ಭಾನುವಾರ, ಜೂನ್ 15, 2025
HomehoroscopeHoroscope : ದಿನಭವಿಷ್ಯ : ಹೊಸ ಹೂಡಿಕೆಯಿಂದ ಅಧಿಕ ಲಾಭ

Horoscope : ದಿನಭವಿಷ್ಯ : ಹೊಸ ಹೂಡಿಕೆಯಿಂದ ಅಧಿಕ ಲಾಭ

- Advertisement -

ಮೇಷರಾಶಿ
ಯಾವುದೇ ಕಾರಣಕ್ಕೂ ನಿರಾಶರಾಗಬೇಡಿ. ಆತ್ಮವಿಶ್ವಾಸ, ನಮ್ಯತೆ ಹೊಸ ಅವಕಾಶವನ್ನು ಕಲ್ಪಿಸುತ್ತದೆ. ದ್ವೇಷ, ಅಸೂಯೆಯನ್ನು ದೂರ ಮಾಡಿ. ಒಡಹುಟ್ಟಿದವರು ಸಾಲ ಪಡೆಯುವ ಸಾಧ್ಯತೆ, ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ, ಸಾಮಾಜಿಕ ಜೀವನವನ್ನು ನಿರ್ಲಕ್ಷ್ಯ ಮಾಡಬೇಡಿ, ಬಿಡುವಿಲ್ಲದ ವೇಳಾಪಟ್ಟಿಯ ನಡುವಲ್ಲೇ ವಿಶ್ರಾಂತಿಯನ್ನು ಪಡೆದುಕೊಳ್ಳಿ.

ವೃಷಭರಾಶಿ
ಹಿರಿಯರ ಆಶೀರ್ವಾದ ಪಡೆದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಅದೃಷ್ಟವು ನಿಮ್ಮನ್ನು ಹಿಂಬಾಲಿಸಲಿದೆ, ಹಲವು ದಿನಗಳ ಕಠಿಣ ಪರಿಶ್ರಮದ ಫಲಿತಾಂಶ ಇಂದು ದೊರೆಯಲಿದೆ, ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ, ಸ್ನೇಹಿತರೊಂದಿಗೆ ಯಾವುದೇ ಕಾರಣಕ್ಕೂ ಜಗಳಕ್ಕೆ ಇಳಿಯಬೇಡಿ, ಸಹೋದ್ಯೊಗಿಗಳ ಸಹಕಾರ ದೊರೆಯಲಿದೆ.

ಮಿಥುನರಾಶಿ
ಉದ್ವೇಗ, ವಾಗ್ವಾದ ಘರ್ಷಣೆಗೆ ಕಾರಣವಾಗಬಹುದು, ಸ್ನೇಹಿತರ ಸಹಾಯದಿಂದ ಹಣಕಾಸಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಮನೆಯ ವಾತಾವರದಲ್ಲಿ ಬದಲಾವಣೆ ಮಾಡಿಕೊಳ್ಳಿ, ಹೊಸ ಪ್ರಣಯದಿಂದ ಸಂತಸ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಳೆಯ ಸುಂದರ ಪ್ರಣಯದ ನೆನಪು ಕಾಡಲಿದೆ, ದೂರ ಪ್ರಯಾಣದಿಂದ ಹೊಸ ಅವಕಾಶ ದೊರೆಯಲಿದೆ.

ಕರ್ಕಾಟಕರಾಶಿ
ಕೆಟ್ಟ ಯೋಚನೆಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ, ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನಕ್ಕೆ ಅವಕಾಶ ದೊರೆಯಲಿದೆ, ಕುಟುಂಬದವರ ಜೊತೆಗೆ ಕಟುವಾಗಿ ವರ್ತಿಸಬೇಡಿ, ಪಾಲುದಾರರು ಹೊಸ ಯೋಜನೆ, ಆಲೋಚನೆಗೆ ಬೆಂಬಲ ನೀಡುತ್ತಾರೆ. ಜೀವನ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರಿಂದ ಅನುಕೂಲ. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ನಡೆಸುವಿರಿ.

ಸಿಂಹರಾಶಿ
ಸಕಾರಾತ್ಮಕ ದೃಷ್ಟಿಕೋನ ಸುತ್ತಮುತ್ತಲಿನ ಜನರ ಮೆಚ್ಚುಗೆಗೆ ಕಾರಣವಾಗಲಿದೆ, ಹೊಸ ಹೂಡಿಕೆಗೆ ಅವಕಾಶಗಳು ದೊರೆಯಲಿದೆ, ಸಂಬಂಧಿಕರನ್ನು ಭೇಟಿ ಮಾಡುವ ಸಾಧ್ಯತೆ, ವ್ಯಾಪಾರದಲ್ಲಿ ಅನುಕೂಲ, ಪಾಲುದಾರರ ನಡುವೆ ಹೊಂದಾಣಿಕೆ, ಬಾಕಿ ಇರುವ ಉದ್ಯೋಗವನ್ನು ಪೂರ್ಣಗೊಳಿಸಲು ಒಟ್ಟಾಗಿ ಕೆಲಸ ಮಾಡಿ, ಶುಭ ಸಮಾರಂಭಗಳಲ್ಲಿ ಭಾಗಿ ಸಾಧ್ಯತೆ.

ಕನ್ಯಾರಾಶಿ
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮದ ಕಡೆಗೆ ಆಸಕ್ತಿ ರೂಢಿಸಿಕೊಳ್ಳಿ, ಧ್ಯಾನ ಮತ್ತು ಯೋಗ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ, ಸ್ನೇಹಿತರ ಜೊತೆಗಿನ ಸಂಜೆ ಸಂತಸವನ್ನು ತರಲಿದೆ, ಕುಟುಂಬ ಸದಸ್ಯರೊಂದಿಗೆ ಪಾರ್ಕ್‌, ಮಾಲ್‌ಗೆ ತೆರಳುವ ಸಾಧ್ಯತೆ, ಜೀವನ ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ರೂಢಿಸಿಕೊಳ್ಳಿ, ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ.

ತುಲಾರಾಶಿ
ಉತ್ತಮ ಆರೋಗ್ಯಕ್ಕಾಗಿ ದೀರ್ಘ ನಡಿಗೆ ಉತ್ತಮ, ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನೆರವೇರಲಿದೆ, ಅತಿಯಾದ ಕೆಲಸ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅಗತ್ಯ, ಧಾರ್ಮಿಕ ಕ್ಷೇತ್ರಗಳ ಭೇಟಿ, ಆಸ್ತಿ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ, ದೂರದ ಬಂಧುಗಳ ಭೇಟಿಯಿಂದ ಸಂತಸ ದೊರೆಯಲಿದೆ.

ವೃಶ್ಚಿಕರಾಶಿ
ಪಾಲುದಾರರು ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ, ಯಶಸ್ಸಿನ ಹಾದಿಗೆ ಕೆಲವರು ಹಾನಿಯನ್ನಂಟು ಮಾಡುವರು, ಜನರಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುವ ಸಾಧ್ಯತೆ, ಸಂಕಷ್ಟದಿಂದ ಪಾರಾಗಲು ಹಲವು ದಾರಿಗಳು ಗೋಚರವಾಗಲಿದೆ, ಮನೆಯಲ್ಲಿ ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ, ಹಳೆಯ ಸ್ನೇಹಿತರ ಸಹಕಾರದಿಂದ ಹಣಕಾಸಿನ ಸಂಕಷ್ಟ ಪರಿಹಾರ.

ಧನಸುರಾಶಿ
ದೂರ ಪ್ರಯಾಣ ಒತ್ತಡದ ಜೊತೆ ಆರ್ಥಿಕ ಲಾಭವನ್ನು ತಂದುಕೊಡಲಿದೆ, ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ, ವೃತ್ತಿ ಜೀವನ ಉತ್ತುಂಗಕ್ಕೇರಲಿದೆ, ಅಧ್ಯಯನದಿಂದ ಹೊಸ ಅವಕಾಶ, ಸಂಗಾತಿಯೊಂದಿಗಿನ ಕಿರಿಕಿರಿಯನ್ನು ತಪ್ಪಿಸಿಕೊಳ್ಳಿ, ತಪ್ಪು ಅಭಿಪ್ರಾಯ ಬರದಂತೆ ಮುನ್ನೆಚ್ಚರಿಕೆ ವಹಿಸಿ.

ಇದನ್ನೂ ಓದಿ : ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ರೆ ಚರ್ಮ ರೋಗಕ್ಕೆ ಮುಕ್ತಿ !

ಮಕರರಾಶಿ
ಇಂದು ಸಾಕಷ್ಟು ಚುರುಕಾಗಿರುತ್ತೀರಿ, ಆರೋಗ್ಯ ನಿಮಗೆ ಸಹಕಾರವನ್ನು ನೀಡಲಿ, ಬೆಟ್ಟಿಂಗ್‌ ಅಥವಾ ಜೂಜಾಟದಿಂದ ಹಣ ವ್ಯಯಿಸಿ ನಷ್ಟ ಅನುಭವಿಸುವ ಸಾಧ್ಯತೆ, ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡಲಿದ್ದಾರೆ. ಭವಿಷ್ಯದ ಯೋಜನೆಗಳಿಗೆ ಚಿಂತನೆ ನಡೆಸಲು ಸಕಾಲ, ಸಂಜೆಯ ವೇಳೆಯಲ್ಲಿ ಅತಿಥಿಗಳು ಮನೆಗೆ ಭೇಟಿ ಕೊಡುವ ಸಾಧ್ಯತೆ, ಕಲಾವಿದರಿಗೆ ಹೆಚ್ಚು ಅನುಕೂಲಕರ.

ಕುಂಭರಾಶಿ
ಆರ್ಥಿಕ ಸಂಕಷ್ಟಗಳು ಪರಿಹಾರವನ್ನು ಕಾಣಲಿದೆ, ಹಾಸ್ಯ ಸ್ವಭಾವ ಸಾಮಾಜಿಕವಾಗಿ ಮನ್ನಣೆಯನ್ನು ತರಲಿದೆ, ಬಿಡುವಿನ ವೇಳೆಯಲ್ಲಿ ಅಧ್ಯಯನದಲ್ಲಿ ತೊಡಗಿಕೊಳ್ಳಿ, ಸಾಧ್ಯವಾಗದ ಕಾರ್ಯಗಳನ್ನು ನೀವು ಅತ್ಯಂತ ಯಶಸ್ವಿಯಾಗಿ ನಿರ್ವಹಣೆಯನ್ನು ಮಾಡಲಿದ್ದೀರಿ, ಅಕಾಲ ಭೋಜನವನ್ನು ತಪ್ಪಿಸಲು ಯತ್ನಿಸಿ, ಹಿರಿಯರ ಸಲಹೆ ಆಲಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ.

ಮೀನರಾಶಿ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ, ಹಲವು ಮೂಲಗಳಿಂದ ಹಣದ ಹರಿವು ದೊರೆಯಲಿದೆ, ಇತರರನ್ನು ಮೆಚ್ಚಿಸುವ ಕಾಯವನ್ನು ಮಾಡಲಿದ್ದೀರಿ, ಹಣಕಾಸಿನ ವಿಚಾರದಲ್ಲಿ ನೀವಿಂದು ಅದೃಷ್ಟಶಾಲಿಗಳು, ಕುಟಂಬ ಸದಸ್ಯರ ಜೊತೆಗೆ ಹಲವು ಸಮಸ್ಯೆಗಳನ್ನು ಹಂಚಿಕೊಳ್ಳುವಿರಿ, ಬಿಡುವಿನ ವೇಳೆಯಲ್ಲಿ ಇಷ್ಟ ಮಿತ್ರರ ಭೇಟಿಯಿಂದ ಸಂತಸ ದೊರೆಯಲಿದೆ.

ಇದನ್ನೂ ಓದಿ : ದೇವರನ್ನು ಕಾಯುತ್ತೆ ಮೊಸಳೆ : ಇದು ತಿರುವನಂತರಪುರದ ಅನಂತ ಪದ್ಮನಾಭ ಸ್ವಾಮಿಯ ಮೂಲಸ್ಥಾನ

ಇದನ್ನೂ ಓದಿ : ಚೀನಾವನ್ನು ಕಾಡುತ್ತಿದೆ ಮರೆವಿನ ಕಾಯಿಲೆ : 5 ವರ್ಷದಲ್ಲಿ ನಾಪತ್ತೆಯಾಗಿದ್ದಾರೆ 500 ಮಂದಿ !

( Horoscope today astrological prediction for September 22)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular