ಭಾನುವಾರ, ಏಪ್ರಿಲ್ 27, 2025
HomehoroscopeHoroscope : ದಿನಭವಿಷ್ಯ : ಸಂಬಂಧದಲ್ಲಿ ಶಾಶ್ವತ ಬಿರುಕು ಮೂಡಲಿದೆ

Horoscope : ದಿನಭವಿಷ್ಯ : ಸಂಬಂಧದಲ್ಲಿ ಶಾಶ್ವತ ಬಿರುಕು ಮೂಡಲಿದೆ

- Advertisement -

ಮೇಷರಾಶಿ
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ, ಆಧ್ಯಾತ್ಮದ ಕಡೆಗೆ ಮನಸ್ಸು ವಾಲಲಿದೆ. ಜೀವನದ ಸಮಸ್ಯೆ ಪರಿಹಾರಕ್ಕೆ ಬೆಳಕೊಂದು ಮೂಡಲಿದೆ, ಆರ್ಥಿಕವಾಗಿ ನೀವು ಬಲಗೊಳ್ಳುವಿರಿ, ಹಣಗಳಿಸಲು ಹಲವಾರು ಅವಕಾಶಗಳನ್ನು ಕಾಣುತ್ತೀರಿ, ಆರ್ಥಿಕವಾಗಿ ನೀವು ಬಲಗೊಳ್ಳುತ್ತೀರಿ, ಗ್ರಹ, ನಕ್ಷತ್ರಗಳು ಲಾಭದಾಯಕ ಸ್ಥಾನದಲ್ಲಿವೆ. ನೀವು ಬಯಸಿರುವುದು ನಿಮಗೆ ಧಕ್ಕಲಿದೆ.

ವೃಷಭರಾಶಿ
ಅಗಾಧ ಆತ್ಮವಿಶ್ವಾಸ ನಿಮ್ಮ ಗೆಲುವಿಗೆ ದಾರಿಯನ್ನು ಮಾಡಿಕೊಡಲಿದೆ, ಕೆಲಸದ ವೇಳಾಪಟ್ಟಿಯ ನಡುವಲ್ಲೂ ವಿಶ್ರಾಂತಿಯನ್ನು ಪಡೆದುಕೊಳ್ಳಿ, ಆರ್ಥಿಕ ಸಂಕಷ್ಟವನ್ನು ನೀವು ಎದುರಿಸಬೇಕಾಗುತ್ತದೆ, ಭವಿಷ್ಯದ ಅನೇಕ ತೊಂದರೆಗಳು ಎದುರಾಗಲಿದೆ, ಸಂಗಾತಿಯನ್ನು ಅರ್ಥ ಮಾಡಿಕೊಳ್ಳಿ, ನೀವು ತೊಂದರೆಗೆ ಸಿಲುಕ ಬಹುದು.

ಮಿಥುನರಾಶಿ
ಕುಟುಂಬದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನೀವು ಏನಾದರೂ ಮಾಡಬೇಕು. ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವವರಿಗೆ ಹಣಕಾಸಿನ ಸಹಾಯ ದೊರೆಯಲಿದೆ, ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸಲಿದ್ದಾರೆ, ಪ್ರಯಾಣಕಕೆ ಉತ್ತಮವಾದ ದಿನವಲ್ಲ, ದೂರ ಪ್ರಯಾಣ ನಿಮಗೆ ಲಾಭವನ್ನು ತರಲಿದೆ.

ಕರ್ಕಾಟಕರಾಶಿ
ಹಣದ ಸ್ಥಿತಿ ಮತ್ತು ಹಣಕಾಸಿನ ಸಮಸ್ಯೆಗಳು ಉದ್ವಿಗ್ನತೆಯ ಮೂಲವಾಗಿದೆ. ನಿಕಟ ಸಂಬಂಧಿಯ ಸಹಾಯದಿಂದ ನಿಮ್ಮ ವ್ಯವಹಾರವನ್ನು ಉತ್ತಮವಾಗಿ ಕಾರ್ಯನಿರ್ವಹಿಸಬಹುದು, ಆರ್ಥಿಕವಾಗಿ ಪ್ರಯೋಜನವನ್ನು ಪಡೆಯಲಿದ್ದೀರಿ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ನೀವು ಅದೃಷ್ಟವಂತರು, ಕೆಲಸದ ಸ್ಥಳದಲ್ಲಿ ಭಾವನಾತ್ಮಕ ಸಂಘರ್ಷದಿಂದ ದೂರವಿರಿ.

ಸಿಂಹರಾಶಿ
ದ್ವೇಷದ ಭಾವನೆಯು ದುಬಾರಿಯಾಗಿ ಪರಿಣಮಿಸಬಹುದು, ನಿಮ್ಮ ಸಹಿಷ್ಣುತೆಯ ಶಕ್ತಿಯನ್ನು ದುರ್ಬಲಗೊಳಿಸುವುದು, ನಿಮ್ಮ ವಿವೇಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ, ಸಂಬಂಧದಲ್ಲಿ ಶಾಶ್ವತ ಬಿರುಕು ಸೃಷ್ಟಿಯಾಗುತ್ತದೆ, ವ್ಯಾಪಾರದಲ್ಲಿ ಲಾಭವು ದೊರೆಯಲಿದೆ, ಸಾಗರೋತ್ತರ ಸಂಬಂಧಿಯಿಂದ ಉಡುಗೊರೆ ದೊರೆಯಲಿದೆ.

ಕನ್ಯಾರಾಶಿ
ವ್ಯಕ್ತಿತ್ವವನ್ನು ಸುಧಾರಿಸಲು ಗಂಭೀರ ಪ್ರಯತ್ನಗಳನ್ನು ಮಾಡಿ. ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಹಣವನ್ನು ವ್ಯಯ ಮಾಡಬೇಕಾಗುತ್ತದೆ, ಪ್ರಯಾಣಕ್ಕೆ ಇಂದು ಉತ್ತಮ ದಿನವಲ್ಲ, ಸಂಗಾತಿಯೊಂದಿಗೆ ಉತ್ತಮ ದಿನವನ್ನು ಕಳೆಯುವಿರಿ, ಅಲ್ಪಾವಧಿಯ ಕಾರ್ಯಕ್ರಮಗಳಿಗೆ ನಿಮ್ಮನ್ನು ತೊಡಗಿಸಿಕೊಳ್ಳಿ.

ತುಲಾರಾಶಿ
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಲು ಬಿಡಬೇಡಿ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯವನ್ನು ತರುತ್ತವೆ. ಪ್ರೀತಿಪಾತ್ರರು ಅಥವಾ ಸಂಗಾತಿಯಿಂದ ಉತ್ತಮ ಸಂವಹನ ಅಥವಾ ಸಂದೇಶವು ಇಂದು ನಿಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ. ತೃಪ್ತಿದಾಯಕ ಫಲಿತಾಂಶಗಳನ್ನು ಪಡೆಯಲು ಯೋಚಿಸಿ.

ವೃಶ್ಚಿಕರಾಶಿ
ಶಾಶ್ವತ ಯೌವನ ರಹಸ್ಯವಾಗಿರುತ್ತದೆ, ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಹಣವನ್ನು ಗಳಿಸಲು ಇಂದು ಸಾಧ್ಯವಾಗುತ್ತದೆ, ಪಾರ್ಟಿ ಮಾಡಲು ಯೋಚಿಸುತ್ತಿದ್ದರೆ ಸ್ನೇಹಿತರು ಜೊತೆಯಾಗಲಿದ್ದಾರೆ, ಕಠಿಣ ಪರಿಸ್ಥಿತಿಯನ್ನು ಎದುರಿಸಲು ನೀವು ಸಿದ್ದರಾಗಬೇಕು, ಬಿಡುವಿನ ಸಮಯವನ್ನು ಮಕ್ಕಳೊಂದಿಗೆ ಕಳೆಯಲು ಪ್ರಯತ್ನಿಸಿ.

ಧನಸುರಾಶಿ
ನೀವಿಂದು ಆರಾಮವಾಗಿರುತ್ತೀರಿ, ದೋಷಪೂರಿತ ಎಲೆಕ್ಟ್ರಾನಿಕ್‌ ವಸ್ತುವನ್ನು ಸರಿಪಡಿಸಲು ಹಣವನ್ನು ವ್ಯಯಿಸಬೇಕಾಗುತ್ತದೆ, ಕುಟುಂಬದ ಸದಸ್ಯರ ಸಂತೋಷದ ಸ್ವಭಾವ ಮನೆಯ ವಾತಾವರಣವನ್ನು ಹಗುರಗೊಳಿಸುತ್ತದೆ, ಅವಕಾಶಗಳು ನಿಮಗೆ ದೊರೆಯಲಿದೆ, ಗುಪ್ತ ಎದುರಾಳಿಯನ್ನು ನೀವು ಎದುರಿಸಲಿದ್ದೀರಿ.

ಮಕರರಾಶಿ
ಮಜರಂಜನೆ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಕಠಿಣ ಪರಿಶ್ರಮವು ನಿಮ್ಮ ಗಮನಕ್ಕೆ ಬರಲಿದೆ, ಆರ್ಥಿಕವಾಗಿ ಪ್ರತಿಫಲಗಳು ದೊರೆಯಲಿದೆ, ಅಂಚೆ ಮೂಲಕ ಬರುವ ಪತ್ರವೊಂದು ಇಡೀ ಕುಟುಂಬಕ್ಕೆ ಸಂತೋಷದ ಸುದ್ದಿಯನ್ನು ತರಲಿದೆ, ಅಗಾಧವಾದ ಆತ್ಮವಿಶ್ವಾದ ನಿಮಗೆ ಲಾಭವನ್ನು ತರಲಿದೆ.

ಇದನ್ನೂ ಓದಿ : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

ಇದನ್ನೂ ಓದಿ : ಸಕಲ ರೋಗಕ್ಕೂ ಇಲ್ಲಿದೆ ಪರಿಹಾರ : ನಾಗದೋಷ ಪರಿಹರಿಸುತ್ತಾನೆ ಶಾಸ್ತಾರ ಸುಬ್ರಹ್ಮಣ್ಯೇಶ್ವರ

ಇದನ್ನೂ ಓದಿ : ಶಿವರಾತ್ರಿಯಲ್ಲಿ ಪೂಜೆ ಮಾಡಿದ್ರೆ ಒಲಿತಾನೆ ಶಿವ ; ಸಾವಿರ ಲಿಂಗವಾಗಿ ನೆಲೆನಿಂತ ಮಹಾದೇವ

ಕುಂಭರಾಶಿ
ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಧೂಮಪಾನವನ್ನು ತ್ಯಜಿಸಿ, ಮದ್ಯಪಾನ ಮತ್ತು ಸಿಗರೇಟಿಗಾಗಿ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ, ಆರೋಗ್ಯ ಕೆಡಲಿದೆ, ಆರ್ಥಿಕ ಪರಿಸ್ಥಿತಿಯು ಹದಗೆಡಲಿದೆ, ಸಹೋದರರು ಅಗತ್ಯಕ್ಕಿಂತಲೂ ಹೆಚ್ಚಿನ ಸಹಕಾರವನ್ನು ನೀಡಲಿದ್ದಾರೆ, ಅನುಭವಿ ಜನರ ಜೊತೆಗೆ ಬೆರೆಯಿರಿ.

ಮೀನರಾಶಿ
ದುರ್ಬಲವಾದ ದೇಹವು ಮನಸ್ಸನ್ನು ದುರ್ಬಲಗೊಳಿಸುತ್ತದೆ, ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಸಂಪೂರ್ಣ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ನೀವು ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಿ, ಹಣಕಾಸಿನ ಸಮಸ್ಯೆಯಿಂದ ನೀವು ಮುಕ್ತರಾಗಲಿದ್ದೀರಿ, ನೀವು ಆಸಕ್ತಿದಾಯಕ ವ್ಯಕ್ತಿಗಳನ್ನು ಭೇಟಿಯಾಗುವಿರಿ. ವೈವಾಹಿಕ ಜೀವನವನ್ನು ಉತ್ತಮಗೊಳಿಸುವ ಕಡೆಗೆ ಗಮನಹರಿಸಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular