ಮೇಷರಾಶಿ
ನಿಮ್ಮ ಆಕರ್ಷಕ ನಡವಳಿಕೆ ಎಲ್ಲರ ಗಮನ ಸೆಳೆಯುತ್ತದೆ. ದೀರ್ಘಾವದಿಯ ದೃಷ್ಟಿಕೋನದಿಂದ ಹೂಡಿಕೆಯನ್ನು ಮಾಡಿ. ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಬಾಗಿಯಾಗುವಿರಿ. ಕೋಪವನ್ನು ಮರೆತು ಸ್ನೇಹದಿಂದ ವರ್ತಿಸುವುದರಿಂದ ಲಾಭ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಸಾಧ್ಯತೆ.
ವೃಷಭರಾಶಿ
ಮಕ್ಕಳು ನಿಮ್ಮ ಇಚ್ಚೆಗೆ ವಿರುದ್ದವಾಗಿ ವರ್ತಿಸಲಿದ್ದಾರೆ. ಕೋಪವನ್ನು ನಿಯಂತ್ರಿಸಿಕೊಂಡ್ರೆ ಹಲವು ರೀತಿಯಲ್ಲಿ ಲಾಭ. ಕೆಲಸ ಮಾಡುವ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿದೆ. ಹಿರಿಯರ ಸಲಹೆಯನ್ನು ಆಲಿಸಿ. ವ್ಯಾಪಾರಿಗಳ ಪಾಲಿಗೆ ಸಾಮಾನ್ಯವಾದ ದಿನ, ಪುಸ್ತಕ ಓದುವುದರಿಂದಾ ಮಾನಸಿಕ ನೆಮ್ಮದಿ.
ಮಿಥುನರಾಶಿ
ನಿಮಗೆ ಹಣದ ಮಹತ್ವ ತಿಳಿಯಲಿದೆ. ಕಚೇರಿಯಲ್ಲಿ ಆನಂದದ ಕ್ಷಣವನ್ನು ಅನುಭವಿಸುವಿರಿ. ಕೌಟುಂಬಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳಿ. ಅನಿರೀಕ್ಷಿತವಾಗಿ ಹಣಕಾಸಿನ ನೆರವು ದೊರೆಯಲಿದೆ. ಸಹೋದ್ಯೋಗಿಗಳ ಸಹಕಾರ. ಹೊಂದಾಣಿಕೆಯಿಂದ ಅನುಕೂಲ. ಸ್ನೇಹಿತರಿಂದ ಸಹಕಾರ ದೊರೆಯಲಿದೆ.
ಕರ್ಕಾಟಕರಾಶಿ
ನಿಮ್ಮ ಆಕರ್ಷಕ ನಡವಳಿಕೆಗೆ ಸಾಮಾಜಿಕವಾಗಿ ಮನ್ನಣೆ, ಪರಿಸ್ಥಿತಿಯನ್ನು ಅನುಗುಣವಾಗಿ ನಿಯಂತ್ರಿಸಿ, ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಿ, ಅಧ್ಯಯನದಲ್ಲಿ ತೊಡಗಿಕೊಳ್ಳುವಿರಿ, ಪ್ರೇಮ ವಿಚಾರದಲ್ಲಿ ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ. ಒಳ್ಳೆಯ ಆಲೋಚನೆಗಳು ಹೆಚ್ಚು ಲಾಭವನ್ನು ತರಲಿದೆ.
ಸಿಂಹರಾಶಿ
ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗಲಿದೆ, ಸಂಬಂಧಿಗಳು ಮನೆಗೆ ಭೇಟಿ ನೀಡುವರು, ಪ್ರಯಾಣಕ್ಕೆ ಉತ್ತಮ ದಿನವಲ್ಲ. ಕೆಲಸದ ಒತ್ತಡವನ್ನಕಡಿಮೆ ಮಾಡಿಕೊಳ್ಳಲು ಯತ್ನಿಸಿ. ಚಾಣಾಕ್ಷತೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರಿ. ಪುಣ್ಯಕ್ಷೇತ್ರಗಳ ಭೇಟಿಯಿಂದ ಮಾನಸಿಕ ನೆಮ್ಮದಿ ದೊರೆಯಲಿದೆ.
ಇದನ್ನೂ ಓದಿ : ಕದ್ರಿಯಲ್ಲಿ ಹರಿಯುತ್ತಿದೆ ಕಾಶಿ ಭಾಗೀರಥಿ ನದಿ ನೀರು : ಇಲ್ಲಿದೆ ಮಂಜುನಾಥನ ಬಗ್ಗೆ ನಿಮಗೆ ತಿಳಿದಿರದ ಸಂಗತಿ
ಕನ್ಯಾರಾಶಿ
ಸಣ್ಣ ಮಟ್ಟದ ವ್ಯವಹಾರ ನಡೆಸುವವರು ಅಧಿಕ ಲಾಭವನ್ನು ಪಡೆಯಲಿದ್ದಾರೆ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ. ಟಿವಿ, ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥವಾಗಲಿದೆ. ಆರ್ಥಿಕವಾಗಿ ಹಲವು ಪ್ರಯೋಜನ ದೊರೆಯಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ನ್ಯಾಯಾಲಯದ ವ್ಯಾಜ್ಯಗಳು ಪರಿಹಾರ ಕಾಣಲಿದೆ.
ತುಲಾರಾಶಿ
ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಸಾಮಾಜಿಕವಾಗಿ ನಿಮಗೆ ಮನ್ನಣೆ ದೊರೆಯಲಿದೆ, ನಿಮ್ಮ ವ್ಯಕ್ತಿತ್ವವನ್ನು ಮೌಲ್ಯ ಮಾಪನ ಮಾಡಿ. ಇಂದಿನ ದಿನ ಹೆಚ್ಚು ರೋಮ್ಯಾಂಟಿಕ್ ಆಗಿರಲಿದೆ. ದೂರ ಪ್ರಯಾಣ ಹೆಚ್ಚು ಲಾಭವನ್ನು ತರಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ.
ವೃಶ್ಚಿಕರಾಶಿ
ಮನೆಯಲ್ಲಿ ಕಿರಿಕಿರಿ ಹೆಚ್ಚಲಿದೆ, ಹಣದ ಹೂಡಿಕೆಯ ಜೊತೆಗೆ ಉಳಿತಾಯದ ಕಡೆಗೆ ಗಮನ ಹರಿಸಿ, ಯಾವುದೇ ಕಾರಣಕ್ಕೂ ವೈಯಕ್ತಿಕ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳಬೇಡಿ. ಪ್ರಿಯತಮೆ ಇಂದು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಸಂಗಾತಿಯೊಂದಿಗೆ ಸುಂದರ ಸಂಜೆಯನ್ನು ಕಳೆಯಲಿದ್ದೀರಿ. ದಿನಾಂತ್ಯಕ್ಕೆ ಶುಭವಾರ್ತೆಯೊಂದನ್ನು ಕೇಳುವಿರಿ.
ಇದನ್ನೂ ಓದಿ : ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ
ಧನಸ್ಸುರಾಶಿ
ಯೋಗ ಮತ್ತು ಧ್ಯಾನ ನಿಮಗೆ ದೈಹಿಕ ಪ್ರಯೋಜನಗಳನ್ನು ನೀಡಲಿದೆ. ಸಂಬಂಧಿಕರು ಹಣ ಉಳಿಸುವ ಪ್ಲ್ಯಾನ್ ಹೇಳಿಕೊಡಲಿದ್ದಾರೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವಿರಿ. ಮುಕ್ತವಾಗಿ ಅಭಿಪ್ರಾಯವನ್ನು ಹಂಚಿಕೊಳ್ಳಿ. ಕೆಲಸ ಕಾರ್ಯಗಳಲ್ಲಿ ಹೆಚ್ಚು ಸಕ್ರೀಯವಾಗಿ ತೊಡಗಿಕೊಳ್ಳುವಿರಿ.
ಮಕರರಾಶಿ
ಬ್ಯಾಂಕ್ ವ್ಯವಹಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಉದ್ಯಮಿಗಳ ಪಾಲಿಗೆ ಇಂದು ಉತ್ತಮವಾದ ದಿನ. ವ್ಯಾಪಾರ ಉದ್ದೇಶಕ್ಕಾಗಿ ಕೈಗೊಂಡ ಪ್ರವಾಸ ಹಠಾತ್ ರದ್ದಾಗುವ ಸಾಧ್ಯತೆ. ಪ್ರಯಾಣಕ್ಕೆ ಉತ್ತಮವಾದ ದಿನವಲ್ಲ. ಮಾಡದ ತಪ್ಪಿಗೆ ಪ್ರಶ್ಚಾತಾಪ ಪಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರಾದ ದಿನ.
ಕುಂಭರಾಶಿ
ವ್ಯವಹಾರದಲ್ಲಿ ಆತ್ಮವಿಶ್ವಾಸವನ್ನು ನೀಡಲಿದೆ. ಉದ್ಯೋಗದಲ್ಲಿ ಭಡ್ತಿ. ವಿಶೇಷ ವ್ಯಕ್ತಿಗಳ ಜೊತೆಗಿನ ಸಂವಹನ ಸಂತೋಷವನ್ನು ನೀಡಲಿದೆ. ರಾಜಕಾರಣಿಗಳಿಗೆ ಹೊಸ ಅವಕಾಶವೊಂದು ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆಯಿಂದ ಇರುವುದು ಉತ್ತಮ.
ಮೀನರಾಶಿ
ಆರೋಗ್ಯದ ವಿಚಾರದಲ್ಲಿ ನೆಮ್ಮದಿ. ಉದ್ಯಮಿಗಳು ಹಾಗೂ ವ್ಯಾಪಾರಿಗಳು ನಷ್ಟವನ್ನು ಅನುಭವಿಸುವರು. ವ್ಯಾಪಾರದ ವೃದ್ದಿಗಾಗಿ ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಂಘರ್ಷದ ನಡುವಲ್ಲೇ ಪ್ರೀತಿಯನ್ನು ಗೆಲ್ಲುವಿರಿ. ಆಪ್ತ ಸ್ನೇಹಿತ ನೀಡಿದ ತಪ್ಪು ಸಲಹೆ ನಿಮ್ಮನ್ನು ಸಂಕಷ್ಟಕ್ಕೆ ತಳ್ಳುವ ಸಾಧ್ಯತೆಯಿದೆ. ಬಿಡುವಿನ ವೇಳೆಯಲ್ಲಿ ಏಕಾಂತದಲ್ಲಿರುವಿರಿ.
ಇದನ್ನೂ ಓದಿ : ಈ ರಕ್ತದ ಗುಂಪಿನವೇ ಹೆಚ್ಚು ಹೃದಯಾಘಾತಕ್ಕೆ ತುತ್ತಾಗುತ್ತಾರಂತೆ !
ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸವಿದ್ಯಾ ? ಹಾಗಾದ್ರೆ ಹುಷಾರಾಗಿರಿ !
( Horoscope today astrological prediction for September 23)