ಮೇಷರಾಶಿ
ಉದ್ಯೋಗಿ ಮಹಿಳೆಯರಿಗೆ ಬದಲಾವಣೆಯ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ವಂಚನೆಗಳು ಕಾಣಿಸಬಹುದು. ಹೊಸ ಉದ್ಯೋಗ ಆರಂಭ ಬೇಡ. ಮನೆಯಲ್ಲಿ ಸಂತಸದ ವಾತಾವರಣ, ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯವಿದೆ.
ವೃಷಭರಾಶಿ
ಹಣಕಾಸಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇದ್ದರೂ ಉದಾಸೀನ ಸಲ್ಲದು. ರಾಜಕೀಯದವರಿಗೆ ಶುಭದಾಯಕ ವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಕಾಣಿಸಲಿದೆ. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸಬೇಕಾದೀತು.
ಮಿಥುನರಾಶಿ
ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ. ಧನಾದಾಯದಿಂದ ಅಸ್ತಿಪಾಸ್ತಿಗಳ ಸಂಗ್ರಹ ಮಂಗಲಕಾರ್ಯಗಳ ಸಾಧ್ಯತೆ ತೋರಿ ಬಂದೀತು. ಕೋರ್ಟು ಸಂಬಂಧದ ವ್ಯವಹಾರಕ್ಕೆ ಧನವ್ಯಯ ವಾಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
ಕಟಕರಾಶಿ
ವಾಹನದಿಂದ ನಷ್ಟ. ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ. ಬಟ್ಟೆ ಉದ್ಯಮ ಹಾಗೂ ದಲ್ಲಾಳಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭವಿರದು. ಅತಂಕಕ್ಕೆ ಒಳಗಾಗುವಿರಿ. ಸಾಂಸಾರಿಕವಾಗಿ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿ ಬರಲಿದೆ.
ಸಿಂಹರಾಶಿ
ಹೊಸ ಚಿಂತನೆಗಳಿಗೆ ಇದು ಶುಭಕಾಲ. ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿ ಇದ್ದರೂ ಅಡಚಣೆಗಳು ಕಂಡುಬಂದಾವು. ನೌಕರ ವರ್ಗದವರಿಗೆ ಅಶುಭ ಫಲವಿದ್ದು ಹಣಕಾಸಿನ ತೊಂದರೆ ಹಾಗೂ ತಾಪತ್ರಯ ಹೆಚ್ಚಲಿದೆ. ಸರಕಾರಿ ಅಧಿಕಾರಿಗಳಿಗೆ ಹಿನ್ನಡೆ ತಂದೀತು. ದೇವರನ್ನು ಪ್ರಾರ್ಥಿಸಿ.
ಕನ್ಯಾರಾಶಿ
ವೃತ್ತಿರಂಗದಲ್ಲಿ ಕಾರ್ಯಒತ್ತಡಗಳು ಕಂಡು ಬಂದಾವು. ಅನಿರೀಕ್ಷಿತ ಧನಾಗಮನದಿಂದ ಸಂತಸ. ಕುಟುಂಬ ಸ್ಥಾನದಲ್ಲಿ ವಾದವಿವಾದ ಗಳಿಂದ ಕಾರ್ಯಭಂಗವಾದೀತು. ಶನಿಯ ಪ್ರತಿಕೂಲ ದೇಹಾರೋಗ್ಯದಲ್ಲಿ ಪರಿಣಾಮ ಬೀರಬಹುದು. ಧರ್ಮಕಾರ್ಯಕ್ಕೆ ಅಡಚಣೆ ಇದೆ.
ತುಲಾರಾಶಿ
ಲೇವಾದೇವಿರಿಗೆ ನಷ್ಟ ಸಂಭವವಿದೆ. ಸಂಚಾರದಲ್ಲಿ ಜಾಗ್ರತೆ. ಮಹಿಳೆಯರಿಗೆ ಅನಾವಶ್ಯಕವಾಗಿ ಋಣಾತ್ಮಕ ಚಿಂತನೆ ಹೆಚ್ಚಲಿದೆ. ವೃತ್ತಿರಂಗದಲ್ಲಿ ವಿರೋಧವನ್ನು ಎದುರಿಸುವಂತಾದೀತು. ವ್ಯಾಪಾರಸ್ಥರಿಗೆ ನಷ್ಟ.
ವೃಶ್ಚಿಕರಾಶಿ
ಸಂಧಿನೋವುಗಳ ತೊಂದರೆಯಿಂದ ಅನಾರೋಗ್ಯವು ಕಾಡಲಿದೆ. ಜಾಗ್ರತೆ ಮಾಡಿರಿ. ರಾಜಕೀಯ ವ್ಯವಹಾರದವರು ಸಮಸ್ಯೆಗಳನ್ನು ಎದುರಿಸಬೇಕಾದೀತು. ವಿವಾಹ ಯೋಗ, ಮನೆಯಲ್ಲಿ ಮಂಗಲಕಾರ್ಯಕ್ಕೆ ಭಂಗವಾದೀತು.
ಧನುರಾಶಿ
ಅನಿರೀಕ್ಷಿತ ಪ್ರಯಾಣ ಕಂಡು ಬರಲಿದೆ. ರಾಜಕಾರಣಿಗಳಿಗೆ ಉತ್ತಮ ಫಲವಿದೆ. ಆರೋಗ್ಯದ ಬಗ್ಗೆ ಉದಾಸೀನ ಮಾಡದಿರಿ. ಕುಟುಂಬ ಜನರ ವಿರೋಧವನ್ನು ಎದುರಿಸಬೇಕಾಗುತ್ತದೆ. ವಾಹನ ಸಂಚಾರದಲ್ಲಿ ಸಮಸ್ಯೆ ಇದೆ.
ಮಕರರಾಶಿ
ಕಾನೂನು ಸಂಬಂಧಿತ ಕೆಲಸಕಾರ್ಯ ಯಶಸ್ಸನ್ನು ತರಲಿದೆ. ಹೆಚ್ಚಿನ ಕೆಡುಕು ಉಂಟಾಗಿದೆ. ಕೆಲಸ ಕಾರ್ಯಗಳು ನಡೆಯಲಿವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಧಾರ್ಮಿಕ ಕೆಲಸದಲ್ಲಿ ಆಸಕ್ತಿ.
ಕುಂಭರಾಶಿ
ಸಾಂಸಾರಿಕವಾಗಿ ಪತ್ನಿಯ ಆರೋಗ್ಯದ ಜಾಗ್ರತೆ ಮಾಡಿರಿ. ವ್ಯಾಪಾರ, ವ್ಯವಹಾರಗಳನ್ನು ಬಹು ಕಷ್ಟ ಹಾಗೂ ಎಚ್ಚರಿದಿಂದ ಮುನ್ನಡೆಸಬೇಕಾದೀತು. ಬಂಧುಗಳಿಂದ ವ್ಯಾಜ್ಯ ವಿವಾದಗಳು ತೋರಿಬಂದಾವು. ಹೆಚ್ಚಿನ ಗಮನಹರಿಸಿರಿ.
ಮೀನರಾಶಿ
ಶುಭ ಫಲಗಳು ಗೋಚರಕ್ಕೆ ಬರುವ ಸಮಯದಲ್ಲೇ ಅಡತಡೆಗಳನ್ನು ಎದುರಿಸಬೇಕಾಗುತ್ತವೆ. ಹೊಸ ಅವಕಾಶವೊಂದು ನಿಮಗೆ ಒದಗಿಬರಲಿದೆ. ಸಂಸಾರ ಸುಖ ಉತ್ತಮವಿದ್ದರೂ ಕಿರಿಕಿರಿ ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಅಭಿವೃದ್ಧಿ ಕಂಡು ಬರಲಿದೆ.
