ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ - ಹೊಸ ಹೂಡಿಕೆಯಿಂದ ಲಾಭ, ಆದರೂ ಆರ್ಥಿಕ ಸಮಸ್ಯೆ

Horoscope : ದಿನಭವಿಷ್ಯ – ಹೊಸ ಹೂಡಿಕೆಯಿಂದ ಲಾಭ, ಆದರೂ ಆರ್ಥಿಕ ಸಮಸ್ಯೆ

- Advertisement -

ಮೇಷರಾಶಿ
ನೀವಿಂದು ಮಾಡುವ ಕೆಲಸ ಕಾರ್ಯಗಳಲ್ಲಿ ಗೆಲವು, ಶೀಘ್ರವಾಗಿ ಹಣಗಳಿಸುವ ನಿಮ್ಮ ಚಿಂತನೆಗೆ ಫಲಸಿಗಲಿದೆ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿಯ ಸೂಚನೆ ದೊರೆಯಲಿದೆ, ಇತರರಿಗೆ ಸಹಾಯ ಮಾಡಲು ಹೋಗಿ ಸಮಸ್ಯೆಗೆ ಸಿಲುಕುವಿರಿ, ಸಂಗಾತಿಯು ನಿಮಗೆ ಬೆಂಬಲ ನೀಡುತ್ತಾರೆ.

ವೃಷಭರಾಶಿ
ರಿಯಲ್‌ ಎಸ್ಟೇಟ್‌ ಹೂಡಿಕೆಯಿಂದ ಅಧಿಕ ಲಾಭ, ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ವಿರೋಧಿಗಳಿಂದ ಟೀಕೆಗಳನ್ನು ಕೇಳುವಿರಿ, ಮೇಲಾಧಿಕಾರಿಗಳ ಕಿರಿಕಿರಿ ಕಂಡುಬರಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಮಿಥುನರಾಶಿ
ಹೊಸ ಹೂಡಿಕೆಯಿಂದ ಲಾಭ, ಆರ್ಥಿಕ ಸಮಸ್ಯೆಗಳು ಎದುರಾಗಲಿದೆ, ಸಂಗಾತಿಯ ಆರೋಗ್ಯದ ವಿಚಾರದಲ್ಲಿ ಚಿಂತೆ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಸಂಗಾತಿಯೊಂದಿಗೆ ಸಂತಸದ ಕ್ಷಣ, ಕೃಷಿಕರಿಗೆ ಹೆಚ್ಚಿನ ಲಾಭ, ಹೊಂದಾಣಿಕೆಯಿಂದ ಕಾರ್ಯಾನುಕೂಲ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಕರ್ಕಾಟಕರಾಶಿ
ಸಂತೋಷದ ದಿನ, ಹಣಕಾಸಿನ ಸಮಸ್ಯೆಗೆ ಮುಕ್ತಿ, ಹೊಸ ಸ್ನೇಹಿತರ ಸಹಕಾರ, ಕಾರ್ಯದೊತ್ತಡದಿಂದ ದೇಹಾಯಾಸ, ಆಧ್ಯಾತ್ಮದ ಕಡೆಗೆ ಒಲವು, ಅಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ, ದೂರ ಪ್ರಯಾಣದಿಂದ ಅನುಕೂಲ, ಹಳೆಯ ಸ್ನೇಹಿತರ ಭೇಟಿ, ಸಂಜೆಯ ವೇಳೆಗೆ ಶುಭ ವಾರ್ತೆ.

ಸಿಂಹರಾಶಿ
ಸಂತೋಷದಿಂದ ಕೂಡಿದ ದಿನ, ಹಣಕಾಸಿನ ಹರಿವು ನಿರಂತರವಾಗಿ ಇರಲಿದೆ, ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಆದರೆ ಸ್ನೇಹದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ, ಮಾಧ್ಯಮ ವ್ಯಕ್ತಿಗಳು, ಬರಹಗಾರರಿಗೆ ಮನ್ನಣೆ ದೊರೆಯಲಿದೆ, ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಓದುವುದರಲ್ಲಿ ಹೆಚ್ಚು ಮಗ್ನರಾಗುವಿರಿ.

ಕನ್ಯಾರಾಶಿ
ನಿಮ್ಮ ಭಾವನೆಗೆ ತಕ್ಕಂತೆ ಕೆಲಸ ಕಾರ್ಯಗಳು ನಡೆಯಲಿದೆ, ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಅಧಿಕ ಲಾಭ, ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆ, ಮನಸಿನ ಶಾಂತಿ ಹಾಳು ಮಾಡಬೇಡಿ, ಹೊಸ ಹೂಡಿಕೆಯಿಂದ ಅನುಕೂಲಕರ, ಅನಗತ್ಯವಾಗಿ ಪ್ರಯಾಣ ಕೈಗೊಳ್ಳಬೇಕಾಗಬಹುದು.

ತುಲಾರಾಶಿ
ನಿಮ್ಮ ದುಡುಕಿನ ವರ್ತನೆ ಸ್ನೇಹಿತರಿಗೆ ಕಿರಿಕಿರಿ ಉಂಟು ಮಾಡಲಿದೆ, ಪ್ರವಾಸ ಹೋಗುವ ಸಾಧ್ಯತೆಯಿದೆ, ಬೆಲೆ ಬಾಳುವ ವಸ್ತುಗಳು ಕಳವಾಗುವ ಸಾಧ್ಯತೆಯಿದೆ, ಭರವಸೆ ಇಟ್ಟ ಜನರಿಂದಲೇ ಮೋಸ ಹೋಗಬಹುದು, ಸಂಗಾತಿಯೊಂದಿಗೆ ಹೊಂದಾಣಿಕೆ, ಬಂಧುಗಳು ಮನೆಗೆ ಭೇಟಿ ನೀಡುವರು.

ವೃಶ್ಚಿಕರಾಶಿ
ಮಾನಸಿಕ ಒತ್ತಡ ಕಡಿಮೆಯಾಗಲಿದೆ, ನಿಮಗೆ ವಿಶ್ರಾಂತಿಯು ದೊರೆಯಲಿದೆ, ಕೆಲಸದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಿ, ಭಾವನೆಗಳಿಗೆ ಹೆಚ್ಚಿನ ಬೆಲೆಯನ್ನು ನೀಡಿ, ಉದ್ಯೋಗಿಗಳಿಗೆ ಭಡ್ತಿ ದೊರೆಯಲಿದೆ, ತೆರಿಗೆ ಹಾಗೂ ವಿಮಾ ವಿಷಯಗಳಿಗೆ ಹೆಚ್ಚಿನ ಒತ್ತನ್ನು ನೀಡಿ.

ಧನಸುರಾಶಿ
ವಿಶ್ವಾಸದ್ರೋಹ, ಖಿನ್ನತೆ, ನಂಬಿಕೆಯ ಕೊರತೆ ಕಂಡುಬರಲಿದೆ, ಹೊಸ ಒಪ್ಪಂದಗಳು ಲಾಭದಾಯಕವಾಗಲಿದೆ, ಆತುರದಲ್ಲಿ ಹಣ ಹೂಡಿಕೆ ಮಾಡಬೇಡಿ, ತಾಳ್ಮೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ, ಕೆಲಸ ಕಾರ್ಯಗಳಲ್ಲಿ ಲಾಭದಾಯಕವಾಗಲಿದೆ.

ಮಕರರಾಶಿ
ಸ್ನೇಹಿತರಿಂದ ನೆಮ್ಮದಿ, ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಿ, ಆಸ್ತಿ ವ್ಯವಹಾರಗಳು ಸಾಕಾರಗೊಳ್ಳಲಿದೆ, ಮನೆಯಲ್ಲಿ ಹಬ್ಬದ ವಾತಾವರಣ ಕಂಡುಬರಲಿದೆ, ಪ್ರೀತಿ ಪ್ರಣಯ ನಿಮ್ಮನ್ನು ಸಂತೋಷವಾಗಿ ಇಡುತ್ತದೆ, ಸಹಜ ರೀತಿಯಲ್ಲಿ ಕೆಲಸ ಕಾರ್ಯಗಳು ನೆರವೇರಲಿದೆ, ಸ್ನೇಹಿಯರು ನಿಮ್ಮೊಂದಿಗೆ ಹಲವು ಸಮಸ್ಯೆ ಹಂಚಿಕೊಳ್ಳಲಿದ್ದಾರೆ.

ಕುಂಭರಾಶಿ
ಧೀರ್ಘ ಕಾಲದ ಅನಾರೋಗ್ಯದ ಸಮಸ್ಯೆಯಿಂದ ಮುಕ್ತಿ, ಹಿಂದಿನ ಕಠಿಣ ಶ್ರಮವು ಇಂದು ಅಧಿಕ ಲಾಭವನ್ನು ತಂದುಕೊಡಲಿದೆ, ಸ್ನೇಹಿತರ ಜೊತೆಗೆ ಸುಂದರ ಸಂಜೆ, ಒಂಟಿಯಾಗಿ ವಿಶೇಷ ಜನರನ್ನು ಭೇಟಿ ಮಾಡುವಿರಿ, ಉತ್ತಮ ಅವಕಾಶಗಳು ಒದಗಿ ಬರಲಿದೆ, ಅನಗತ್ಯ ತೊಂದರೆಗಳಿಂದ ದೂರ ವಿರಲು ಯತ್ನಿಸಿ.

ಮೀನರಾಶಿ
ದೈಹಿಕ ಹಾಗೂ ಮಾನಸಿಕ ಸಮಸ್ಯೆಯನ್ನು ಎದುರಿಸುವಿರಿ, ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ, ಸ್ನೇಹಿತರಿಂದ ಧನ ಸಹಾಯ ದೊರೆಯಲಿದೆ, ಪ್ರಣಯ ನಿಮ್ಮ ಮನಸ್ಸನ್ನು ಅರಳಿಸುತ್ತದೆ, ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಿ, ದಿನವಿಡಿ ನಿಮಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ.

(Horoscope today astrological prediction for September 14)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular