ಭಾನುವಾರ, ಏಪ್ರಿಲ್ 27, 2025
HomehoroscopeHoroscope : ದಿನಭವಿಷ್ಯ : ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

Horoscope : ದಿನಭವಿಷ್ಯ : ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

- Advertisement -

ಮೇಷರಾಶಿ
ಕುಟುಂಬ ಸದಸ್ಯರ ವರ್ತನೆ ನಿಮಗೆ ಬೇಸರ ತರಿಸಲಿದೆ, ಮಾನಸಿಕ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ದುಶ್ಚಟಗಳಿಂದ ದೂರವಿದ್ದರೆ ಒಳಿತು, ಸಂಗಾತಿಯ ಪ್ರೀತಿ ನಿಮಗೆ ಆತ್ಮೀಯ ವಾಗಲಿದೆ, ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ವೇಳಾಪಟ್ಟಿಯಲ್ಲಿ ಬಿಡುವು ಮಾಡಿಕೊಳ್ಳಿ.

ವೃಶಷಭರಾಶಿ
ಜನರು ನಿಮ್ಮನ್ನು ಹೊಗಳುವ ಮೂಲಕ ಯಶಸ್ಸನ್ನು ಆನಂದಿಸುವ ಸಾಧ್ಯತೆಯಿದೆ, ಇತರರನ್ನು ಮೆಚ್ಚಿಸಲು ಖರ್ಚು ಮಾಡಬೇಡಿ, ಸಹೋದರಿಯ ವಾತ್ಸಲ್ಯವು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ನೇರ ಉತ್ತರಗಳನ್ನು ನೀಡದಿದ್ದರೆ ನಿಮ್ಮ ಸಹವರ್ತಿಗಳು ಕಿರಿಕಿರಿಗೊಳ್ಳುವ ಸಾಧ್ಯತೆಯಿದೆ.

ಮಿಥುನರಾಶಿ
ವ್ಯಾಪಾರದಲ್ಲಿ ಲಾಭಗಳಿಕೆಯ ಕುರಿತು ಹಳೆಯ ಸ್ನೇಹಿತರೊಬ್ಬರು ನಿಮಗೆ ಸಲಹೆ ನೀಡಲಿದ್ದಾರೆ. ಪ್ರಭಾವಿಗಳ ಜೊತೆಗಿನ ಸಂಬಂಧ ಸುಧಾರಣೆಯಾಗಲಿದೆ, ಸಕಾರಾತ್ಮಕ ಯಶಸ್ಸನ್ನು ತರಲಿದೆ, ಸಾಮಾಜಿಕ ಕಾರ್ಯಗಳು ನಿಮ್ಮ ವರ್ಚಸ್ಸನ್ನು ಹೆಚ್ಚಿಸಲಿದೆ, ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

ಕರ್ಕಾಟಕರಾಶಿ
ಆಹಾರದ ಬಗ್ಗೆ ಸರಿಯಾದ ಕಾಳಜಿ ಇರಲಿ, ಊಟವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ, ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆಯನ್ನು ವಹಿಸಿ, ಸಂಜೆಯ ವೇಳೆಯಲ್ಲಿ ದೂರ ಬಂಧುಗಳು ಮನೆಗೆ ಭೇಟಿಯನ್ನು ನೀಡಲಿದ್ದಾರೆ, ವ್ಯಾಪಾರದಲ್ಲಿ ನಿರೀಕ್ಷೆಗಿಂತಲೂ ಅಧಿಕ ಲಾಭ ದೊರೆಯಲಿದೆ.

ಸಿಂಹರಾಶಿ
ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ, ಇದರಿಂದಾಗಿ ಅಗತ್ಯ ವಸ್ತುಗಳ ಖರೀದಿ ಸಾಧ್ಯ, ಕುಟುಂಬ ಸದಸ್ಯರ ಭಾವನೆಗಳನ್ನು ನೋಯಿಸದಂತೆ ಕೋಪವನ್ನು ನಿಯಂತ್ರಿಸಿ, ಸ್ಥಳೀಯ ಜನರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ, ನಿಮಗಾಗಿ ಸಮಯವನ್ನು ತಂದುಕೊಳ್ಳಿ, ನಿಮ್ಮನ್ನು ವ್ಯಕ್ತಿತ್ವವನ್ನು ಮೌಲ್ಯ ಮಾಪನ ಮಾಡಿ.

ಇದನ್ನೂ ಓದಿ : ಮನೆ ಮೇಲೆ ಕಲ್ಲು ಬೀಳೋದು. ಕೈ ಮೇಲೆ ಬರೆ ಮೂಡೋದು ಭಾನಮತಿ ಕಾಟವಾ? 

ಇದನ್ನೂ ಓದಿ : ಅಮವಾಸ್ಯೆಯನ್ನೇ ಮಾಂತ್ರಿಕರು ಆಯ್ಕೆ ಮಾಡಿಕೊಳ್ಳೋದು ಯಾಕೆ ಗೊತ್ತಾ..? ಆ ಕತ್ತಲಲ್ಲೇ ನಡೆಯೋದು ಕರಾಮತ್ತು..!

ಕನ್ಯಾರಾಶಿ
ಆಶಾವಾದಿಯಾಗಿರಲು ಪ್ರೇರೇಪಿಸಿ, ಆತ್ಮವಿಶ್ವಾಸ ಹಾಗೂ ನಮ್ಯತೆಯನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಭಾವನೆಗಳನ್ನು ಬಿಡಿ, ದ್ವೇಷ ದೂರ ಮಾಡಿಕೊಳ್ಳಿ, ಹಣ ಹಾಗೂ ಸಮಯ ವನ್ನು ವ್ಯರ್ಥ ಮಾಡಬೇಡಿ, ಸಂಗಾತಿಯಿಂದ ಸಂತಸ ತರಲಿದೆ, ಜೀವನದಲ್ಲಿ ಹೊಂದಾಣಿಕೆ ಅತೀ ಮುಖ್ಯ.

ತುಲಾರಾಶಿ
ಕೆಲಸದ ಸ್ಥಳದಲ್ಲಿ ಹಿರಿಯರಿಂದ ಒತ್ತಡ, ಮನೆಯಲ್ಲಿ ಕಿರಿಕಿರಿ, ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆಯನ್ನು ಮಾಡಿ, ಹಳೆಯ ಸ್ನೇಹಿತ ಸಂಜೆ ನಿಮ್ಮನ್ನು ಭೇಟಿ ಮಾಡಬಹುದು, ಪ್ರಣಯಕ್ಕೆ ಇದು ಉತ್ತಮ ದಿನವಲ್ಲ, ಪ್ರಾಮಾಣಿಕ ಪ್ರಯತ್ನ ಮಾಡುವುದು ಉತ್ತಮ ಫಲವನ್ನು ತಂದುಕೊಡಲಿದೆ.

ವೃಶ್ಚಿಕರಾಶಿ
ಆರೋಗ್ಯವು ಇಂದು ಪರಿಪೂರ್ಣವಾಗಿರುತ್ತದೆ, ಸಣ್ಣ ಪ್ರಮಾಣದ ವ್ಯವಹಾರಗಳನ್ನು ನಡೆಸುತ್ತಿರುವವರು ಲಾಭವನ್ನು ಕಂಡುಕೊಳ್ಳಲಿದ್ದಾರೆ, ಇತರರ ಸಲಹೆಯಿಂದ ಆರ್ಥಿಕ ಪ್ರಯೋಜನವನ್ನು ಪಡೆಯುವಿರಿ, ವಿವಾದಾತ್ಮಕ ಸಮಸ್ಯೆಯನ್ನು ನೀವು ತಪ್ಪಿಸಿ, ಸಮಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಿ.

ಧನಸುರಾಶಿ
ಕೆಲಸ ಮಾಡಲು ಅದ್ಬುತವಾದ ದಿನ, ಹಣದ ಮೇಲೆ ತೂಗಾಡುವ ಸಮಸ್ಯೆಯನ್ನು ಎದುರಿಸುವಿರಿ, ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ, ಜೀವನ ಸಂಗಾತಿಯ ನಿರ್ಲಕ್ಷ್ಯ ಸಂಬಂಧವನ್ನು ಹಾಳು ಮಾಡಬಹುದು, ಪ್ರೀತಿ ಪಾತ್ರರ ಜೊತೆಗೆ ಕಾಲ ಕಳೆಯಿರಿ.

ಮಕರರಾಶಿ
ವಿಶ್ರಾಂತಿಯನ್ನು ಪಡೆಯಲು ಸಾಧ್ಯವಾಗುವ ದಿನ, ಹೆಚ್ಚುವರಿ ಹಣವನ್ನು ಗಳಿಸುವ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ, ಸುರಕ್ಷಿತ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಯನ್ನು ಮಾಡಿ, ಸ್ನೇಹಿತರು ನಿಮ್ಮ ದೀಪವನ್ನು ಬೆಳಗಿಸಲಿದ್ದಾರೆ, ಪ್ರೀತಿ ಪಾತ್ರರ ಜೊತೆಗೆ ಸಂತಸದ ಕ್ಷಣವನ್ನು ಕಳೆಯುವಿರಿ.

ಕುಂಭರಾಶಿ
ಮುಗ್ಧ ನಗು ಕೂಡ ನಿಮ್ಮನ್ನು ಸಂಕಟಗಳಿಂದ ಮೇಲಕ್ಕೆತ್ತುತ್ತದೆ. ಸ್ನೇಹಿತರೊಂದಿಗೆ ಪ್ರವಾಸ ಹೋಗುವ ಸಾಧ್ಯತೆಯಿದೆ, ನೀವು ಹಣಕಾಸಿನ ಸಮಸ್ಯೆಯಿಂದ ಬಳಲುವ ಸಾಧ್ಯತೆಯಿದೆ, ನೀವಿಂದು ಅನಿರೀಕ್ಷಿತ ಶುಭ ಸುದ್ದಿಯನ್ನು ಕೇಳುವಿರಿ, ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸನ್ನು ನೀಡುತ್ತದೆ.

ಮೀನರಾಶಿ
ತೆರೆದ ಆಹಾರವನ್ನು ಸೇವನೆ ಮಾಡಬೇಡಿ, ಪ್ರಯಾಣವು ಅತಿಯಾದ ಒತ್ತಡದಿಂದ ಕೂಡಿರುತ್ತದೆ, ಆರ್ಥಿಕವಾಗಿ ಲಾಭದಾಯಕವಾಗಲಿದೆ, ನಿಮ್ಮ ಜ್ಞಾನ ಅನುಭವ ಹಂಚಿಕೊಂಡರೆ ನೀವು ಮನ್ನಣೆ ಪಡೆಯಲಿದ್ದೀರಿ, ಬಿಡುವಿನ ಸಮಯವನ್ನು ಮನೆಯವರಿಗೆ ನೀಡುವುದರಿಂದ ಅಧಿಕ ಲಾಭ.

ಇದನ್ನೂ ಓದಿ : ಸಕಲ ರೋಗಕ್ಕೂ ಇಲ್ಲಿದೆ ಪರಿಹಾರ : ನಾಗದೋಷ ಪರಿಹರಿಸುತ್ತಾನೆ ಶಾಸ್ತಾರ ಸುಬ್ರಹ್ಮಣ್ಯೇಶ್ವರ

ಇದನ್ನೂ ಓದಿ : ಶಿವರಾತ್ರಿಯಲ್ಲಿ ಪೂಜೆ ಮಾಡಿದ್ರೆ ಒಲಿತಾನೆ ಶಿವ ; ಸಾವಿರ ಲಿಂಗವಾಗಿ ನೆಲೆನಿಂತ ಮಹಾದೇವ

(Horoscope today astrological prediction for October 29 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular