ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ : ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಅಧಿಕ ಲಾಭ

Horoscope : ದಿನಭವಿಷ್ಯ : ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಅಧಿಕ ಲಾಭ

- Advertisement -

ಮೇಷರಾಶಿ
ನೀವಿಂದು ತಮಾಷೆಯ ಮನಸ್ಥಿತಿಯಲ್ಲಿರುತ್ತೀರಿ, ನಿಮ್ಮ ಮಗುವಿನ ಸ್ವಭಾವವು ಹೊರ ಹೊಮ್ಮಲಿದೆ, ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಿರಿ, ನಿಮ್ಮ ದುಃಖ ಸಂಗಾತಿಗೆ ಒತ್ತಡವನ್ನು ನೀಡಬಹುದು, ಸಹೋದ್ಯೋಗಿಗಳ ಸಹಕಾರ, ಬಿಡುವಿಲ್ಲದ ಜೀವನ, ಮೇಲಾಧಿಕಾರಿಗಳಿಂದ ಪ್ರಶಂಸೆ, ಹೊಂದಾಣಿಕೆಯಿಂದ ಲಾಭ.

ವೃಷಭರಾಶಿ
ಹಣ ನಿಮ್ಮ ಮನಸ್ಸನ್ನು ಉತ್ಕೃಷ್ಟಗೊಳಿಸುತ್ತದೆ, ಕುಟುಂಬ ಸದಸ್ಯರ ಜೊತೆಗೆ ಕಠಿಣವಾಗಿ ವರ್ತಿಸಬೇಡಿ, ಸಂಜೆಯ ವೇಳೆಗೆ ದೂರದ ಸ್ಥಳದಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ, ವೈವಾಹಿಕ ಜೀವನ ಅತ್ಯಂತ ಸುಖಮಯವಾಗಿ ಇರಲಿದೆ, ಸಮಯ ಹಾಗೂ ಹಣವನ್ನು ಗೌರವದಿಂದ ನೋಡಿ, ಹೊಸ ಹೂಡಿಕೆ ಸದ್ಯಕ್ಕೆ ಬೇಡ.

ಮಿಥುನರಾಶಿ
ಮನೆಯ ಚಿಂತೆ ನಿಮ್ಮನ್ನು ಇಂದು ಚಿಂತೆಗೀಡು ಮಾಡಲಿದೆ, ಬೆಟ್ಟಿಂಗ್‌ ಅಥವಾ ಜೂಜಾಟದಲ್ಲಿ ಅಧಿಕ ವ್ಯಯ, ಕುಟುಂಬಸ್ಥರು, ಮಕ್ಕಳ ಜೊತೆಗೆ ಸಂತಸದ ಕ್ಷಣ, ಹೊಸ ಉದ್ಯಮ ಹಾಗೂ ಪಾಲುದಾರರಾಗಲು ಬಯಸುವಿರಿ, ಸಹೋದ್ಯೋಗಿಗಳ ಜೊತೆಗೆ ಹಲವು ರೀತಿಯಲ್ಲಿ ಭಿನ್ನಾಭಿಪ್ರಾಯ ಎದುರಾಗಲಿದೆ, ದಿನದ ಆರಂಭದಲ್ಲಿಯೇ ಉದ್ವಿಗ್ನದ ಉಂಟಾಗದಂತೆ ಎಚ್ಚರಿಕೆ ವಹಿಸಿ.

ಕರ್ಕಾಟಕರಾಶಿ
ಪತ್ನಿಯ ವ್ಯವಹಾರದಲ್ಲಿ ಮೂಗನ್ನು ಚುಚ್ಚಬೇಡ, ಸ್ವತಃ ವ್ಯವಹಾರವನ್ನು ಗೌರವಿಸುವುದು ಉತ್ತಮ, ಹಣ ಉಳಿಕೆ ಮಾಡುವ ಹಲವು ಮಾರ್ಗಗಳು ಗೋಚರಕ್ಕೆ ಬರಲಿದೆ, ಇಂದು ನೀವು ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗಲಿದ್ದೀರಿ, ಮನರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ, ಹೊರಗಿನವರ ಹಸ್ತಕ್ಷೇಪ ವೈವಾಹಿಕ ಜೀವನದಲ್ಲಿ ಗೊಂದಕ್ಕೆ ಕಾರಣವಾಗಲಿದೆ.

ಸಿಂಹರಾಶಿ
ಆಸ್ತಿ ವಿವಾದ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಸಮಸ್ಯೆ ಎದುರಾಗಲಿದೆ, ಸಂಗಾತಿ ನಿಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ, ಕೋಪ ಗೊಳ್ಳುವರು, ಮಕ್ಕಳಿಂದ ನೆಮ್ಮದಿ, ದೂರದ ಸಂಬಂಧಿಕರು ಮನೆಗೆ ಭೇಟಿ ನೀಡುವ ಸಾಧ್ಯತೆ, ವ್ಯವಹಾರದಲ್ಲಿ ಲಾಭ ಕಂಡುಬರಲಿದೆ, ಆಧ್ಯಾತ್ಮದ ಕಮಗೆ ಒಲವು, ದಿನಾಂತ್ಯಕ್ಕೆ ಶುಭವಾರ್ತೆಯನ್ನು ಕೇಳುವಿರಿ, ಅಧ್ಯಯನಕ್ಕಾಗಿ ವಿದೇಶಿ ಪ್ರವಾಸ ಸಾಧ್ಯತೆ.

ಇದನ್ನೂ ಓದಿ : ಹೆಚ್ಚು ಸೊಳ್ಳೆ ಕಡಿತಕ್ಕೆ ನಿಮ್ಮರಕ್ತದ ಗ್ರೂಪ್ ಕೂಡ ಕಾರಣ ! ಯಾವ ಬ್ಲಡ್‌ ಗ್ರೂಪಿನವರಿಗೆ ಹೆಚ್ಚು ಸೊಳ್ಳೆ ಕಚ್ಚುತ್ತೆ ಗೊತ್ತಾ ?

ಕನ್ಯಾರಾಶಿ
ದೇಹವನ್ನು ಪಿಟ್‌ ಇರಲು ವ್ಯಾಯಾಮವನ್ನು ರೂಢಿಸಿಕೊಳ್ಳಿ, ನಿಮ್ಮ ಆರ್ಥಿಕ ಸಂಕಷ್ಟಗಳು ಇಂದು ಪರಿಹಾರವಾಗಲಿದೆ, ಕುಟುಂಬ ಸದಸ್ಯರಿಂದ ತೊಂದರೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿ, ಹಳೆಯ ಹೂಡಿಕೆಯೊಂದು ನಿಮಗೆ ಲಾಭವನ್ನು ತಂದು ಕೊಡಲಿದೆ, ಏನಾದರೂ ಸಾಧಿಸುವ ನಿರೀಕ್ಷೆ ಹೊಂದಿದ್ದೀರಿ,

ತುಲಾರಾಶಿ
ನೀವಿಂದು ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಲಿದ್ದಾರೆ, ಹಣದ ವಿಚಾರದಲ್ಲಿ ನಷ್ಟವಾಗುವ ಸಾಧ್ಯತೆಯಿದೆ. ಪ್ರೀತಿ ಪಾತ್ರರ ವಿದ್ಯಾರ್ಥಿಗಳು ಅಗತ್ಯಕ್ಕಿಂತ ಅಧಿಕ ಟಿವಿ ವೀಕ್ಷಣೆ ಮಾಡಲಿದ್ದಾರೆ, ಸೌಂದರ್ಯದ ಕೊರತೆ ವೈವಾಹಿಕ ಜೀವನದಲ್ಲಿ ತೊಡಕಾಗುವ ಸಾಧ್ಯತೆ, ವೈವಾಹಿಕ ಜೀವನದಲ್ಲಿ ಉಸಿರುಗಟ್ಟಿರುವ ವಾತಾವರಣ ಕಂಡುಬರುವ ಸಾಧ್ಯತೆ.

ವೃಶ್ಚಿಕರಾಶಿ
ಆರೋಗ್ಯದ ದೃಷ್ಟಿಯಿಂದ ಜಾಸ್ತಿ ಕೂಗಾಡಬೇಡಿ, ಹಣದ ವಿಚಾರದಲ್ಲಿಂದು ಗ್ರಹಗಳ ಇಂದು ನಿಮಗೆ ಅನುಕೂಲವನ್ನು ತರುವುದಿಲ್ಲ, ಹಣವನ್ನು ಸದೃಢವಾಗಿರಲು, ನೀವು ಈ ಹಿಂದೆ ಮಾಡಿದ ತಪ್ಪು ನಿಮಗೆ ಸಂಕಷ್ಟವನ್ನು ತರಲಿದೆ, ಆರೋಗ್ಯದ ವಿಚಾರದಲ್ಲಿಂದು ಎಚ್ಚರವಾಗಿರಿ, ಹೊಂದಾಣಿಕೆ ವ್ಯವಹಾರಿಕವಾಗಿ ಲಾಭವನ್ನು ತರಲಿದೆ, ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ.

ಇದನ್ನೂ ಓದಿ : Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು ?

ಧನಸುರಾಶಿ
ಅಗಾಧವಾದ ವಿಶ್ವಾಸ ಹಾಗೂ ವೇಳಾಪಟ್ಟಿ ವಿಶ್ರಾಂತಿ ಪಡೆಯಲು ಕಾಲಾವಶಕಾಶ ನೀಡಲಿದೆ, ಪ್ರಭಾವಿ ವ್ಯಕ್ತಿಯೋರ್ವರನ್ನು ಭೇಟಿಯಾಗುವಿರಿ, ಮೇಲಾಧಿಕಾರಿಗಳ ಬಗ್ಗೆ ಭಯ ಬೇಡ, ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ, ಸ್ನೇಹಿತರ ಭೇಟಿ ಸಾಧ್ಯತೆ, ಕೃಷಿ ಕಾಯಕ ಮಾಡುವವರಿಗೆ ಅಧಿಕ ಲಾಭ, ಸಂಗಾತಿಯಿಂದ ಸಹಕಾರ ದೊರೆಯಲಿದೆ.

ಮಕರರಾಶಿ
ಆರೋಗ್ಯವು ಇಂದು ಪರಿಪೂರ್ಣವಾಗಿರಲಿದೆ, ಕುಟುಂಬದ ಹಿರಿಯರಿಂದ ಹಣಕಾಸಿನ ಸಹಕಾರ ದೊರೆಯಲಿದೆ, ದೂರದ ಸಂಬಂಧಿಗಳಿಂದ ಅನಿರೀಕ್ಷಿಯ ಶುಭ ಸುದ್ದಿಯನ್ನು ಕೇಳುವಿರಿ, ಕುಟುಂಬಕ್ಕೆ ಸಂತಸ ನೀಡಲಿದೆ, ಪ್ರೀತಿ ಪಾತ್ರರ ನಡವಳಿಕೆ ಇಂದು ನಿಮಗೆ ಬೇಸರವನ್ನು ತರಿಸಲಿದೆ, ದೂರ ಪ್ರಯಾಣವು ಇಂದು ನಿಮಗೆ ಆಹ್ಲಾದಕರ ಅನುಭವವನ್ನು ನೀಡಲಿದೆ, ಯೋಜನೆಯನ್ನು ರೂಪಿಸುವ ಮೊದಲು ಯೋಚಿಸಿ.

ಕುಂಭರಾಶಿ
ಪ್ರಭಾವಶಾಲಿ ಜನರ ಭೇಟಿಯಿಂದ ಅಧಿಕ ಲಾಭ, ತಾತ್ಕಾಲಿಕ ಸಾಲ ಪಡೆಯುವುದನ್ನು ನಿರ್ಲಕ್ಷಿಸಿ, ಅನಿರೀಕ್ಷಿತ ಜವಾಬ್ದಾರಿಗಳು ಇದೀಗ ನಿಮ್ಮ‌ ಹೆಗಲೇರಿದೆ, ಪಾಲುದಾರಿಕೆ ವ್ಯವಹಾರದ ಕಡೆಗೆ ಮನಸ್ಸು ವಾಲಲಿದೆ, ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಬಯಸುವಿದಿ, ಪಾಲುದಾರರಿಂದ ವಿರೋಧ ಎದುರಿಸುವ ಸಾಧ್ಯತೆಯಿದೆ,

ಮೀನರಾಶಿ
ಹೃದ್ರೋಗಿಗಳು ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದಿಢೀರ್‌ ಮಾಡುವ ಹೂಡಿಕೆ ನಿಮಗೆ ನಷ್ಟವನ್ನು ನೀಡಲಿದೆ, ಮನೆಯ ಕರ್ತವ್ಯಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ, ವ್ಯಾಪಾರ, ವ್ಯವಹಾರಗಳನ್ನು ನೀವು ಎಚ್ಚರಿಕೆಯಿಂದ ವೀಕ್ಷಿಸಿ, ಕಟುಂಬ ಸದಸ್ಯರ ಜೊತೆಗೆ ಅನ್ಯೋನ್ಯತೆ, ಪುಣ್ಯಕ್ಷೇತ್ರಗಳ ಭೇಟಿಯಿಂದ ಸಂತಸ, ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ವ್ಯಾಪಾರ ಕ್ಷೇತ್ರದಲ್ಲಿ ಅಧಿಕ ಲಾಭ ದೊರೆಯಲಿದೆ.

ಇದನ್ನೂ ಓದಿ : ಮುಟ್ಟಿನ ದಿನದ ನಿಯಮದ ಒಳ ಅರ್ಥ, ಆ ದಿನಗಳ ಆರೈಕೆ ಹೇಗಿರಬೇಕು ಗೊತ್ತಾ ?

( Horoscope today astrological prediction for September 28)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular