ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ- ಸ್ನೇಹಿತರಿಂದ ಆರ್ಥಿಕ ಸಹಕಾರ

Horoscope : ದಿನಭವಿಷ್ಯ- ಸ್ನೇಹಿತರಿಂದ ಆರ್ಥಿಕ ಸಹಕಾರ

- Advertisement -

ಮೇಷರಾಶಿ
ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಎಷ್ಟೇ ಕ್ಲಿಷ್ಟಕರ ಸಮಸ್ಯೆ ಇದ್ದರೂ ಪರಿಹಾರವಾಗಲಿದೆ, ಸಂಬಂಧಿಕರ ಭೇಟಿಯಿಂದ ಅಧಿಕ ಲಾಭ, ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವಿರಿ, ಹಿಂದಿನ ಕಹಿ ಘಟನೆಗಳು ಅಹಿತಕರ ಪರಿಸ್ಥಿತಿಯಲ್ಲಿ ಸೃಷ್ಟಿಸಬಹುದು.

ವೃಷಭರಾಶಿ
ಕೆಲಸದ ಒತ್ತಡ ಮನಸಿನ ಮೇಲೆ ಒತ್ತಡವನ್ನು ತರಲಿದೆ, ಆಭರಣ ಖರೀದಿ ಸಾಧ್ಯತೆ, ವೈಯಕ್ತಿಕ ವ್ಯವಹಾರಗಳಲ್ಲಿ ಯಶಸ್ಸು, ಬಿಡುವಿನ ವೇಳೆಯಲ್ಲಿ ಆಧ್ಯಾತ್ಮದ ಕಡೆಗೆ ಒಲವು, ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ಜೀವನ ಸಂಗಾತಿಯಿಂದ ಸಂತಸ, ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಹೊಸ ಆಲೋಚನೆಗಳು ನಿಮಗೆ ಉತ್ತಮ ಲಾಭ ತಂದುಕೊಡಲಿವೆ.

ಮಿಥುನರಾಶಿ
ಅನಗತ್ಯ ಆಲೋಚನೆಗಳು ಮನಸನ್ನು ಹಾಳು ಮಾಡುತ್ತದೆ, ಆರೋಗ್ಯ ವೃದ್ದಿಸಲು ದೈಹಿಕ ವ್ಯಾಯಾಮ ಮಾಡಿ, ಹಣ ಉಳಿಸುವ ಯೋಚನೆ ಇಂದು ಸಾಕಾರವಾಗಲಿದೆ, ಮಕ್ಕಳು ಇಂದು ಗಮನಾರ್ಹ ಸಾಧನೆ ಮಾಡಲಿದ್ದಾರೆ. ನಿಮ್ಮ ನಿರೀಕ್ಷೆಗಳು ಈಡೇರಿಕೆಯಿಂದ ಸಂತ, ಬಾಕಿ ಉಳಿದ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ, ಹಿರಿಯರ ಸಲಹೆಯನ್ನು ಆಲಿಸಿದ್ರೆ ಅಧಿಕ ಲಾಭ.

ಕರ್ಕಾಟಕರಾಶಿ
ನಿಮ್ಮ ಭರವಸೆ, ನಿರೀಕ್ಷೆಗಳು ಸಾಕಾರಗೊಳ್ಳಲಿವೆ, ಕುಟುಂಬದ ಸಾಮಾಜಿಕ ಚಟುವಟಿಕೆಗಳು ಆಹ್ಲಾದಕರವಾಗಿರುತ್ತದೆ, ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸಿ, ಪತ್ನಿಯೊಡನೆ ಹೊಂದಾಣಿಕೆಯಿಂದಿರಿ, ಇತರರೊಂದಿಗೆ ಮಾತನಾಡುವಾಗ ಎಚ್ಚರಿಕೆವಹಿಸಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ ದೊರೆಯಲಿದೆ.

ಸಿಂಹರಾಶಿ
ಆರೋಗ್ಯದ ಬಗ್ಗೆ ಗಮನಹರಿಸಿ, ಆರ್ಥಿಕ ಸ್ಥಿತಿ ಸುಧಾರಣೆಯನ್ನು ಕಾಣಲಿದೆ. ಅನಿರೀಕ್ಷಿತ ಮೂಲಗಳಿಂದ ಲಾಭ ದೊರೆಯಲಿದೆ, ಹಳೆಯ ಸ್ನೇಹಿತರು ಸಕಾಲದಲ್ಲಿ ಸಹಕಾರವನ್ನು ಮಾಡಲಿದ್ದಾರೆ, ಹಿರಿಯ ಆಶೀರ್ವಾದವನ್ನು ಪಡೆಯಲಿದ್ದೀರಿ, ಧಾರ್ಮಿಕ ಕಾರ್ಯಗಳ ಕುರಿತು ಒಲವು, ಮಾನಸಿಕ ಶಾಂತಿಯಿಂದ ನೆಮ್ಮದಿ, ವಿದ್ಯಾರ್ಥಿಗಳಿಗೆ ಅಧಿಕ ಪ್ರಯತ್ನ ಬಲ.

ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

ಕನ್ಯಾರಾಶಿ
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ, ಕೆಲಸದ ಸ್ಥಳದಲ್ಲಿ ಒತ್ತಡ, ಕುಟುಂಬ ಸದಸ್ಯರ ಅಗತ್ಯತೆಗಳನ್ನು ನಿರ್ಲಕ್ಷ ಮಾಡಬೇಡಿ, ಕೊಟ್ಟ ಹಣ ಮರಳಿ ಬರಲಿದೆ, ಹಣಕಾಸಿನ ಸಮಸ್ಯೆಗಳು ಪರಿಹಾರವನ್ನು ಕಾಣಲಿವೆ, ಮೇಲಾಧಿಕಾರಿಗಳ ಪ್ರಶಂಸೆಯನ್ನು ಕೇಳುವಿರಿ, ಬಾಕಿ ಉಳಿದ ಕಾರ್ಯಗಳು ಇಂದು ನೆರವೇರಲಿವೆ, ಸಂಗಾತಿಯ ಭಾವನೆಗಳನ್ನು ಅರಿತುಕೊಳ್ಳಿ.

ತುಲಾರಾಶಿ
ಆದಾಯಕ್ಕಿಂತ ಖರ್ಚು ಅಧಿಕವಾಗಲಿದೆ, ದೂರ ಪ್ರಯಾಣ ಸಾಧ್ಯತೆ, ಸಂಗಾತಿಯಿಂದ ನಿಮಗೆ ಬೇಸರವಾಗಲಿದೆ, ಮದುವೆ ಸಂಬಂಧ ಮುರಿದು ಬೀಳುವ ಸಾಧ್ಯತೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಸಹೋದ್ಯೋಗಳ ಸಹಕಾರ ದೊರೆಯಲಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೌಟುಂಬಿಕವಾಗಿ ಬೇಸರ.

ಇದನ್ನೂ ಓದಿ : ವಿವಾದದಲ್ಲಿ ಕೋಟಿ – ಚೆನ್ನಯ್ಯರ ಹುಟ್ಟೂರು : ಪಡುಮಲೆ ಮತ್ತು ಗೆಜ್ಜೆಗಿರಿಯಲ್ಲಿ ನಿಜವಾಗಿ ನಡೆಯುತ್ತಿರುವುದೇನು ?

ವೃಶ್ಚಿಕರಾಶಿ
ನೀವಿಂದು ಸಾಕಷ್ಟು ವಿಶ್ರಾಂತಿ ಪಡೆಯುವಿರಿ, ದೇಹದ ಆರೋಗ್ಯದ ಕಡೆಗೆ ಗಮನ ಹರಿಸಿ, ಕುಟುಂಬ ಸದಸ್ಯರನ್ನು ಪ್ರೀತಿಯಿಂದ ನೋಡಿಕೊಳ್ಳಿ, ಆಪ್ತ ವಿಚಾರಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ, ಸಂಗಾತಿಯು ನಿಮ್ಮ ಭಾವನೆಯನ್ನು ಅರ್ಥೈಯಿಸಿಕೊಳ್ಳಲಿದ್ದಾರೆ. ಮದುವೆಯ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸೂಕ್ತ ಉದ್ಯೋಗದ ಭರವಸೆ ದೊರೆಯಲಿದೆ.

ಧನಸುರಾಶಿ
ಹಳೆಯ ಸೋಲಿನ ಪಾಠ ಕಲಿಯುವಿರಿ, ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ, ವ್ಯವಹಾರದಿಂದ ಅಧಿಕ ಲಾಭವನ್ನು ಗಳಿಸುವಿರಿ, ಕೌಟುಂಬಿಕ ಸಮಸ್ಯೆ ನಿಮ್ಮೊಂದಿಗೆ ಸಹಾಯವನ್ನು ಕೇಳುವಿರಿ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಸೋಮಾರಿತನವನ್ನು ದೂರ ಮಾಡಿಕೊಳ್ಳುವುರಿಂದ ಸಂತಸದ ವಾತಾವಣ ಕಂಡುಬರಲಿದೆ,

ಮಕರರಾಶಿ
ಒಡಹುಟ್ಟಿದವರು ನಿಮಗೆ ಇಂದು ಹಣಕಾಸಿನ ಸಹಾಯ ಮಾಡಲಿದ್ದಾರೆ. ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ, ವೈವಾಹಿಕ ಜೀವನದ ಕಡೆಗೆ ಗಮನ ಹರಿಸಿ, ಅದ್ಬುತ ವ್ಯಕ್ತಿಗಳ ಭೇಟಿಯಿಂದ ಹೆಚ್ಚು ಲಾಭದಾಯಕವಾಗಲಿದೆ, ಧಾರ್ಮಿಕ ಕ್ಷೇತ್ರಗಳ, ಮೇಲಾಧಿಕಾರಿಗಳ ಪ್ರಶಂಸೆ ದೊರೆಯಲಿದೆ, ದೂರ ಪ್ರಯಾಣದ ಜೊತೆಗೆ ಅಕಾಲ ಬೋಜನೆ.

ಕುಂಭರಾಶಿ
ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ, ನಿಮ್ಮ ಸಂಪತ್ತನ್ನು ವೃದ್ದಿಸುವ ಕಡೆಗೆ ಗಮನ ಹರಿಸಿ, ಸಾಮಾಜಿಕ ಗೌರವಗಳು ಹೆಚ್ಚಲಿದೆ, ಭವಿಷ್ಯದ ಯೋಜನೆಗಾಗಿ ಪರಿಪೂರ್ಣ ಅವಕಾಶವಿಂದ ನಿಮಗೆ ಒದಗಿ ಬರಲಿದೆ, ದುಶ್ಚಟಗಳಿಂದ ದೂರವಿರಿ, ಬಂಧುಗಳ ಜೊತೆಗೆ ಉತ್ತಮ ಒಡನಾಟವಿಟ್ಟುಕೊಳ್ಳಿ, ಸಂಗಾತಿಗೆ ಸಮಯ ಕೊಡಲು ಮರೆಯದಿರಿ.

ಮೀನರಾಶಿ
ಸ್ನೇಹಿತರ ಜೊತೆಗಿನ ಮುಕ್ತ ಮಾತು ಸಂಬಂಧವನ್ನು ವೃದ್ದಿಸಲಿದೆ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹೂಡಿಕೆ ಮಾಡಿ, ಹೊಸ ಸ್ನೇಹಿತರ ಭೇಟಿಯಿಂದ ಲಾಭ, ಕುಟುಂಬದ ಸದಸ್ಯರಿಗೆ ಹೆಚ್ಚಿನ ಸಮಯಾವಕಾಶವನ್ನು ನೀಡಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಧಾರ್ಮಿಕ ಪುಣ್ಯಕ್ಷೇತ್ರಗಳ ಭೇಟಿ, ನ್ಯಾಯಾಲಯದ ವ್ಯಾಜ್ಯದಲ್ಲಿ ಪರಿಹಾರ ದೊರೆಯಲಿದೆ.

ಇದನ್ನೂ ಓದಿ : GOOD NEWS : ಸರಕಾರಿ ನೌಕರರಿಗೆ ಗುಡ್‌ನ್ಯೂಸ್ : ಕೆಲಸದ ಅವಧಿಯಲ್ಲಿ ಸಿಗುತ್ತೆ ‘ಯೋಗ ವಿರಾಮ’

(Horoscope today astrological prediction for September 5th)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular