Horoscope : ದಿನಭವಿಷ್ಯ – ಈ ರಾಶಿಯವರಿಗೆ ಸಂತಸ, ಆನಂದ ದೊರೆಯಲಿದೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ

ಮೇಷರಾಶಿ
ಹೂಡಿಕೆಗಳು ದೀರ್ಘಾವಧಿಯ ಲಾಭವನ್ನು ತಂದುಕೊಡಲಿದೆ, ಕುಟುಂಬ ಸದಸ್ಯರ ಜೊತೆಗೆ ಸಂತಸದ ಕ್ಷಣ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ, ಯಾರೊಂದಿಗೂ ಜಗಳಕ್ಕೆ ಇಳಿಯ ಬೇಡಿ, ವ್ಯವಹಾರದಲ್ಲಿ ಪ್ರಗತಿ, ಮೇಲಾಧಿಕಾರಿಗಳಿಂದ ಸಂತಸ, ಭವಿಷ್ಯದ ಯೋಜನೆಗಳ ಬಗ್ಗೆ ಮೌಲ್ಯಮಾಪನ ಮಾಡಿ, ಸಂವಹನದಿಂದಾದ ತಪ್ಪನ್ನು ಕುಳಿತು ಮಾತನಾಡಿ ಸರಿಪಡಿಸಿಕೊಳ್ಳಿ.

ವೃಷಭರಾಶಿ
ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಮಕ್ಕಳಿಂದ ಆರ್ಥಿಕ ಲಾಭ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಪ್ರೀತಿ ಪಾತ್ರರ ಜೊತೆಗೆ ಸಮಯವನ್ನು ಕಳೆಯುವಿರಿ, ಬಿಡುವಿನ ವೇಳೆಯಲ್ಲಿ ಸೃಜನಾತ್ಕಕ ಚಿಂತನೆಯನ್ನು ಮಾಡುವಿರಿ, ಸ್ತ್ರೀಯರಿಂದ ಅನುಕೂಲ.

ಮಿಥುನರಾಶಿ
ಇಂದು ನಿಮ್ಮ ಪಾಲಿಗೆ ಸಂತಸ, ಆನಂದ ದೊರೆಯಲಿದೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಕೊಟ್ಟ ಸಾಲದ ಹಣ ಮರಳಿ ಬರಲಿದೆ, ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವಿರಿ, ಸಂಗಾತಿಯೊಂದಿಗೆ ಸಮಯ ಕಳೆಯಿರಿ, ಸಣ್ಣ ಪುಟ್ಟ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅಗತ್ಯ, ಅತಿಥಿಗಳ ಆಗಮನದಿಂದ ಸಂಭ್ರಮ.

ಕರ್ಕಾಟಕರಾಶಿ
ಕ್ರೀಡಾಪಟುಗಳಿಗೆ ಶುಭದಿನ, ಹೊಸ ಹೂಡಿಕೆ ನಷ್ಟವನ್ನು ಉಂಟು ಮಾಡಲಿದೆ, ಸ್ನೇಹಿತರ ಜೊತೆಗೆ ಸಂಭ್ರಮದಿಂದ ಸಮಯ ಕಳೆಯುವಿರಿ, ಕುಟುಂಬ ಸದಸ್ಯರ ಆಗಮನ ಖಷಿಯನ್ನು ನೀಡಲಿದೆ, ವೃತ್ತಿರಂಗದಲ್ಲಿ ಶುಭಫಲ ಗೋಚರಕ್ಕೆ ಬರಲಿದೆ, ದಿನದ ಆರಂಭದಲ್ಲಿ ದಣಿವು ಭಾಸವಾಗಲಿದೆ, ಶ್ರಮದ ದುಡಿಮೆಯಿಂದ ಅಧಿಕ ಲಾಭ, ಸಂಗಾತಿಯ ಜೊತೆಗೆ ಸುಂದರ ಕ್ಷಣ.

ಸಿಂಹರಾಶಿ
ಅತ್ಯಂತ ಚುರುಕಿನಿಂದ ವೃತ್ತಿರಂಗದಲ್ಲಿ ತೊಡಗಿಕೊಳ್ಳುವಿರಿ, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಕೋಪವನ್ನು ಕಡಿಮೆ ಮಾಡಿಕೊಂಡರೆ ಅಧಿಕ ಲಾಭ, ಸಕಾಲದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ, ಮದುವೆಯ ಬಗ್ಗೆ ಸಂಗಾತಿ ಚರ್ಚಿಸುವ ಸಾಧ್ಯತೆ, ವಿದೇಶೀ ವ್ಯವಹಾರ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ಕೆಲಸದ ಸ್ಥಳದಲ್ಲಿ ನೆಮ್ಮದಿ ದೊರೆಯಲಿದೆ.

ಕನ್ಯಾರಾಶಿ
ಸದಾ ಚಚುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಅನಿರೀಕ್ಷಿತವಾಗಿ ಕೊಟ್ಟ ಸಾಲದ ಹಣ ಮರಳಿ ಬರಲಿದೆ, ಮಕ್ಕಳಿಂದ ನೆಮ್ಮದಿ ದೊರೆಯಲಿದೆ, ಸ್ನೇಹಿತರು ಸಹಕಾರ ಮಾಡಲಿದ್ದಾರೆ, ಸಮಯವನ್ನು ವ್ಯರ್ಥ ಮಾಡುವುದು ಒಳ್ಳೆಯದಲ್ಲ, ಜೀವನ ಸಂಗಾತಿ ವಿಶೇಷವಾದ ಸಮಯವನ್ನು ನೀಡಲಿದ್ದಾರೆ. ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ನಡೆಯಲಿದೆ.

ತುಲಾರಾಶಿ
ಸ್ನೇಹಿತರಿಂದ ವಿಶೇಷ ಸಂತಸ ದೊರೆಯಲಿದೆ, ಅನಾರೋಗ್ಯ ಸಮಸ್ಯೆ ಚಿಂತೆಗೆ ದೂಡಲಿದೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೌಟುಂಬಿಕವಾಗಿ ನೆಮ್ಮದಿ, ಆಸ್ತಿ ವಿವಾದವೊಂದು ಬಗೆ ಹರಿಯಲಿದೆ, ಸಂಗಾತಿಯಿಂದ ನೆಮ್ಮದಿ, ಕೃಷಿ ಕ್ಷೇತ್ರದವರಿಗೆ ಹೆಚ್ಚಿನ ಲಾಭ, ಹಿರಿಯರ ಸಲಹೆಯನ್ನು ಆಲಿಸಿ, ಅಲಂಕಾರಿಕ ವಸ್ತುಗಳು ಖರೀದಿ, ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಂತಸ.

ವೃಶ್ಚಿಕರಾಶಿ
ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆಯುವಿರಿ, ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ, ಹಣ ಗಳಿಸಲು ಹಲವು ಅವಕಾಶಗಳು ಗೋಚರಕ್ಕೆ ಬರಲಿದೆ, ವೈಯಕ್ತಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಮಾನಹಾನಿಯಾಗುವ ಕುರಿತು ಎಚ್ಚರದಿಂದಿರಿ, ಸಂಗಾತಿಯೊಂದಿಗೆ ಸುಂದರ ಸಂಜೆ, ವೃತ್ತಿರಂಗದಲ್ಲಿ ಶುಭವಾರ್ತೆ ಕೇಳುವಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಧನಸುರಾಶಿ
ಆರೋಗ್ಯ ಹಾಗೂ ಆತ್ಮವಿಶ್ವಾಸ ವೃದ್ದಿಸಲಿದೆ. ಕೂಡಿಟ್ಟ ಹಣ ಇಂದು ಬಳಕೆ ಬರಲಿದೆ, ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯಲಿದೆ, ಕಚೇರಿಯಲ್ಲಿ ಮೌನವಾಗಿ ವರ್ತಿಸುವುದು ಲೇಸು, ಸೃಜನಶೀಲತೆ ಮತ್ತು ಉತ್ಸಾಹ ನಿಮಗೆ ಲಾಭವನ್ನು ತಂದುಕೊಡಲಿದೆ, ವೈವಾಹಿಕ ಜೀವನ ಉತ್ತಮವಾಗಿರಲಿದೆ, ಅನಿರೀಕ್ಷಿಯ ಪ್ರಣಯ.

ಮಕರರಾಶಿ
ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಆಸ್ಪತ್ರೆಗೆ ಹಣ ವ್ಯಯಿಸುವ ಸಾಧ್ಯತೆಯಿದೆ, ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ, ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿಯ ಕ್ಷಣಗಳನ್ನು ಕಳೆಯುವಿರಿ, ದೃಢ ನಿರ್ಧಾರದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಳವಾಗಲಿದೆ, ವೈವಾಹಿಕ ಜೀವನ ಇಂದು ತಿರುವು ಪಡೆಯಲಿದೆ.

ಕುಂಭರಾಶಿ
ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಬೇಡ, ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ದುಡುಕಿನ ನಿರ್ಧಾರದಿಂದ ಕಾರ್ಯಹಾನಿ, ಹಣಕಾಸಿನ ವ್ಯವಹಾರದ ಮಾತುಕತೆಯ ವೇಳೆ ಎಚ್ಚರಿಕೆ ಅಗತ್ಯ, ಉದ್ಯಮಿಗಳ ಜೊತೆಗೆ ಪ್ರವಾಸ ಸಾಧ್ಯತೆ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ನಡವಳಿಕೆ ಉತ್ತಮವಿರಲಿ, ಪತ್ನಿಗೆ ಹೆಚ್ಚಿನ ಸಮಯವನ್ನು ನೀಡಲು ಯತ್ನಿಸಿ.

ಮೀನರಾಶಿ
ದೈಹಿಕ ಆರೋಗ್ಯ ಕಾಪಾಡಲು ಯತ್ನಿಸಿ, ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿ, ಆದಾಯಕ್ಕಿಂತ ಖರ್ಚು ಅಧಿಕವೆನಿಸಲಿದೆ, ಭವಿಷ್ಯದ ಹೂಡಿಕೆಯ ಬಗ್ಗೆ ಚಿಂತನೆ ನಡೆಯಲಿದೆ, ಪಾಲುದಾರಿಕೆ ವ್ಯವಹಾರ ಹೆಚ್ಚು ಲಾಭವನ್ನು ತಂದುಕೊಡಲಿದೆ, ಮನೆ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆಯಲಿದೆ, ದೂರದ ಬಂಧುಗಳ ಭೇಟಿಯಿಂದ ಮನೆಯಲ್ಲಿ ಸಂತಸ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ.

ಇದನ್ನೂ ಓದಿ : ಕಂಕಣಬಲ, ಸಂತಾನಫಲ ಕರುಣಿಸುತ್ತೆ ಈ ಪುಣ್ಯಕ್ಷೇತ್ರ !

ಇದನ್ನೂ ಓದಿ : ಬೆಂಕಿ ಇಟ್ರು ಬಟ್ಟೆ ಸುಡಲ್ಲ.. ತೆಂಗಿನಕಾಯಿ ಪುಡಿ.. ನೀರು ಚಿಮುಕಿಸಿದರೆ ಜೋಳ ಅರಳುತ್ತೆ..!ನಿಂಬೆ ಹಣ್ಣು ಕುಣಿಯುತ್ತೆ..!

(Horoscope today astrological prediction for September 1st)

Comments are closed.