Daily Horoscope : ಯಾವ ರಾಶಿಗೆ ಶುಭ, ಯಾರಿಗೆ ಅಶುಭ

ಮೇಷರಾಶಿ
ಸರಕಾರಿ ಕಾರ್ಯಗಳು ಕೈಗೂಡಲಿದೆ, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕವಾಗಿ ನಾನಾ ರೀತಿಯ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ ಗೌರವ, ಮನಶಾಂತಿ.

ವೃಷಭರಾಶಿ
ಸಾಂಸಾರಿಕವಾಗಿ ಕಿರಿಕಿರಿ, ವೃತ್ತಿರಂಗದಲ್ಲಿ ಮುನ್ನಡೆಗೆ ಸಾಧಕವಾಗಲಿದೆ, ಆರೋಗ್ಯದಲ್ಲಿ ಸುಧಾರಣೆ, ಉದಾಸೀನತೆ ಬೇಡ, ಅನಾರೋಗ್ಯ, ಶೀತ ಸಂಬಂಧ ರೋಗಗಳು, ಮಾನಸಿಕ ಒತ್ತಡ, ಅಧಿಕ ಖರ್ಚು, ಸಾಲಗಾರರಿಂದ ತೊಂದರೆ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ಅನುಕೂಲ, ವೈವಾಹಿಕ ಮಾತುಕತೆಗಳು ನಡೆಯಲಿದೆ, ವ್ಯಾಪಾರದಲ್ಲಿ ಲಾಭ, ಸಾಂಸಾರಿಕವಾಗಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಉತ್ತಮ, ಗಣ್ಯ ವ್ಯಕ್ತಿಯೊಬ್ಬರ ಭೇಟಿ, ಉದ್ಯೋಗದಲ್ಲಿ ಬಡ್ತಿ.

ಕರ್ಕಾಟಕರಾಶಿ
ಹೊಸ ಕಾರ್ಯಗಳ ಆರಂಭಕ್ಕೆ ಉತ್ಸಾಹ, ರಾಜಕಾರಣಿಗಳಿಗೆ ಅನುಕೂಲ, ಇಚ್ಚಾ ಕಾರ್ಯಗಳು ಸಿದ್ದಿಯಾಗಲಿದೆ, ಮೇಲಾಧಿಕಾರಿಗಳ ಮೆಚ್ಚುಗೆ ಗಳಿಸುವಿರಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಧನ ನಷ್ಟ ಕೋಪ ಜಾಸ್ತಿ.

ಸಿಂಹರಾಶಿ
ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದೆ, ಭಿನ್ನಾಭಿಪ್ರಾಯಗಳು ಹಂತ ಹಂತವಾಗಿ ಕರಗಿ ಹೋಗಲಿದೆ, ರಾಹುಬಲ ಉತ್ತಮವಿದ್ದು, ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ, ಮನೆಯಲ್ಲಿ ಅಶಾಂತಿ, ಅನ್ಯ ಜನರಲ್ಲಿ ದ್ವೇಷ, ದೂರ ಪ್ರಯಾಣ ಸಾಧ್ಯತೆ.

ಕನ್ಯಾರಾಶಿ
ಆತ್ಮವಿಶ್ವಾಸದಿಂದ ಕಾರ್ಯರಂಗಕ್ಕೆ ಧುಮುಕಿದ್ರೆ ಯಶಸ್ಸು, ನಿರ್ಮಾಣ ಕಾರ್ಯಗಳು ಅಡೆತಡೆಗಳಿಂದ ನಡೆಯಲಿದೆ, ಎಲ್ಲಾ ವಿಚಾರಗಳನ್ನು ಸಮಚಿತ್ತದಿಂದ ಆಲಿಸಿ, ಶುಭ ಕಾರ್ಯಗಳ ಕುರಿತು ಸಮಾಲೋಚನೆ, ಭಯಭೀತಿ ನಿವಾರಣೆ, ಮನಶಾಂತಿ,ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ.

ತುಲಾರಾಶಿ
ಪ್ರಾಮಾಣಿಕ ಕಾರ್ಯಕ್ಕೆ ತಕ್ಕಫಲ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಕೆಲಸ ಕಾರ್ಯಗಳು ಯಶಸ್ವಿಯಾಗಲಿದೆ, ಸ್ನೇಹಿತರಿಂದ ಸಹಕಾರ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಬಂಧುಗಳಲ್ಲಿ ಕಲಹ, ಆಲಸ್ಯ ಮನೋಭಾವ.

ವೃಶ್ಚಿಕರಾಶಿ
ಆರ್ಥಿಕವಾಗಿ ಹಿನ್ನಡೆ, ಸಲ್ಲದ ಅಪವಾದ, ದುಷ್ಟಬುದ್ಧಿ, ದಾಯಾದಿಗಳಲ್ಲಿ ಕಲಹ, ಆತ್ಮೀಯರ ಸಹಕಾರ, ಅವಿವಾಹಿತರಿಗೆ ವಿವಾಹ ಭಾಗ್ಯ, ವೃತ್ತಿರಂಗದಲ್ಲಿ ಕ್ರಿಯಾಶೀಲತೆ ಸಫಲತೆಯನ್ನು ಕೊಡಲಿದೆ, ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ, ಅಧಿಕ ಖರ್ಚು, ವ್ಯಾಸಂಗಕ್ಕೆ ತೊಂದರೆ.

ಧನಸ್ಸುರಾಶಿ
ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಪ್ರೇಮಿಗಳಿಗೆ ಉತ್ತಮವಾದ ದಿನ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸಬಲ ಅಗತ್ಯ, ಸಾಮರ್ಥ್ಯವನ್ನು ಕೀಳಂದಾಜಿಸಬೇಡಿ, ವೃಥಾ ತಿರುಗಾಟ, ವ್ಯಾಪಾರದಲ್ಲಿ ಅಲ್ಪ ಲಾಭ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ.

ಮಕರರಾಶಿ
ನಿಮ್ಮ ಕರ್ತವ್ಯ, ಹೊಣೆಗಾರಿಕೆಯನ್ನು ಮರೆಯದಿರಿ, ಅಧಿಕ ರೀತಿಯಲ್ಲಿ ಖರ್ಚು ವಚ್ಚಗಳು ಕಂಡುಬರಲಿದೆ, ಆಕಸ್ಮಿಕ ಧನಲಾಭ, ವಿವಾಹ ಯೋಗ, ವಿಘ್ನಗಳನ್ನು ಧೈರ್ಯದಿಂದ ಎದುರಿಸಿ, ಅವಿವಾಹಿತರಿಗೆ ಕಂಕಣಬಲ, ಭೂಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಕುಂಭರಾಶಿ
ನಿರೀಕ್ಷಿತ ಚಿಂತನೆಗಳು ಹಂತ ಹಂತವಾಗಿ ನೆರವೇರಲಿದೆ, ಕೆಲಸ ಕಾರ್ಯಗಳಲ್ಲಿ ಧನವ್ಯಯವಾದರೂ ಯಶಸ್ಸು ನಿಮ್ಮದಾಗಲಿದೆ, ಮಕ್ಕಳಿಂದ ಸುಖ, ಆರ್ಥಿಕವಾಗಿ ಚೇತರಿಕೆ, ಉದ್ಯೋಗದಲ್ಲಿ ತೊಂದರೆ, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಬಾಧೆ.

ಮೀನರಾಶಿ
ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ವೃದ್ದಿಸಲಿದೆ, ವೃತ್ತಿರಂಗದಲ್ಲಿ ನಿರೀಕ್ಷಿತ ಸ್ಥಾನ ಪ್ರಾಪ್ತಿಯಾಗಲಿದೆ, ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ, ನೀಚ ಜನರ ಸಹವಾಸ, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ಅಪವಾದ ನಿಂದನೆ.

Comments are closed.