ಮಂಗಳವಾರ, ಏಪ್ರಿಲ್ 29, 2025
HomehoroscopeHoroscope : ದಿನಭವಿಷ್ಯ : ಅನುಮಾನ ಸ್ವಭಾವದಿಂದ ಸೋಲು

Horoscope : ದಿನಭವಿಷ್ಯ : ಅನುಮಾನ ಸ್ವಭಾವದಿಂದ ಸೋಲು

- Advertisement -

ಮೇಷರಾಶಿ
ಆಶಾವಾದಿಯಾಗಿ, ನಿಮ್ಮಭರವಸೆಯ ನಿರೀಕ್ಷೆಗಳು ಈಡೇರಿಕೆಯಾಗುವ ಕಾಲ ಹತ್ತಿರದಲ್ಲಿಯೇ ಇದೆ. ಹಣ ಅಗತ್ಯತೆ ಎದುರಾಗುವ ಸಾಧ್ಯತೆ, ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಿ, ಮೊಮ್ಮಕ್ಕಳಿಂದ ನೆಮ್ಮದಿ, ಹೃದಯಕ್ಕೆ ಇಷ್ಟವಾಗುವ ವ್ಯಕ್ತಿಯ ಭೇಟಿ ಸಾಧ್ಯತೆ, ಹೆಚ್ಚು ಶ್ರಮದಿಂದ ಅಧಿಕ ಪ್ರಯೋಜನ ದೊರೆಯಲಿದೆ, ನಿಮ್ಮ ನ್ಯೂನತೆಗಳ ಮೇಲೆ ನೀವು ಕೆಲಸ ಮಾಡಬೇಕಾದ ಸಂದಿಗ್ದತೆ, ನಿಮ್ಮವರಿಗಾಗಿ ಸಮಯವನ್ನು ಮೀಸಲಿಡಿ.

ವೃಷಭರಾಶಿ
ದೈಹಿಕ ಆರೋಗ್ಯವನ್ನು ಸುಧಾರಿಸಲು ಉತ್ತಮ ಆಹಾರ ಸೇವನೆ ಮಾಡಿದೆ, ಧನಾತ್ಮಕ ಯೋಚನೆಗಳು ಫಲವನ್ನು ಕೊಡಲಿದೆ, ಉತ್ತಮ ಮನಸ್ಥಿತಿಯೊಂದಿಗೆ ಮನೆಯೊಂದ ಹೊರಬರಲಿದ್ದೀರಿ, ಮನೆಯಲ್ಲಿ ಅಮೂಲ್ಯ ವಸ್ತುಗಳ ಕಳವು ಸಾಧ್ಯತೆ, ಸಂಗಾತಿಯೊಂದಿಗೆ ಸುಂದರ ಕ್ಷಣಗಳು ಕಳೆಯುವಿರಿ, ನಿಮ್ಮ ಗುರಿ ಸಾಧನೆಯ ಕಡೆಗೆ ಸಾಗಲಿದ್ದೀರಿ, ವ್ಯವಹಾರದಲ್ಲಿ ನಿರೀಕ್ಷಿತ ಫಲ ದೊರೆಯಿದ್ದರೆ ಚಿಂತೆ ಮಾಡಬೇಡಿ.

ಮಿಥನರಾಶಿ
ಆರೋಗ್ಯದ ಮೇಲೆ ನಿಗಾವಹಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನಷ್ಟವನ್ನು ಉಂಟು ಮಾಡಲಿದೆ, ಹೂಡಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸಿ, ಹವ್ಯಾಸಗಳು ನಿಮಗೆ ಲಾಭವನ್ನು ತರಲಿದೆ, ಕುಟುಂಬದ ಸದಸ್ಯರ ಜೊತೆ ಸಮಯವನ್ನು ಕಳೆಯುವಿರಿ, ವಿದೇಶಿ ವ್ಯವಹಾರ ಹೆಚ್ಚು ಲಾಭವನ್ನು ತಂದುಕೊಡಲಿದೆ, ಕೆಲಸದ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಕಂಡುಬರಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಕರ್ಕಾಟಕರಾಶಿ
ಇಂದು ಆರೋಗ್ಯವು ಉತ್ತಮವಾಗಿ ಇರಲಿದೆ, ಆರ್ಥಿಕ ವಿಚಾರದಲ್ಲಿ ನೆಮ್ಮದಿ ಕಂಡುಬರಲಿದೆ, ಸಾಲ ಪಡೆಯುವಾಗ ತೊಡಕಾಗುವ ಸಾಧ್ಯತೆಯಿದೆ, ಕುಟುಂಬ ಸದಸ್ಯರ ಜೊತೆ ಸಮಯ ಕಳೆಯುವುದು ಸಂತಸವನ್ನು ನೀಡಲಿದೆ, ಸ್ತ್ರೀಯರಿಂದ ಹೆಚ್ಚು ಅನುಕೂಲ, ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಗುರಿ ಸಾಧಿಸುವಿರಿ, ಟಿವಿ ಅಥವಾ ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥವಾಗುತ್ತದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಅನುಭವಿಸುವಿರಿ.

ಸಿಂಹರಾಶಿ
ಅನುಮಾನ ಸ್ವಭಾವ ನಿಮ್ಮ ಸೋಲಿಗೆ ಕಾರಣವಾಗಲಿದೆ, ಚಂದ್ರನ ಸ್ಥಾನದಿಂದ ಅನಗತ್ಯ ಖರ್ಚಿಗೆ ದಾರಿಯಾಗಲಿದೆ, ಸಂಗಾತಿ ಹಾಗೂ ಪೋಷಕರಲ್ಲಿ ಮುಕ್ತವಾಗಿ ಮಾತನಾಡಿ, ಸಂಬಂಧಿಕರು ಸಂಜೆ ಮನೆಗೆ ಭೇಟಿ ನೀಡುವ ಸಾಧ್ಯತೆಯಿದೆ, ದ್ವೇಷದ ನಡುವಲ್ಲೇ ಪ್ರೀತಿಯಿಂದ ವರ್ತಿಸುವಿರಿ, ಉದ್ಯಮಿಗಳ ಪಾಲಿಗೆ ಉತ್ತಮವಾದ ದಿನ, ವ್ಯಾಪಾರದ ಉದ್ದೇಶದ ಹಿನ್ನೆಲೆಯಲ್ಲಿ ದಿಢೀರ್‌ ಪ್ರವಾಸ ಸಾಧ್ಯತೆ.

ಇದನ್ನೂ ಓದಿ :  ದತ್ತಪೀಠ ಪೂಜೆಗೆ ಮೌಲ್ವಿ ನೇಮಕ ರದ್ದು : ಹೈಕೋರ್ಟ್‌ ಮಹತ್ವದ ಆದೇಶ

ಕನ್ಯಾರಾಶಿ
ಆರೋಗ್ಯವು ಉತ್ತಮವಾಗಿರಲಿದೆ, ಸಂಜೆಯ ವೇಳೆಯಲ್ಲಿ ಅನಗತ್ಯ ಖರ್ಚು ಮಾಡುವ ಸಾಧ್ಯತೆ, ಮಕ್ಕಳು ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಡಲಿದ್ದಾರೆ, ನಿಮ್ಮ ಜೀವನವು ಅದ್ಬುತವಾಗಿರಲಿದೆ, ಕೆಲಸದ ಮೇಲೆ ಹೆಚ್ಚಿನ ಗಮನಹರಿಸಿ, ಭಾವನಾತ್ಮಕ ಘರ್ಷಣೆಯಿಂದ ದೂರವಿರಿ, ಸಂಗಾತಿ ನಿಮ್ಮ ಪ್ರೀತಿ ಮತ್ತು ಸಂವೇದನೆಗಳು ಹೊಸ ಜಗತ್ತಿಗೆ ಕೊಂಡೊಯ್ಯಲಿದೆ, ಹೊಂದಾಣಿಕೆ ಹೆಚ್ಚು ಲಾಭವನ್ನು ಪಡೆಯುವಿರಿ, ದೂರದ ಊರಿಂದ ಶುಭ ಸುದ್ದಿ ಕೇಳುವಿರಿ.

ವೃಶ್ಚಿಕರಾಶಿ
ಇಷ್ಟು ದಿನ ಕವಿದಿದ್ದ ಕತ್ತಲು ದೂರ ಸರಿಯಲಿದೆ, ನಾನಾ ಸಮಸ್ಯೆಗಳು ಪ್ರಗತಿಗೆ ಅಡ್ಡಿಬರಲಿದೆ, ಸಂಗಾತಿಯ ಅನಾರೋಗ್ಯದಿಂದಾಗಿ ಅಧಿಕ ಖರ್ಚು, ದೀರ್ಘ ಕಾಲದಿಂದ ಕೂಡಿಟ್ಟ ಹಣ ಇಂದು ನೆರವಿಗೆ ಬರಲಿದೆ, ಮಕ್ಕಳಿಂದ ಸಂತಸ ಕಂಡುಬರಲಿದೆ, ಪ್ರಿಯತಮೆ ಕಠಿಣ ಮಾತುಗಳಿಂದ ಗೊಂದಲಕ್ಕೆ ಈಡಾಗುವ ಸಾಧ್ಯತೆ, ಹೊಸ ಪಾಲುದಾರಿಕೆ ವ್ಯವಹಾರ ಹೆಚ್ಚು ಲಾಭವನ್ನು ತಂದುಕೊಡಲಿದೆ, ಹತ್ತಿರದ ಜನರ ಸಲಹೆಯನ್ನು ಆಲಿಸಿ.

ಧನಸುರಾಶಿ
ಶ್ರೀಮಂತ ಜೀವನದ ಭವ್ಯತೆಯನ್ನು ಅನುಭವಿಸಿ, ಹೊಸ ಒಪ್ಪಂದಗಳು ಇಂದು ಹೆಚ್ಚು ಲಾಭವನ್ನು ತಂದುಕೊಡಲಿದೆ, ಹಣದ ಹೂಡಿಕೆಯ ವಿಚಾರದಲ್ಲಿ ಹೆಚ್ಚು ಆತುರ ಮಾಡುವುದು ಒಳಿತಲ್ಲ, ಭಾವನೆಯನ್ನು ನಿಯಂತ್ರಿಸುವಲ್ಲಿ ಸಮಸ್ಯೆಯಾಗಲಿದೆ, ಸುತ್ತಮುತ್ತಲಿನ ಜನರನ್ನು ಕೆಣಕಬೇಡಿ, ಒಂಟಿತನ ನಿಮ್ಮನ್ನು ಹೆಚ್ಚಾಗಿ ಕಾಡಲಿದೆ, ಹಿರಿಯ ಸಲಹೆಯನ್ನು ಆಲಿಸುವುದರಿಂದ ಹೆಚ್ಚು ಲಾಭದಾಯಕವಾಗಲಿದೆ.

ಇದನ್ನೂ ಓದಿ : ಹಿಂದೂ ದೇವಾಲಯದ ರಕ್ಷಣೆಗೆ ನಿಂತ ಮುಸ್ಲಿಂ ಕುಟುಂಬಗಳು : ಹೇಗಿದೆ ಗೊತ್ತಾ ಹಿಂದೂ, ಮುಸ್ಲೀಂ ಸಾಮರಸ್ಯ

ಮಕರರಾಶಿ
ನೀವು ಇಂದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಿರಿ, ಉದ್ವೇಗವನ್ನು ಕಡಿಮೆ ಮಾಡಿಕೊಂಡ್ರೆ ಕೆಲಸ ಕಾರ್ಯಗಳಲ್ಲಿ ಗೆಲುವು, ಹಣವನ್ನು ಖರ್ಚು ಮಾಡುವ ಮುನ್ನ ಎಚ್ಚರಿಕೆಯನ್ನು ವಹಿಸಿ, ಕುಟುಂಬ ಸದಸ್ಯರ ಜೊತೆಗೆ ಕಠಿಣವಾಗಿ ವರ್ತಿಸಬೇಡಿ, ಮನೆಯಲ್ಲಿ ಶಾಂತಿ ಕದಡುವ ವಾತಾವರಣ ಸಾಧ್ಯತೆ, ದೂರದ ಪೋನ್‌ ಕರೆ ನಿಮಗೆ ಸಂತಸ ಸುದ್ದಿಯನ್ನು ತಿಳಿಸಲಿದೆ, ಹಳೆಯ ವಿವಾದವೊಂದು ಇಂದು ಬಗೆಹರಿಯುವ ಸಾಧ್ಯತೆಯಿದೆ.

ಕುಂಭರಾಶಿ
ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ, ರಿಯಲ್ ಎಸ್ಟೇಟ್ ಹೂಡಿಕೆ ಲಾಭದಾಯಕ, ಸ್ನೇಹಿತರೊಂದಿಗೆ ಸುಂದರ ಸಂಜೆ, ಪ್ರೇಮ ವಿಚಾರದಲ್ಲಿ ನಿಮ್ಮನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ, ಪ್ರಾಮಾಣಿಕತೆ ನಿಮಗೆ ಪ್ರಗತಿಗೆ ಸಹಾಯವಾಗಲಿದೆ, ಮನರಂಜನೆಗೆ ಇಂದು ಉತ್ತಮವಾದ ದಿನ, ಸಂಗಾತಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ, ಯಾರ ಮೇಲೂ ಹೆಚ್ಚು ನಂಬಿಕೆ ಇಡುವುದು ಉತ್ತಮವಲ್ಲ, ದೂರ ಪ್ರಯಾಣದಿಂದ ದೇಹಾಯಾಸ.

ಮೀನರಾಶಿ
ಸ್ವಯಂ ಯೋಜನೆಗಳು ನಿಮ್ಮ ಶಕ್ತಿಯನ್ನು ತೋರಿಸುತ್ತದೆ, ಆರ್ಥಿಕ ಯೋಜನೆಗಳು ಹೆಚ್ಚು ಲಾಭದಾಯಕವಾಗಿರಲಿದೆ, ಅಮೂಲ್ಯವಾದ ಸಮಯವನ್ನು ಮಕ್ಕಳೊಂದಿಗೆ ಕಳೆಯುವಿರಿ, ಕಠಿಣ ಪರಿಶ್ರಮ, ತಾಳ್ಮೆಯಿಂದ ನೀವು ನಿಮ್ಮ ಗುರಿ ಸಾಧನೆ ಮಾಡಲಿದ್ದೀರಿ, ವಿದ್ಯಾರ್ಥಿಗಳು ಕೆಲಸವನ್ನು ನಾಳೆಗೆ ಮುಂದೂಡುವುದು ಉತ್ತಮವಲ್ಲ, ಬಿಡುವಿನ ವೇಳೆಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಿ, ಸಹೋದ್ಯೋಗಿಗಳ ಸಹಕಾರ ಸಂತಸವನ್ನು ತರಲಿದೆ, ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರವಾಗಿರಿ.

ಇದನ್ನೂ ಓದಿ : vegetables cutlet : ಸುಲಭವಾಗಿ ಮಾಡಬಹುದು ವೆಜಿಟೆಬಲ್ ಕಟ್ಲೆಟ್‌

( Horoscope today astrological prediction for September 29)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular