ಮೇಷರಾಶಿ
ಮಾನಸಿಕ ಒತ್ತಡದ ನಡುವಲ್ಲೇ ಆರೋಗ್ಯ ಉತ್ತಮವಾಗಿರಲಿದೆ, ಹಣಕಾಸಿನ ವಹಿವಾಟು ದಿನವಿಡೀ ನಡೆಯುತ್ತದೆ, ದಿನದ ಅಂತ್ಯದ ವೇಳೆಗೆ ಶುಭ ಸುದ್ದಿಯೊಂದನ್ನು ಕೇಳುವಿರಿ, ನಿಕಟ ಜನರು ನಿಮ್ಮಿಂದ ಸಾಕಷ್ಟು ಉಳಿಸಲು ಸಾಧ್ಯವಾಗುತ್ತದೆ, ಗುರಿ ಸಾಧನೆಯ ಜೊತೆಗೆ ಹೆಚ್ಚಿನದನ್ನು ಪಡೆಯಲು ಪ್ರಯತ್ನಿಸಿ, ನಿರೀಕ್ಷಿತ ಫಲಿತಾಂಶಗಳು ದೊರೆಯಲಿದೆ.
ವೃಷಭರಾಶಿ
ಬುದ್ದಿವಂತ ಹೂಡಿಕೆಗಳು ಆದಾಯವನ್ನು ತರುತ್ತದೆ, ಕಷ್ಟಪಟ್ಟು ಗಳಿಸಿದ ಹಣ ಎಲ್ಲಿ ಇರಿಸಿದ್ದೀರಿ ಅನ್ನೋದನ್ನು ಖಚಿತ ಪಡಿಸಿಕೊಳ್ಳಿ, ಯಾವುದೇ ಕಹಿ ವ್ಯಾಪಾರವನ್ನು ಮಾಡುವುದನ್ನು ಬಿಟ್ಟುಬಿಡಿ, ಮಾಸಿಕ ಶಾಂತಿಗಾಗಿ ಕೆಲಸದಿಂದ ಬಿಡುವು ಪಡೆಯಿರಿ, ಸಂಗಾತಿಯೊಂದಿಗೆ ವಾದ ವಿವಾದ ಮಾಡುವುದರಿಂದ ದೂರವಿರಿ, ದೂರದ ಪ್ರವಾಸ ನಿಮಗೆ ಲಾಭವನ್ನು ತರಲಿದೆ.
ಮಿಥುನರಾಶಿ
ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿಯನ್ನು ವಹಿಸಿ, ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಹೆಚ್ಚುವರಿ ಹಣವನ್ನು ಗಳಿಸುವ ಮಾರ್ಗವನ್ನು ಕಂಡುಕೊಳ್ಳಿ, ಸುರಕ್ಷಿತ ಹಣಕಾಸು ಯೋಜನೆಗಳಲ್ಲಿ ಹೂಡಿಕೆಯನ್ನು ಮಾಡಿ, ನಿರೀಕ್ಷೆಗೆ ತಕ್ಕಂತೆ ಬದುಕಲು ವಿಫಲರಾಗುವುದರಿಂದ ನಿರಾಸೆಗೊಳ್ಳಲಿರಿ, ನಿಮ್ಮ ಕನಸು ನನಸಾಗಲಿದೆ.
ಕರ್ಕಾಟಕರಾಶಿ
ವಿಶ್ರಾಂತಿಯನ್ನು ಪಡೆಯಲು ಆಪ್ತ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ, ಹಣದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಿ, ಅನಗತ್ಯವಾಗಿ ಖರ್ಚು ಮಾಡುವುದು ಭವಿಷ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ, ಹೊಸ ಯೋಜನೆ ಮತ್ತು ಯೋಚನೆಯನ್ನು ಕಾರ್ಯಗತಗೊಳಿಸಲು ಸೂಕ್ತ ಸಮಯ. ಸಂಗಾತಿಯು ಇಂದು ಶಕ್ತಿ ಮತ್ತು ಪ್ರೀತಿಯಿಂದ ತುಂಬಿರುತ್ತಾರೆ.
ಸಿಂಹರಾಶಿ
ಮೋಜು ಮಾಡಲು ಹೊರಡುವವರಿಗೆ ಸಂಪೂರ್ಣ ಆನಂದ, ಆಪ್ತ ಸ್ನೇಹಿತರ ಸಹಾಯದಿಂದ ಉದ್ಯಮಿಗಳು ಹಣಕಾಸಿನ ಲಾಭವನ್ನು ಪಡೆಯುತ್ತಾರೆ, ಹಣವು ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ, ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಬಯಸುವುದರಿಂದ ಲಾಭವಿಲ್ಲ, ನಿಮ್ಮ ಕಾಳಜಿಯುಳ್ಳ ಹಾಗೂ ಅರ್ಥ ಮಾಡಿಕೊಳ್ಳುವ ಸ್ನೇಹಿತರನ್ನು ಭೇಟಿಯಾಗುವಿರಿ.
ಕನ್ಯಾರಾಶಿ
ಕಷ್ಟದಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಶಕ್ತಿಯನ್ನು ಬಳಸಿ, ಇತರರಿಗೆ ಉಪಯೋಗ ಮಾಡುವುದರಿಂದ ಲಾಭವಿದೆ, ನಿಮಗೆ ತಿಳಿದಿರುವ ಜನರಿಂದ ಹೊಸ ಆದಾಯದ ಮೂಲಗಳು ಲಭ್ಯವಾಗಲಿದೆ, ಸ್ನೇಹಿತರೊಂದಿಗೆ ಪಾರ್ಟಿ ಮಾಡುವಿರಿ, ಕೆಲಸದ ಬದಲಾವಣೆ ಉತ್ತಮವಾಗಿರಲಿದೆ.
ತುಲಾರಾಶಿ
ಕಣ್ಣಿನ ಪೊರೆ ರೋಗಿಗಳು ಕಲುಷಿತ ವಾತಾವರಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಕು, ಧೂಮಪಾನ ನಿಮ್ಮ ಕಣ್ಣಗಳಿಗೆ ಹಾನಿಯುಂಟು ಮಾಡಲಿದೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಕೆಲವು ವಾಸ್ತವಿಕ ಯೋಜನೆಗಳನ್ನು ಖಚಿತಪಡಿಸಿಕೊಳ್ಳಿ, ಪ್ರೇಮ ಜೀವನವು ಭರವಸೆಯನ್ನು ತರುತ್ತದೆ, ಅಧಿಕಾರಿಗಳು ನಿಮ್ಮ ಮೇಲೆ ಅಸಮಧಾನಗೊಳ್ಳಬಹುದು.
ವೃಶ್ಚಿಕರಾಶಿ
ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಹಣಕಾಸಿನ ಪರಿಸ್ಥಿತಿಗಳು ಇಂದು ಬಲವಾಗಿರುತ್ತದೆ, ಅನಗತ್ಯ ವಿಷಯಗಳಿಗೆ ಅತಿಯಾದ ಖರ್ಚು ಮಾಡಬೇಡಿ, ಕುಟುಂಬದಲ್ಲಿ ವಾದ ವಿವಾದ ಉಂಟಾಗುವ ಸಾಧ್ಯತೆಯಿದೆ, ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ.
ಧನಸುರಾಶಿ
ಅನುಮಾನದ ಸ್ವಭಾವವು ನಿಮಗೆ ಸೋಲಿನ ಮುಖವನ್ನು ತೋರಿಸಲಿದೆ, ಹಣ ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಮಾತನಾಡಿ, ಹಿರಿಯರ ಸಲಹೆಯಂತೆ ಆರ್ಥಿಕ ಪರಿಸ್ಥಿತಿಯು ಸುಧಾರಣೆಯಾಗಲಿದೆ, ನಿಮ್ಮ ನಿರ್ಧಾರ ನಿಮ್ಮನ್ನು ಖಿನ್ನತೆಯಿಂದ ತಪ್ಪಿಸುತ್ತದೆ, ಹೊಸ ಪ್ರಯಾಣ ಉತ್ಸಾಹವನ್ನು ಹೆಚ್ಚಿಸುತ್ತದೆ.
ಮಕರರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ, ಪ್ರಯಾಣವು ಒತ್ತಡದಿಂದ ಕೂಡಿರುತ್ತದೆ, ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಗಾತಿಯೊಂದಿಗೆ ವಾದಕ್ಕೆ ಇಳಿಯಬೇಡಿ, ಅನಾವಶ್ಯಕ ಖರ್ಚು ವ್ಯವಹಾರದ ಮೇಲೆ ಹೊಡೆತವನ್ನು ನೀಡಲಿದೆ, ಸ್ನೇಹಿತರ ಸಹಕಾರ ದೊರೆಯಲಿದೆ, ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣವು ನಿಮಗೆ ದೀರ್ಘಾವಧಿಯ ವರೆಗೆ ಪ್ರಯೋಜನಕ್ಕೆ ಬರಲಿದೆ.
ಕುಂಭರಾಶಿ
ಆರೋಗ್ಯದ ದೃಷ್ಟಿಯಿಂದ ಕೂಗಾಡಬೇಡಿ. ಅನಿರೀಕ್ಷಿತ ಧನಲಾಭ ಸಾಧ್ಯತೆ, ಹೆಚ್ಚಿನ ಶಕ್ತಿಯ ದಿನವಾಗಿದೆ, ಅನಿರೀಕ್ಷಿತ ಶುಭ ಸುದ್ದಿ ಇಡೀ ಕುಟುಂಬಕ್ಕೆ ಸಂತಸವನ್ನು ತರಲಿದೆ, ಮೇಲಾಧಿಕಾರಿಗಳು ನಿಮ್ಮ ವಿರುದ್ದ ಮುನಿಸಿಕೊಳ್ಳುವ ಸಾಧ್ಯತೆ, ಸಂಗಾತಿಯ ವರ್ತನೆ ನಿಮಗೆ ಬೇಸರವನ್ನು ತರಿಸಲಿದೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.
ಮೀನರಾಶಿ
ನಿಮ್ಮ ಇಚ್ಚಾಶಕ್ತಿಗೆ ಇಂದು ಲಾಭ ದೊರೆಯಲಿದೆ. ಭಾವನಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರಿಕೆ ಅಗತ್ಯ, ಅಗತ್ಯವಿರುವ ವ್ಯಕ್ತಿಗೆ ಸಾಲ ನೀಡುವ ಮೂಲಕ ನಿರಾಳರಾಗುವಿರಿ, ವೈವಾಹಿಕ ಜೀವನವು ಸಂತಸದಿಂದ ಕೂಡಿರಲಿದೆ, ಸಂವಹನ ತಂತ್ರಗಳು ಕೌಶಲ್ಯದ ಮೇಲೆ ಪ್ರಭಾವ ಬೀರಲಿದೆ, ಸುತ್ತಮುತ್ತಲಿನ ಜನರ ಸಹಕಾರ ನಿಮಗೆ ದೊರೆಯಲಿದೆ. ದಿನಾಂತ್ಯಕ್ಕೆ ಶುಭ ವಾರ್ತೆ.
( Horoscope today astrological prediction for October 28 )