ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 27-08-2020

ನಿತ್ಯಭವಿಷ್ಯ : 27-08-2020

- Advertisement -

ಮೇಷರಾಶಿ
ಆತ್ಮೀಯರಿಗಾಗಿ ಅಧಿಕ ಖರ್ಚು, ದೈಹಿಕವಾಗಿ, ಮಾನಸಿಕವಾಗಿ ತುಂಬಾ ಉದ್ವೇಗವು ಕಂಡು ಬರಲಿದೆ. ವಿದ್ಯಾರ್ಥಿಗಳಿಗೆದ ಉತ್ತಮ ಅನುಭವವಾಗಲಿದೆ. ಹಿರಿಯರಿಗೆ ಶ್ರೀ ದೇವತಾದರ್ಶನ ಭಾಗ್ಯವು ಇರುವುದು. ನರದೌರ್ಬಲ್ಯ, ಕುತ್ತಿಗೆ ನೋವು, ಸೊಂಟ ಭಾದೆ,ಅ ಧಿಕ ಸುಸ್ತು. ದಿನಾಂತ್ಯ ಶುಭವಿದೆ.

ವೃಷಭರಾಶಿ
ಆರೋಗ್ಯದಲ್ಲಿ ಏರುಪೇರು ಕಂಡು ಬರುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ಫ‌ಲವಿದೆ. ಆರ್ಥಿಕವಾಗಿ ತುಂಬಾ ಅಭಿವೃದ್ಧಿಯ ದಿನಗಳಿವು. ದೂರಸಂಚಾರದಲ್ಲಿ ಜಾಗ್ರತೆ ವಹಿಸುವುದು.ಮಕ್ಕಳು ದೂರ ಆಗುವರು, ಆಕಸ್ಮಿಕ ಬಂಧುಗಳ ಆಗಮನ.

ಮಿಥುನರಾಶಿ
ಮೊಬೈಲ್, ಕಂಪ್ಯೂಟರ್‍ ಮಾರಾಟಗಾರರಿಗೆ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ, ಖರ್ಚು ವೆಚ್ಚಗಳ ಮೇಲೆ ಹಿಡಿತ ಅಗತ್ಯ. ಸಾಮಾಜಿಕ ಕೆಲಸ ಕಾರ್ಯಗಳಿಗಾಗಿ ಧನವ್ಯಯವಾದೀತು. ಹಿತಶತ್ರುಗಳು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿಯಾರು. ಉದ್ಯೋಗ ಬಿಡುವ ಮನಸ್ಸು.

ಕಟಕರಾಶಿ
ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ ಇದ್ದರೂ ಸಹೋದ್ಯೋಗಿಗಳ ಸಹಕಾರವಿರುತ್ತದೆ. ದಾಯಾದಿಗಳು ಸಮಸ್ಯೆಯನ್ನು ತಂದೊಡ್ಡಲಿದ್ದಾರೆ. ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿರಿ. ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.

ಸಿಂಹರಾಶಿ
ಗಂಡು ಮಕ್ಕಳಿಂದ ಲಾಭ, ಸಾಂಸಾರಿಕವಾಗಿ ನಾನಾ ಸಮಸ್ಯೆಗಳು ಸುತ್ತಿಕೊಳ್ಳಲಿವೆ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ತಿಕ್ಕಾಟವಿರುತ್ತದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಾಗಮನವಿರುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಶಂಸೆ ಸಲ್ಲಲಿದೆ. ಮಿತ್ರರು ದೂರವಾಗುವರು,

ಕನ್ಯಾರಾಶಿ
ಕೃಷಿಕ ವರ್ಗದವರಿಗೆ ಉತ್ಸಾಹದಾಯಕ ಕಾರ್ಯ ಅಭಿವೃದ್ಧಿ ತೋರಿಬರಲಿದೆ, ಸಾಂಸಾರಿಕವಾಗಿ ಸಮಾಧಾನವಿಲ್ಲದಿದ್ದರೂ ವೃತ್ತಿ ರಂಗದಲ್ಲಿ ನಿಮ್ಮ ಅಭಿವೃದ್ಧಿ ತೋರಿಬರಲಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಪತ್ರಿಕೋದ್ಯಮ, ಕಂಪ್ಯೂಟರ್ ಕ್ಷೇತ್ರಗಳಲ್ಲಿ ಉದ್ಯೋಗ ಲಾಭ, ಭೂಮಿ ವಾಹನ ಯೋಗ, ತಾಯಿಂದ ಧನಾಗಮನ.

ತುಲಾರಾಶಿ
ತಂದೆ ಬಂಧುಗಳಿಂದ ನಿಂದನೆ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯಿಂದ ಸಂತಸ, ಇತರರ ಕೆಲಸಕಾರ್ಯಗಳಲ್ಲಿ ಮೂಗು ತೂರಿಸದಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಉತ್ತಮ ಫ‌ಲಿತಾಂಶ ಪಡೆಯಲಿದ್ದಾರೆ. ಪರಸ್ಥಳ ಪ್ರವಾಸ, ಸಾಲ ಮತ್ತು ಶತ್ರು ಕಾಟಗಳಿಂದ ನಿದ್ರಾಭಂಗ.

ವೃಶ್ಚಿಕರಾಶಿ
ಆಕಸ್ಮಿಕವಾಗಿ ಹೆಸರು ಕೀರ್ತಿ ಪ್ರಾಪ್ತಿ, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ವೈಯಕ್ತಿಕ ಆರೋಗ್ಯದ ಬಗ್ಗೆ ಗಮನಹರಿಸಿರಿ. ನಿರುದ್ಯೋಗಿಗಳು ಉತ್ತಮ ಅವಕಾಶವನ್ನು ಪಡೆಯಲಿದ್ದಾರೆ. ಅತಿಥಿಗಳ ಆಗಮನದಿಂದ ಸಂತಸ. ದಿನಾಂತ್ಯ ಕಿರು ಸಂಚಾರವಿರುತ್ತದೆ. ದೂರಾಲೋಚನೆ ಮನಸ್ಸು ಮಾಡುವಿರಿ.

ಧನಸ್ಸುರಾಶಿ
ವ್ಯಾಪಾರ ವ್ಯವಹಾರಗಳ ಹೂಡಿಕೆಗಳಲ್ಲಿ ಹೆಚ್ಚಿನ ಜಾಗೃತಿ ಅಗತ್ಯ. ಯುವತಿಯರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಕೆಲಸ ಕಾರ್ಯಗಳಲ್ಲಿ ಅಧಿಕಾರಿಗಳಿಂದ ಮೆಚ್ಚುಗೆ, ಅತೀ ಕೋಪ, ತಾಪ ಬಿಟ್ಟುಬಿಡಿ, ಫೈನಾನ್ಸ್, ಹಳದಿ ಲೋಹ ವ್ಯಾಪಾರಸ್ಥರಿಗೆ ಅನುಕೂಲ, ಆಸೆ ಆಕಾಂಕ್ಷೆಗಳು ಈಡೇರುವುದು, ಸಂಗಾತಿಯಿಂದ ಮಾನಸಿಕ ನೆಮ್ಮದಿ.

ಮಕರರಾಶಿ
ವೃತ್ತಿರಂಗದಲ್ಲಿ ನಾನಾ ರೀತಿಯ ಅವಕಾಶಗಳು ನಿಮ್ಮನ್ನು ಮುನ್ನಡೆಸಲಿವೆ. ಉದ್ಯೋಗ ಅಥವಾ ಸ್ಥಳ ಬದಲಾವಣೆ, ಅನಿರೀಕ್ಷಿತವಾಗಿ ಆರ್ಥಿಕಸ್ಥಿತಿ ಬಿಗಡಾಯಿಸಲಿದೆ. ಶುಭಮಂಗಲ ಕೆಲಸಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ. ಸ್ವಯಂಕೃತಾಪರಾಧದಿಂದ ಸಾಲಕ್ಕೆ ಸಿಲುಕುವಿರಿ, ಮಂಗಳ ಕಾರ್ಯಗಳಿಗೆ ಸಿದ್ಧತೆ.

ಕುಂಭರಾಶಿ
ನಿರುದ್ಯೋಗಿಗಳು ತಾತ್ಕಾಲಿಕ ವೃತ್ತಿಯಲ್ಲಿ ಸಮಾಧಾನ ಪಡುವಂತಾದೀತು. ಆಗಾಗ ಶ್ರೀ ದೇವರ ದರ್ಶನದ ಭಾಗ್ಯವಿದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಮನೆಯಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳು ನಡೆದಾವು. ಕುಟುಂಬ ಸಂಕಷ್ಟಕ್ಕೆ ಸಿಲುಕುವುದು, ಮಕ್ಕಳ ಭೌತಿಕ ಮಟ್ಟದಲ್ಲಿ ಕುಸಿತ, ಅನಾರೋಗ್ಯ ಸಂಭವ.

ಮೀನರಾಶಿ
ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಲಾಭ, ಹೊಸ ವಸ್ತು ವಾಹನ ಖರೀದಿಗೆ ಮನಸ್ಸು, ವಿವಾಹ ಪ್ರಸ್ತಾವಗಳಿಗೆ ಇದು ಸಕಾಲ., ಬಂಧುಮಿತ್ರರ ಆಗಮನ, ಆರ್ಥಿಕ ವಿಚಾರದಲ್ಲಿ ಯಶಸ್ಸು, ಆಗಾಗ ಮಕ್ಕಳು ತೊಂದರೆ ಕೊಟ್ಟಾರು. ಪುಸ್ತಕ, ಪೀಠೋಪಕರಣ, ಮೊಬೈಲ್ ಮತ್ತು ಬಟ್ಟೆ ಖರೀದಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular