ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ : ದುಡುಕಿನ ವರ್ತನೆಯಿಂದ ಕೆಲಸಕ್ಕೆ ಹಾನಿ

Horoscope : ದಿನಭವಿಷ್ಯ : ದುಡುಕಿನ ವರ್ತನೆಯಿಂದ ಕೆಲಸಕ್ಕೆ ಹಾನಿ

- Advertisement -

ಮೇಷರಾಶಿ
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಬಹುದು. ದೈಹಿಕ ವ್ಯಾಯಾಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಹಣವನ್ನು ಸಂಗ್ರಹಿಸುವ, ಉಳಿಸುವ ಕಲೆಯನ್ನು ಕಲಿಯುವಿರಿ, ನಿಮ್ಮ ಭಾವನೆಯನ್ನು ಹಂಚಿಕೊಳ್ಳಲು ಇದು ಸರಿಯಾದ ಸಮಯವಲ್ಲ, ಮನೆಯಿಂದ ದೂರ ಪ್ರಯಾಣದ ವೇಳೆಯಲ್ಲಿ ಎಚ್ಚರವಾಗಿರಿ, ಸಂಗಾತಿ ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು.

ವೃಷಭರಾಶಿ
ದೈಹಿಕ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಆರ್ಥಿಕವಾಗಿ, ನೀವು ಸದೃಢರಾಗಿರುತ್ತೀರಿ, ಗ್ರಹಗಳು ಮತ್ತು ನಕ್ಷತ್ರಗಳ ಲಾಭದಾಯಕ ಸ್ಥಾನದಿಂದ ಹಣಗಳಿಕೆಗೆ ಹಲವು ಅವಕಾಶಗಳು ಒದಗಿ ಬರಲಿದೆ, ಮನೆಗೆ ಇಂದು ಭೇಟಿ ನೀಡುವ ಸಾಧ್ಯತೆಯಿದೆ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ.

ಮಿಥುನರಾಶಿ
ನಿಮ್ಮ ದುಡುಕಿನ ವರ್ತನೆಯು ಸ್ನೇಹಿತರಿಗೆ ಸಮಸ್ಯೆಯನ್ನುಂಟು ಮಾಡಲಿದೆ, ಆರ್ಥಿಕವಾಗಿ ಸದೃಢರಾಗುವಿರಿ, ಸಾಲವಾಗಿ ನೀಡಿರುವ ಹಣ ಇಂದು ನಿಮ್ಮ ಕೈಸೇರುವ ಸಾಧ್ಯತೆಯಿದೆ, ಕುಟುಂಬ ಸದಸ್ಯರ ಪ್ರೀತಿಯನ್ನು ನೀವು ಪಡೆಯಲಿದ್ದೀರಿ, ದೂರದ ಪ್ರವಾಸ ನಿಮಗೆ ಸಂತೋಷವನ್ನು ತರಲಿದೆ, ಅತಿಯಾದ ಕೆಲಸ ನಿಮಗೆ ಮಾನಸಿಕ ಕಿರಿಕಿರಿಯನ್ನುಂಟು ಮಾಡಲಿದೆ.

ಕರ್ಕಾಟಕರಾಶಿ
ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವಿರಿ, ದುಶ್ಚಟಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಹಾಳಾಗದಂತೆ ಎಚ್ಚರಿಕೆ ವಹಿಸಿ, ಮನೆಯ ವಾತಾವರಣವನ್ನು ಬದಲಾಯಿಸಿ ಕೊಳ್ಳಿ, ಆತ್ಮೀಯ ಸ್ನೇಹಿತರು ನಿಮಗೆ ಅಮೂಲ್ಯವಾದ ಉಡುಗೊರೆಯನ್ನು ನೀಡಲಿದ್ದಾರೆ, ವೈವಾಹಿಕ ಜೀವನಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿ, ಹಳೆಯ ಸ್ನೇಹಿತರ ಭೇಟಿಯಿಂದ ನಿಮಗೆ ಸಂತಸ ಸಿಗಲಿದೆ.

ಸಿಂಹರಾಶಿ
ಮನಸ್ಸು ದುರ್ಬಲವಾಗಲಿದೆ, ಶಕ್ತಿಯನ್ನು ಪಡೆಯಲು ವಿಶ್ರಾಂತಿಯನ್ನು ಪಡೆದುಕೊಳ್ಳಿ, ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಿ, ಪೋಷಕರೊಬ್ಬರು ಹಣ ಉಳಿಸುವ ಬಗ್ಗೆ ಮಾರ್ಗ ದರ್ಶನ ನೀಡಲಿದ್ದಾರೆ, ಬಾಕಿ ಇರುವ ಕಾರ್ಯವನ್ನು ಬೇಗನೆ ಮುಗಿಸಿ, ಧನಾತ್ಮಕ ಚಿಂತನೆಗಳು ಫಲವನ್ನು ಕೊಡಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ವ್ಯವಹಾರಿಕವಾಗಿ ಲಾಭವನ್ನು ಕಾಣುವಿರಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಇದನ್ನೂ ಓದಿ : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

ಕನ್ಯಾರಾಶಿ
ಅತಿಯಾದ ಖರ್ಚು, ಸಂಶಯಾಸ್ಪದ ಹಣಕಾಸಿನ ಯೋಜನೆಗಳನ್ನು ತಪ್ಪಿಸಿ, ಬಿಡುವಿನ ಸಮಯವನ್ನು ನಿಸ್ವಾರ್ಥ ಸೇವೆಗೆ ವಿನಿಯೋಗಿಸಿ, ಕುಟುಂಬದವರ ಜೊತೆಗೆ ಸಂತಸದ ಸಮಯವನ್ನು ಕಳೆಯುವಿರಿ, ಪ್ರೇಮಿಗಳು ಇಂದು ಮದುವೆ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ, ಇತರರಿಂದ ಟೀಕೆಗಳನ್ನು ಕೇಳುವಿರಿ, ದೂರದ ಬಂಧುಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ, ಆಧ್ಯಾತ್ಮದ ಕಡೆ ಒಲವು.

ತುಲಾರಾಶಿ
ದಿನದ ಸಂತೋಷಕ್ಕಾಗಿ ಮಾನಸಿಕ ಒತ್ತಡವನ್ನು ತಪ್ಪಿಸಿ, ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ, ಹಣದ ಕೊರತೆ ಉಂಟಾಗದಂತೆ ಎಚ್ಚರಿಕೆವಹಿಸಿ. ಹಳೆಯ ಸ್ನೇಹಿತರು ಸಂಜೆಯ ವೇಳೆಗೆ ಭೇಟಿ ನೀಡುವ ಸಾಧ್ಯತೆ, ಇತರರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ, ವಿಶ್ವಾಸದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಿರಿ, ದಿನಾಂತ್ಯಕ್ಕೆ ಶುಭವಾರ್ತೆಯನ್ನು ಕೇಳುವಿರಿ, ಉದ್ಯೋಗ ಆಕಾಂಕ್ಷಿಗಳ ಪಾಲಿಗೆ ಶುಭದಿನ.

ವೃಶ್ಚಿಕರಾಶಿ
ಬಿಡುವಿಲ್ಲದ ವೇಳಾಪಟ್ಟಿ, ಆರೋಗ್ಯದಲ್ಲಿ ಸುಧಾರಣೆ, ಭವಿಷ್ಯದ ಯೋಜನೆಗಾಗಿ ಹೂಡಿದ ಹಣಕಾಸು ಇಂದು ಲಾಭವನ್ನು ತರಲಿದೆ, ಕುಟುಂಬದ ಸದಸ್ಯರ ಬೇಡಿಕೆಗೆ ಸ್ಪಂದಿಸಿ, ಪ್ರೇಮಿಗಳ ಪಾಲಿಗೆ ಶುಭದಿನ, ಮೇಲಾಧಿಕಾರಿಗಳಿಂದ ಪ್ರಶಂಸೆ, ಸಂಗಾತಿಯ ನಡುವೆ ವಾದವನ್ನು ಸೃಷ್ಟಿಸಬಹುದು. ಧಾರ್ಮಿಕ ಕ್ಷೇತ್ರದ ಕಡೆಗೆ ಹೆಚ್ಚಿನ ಆಸಕ್ತಿ, ಹೊಸ ಅವಕಾಶವೊಂದು ನಿಮಗೆ ಲಭ್ಯವಾಗಲಿದೆ.

ಧನಸುರಾಶಿ
ಕುಟುಂಬದ ಹಿರಿಯರ ಸಲಹೆಯನ್ನು ಆಲಿಸಿ, ಉಳಿತಾಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿ, ಅಗತ್ಯ ವಸ್ತುಗಳ ಖರೀದಿಗೆ ಹಣ ವ್ಯಯ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜನ ರನ್ನು ಭೇಟಿಯಾಗುವಿರಿ, ಬಿಡುವಿನ ವೇಳೆಯಲ್ಲಿ ಹವ್ಯಾಸಗಳ ಕಡೆಗೆ ಗಮನ ಹರಿಸಿ, ಶಿಕ್ಷಕರ ಜೊತೆಗೆ ಮುಕ್ತವಾಗಿ ಮಾತನಾಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ವಿದ್ಯಾರ್ಥಿಗಳ ಪಾಲಿಗೆ ಶುಭದಾಯಕ.

ಮಕರರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಸ್ನೇಹಿತರು ಇಂದು ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಕೇಳುವರು, ಮಕ್ಕಳ ಅಧ್ಯಯನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೆಲವು ಸಮಸ್ಯೆಗಳಿ ಪರಿಹಾರವನ್ನು ಕಂಡುಕೊಳ್ಳುವಿರಿ, ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಇಂದು ಮುಕ್ತಾಯಗೊಳ್ಳಲಿವೆ, ಜೀವನ ಸಂಗಾತಿಯ ಅಗತ್ಯತೆಗಳನ್ನು ಪೂರೈಸಲು ಸಕಾಲ, ದುಶ್ಚಟಗಳಿಂದ ದೂರವಿರಿ.

ಕುಂಭರಾಶಿ
ಆರೋಗ್ಯದ ವೃದ್ದಿಗಾಗಿ ನಡಿಗೆಯನ್ನು ಅನುಸರಿಸಿ, ಮನೆಯಿಂದ ದೂರ ಉಳಿಯುವ ಸಾಧ್ಯತೆ, ಹಣ ಮತ್ತು ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ, ಯಾವುದೇ ಸದಸ್ಯರ ನಡವಳಿಕೆ ಬದಲಾವಣೆ ಆಗದಂತೆ ನೋಡಿಕೊಳ್ಳಿ, ಅಮೂಲ್ಯ ವಸ್ತುಗಳ ಖರೀದಿಗೆ ಹಣ ವ್ಯಯ, ನಿಮ್ಮ ಭಾವನೆಗೆ ಇಂದು ಬೆಲೆ ಸಿಗಲಿದೆ, ಆಪ್ತ ಸ್ನೇಹಿತರ ಬಳಿಯಲ್ಲಿ ದುಖಃವನ್ನು ಹಂಚಿಕೊಳ್ಳಿ, ಮನಸು ನಿರಾಳವಾಗಲಿದೆ.

ಮೀನರಾಶಿ
ಆರ್ಥಿಕ ಸಮಸ್ಯೆಯಿಂದಾಗಿ ಹಲವು ಕೆಲಸಗಳು ಸ್ಥಗಿತಗೊಳ್ಳಲಿದೆ, ವಾಹನ ಚಾಲನೆಯ ವೇಳೆಯಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ, ನಿಮ್ಮ ಅಗತ್ಯಗಳನ್ನು ಸಂಗಾತಿ ಪೂರೈಸಲಿ ದ್ದಾರೆ. ಹೊಸ ಹೂಡಿಕೆಯಿಂದ ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ, ಸ್ನೇಹಿತರೊಂದಿಗೆ ನಿಷ್ಟುರದಿಂದ ನಷ್ಟ, ಸಹೋದ್ಯೋಗಿಗಳ ಕಿರಿಕಿರಿ ಹೆಚ್ಚಾಗಲಿದೆ, ಹಳೆಯ ಬಾಕಿ ವಸೂಲಿಯಿಂದ ಮನಸಿಗೆ ಸಂತಸವಾಗಲಿದೆ.

ಇದನ್ನೂ ಓದಿ : Throat Pain : ಗಂಟಲು ನೋವಿಗೆ ಮನೆಯಲ್ಲಿಯೇ ಮಾಡಿ ಮದ್ದು

ಇದನ್ನೂ ಓದಿ : ಸಾನ್ವರ್ ನಲ್ಲಿದ್ದಾನೆ ಉಲ್ಟಾ ಹನುಮಾನ್ : ಹನುಮನೇಕೆ ಇಲ್ಲಿ ತಲೆ ಕೆಳಗಾದ ಗೊತ್ತಾ?

(Horoscope today astrological prediction for October 17)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular