ಮಂಗಳವಾರ, ಏಪ್ರಿಲ್ 29, 2025
HomeBreakingನಿತ್ಯಭವಿಷ್ಯ : ಈ ರಾಶಿಯವರು ಯಾರಿಗಾದ್ರೂ ಹಣವನ್ನು ಕೊಡುವ ಮುನ್ನ ಯೋಚಿಸಿ

ನಿತ್ಯಭವಿಷ್ಯ : ಈ ರಾಶಿಯವರು ಯಾರಿಗಾದ್ರೂ ಹಣವನ್ನು ಕೊಡುವ ಮುನ್ನ ಯೋಚಿಸಿ

- Advertisement -

ಮೇಷರಾಶಿ
ಇಂದು ನಿಮ್ಮ ಜೀವನದಲ್ಲಿ ಹೊಸ  ವ್ಯಕ್ತಿಯು ಪರಿಚಯ ಆಗುವುದ ರಿಂದ ನೀವು ಇನ್ನಷ್ಟು ಸಂತೋಷವಾಗಿರುತ್ತೀರಿ, ಅರೋಗ್ಯದ ಕಡೆ ಗಮನವಿರಲಿ. ಸೋಮಾರಿತನದಿಂದ ದೂರವಿರಿ. ಈ ದಿನ ನಿಮಗೆ ಹಿರಿಯರ ಆಶೀರ್ವಾದ ಸಿಗಲಿದೆ.

ವೃಷಭರಾಶಿ
ದಿನ  ನೀವು ಬಹಳ ಮುಖ್ಯವಾದ ಅವಕಾಶಗಳಿಂದ ವಂಚಿತರಾಗುತ್ತೀರಿ. ವ್ಯವಹಾರದಲ್ಲಿ ಬಹಳಷ್ಟು ತೊಂದರೆಗಳು ಆಗುವ ಸಾಧ್ಯತೆಗಳಿವೆ. ಈ ದಿನ ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.

ಮಿಥುನರಾಶಿ
ದೊಡ್ಡ ಹೂಡಿಕೆ ಮಾಡುವ ಮುನ್ನ ಯೋಚಿಸಿ  ಮುಂದುವರಿಯಿರಿ. ಉದ್ಯೋಗದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಮನೆಯ ಅಲಂಕಾರಿಕ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುತ್ತೀರಿ.

ಕರ್ಕಾಟಕರಾಶಿ
ಹೊಸ ಕೆಲಸವನ್ನು ಆರಂಭಿಸುವ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ. ಜೀವನ ಸಂಗಾತಿಯೊಂದಿಗೆ ಕೆಲವು ವಿವಾದಗಳು ಉಂಟಾಗುವ ಸಾಧ್ಯತೆಗಳಿವೆ. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ.

ಸಿಂಹರಾಶಿ
ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಆಲೋಚನೆಗಳನ್ನು ಮಾಡಿ. ಪ್ರೀತಿಯ ಜೀವನ ಸ್ವಲ್ಪ ಪ್ರತಿಕೂಲಕರವಾಗಲಿದೆ. ಆದ್ದರಿಂದ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯಿರಿ.

ಕನ್ಯಾರಾಶಿ
ಆರ್ಥಿಕ ಪರಿಸ್ಥಿತಿಗಳಿಗೆ ಸ್ವಲ್ಪ ಒತ್ತಡವನ್ನು ತರುತ್ತದೆ. ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ. ಹಣಕ್ಕೆ ಸಂಬಂಧಿಸಿದ ವಿವಾದಗಳು ಕುಟುಂಬದ ಶಾಂತಿಯನ್ನು ಭಂಗಗೊಳಿಸಬಹುದು.

ತುಲಾರಾಶಿ
ಈ ದಿನ ಯಾವುದಾದರು ಹೊಸ ಕಾರ್ಯವನ್ನು ಪ್ರಾರಂಭಿಸಲು ಬಯಸುತ್ತಿರಿ. ಹಲವು ಸವಾಲುಗಳ ಮದ್ಯ ನಿಮ್ಮ ಪ್ರೀತಿಯ ಜೀವನ ಮುಂದುವರಿಯು ತ್ತದೆ. ವಿವಾಹಿತರು ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕರಾಶಿ
ನೀವು ಉದ್ಯೋಗದಲ್ಲಿ  ಹೊಸ ನಿರ್ಧಾರವನ್ನು  ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಈ ದಿನ ಸಮಯ ಸ್ವಲ್ಪ ದುರ್ಬಲವಾಗಿರುತ್ತದೆ. ವಿದ್ಯಾರ್ಥಿಗಳು ಕೇವಲ ಕಠಿಣ ಪರಿಶ್ರಮ ಮಾಡುವುದು ಮಾತ್ರ ಪರಿಹಾರ ವಾಗಿರುತ್ತದೆ.

ಧನುರಾಶಿ
ಈ ದಿನ ನೀವು ಯಾರಿಗು ಹಣವನ್ನು ಕೊಡುವ ಮುನ್ನ ಯೋಚಿಸಿ. ಇಲ್ಲದಿದ್ದರೆ  ಮುಂದಿನ ದಿನ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.

ಮಕರರಾಶಿ
ಕೆಲಸದ ಸ್ಥಳದಲ್ಲಿ ವರಿಷ್ಠ ಅಧಿಕಾರಿಗಳೊಂದಿಗೆ  ಭಿನ್ನಾಭಿಪ್ರಾಯಗಳು ಮತ್ತು ಯಾವುದೇ ರೀತಿಯ ತಪ್ಪು ಮಾತನಾಡಬೇಡಿ . ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಉತ್ತಮವಾಗಿರುತ್ತದೆ

ಕುಂಭರಾಶಿ
ಈ ದಿನ ಪ್ರೀತಿಯ ಜೀವನಕ್ಕಾಗಿ ಅನುಕೂಲಕರ ವಾಗಲಿದೆ. ಆದರೆ ಜೀವನ ಸಂಗಾತಿಯ ಕೋಪವನ್ನು ಅನುಭವಿಸ ಬೇಕಾಗಬಹುದು. ನಿಮ್ಮ ಹಣವನ್ನು ದುಬಾರಿ ಭೌತಿಕ ವಸ್ತುವಿಗೆ ಖರ್ಚು ಮಾಡಬಹುದು.

ಮೀನರಾಶಿ
ಸ್ನಾಯುಗಳು ಮತ್ತು ನರಗಳಿಗೆ ಸಂಬಂಧಿಸಿದ ತೊಂದರೆಗಳು ಸಂಭವಿಸಬಹುದು. ತಂದೆ ತಾಯಿಯ ಆರೋಗ್ಯದ ಮೇಲೆ ಎಚ್ಚರ ವಹಿಸಿ  ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular