 , ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯಾಹ್ನ 3 ಗಂಟೆ 33 ನಿಮಿಷದಿಂದ ಸಂಜೆ 5 ಗಂಟೆ 21 ನಿಮಿಷದವರೆಗೂ ಇದೆ.

ಇಂದು ಕನ್ನಡ ರಾಜ್ಯೋತ್ಸವ. ನಮ್ಮ ಕನ್ನಡ ಭಾಷೆ ತುಂಬ ಪುರಾತನವಾದದ್ದು. ಕನ್ನಡ ಭಾಷೆ ತುಂಬಾ ಸುಲಲಿತ, ಮಾಧುರ್ಯ, ಮಧುರ, ಮಾಧುರ್ಯದಿಂದ ಕೂಡಿದೆ. ಕನ್ನಡವೆಂಬುದು ಕೇವಲ ಬೋರ್ಡಿನಲ್ಲಿ ಮಾತ್ರ ಇರಬಾರದು. ಕನ್ನಡದವರಿಗೆ ತಾಕತ್ತು ಕೆಚ್ಚು ಎಲ್ಲ ಇದ್ದರೂ ಕೂಡ ಎಲ್ಲರನ್ನೂ ಪ್ರೀತಿಸುತ್ತಾ ಸಮಾಧಾನವಾಗಿಯೇ ರುತ್ತಾರೆ. ಇದನ್ನು ದುರುಪಯೋಗ ಪಡಿಸಿಕೊಂಡ ಅನ್ಯಭಾಷೀಯರು ಕನ್ನಡದವರನ್ನೇ ತುಳಿಯುತ್ತಿದ್ದಾರೆ.

ಆದರೆ ನಾವು ಕನ್ನಡಿಗರು ಬೆಳೆದ ನಮ್ಮ ಕನ್ನಡಿಗನನ್ನೇ ತುಳಿಯಲು ಯತ್ನಿಸುತ್ತೇವೆ ಮೊದಲು ನಮ್ಮನ್ನು ನಾವು ತುಳಿಯುವುದನ್ನ ನಿಲ್ಲಿಸಬೇಕು. ಆಗ ಮಾತ್ರ ಅನ್ಯಭಾಷೀಯರ ದಬ್ಬಾಳಿಕೆಯನ್ನು ನಿಲ್ಲಿಸಿ ನಮ್ಮ ಭಾಷೆಯನ್ನು ನಾವು ರಕ್ಷಿಸಿಕೊಳ್ಳಬಹುದು. ಮೊದಲು ಕನ್ನಡಕ್ಕೆ ಕನ್ನಡದವರಿಗೆ ಆದ್ಯತೆ ಕೊಡಿ ಆ ನಂತರ ಉಳಿದವರಿಗೆ. ಕರ್ನಾಟಕದಲ್ಲಿರುವ ಅನ್ಯ ಭಾಷಿಕರಿಗೂ ಕನ್ನಡ ಕಲಿಸಿ, ಕಲಿಯಲು ಹೇಳಿ, ನಾವು ಮೊದಲು ಅವರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು ಆಗ ಮಾತ್ರ ಅವರು ಕನ್ನಡವನ್ನು ಕಲಿಯುತ್ತಾರೆ. ನಾವು ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳಸೋಣ ಜೈ ಕನ್ನಡಾಂಬೆ, ಜೈ ಭುವನೇಶ್ವರಿ.

ಮೇಷ ರಾಶಿ
ಚೆನ್ನಾಗಿದೆ ಅದ್ಭುತವಾದ ದಿನ ಸಂಗಾತಿಯೊಂದಿಗೆ ಸೋದರಿಯೊಂದಿಗೆ ಸಣ್ಣ ತೊಳಲಾಟವಿದೆ ಶುಕ್ರ ನೀಚನಾಗಿರುವುದರಿಂದ ಜಾಗ್ರತೆ. ಅದರಲ್ಲೂ ಸ್ತ್ರೀಯರು ಪಿಸಿಓಡಿ ಪಿಸಿಒಎಸ್ ನಿಂದ ಬಳಲುತ್ತಿರುವವರು ಶುದ್ಧ ತೆಂಗಿನ ಎಣ್ಣೆ 1ಚಮಚ ಬೆಳಿಗ್ಗೆ ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಇದು ನಿಮ್ಮ ಸಮಸ್ಯೆಗೆ ಅತ್ಯುತ್ತಮವಾದ ರಾಮಬಾಣ. ಕೊಬ್ಬರಿ ಎಣ್ಣೆಯನ್ನು ಬೆಂಕಿಯಲ್ಲಿ ಕಾಯಿಸಬಾರದು, ಬಿಸಿ ನೀರಿನ ಮೇಲೆ ಇಟ್ಟು ಬೆಚ್ಚಗೆ ಮಾಡಿ ತೆಗೆದುಕೊಳ್ಳಿ.

ವೃಷಭ ರಾಶಿ
ಚೆನ್ನಾಗಿದೆ ಆದರೆ ಸ್ವಲ್ಪ ಬ್ಯಾಕ್ ಪೇನ್ ನಿಂದ ಬಳಲುತ್ತಿದ್ದ ಹಿಂದೆ ತೋರಿಸಿಕೊಟ್ಟಂತಹ ಶಂಖ ಮುದ್ರೆ ಮಾಡಿ. ಈ ಮುದ್ರೆ ಸೊಂಟನೋವು ಬೆನ್ನುನೋವು ಗಳಿಗೆ ರಾಮಬಾಣವಿದ್ದಂತೆ. ನೂರಿಪ್ಪತ್ತರಿಂದ ನೂರ ನಲವತ್ತು ದಿನಗಳ ಕಾಲ ಈ ಮುದ್ರೆಯನ್ನು ಅಭ್ಯಾಸ ಮಾಡಿ ನಂತರ ಅದರ ಪರಿಣಾಮ ನಿಮಗೆ ತಿಳಿಯುತ್ತದೆ.

ಮಿಥುನ ರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಸ್ವಲ್ಪ ಗೊಂದಲ. ಗೊಂದಲ ಮಾಡಿಕೊಳ್ಳುವುದನ್ನು ಬಿಡಿ ಇಂದು ಖರ್ಚಿನ ದಿನ ಅದು ಖುಷಿಗೋಸ್ಕರ.

ಕರ್ಕಾಟಕ ರಾಶಿ
ಸೋದರಿ ವರ್ಗದ ವಿಚಾರದಲ್ಲೊಂದು ಸಣ್ಣ ತೊಳಲಾಟ ಉಂಟು ಮಿಕ್ಕಂತೆ ತೊಂದರೆಯನು ಇಲ್ಲ.

ಸಿಂಹ ರಾಶಿ
ತುಂಬಾ ತುಂಟತನ ಮೋಜು ಮಸ್ತಿ ಮಾಡುವ ಇಂತಹ ದಿನ ಅಂದರೆ ತುಂಬ ಜನಜಂಗುಳಿ ಇರುವ ಪ್ರದೇಶಕ್ಕೆ ಹೋಗದಂತೆ ಎಚ್ಚರಿಕೆಯಿಂದ ಇರಿ

ಕನ್ಯಾ ರಾಶಿ
ಪ್ರಯಾಣದ ವಿಚಾರದಲ್ಲಿ ಬಳಲಿಕೆಯ ದಿನ. ಸ್ವಲ್ಪ ಖರ್ಚು ವೆಚ್ಚದ ದಿನ ಮೇಕಪ್, ಬ್ಯೂಟಿ , ಅಲಂಕಾರಗಳಿಗಾಗಿ ಖರ್ಚಾಗುತ್ತದೆ.

ತುಲಾ ರಾಶಿ
ಉದ್ಯೋಗದ ವಿಚಾರದಲ್ಲಿ ನಾಳೆಯ ಟೆನ್ಷನ್ನನ್ನು ಇಂದೆ ತಂದಿಟ್ಟುಕೊಳ್ಳುತ್ತೀರಿ. ಇಂದು ಬಾಲಾಜಿ ದೇವಸ್ಥಾನಕ್ಕೆ ಹೋಗಿ ಪೂಜೆ ಅರ್ಚನೆ ಸಂಕಲ್ಪ ಮಾಡಿಸಿ ಬನ್ನಿ.

ವೃಶ್ಚಿಕ ರಾಶಿ
ಸಪ್ತಮಾಧಿಪತಿ ನೀಚ ನಾಗಿದ್ದು ಭಾಗ್ಯಾಧಿಪತಿ ಸಪ್ತಮಾಧಿಪತಿಯ ಪ್ರಭಾವ ದಲ್ಲಿ ಇರುವುದರಿಂದ ಮ ಓಡಾಟ, ಸುತ್ತಾಟ, ಇರುತ್ತದೆ. ವೃಶ್ಚಿಕ ರಾಶಿಯವರಿಗೆ ತುಂಬಾ ಹೀಟ್. ಈ ರಾಶಿಯವರನ್ನು ಜನನಾಂಗ ಜನನಾಂಗ ಎಂದು ಕರೆಯಲಾಗುತ್ತದೆ. ಈ ರಾಶಿಯವರಿಗೆ ಪಿಸಿಓಡಿ ಪಿಸಿಒಎಸ್ ಸಮಸ್ಯೆ ಕಟ್ಟಿಟ್ಟ ಬುತ್ತಿ ಆದ್ದರಿಂದ ನೀವು ಶುದ್ಧ ಕೊಬ್ಬರಿ ಎಣ್ಣೆಯ ಸೇವಿಸಿ.

ಧನಸ್ಸು ರಾಶಿ
ಚೆನ್ನಾಗಿದೆ ತುಂಬಾ ಸ್ವೀಟ್ ತಿಂದರೆ ಅದು ಕೂಡ ಕಹಿಯಾಗುತ್ತದೆ ಆಗೆ ನಿಮ್ಮ ಖುಷಿ ಸಂಭ್ರಮ ಆಚರಣೆ ಹಿತಮಿತವಾಗಿರಲಿ.

ಮಕರ ರಾಶಿ
ಚೆನ್ನಾಗಿದೆ ಎಂದ ಕೊಡುವ ಕೆಲಸ ಕಾರ್ಯಗಳಲ್ಲಿ ಶುಭ ಸುದ್ದಿಯೊಂದನ್ನು ಪಡೆಯುತ್ತೀರಿ ಅದರಲ್ಲೂ ಕಲಾ ಮಾಧ್ಯಮದಲ್ಲಿ ಇರುವವರಿಗೆ ಪರಿಶ್ರಮದಿಂದ ಅನುಕೂಲವಾಗುವಂತಹ ದಿನ.

ಕುಂಭ ರಾಶಿ
ದಿಢೀರ್ ಶುಭ ಸುದ್ದಿಯೊಂದನ್ನು ಪಡೆಯುತ್ತೀರಿ ಸಂಗಾತಿಯ ವಿಚಾರದಲ್ಲಿ ಸ್ವಲ್ಪ ಗಲಿಬಿಲಿ ಇರುತ್ತದೆ. ಅಮ್ಮನ ಆರೋಗ್ಯದ ಕಡೆ ಗಮನ ಕೊಡಿ. ಮಿಕ್ಕಂತೆ ಆದ ರೀತಿಯ ತೊಂದರೆಯಿಲ್ಲ.

ಮೀನ ರಾಶಿ
ಅಕ್ಕಿ ಮೇಲೂ ಆಸೆ ನೆಂಟರ ಮೇಲೂ ಅಸೆ. ತಿನ್ನಲು ಆಸೆ ಆದರೆ ಖರ್ಚು ಮಾಡಲು ಹಿಂಜರಿಕೆ. ದೈವ ಕೊಟ್ಟಿರುವುದನ್ನು ಖರ್ಚು ಮಾಡಿ ಖುಷಿಯಾಗಿರಿ ಬಚ್ಚಿಡಲು ಹೋಗಬೇಡಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular