ಮೇಷರಾಶಿ
ಸಹೋದ್ಯೋಗಿಗಳಿಂದ ಕಿರಿಕಿರಿ, ಅತಿಯಾದ ಸಂಚಾರದಿಂದ ಆಯಾಸ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಅನ್ಯರಲ್ಲಿ ವೈಮನಸ್ಸು, ಸ್ವಯಂಕೃತ ಅಪರಾಧ, ಕುಟುಂಬದ ಹೊರೆ ಹೆಚ್ಚಾಗುವುದು, ವಿಪರೀತ ಹಣ ವ್ಯಯ, ಅನಾರೋಗ್ಯ ಕಾಡಲಿದೆ.
ವೃಷಭರಾಶಿ
ಪಾಲುದಾರಿಕೆ ವ್ಯವಹಾರದಿಂದ ಆಧಿಕ ಲಾಭ, ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಖರ್ಚು ವ್ಯಚ್ಚದ ಮೇಲೆ ಹಿಡಿತವಿರಲಿ, ಮಾತಿನ ಮೇಲೆ ನಿಗಾ ಇರಲಿ, ಅತಿಯಾದ ನಿದ್ರೆ, ಉದ್ಯೋಗದಲ್ಲಿ ಪ್ರಗತಿ, ಮಹಿಳೆಯರಿಗೆ ಲಾಭ.
ಮಿಥುನರಾಶಿ
ಹೊಸ ಯೋಜನೆ ಕಾರ್ಯಗತ, ಪ್ರಿಯ ಜನರ ಭೇಟಿ, ವಿವೇಚನೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ, ಸ್ತ್ರೀಸೌಖ್ಯ, ಆಂತರಿಕ ಕಲಹ, ಮನೋವ್ಯಥೆ, ಅಶಾಂತಿ, ಉದ್ಯೋಗದಲ್ಲಿ ಪ್ರಗತಿ, ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿ ಕೊಳ್ಳುವಿರಿ, ಪರರ ಧನ ಪ್ರಾಪ್ತಿ.
ಕರ್ಕಾಟಕರಾಶಿ
ಹೊಸ ಧನಾದಾಯದ ಮೂಲಗಳು ಗೋಚರಕ್ಕೆ ಬರಲಿದೆ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿಂದ ಕಲಹ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಅಧಿಕ ತಿರುಗಾಟ.
ಸಿಂಹರಾಶಿ
ವೃತ್ತಿರಂಗದಲ್ಲಿ ತಾತ್ಕಾಲಿಕ ಸ್ಥಾನಮಾನ, ಮಹಿಳೆಯರಿಗೆ ವಿಶೇಷ ಲಾಭ, ವಿಪರೀತ ಖರ್ಚು, ಕ್ರೀಡಾ ಕ್ಷೇತ್ರದವರಿಗೆ ವಂಚನೆ, ಉದ್ಯೋಗದಲ್ಲಿ ಪ್ರಗತಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ, ಹಿರಿಯರ ಸಹಾಯದಿಂದ ವ್ಯವಹಾರಗಳು ಸುಗಮ.
ಕನ್ಯಾರಾಶಿ
ಸಾಂಸಾರಿಕವಾಗಿ ಅಪವಾದದ ಚಿಂತೆ, ಅಮೂಲ್ಯ ವಸ್ತುಗಳ ಖರೀದಿ, ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ದಾಂಪತ್ಯದಲ್ಲಿ ಪ್ರೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಆಲಸ್ಯ ಮನೋಭಾವ, ಕೋಪ ಜಾಸ್ತಿ, ಕಳೆದುಕೊಂಡದನ್ನು ಮರಳಿ ಪಡೆಯಿರಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಅನಾರೋಗ್ಯ.
ತುಲಾರಾಶಿ
ಕಾರ್ಯಸಾಧನೆಗೆ ಅಡ್ಡಿ ಆತಂಕಗಳು ನಿವಾರಣೆ, ವ್ಯಾಪಾರಸ್ಥರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ ಕೆಲಸ ಕಾರ್ಯಗಳು ಸಕಾಲದಲ್ಲಿ ಆಗುವುದಿಲ್ಲ, ಮನಸ್ಸಿನಲ್ಲಿ ಗೊಂದಲ, ಹಳೆ ಸಾಲ ಮರು ಪಾವತಿಸುವಿರಿ, ಶುಭ ಸುದ್ದಿ ಕೇಳುವಿರಿ, ಮನಶಾಂತಿ, ಶತ್ರು ಭಾದೆ.
ವೃಶ್ಚಿಕರಾಶಿ
ಭಿನ್ನಾಭಿಪ್ರಾಯ ಹೆಚ್ಚಲಿದೆ, ಕುಟುಂಬದಲ್ಲಿ ಶಾಂತಿ, ಹಿರಿಯರ ಸಲಹೆಯನ್ನು ಆಲಿಸಿ, ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಬೇಡಿಕೆ ಈಡೇರಿಕೆಗೆ ಕಿರಿಕಿರಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ, ಆಕಸ್ಮಿಕ ಖರ್ಚು.
ಧನಸುರಾಶಿ
ಶತ್ರುಭಯ ನಿವಾರಣೆಯಾಗಲಿದೆ. ಶುಭವಾರ್ತೆಯನ್ನು ಕೇಳುವಿರಿ, ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ ತೋರುವಿರಿ, ಪಟ್ಟುಬಿಡದೇ ಹಿಡಿದ ಕೆಲಸ ಮಾಡಿಸಿ ಕೊಳ್ಳುವಿರಿ, ದುಷ್ಟರಿಂದ ದೂರವಿರಿ, ಶತ್ರು ಭಾದೆ, ಉದ್ಯೋಗದಲ್ಲಿ ಪ್ರಗತಿ.
ಮಕರರಾಶಿ
ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಹೊಸ ವ್ಯಾಪಾರ, ವ್ಯವಹಾರದಲ್ಲಿ ಅಲ್ಪ ಆದಾಯ, ಯಾರಿಗೂ ಸಾಲ ನೀಡಲು ಹೋಗಬೇಡಿ, ಪ್ರೀತಿ ಸಮಾಗಮ, ಅಧಿಕ ಖರ್ಚು, ಮಾತಿನ ಚಕಮುಕಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಭೋಗವಸ್ತು ಪ್ರಾಪ್ತಿ, ಧನಲಾಭ, ಸತ್ಕಾರ್ಯಾಸಕ್ತಿ.
ಕುಂಭರಾಶಿ
ದೂರ ಸಂಚಾರದಲ್ಲಿ ಅಧಿಕ ಲಾಭ ಕಂಡುಬರಲಿದೆ, ಉದ್ಯೋಗ ರಂಗದಲ್ಲಿ ಭಿನ್ನಮತ ಶಮನವಾಗಲಿದೆ, ವಾಹನ ಖರೀದಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಬಾಕಿ ವಸೂಲಿ, ಧನಲಾಭ, ಯತ್ನ ಕಾರ್ಯಗಳಲ್ಲಿ ಜಯ, ಹಣಕಾಸಿನ ವಿಷಯದಲ್ಲಿ ಎಚ್ಚರ, ಅನಗತ್ಯವಾದ ಖರ್ಚು.
ಮೀನರಾಶಿ
ಸಾಮಾಜಿಕವಾಗಿ ಬೆರೆಯುವಿರಿ, ವ್ಯಾಪಾರದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ವಿದ್ಯಾರ್ಥಿಗಳು ಮುನ್ನಡೆ ಸಾಧಿಸುವರು, ಉದಾಸೀನತೆ ಮಾಡದಿರಿ, ದೂರ ಪ್ರಯಾಣ, ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತೆ, ಸುಖ ಭೋಜನ, ಮನಶಾಂತಿ.