ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 01-01-2021 : ನಿಮ್ಮನ್ನು ಕಷ್ಟಕ್ಕೆ ಸಿಲುಕಿಬಹುದು ಎಚ್ಚರವಾಗಿರಿ..!

ನಿತ್ಯಭವಿಷ್ಯ : 01-01-2021 : ನಿಮ್ಮನ್ನು ಕಷ್ಟಕ್ಕೆ ಸಿಲುಕಿಬಹುದು ಎಚ್ಚರವಾಗಿರಿ..!

- Advertisement -

ಮೇಷರಾಶಿ
ಕೋರ್ಟ್ ಕೇಸುಗಳಲ್ಲಿ ಜಯ, ನಿಮ್ಮ ಆಪ್ತರೇ ನಿಮ್ಮ ಬಗ್ಗೆ ಬೇಜಾವಾಬ್ದಾರಿಯಿಂದ ವರ್ತಿಸಬಹುದು, ಅವರ ಹೊಣೆಗೇಡಿತನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು, ಅನಿರೀಕ್ಷಿತವಾಗಿ ದೂರ ಸಂಚಾರದ ಸಾಧ್ಯತೆ, ಫ‌ಲವು ಉತ್ತಮವಿದ್ದೀತು., ಆರೋಗ್ಯ ಸಮಸ್ಯೆಗಳು ಕಾಣಿಸುವುದು, ಬಂಧುಗಳಿಂದ ಆರ್ಥಿಕ ನಷ್ಟ.

ವೃಷಭರಾಶಿ
ಸಾಮಾಜಿಕ ಚಟುವಟಿಕೆಗಳಲ್ಲಿ ಮುನ್ನಡೆ ಕಂಡುಬರುವುದು. ಆರೋಗ್ಯದ ಕಡೆ ಗಮನ ಕೊಡಿರಿ, ಸಾಂಸಾರಿಕ ಜೀವನವು ಸಮಾಧಾನಕರ, ಆದರೂ ಹೊಂದಾಣಿಕೆಯ ಅಗತ್ಯವಿರುತ್ತದೆ, ಮನಶುದ್ಧಿಯಾಗಿರಲಿ. ಸ್ವಂತ ಉದ್ಯಮ ಅಥವಾ ಉದ್ಯೋಗದಲ್ಲಿರುವವರಿಗೆ ಅನುಕೂಲ, ನೆರೆಹೊರೆಯವರಿಂದ ಅಪ ನಿಂದನೆ, ಅಪಕೀರ್ತಿ, ಮಾನಹಾನಿ, ಪಿತ್ರಾರ್ಜಿತ ಆಸ್ತಿಗಾಗಿ ಅಧಿಕ ಖರ್ಚು.

ಮಿಥುನರಾಶಿ
ಸ್ಥಿರಾಸ್ತಿ ಮಾರಾಟದಿಂದ ನಷ್ಟ, ಹಿರಿಯರ ಸಲಹೆಗೆ ಕಿವಿಗೊಡಿರಿ, ಪ್ರತಿಯೊಂದು ವಿಷಯವನ್ನು ತಕ್ಷಣವೇ ಇತ್ಯರ್ಥಪಡಿಸಿ ಕೊಳ್ಳುವುದು, ಕಾರ್ಯರಂಗದಲ್ಲಿ ಆಪ್ತರ ಸಲಹೆಗಳನ್ನು ಸ್ವೀಕರಿಸುವುದು ಒಳಿತು. ಕಠಿಣ ಪರಿಶ್ರಮಕ್ಕೆ ತಕ್ಕ ಫ‌ಲವು ದೊರಕಲಿದೆ ತಂದೆಯ ಬಂಧುಗಳಿಂದ ಅಥವಾ ಸರ್ಕಾರದಿಂದ ಅನುಕೂಲ, ಕುಟುಂಬದಲ್ಲಿ ಆತಂಕದ ಬೆಳವಣಿಗೆ.

ಕಟಕರಾಶಿ
ಸಹೋದ್ಯೋಗಿಗಳೊಡನೆ ಗುಣಾತ್ಮಕ ವರ್ತನೆ ತೋರಿಸಿರಿ ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಚಂಚಲತೆ, ಮಾನಸಿಕ ದೃಢತೆ ಕುಂಠಿತ, ಕೌಟುಂಬಿಕ ಸಮಸ್ಯೆ ಎದುರಾಗಲಿದೆ, ಬಂಧುಬಾಂಧವರ ಭೇಟಿ, ಸಹೋದರಿ ಅಥವಾ ಸೋದರ ಮಾವನಿಂದ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ಸಿಂಹರಾಶಿ
ತಂದೆಯಿಂದ ಧನಾಗಮನ, ಸರ್ಕಾರಿ ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿ, ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ, ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರದು, ನಿಮ್ಮ ಯೋಜನೆಗಳನ್ನು ಹೇಗೆ ಮುಂದಿಡುತ್ತೀರಿ ಎಂಬುದರ ಮೇಲೆ ಬಹುತೇಕ ವಿಷಯಗಳು ಅವಲಂಬಿತವಾಗಲಿದೆ, ಉದ್ಯೋಗ ಅಥವಾ ಕೆಲಸಕಾರ್ಯಗಳಿಗಾಗಿ ಹಣಕೊಟ್ಟು ಮೋಸ, ಶುಭ ವಾರ್ತೆ.

ಕನ್ಯಾರಾಶಿ
ಸ್ವಂತ ಕೆಲಸಕಾರ್ಯಗಳಿಗೆ ಸರ್ಕಾರದಿಂದ ಅಥವಾ ಸರ್ಕಾರಿ ಅಧಿಕಾರಿಗಳಿಂದ ತಡೆ, ನಿಮ್ಮ ಮಾನಸಿಕ ಚಿಂತೆಗಳು ಪದೇ ಪದೇ ಬದಲಾಗಲಿದೆ, ನಿಮ್ಮ ಸಾಮರ್ಥ್ಯದ ಅತಿರೇಕದಿಂದ ಪಶ್ಚಾತ್ತಾಪ ಪಡುವ ಸಂಭವ ಬಂದೀತು, ಇತರರ ಉತ್ತಮ ಸಲಹೆಗೆ ಗಮನ ನೀಡಿರಿ. ಆರ್ಥಿಕವಾಗಿ ಬಿಕ್ಕಟ್ಟು ತೋರಲಿದೆ, ಪೂರ್ವಜರ ಆಸ್ತಿ ಅಥವಾ ಹಣ ಆಕಸ್ಮಿಕವಾಗಿ ಲಭಿಸುವುದು, ಅಕ್ರಮ ಹಣಗಳಿಕೆ ಯೋಚನೆ.

ತುಲಾರಾಶಿ
ಉದ್ಯೋಗ ನಷ್ಟ, ದಾಂಪತ್ಯ ಕಲಹಗಳಿಂದ ನಿದ್ರಾಭಂಗ, ಆರ್ಥಿಕವಾಗಿ ಸ್ಥಿರಗೊಳ್ಳುವಿರಿ, ವೃತ್ತಿರಂಗದಲ್ಲಿ ನಿಮ್ಮ ಕಾರ್ಯಗಳು ಇತರರ ಗಮನಸೆಳೆಯಲಿವೆ, ದಿನಾಂತ್ಯದಲ್ಲಿ ಹಲವು ರೀತಿಯ ಖರ್ಚುಗಳು ತೋರಿಬಂದಾವು, ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಿರಿ. ಆಕಸ್ಮಿಕ ಪ್ರಯಾಣ ಮತ್ತು ಅವಕಾಶ.

ವೃಶ್ಚಿಕರಾಶಿ
ಸೇವಾವೃತ್ತಿ ಉದ್ಯೋಗ, ಲಾಭ, ನಿಮ್ಮ ಪರಿಚಿತರೊಬ್ಬರು ನಿಮ್ಮ ಬೆಂಗಾವಲಿಗೆ ನಿಲ್ಲಲಿದ್ದಾರೆ, ನಿಮ್ಮ ತಾಳ್ಮೆ ಸಹನೆ ನಿಮಗೆ ಆಧಾರವಾಗಲಿದೆ, ನಿಮ್ಮ ಕೆಲಸಕಾರ್ಯಗಳನ್ನು ಆತ್ಮವಿಶ್ವಾಸದಿಂದ ಮುಂದು ವರಿಸಿರಿ, ಅತೀ ವಿಶ್ವಾಸ ಯಾರಲ್ಲೂ ಬೇಡ. ಭೂವ್ಯಾಜ್ಯ ಗಳಿಂದ ಮುಕ್ತಿ, ಅಕ್ರಮ ಅಥವಾ ದೂರಾಲೋಚನೆ ಗಳಿಗೆ ಬಲಿ.

ಧನಸುರಾಶಿ
ಸ್ನೇಹಿತರು ಶತ್ರುಗಳಾಗುವರು,ನಿಮ್ಮ ಕೆಲಸಕಾರ್ಯಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಸಿರಿ, ಆರ್ಥಿಕವಾಗಿ ಹೆಚ್ಚಿನ ಉನ್ನತಿ ಕಂಡುಬರುವುದು, ಹಣಕಾಸಿನ ಬಗ್ಗೆ ಸಮತೋಲನವನ್ನು ಕಾಯ್ದುಕೊಳ್ಳಿರಿ, ಯಾವುದಕ್ಕೂ ಸಂಘರ್ಷ ಮಾಡದಿರಿ. ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳಲ್ಲಿ ಅಹಂಭಾವ ಮೊಂಡುತನ.

ಮಕರರಾಶಿ
ಪ್ರಣಯ ಪ್ರಸಂಗಗಳಲ್ಲಿ ಅಡೆತಡೆಗಳು ತೋರಿಬಂದಾವು. ಅನಿರೀಕ್ಷಿತವಾಗಿ ಆಪ್ತರೊಬ್ಬರಿಗೆ ಆರ್ಥಿಕ ನೆರವು ನೀಡಬೇಕಾಗಿ ಬರಬಹುದು, ಇದರ ಬಗ್ಗೆ ಹೆಚ್ಚಿನ ಚಿಂತೆ ಬೇಡ, ಬಂಧುಮಿತ್ರರ ಆಗಮನವಿರುತ್ತದೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವರು, ತಂದೆಯಿಂದ ಮನೋವ್ಯಾಧಿ, ವಾಹನ ಅಪಘಾತಗಳಾಗುವ ಸಂಭವ ಎಚ್ಚರ.

ಕುಂಭರಾಶಿ
ವಿಪರೀತ ರಾಜಯೋಗ ದಿನ, ದಾಯಾದಿಗಳ ಕಲಹ, ವೈರತ್ವವು ಶಾಂತ ವಾಗದು. ತಾಳ್ಮೆ, ಸಹನೆ ಇರಲಿ. ಹಾಳು ಅಭ್ಯಾಸದ ಮಿತ್ರರ ಸಹವಾಸವು ಅವಮಾನ ತರಲಿದೆ, ಹಿರಿಯರಿಗೆ ಅನಾರೋಗ್ಯವು ಕಾಡೀತು, ನಿವೇಶನ ಖರೀದಿ ಇದ್ದೀತು.ಸಂಗಾತಿಯ ಬಂಧುಗಳ ಆಗಮನ ಮಕ್ಕಳಿಂದ ಆಸ್ತಿ ಅಥವಾ ವಾಹನ ಕೊಳ್ಳುವ ಯೋಗ.

ಮೀನರಾಶಿ
ಕೆಲವೊಂದು ವಿಚಾರಗಳು ನಿಮ್ಮ ಬಗ್ಗೆ ಗೊಂದಲ ಸೃಷ್ಟಿಸಬಹುದು, ಮಿತ್ರರ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟಲ್ಲಿ ಮೋಸ ಹೋಗುವಿರಿ, ಜಾಗ್ರತೆ ಮಾಡುವುದು, ಆತ್ಮಗೌರವ ಮತ್ತು ಭಾವನೆಗಳಿಗೆ ಪೆಟ್ಟು, ಅಧಿಕ ಉಷ್ಣದಿಂದ ಬಾಯಿ ಗಂಟಲು ಉರಿ, ಸಾಲದ ಹಣ ಮರುಪಾವತಿ, ಹಣಕಾಸಿನ ವಿಚಾರದಲ್ಲಿ ಅತೀ ಹೆಚ್ಚಿನ ಜಾಗ್ರತೆ ಮಾಡಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular