ಭಾನುವಾರ, ಏಪ್ರಿಲ್ 27, 2025
HomehoroscopeHoroscope : ದಿನಭವಿಷ್ಯ : ನೀವಿಂದು ಅಸಾಮಾನ್ಯವಾದುದನ್ನು ಮಾಡುತ್ತೀರಿ

Horoscope : ದಿನಭವಿಷ್ಯ : ನೀವಿಂದು ಅಸಾಮಾನ್ಯವಾದುದನ್ನು ಮಾಡುತ್ತೀರಿ

- Advertisement -

ಮೇಷರಾಶಿ
ನಿಮ್ಮಆಕರ್ಷಕ ನಡವಳಿಕೆ ಗಮನ ಸೆಳೆಯುತ್ತದೆ. ಮಕ್ಕಳಿಂದ ಹಣಕಾಸಿನ ಪ್ರಯೋಜನ ಪಡೆಯಲಿದ್ದೀರಿ, ನಿಮ್ಮ ಮಗುವಿನ ಬಗ್ಗೆ ಹೆಮ್ಮೆ ಪಡುವಿರಿ, ಜೀವನ ಸಂಗಾತಿಯ ನಿರ್ಲಕ್ಷ್ಯದಿಂದ ಸಂಬಂಧ ಹಾಳಾಗಬಹುದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಒತ್ತಡ ಬದುಕಿಗೆ ಕೊಂಚ ವಿಶ್ರಾಂತಿಯನ್ನು ನೀಡಿ.

ವೃಷಭರಾಶಿ
ನೀವಿಂದು ಅಸಾಮಾನ್ಯವಾದುದನ್ನು ಮಾಡುತ್ತೀರಿ. ಹಣದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಸಂಬಂಧಗಳು ಹಾಳಾಗದಂತೆ ವರ್ತಿಸಿ, ಕುಟುಂಬವನ್ನು ಒಗ್ಗೂಡಿಸುವ ಕಡೆಗೆ ನಿಮ್ಮ ಗಮನ ಇರಲಿ, ಕೆಲಸದ ಒತ್ತಡ ಮನಸಿನ ಮೇಲೆ ಘಾಸಿ ಮಾಡಲಿದೆ, ಪ್ರೀತಿ ಪಾತ್ರರು ನಿಮಗೆ ಅಪಾರವಾದ ಆನಂದವನ್ನು ತರಲಿದ್ದಾರೆ. ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ.

ಮಿಥುನರಾಶಿ
ಒತ್ತಡವನ್ನು ನಿವಾರಿಸಲು ಕುಟುಂಬ ಸದಸ್ಯರ ಬೆಂಬಲ ಪಡೆಯಿರಿ, ಒತ್ತಡದಿಂದ ಹೊರ ಬರಲು ಯತ್ನಿಸಿ, ಸಮಸ್ಯೆಯ ಬಗ್ಗೆ ಅರಿತುಕೊಳ್ಳುವ ಕಾರ್ಯವನ್ನು ಮಾಡಿ, ಹೊಸ ಹೂಡಿಕೆಯನ್ನು ತಪ್ಪಿಸಿ, ಹೆತ್ತವರ ಆರೋಗ್ಯ ಆತಂಕವನ್ನು ಉಂಟು ಮಾಡಲಿದೆ, ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಮೆಚ್ಚುಗೆಗಳಿಸಲಿದೆ, ಅನಿರೀಕ್ಷಿತ ಕಾರ್ಯಸಾಧನೆ ಸಂತಸವನ್ನು ತರಲಿದೆ.

ಕರ್ಕಾಟಕರಾಶಿ
ವಿಶ್ರಾಂತಿಗಾಗಿ ಆಪ್ತರ ಜೊತೆ ಕಾಲ ಕಳೆಯುವಿರಿ, ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು, ಕೌಟುಂಬಿಕ ಒತ್ತಡ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲಿದೆ, ಪ್ರೀತಿಯಲ್ಲಿ ನಿರಾಶೆಗೊಳ್ಳಬೇಡಿ, ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ, ಜೀವನ ಸಂಗಾತಿಯ ಜೊತೆಗೆ ಮಾತಿನ ಚಕಮಕಿ, ಸಹೋದ್ಯೊಗಿಗಳ ಜೊತೆಗೆ ಕಿರಿಕಿರಿ ಆಗುವುದನ್ನು ತಪ್ಪಿಸಲು ಪ್ರಯತ್ನಿಸಿ, ಸ್ನೇಹಿತರಿಂದ ಸಹಕಾರ.

ಸಿಂಹರಾಶಿ
ತಾಯಿಯಿಂದ ಹಣಕಾಸಿನ ಲಾಭವನ್ನು ಪಡೆಯಲಿದ್ದೀರಿ, ಮನೆಯ ಹಿರಿಯರು ಹಣಕಾಸಿನ ನೆರವು ನೀಡಲಿದ್ದಾರೆ. ಆಕಸ್ಮಿಕವಾಗಿ ಸ್ನೇಹಿತರು ಮನೆಗೆ ಭೇಟಿ ನೀಡಲಿದ್ದಾರೆ. ಕೆಲವೊಂದು ವಿಚಾರದಲ್ಲಿ ನಿಮಗೆ ನೋವು ಉಂಟಾಗಲಿದೆ, ವ್ಯವಹಾರದ ಸ್ಪರ್ಧೆ ಮಾನಸಿಕವಾಗಿ ನೋವನ್ನುಂಟು ಮಾಡಲಿದೆ, ಹಿಂದಿನ ಗೊಂದಲಗಳನ್ನು ಮರೆಯಲು ಯತ್ನಿಸಿ, ಸಂಗಾತಿಯ ಸುಳ್ಳಿನಿಂದ ಬೇಸರಗೊಳ್ಳುವಿರಿ.

ಕನ್ಯಾರಾಶಿ
ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ, ಹಣವು ಸಂಬಂಧವನ್ನು ಹಾಳು ಮಾಡಲಿದೆ, ನಿಮ್ಮ ಚುರುಕುತನ ಇತರರನ್ನು ಆಕರ್ಷಿಸಲಿದೆ, ನಿಮ್ಮಿಷ್ಟದಂತೆಯೇ ಕೆಲಸ ಕಾರ್ಯಗಳು ನೆರವೇರಲಿದೆ, ಡುವಿಲ್ಲದ ದಿನಚರಿಯ ನಡುವಲ್ಲೇ ನಿಮಗಾಗಿ ಸಮಯವನ್ನು ಮೀಸಲಿಡುವಿರಿ, ಬಿಡುವಿನ ವೇಳೆಯಲ್ಲಿ ಸೃಜನಾತ್ಮಕ ವಿಚಾರದಲ್ಲಿ ತೊಡಗಿಕೊಳ್ಳಿ, ಮದುವೆಯ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ.

ತುಲಾರಾಶಿ
ನಿಮ್ಮ ತಾಳ್ಮೆಯು ಇಂದು ಉತ್ತಮ ಲಾಭವನ್ನು ತಂದುಕೊಡಲಿದೆ, ನಿರಂತರ ಪ್ರಯತ್ನದಿಂದ ಯಶಸ್ಸನ್ನು ಪಡೆಯುವಿರಿ, ಸಹೋದರ ಅಥವಾ ಸಹೋದರಿಯಿಂದ ಸಹಾಯ ದೊರೆಯಲಿದೆ, ಸಂಗಾತಿಯ ಬೆಂಬಲದಿಂದ ಮಾನಸಿಕ ನೆಮ್ಮದಿ, ಕೋಪ, ಸಿಟ್ಟು ಕಡಿಮೆ ಮಾಡಿಕೊಳ್ಳಿ, ಗತಿಸಿದ ಘಟನೆಯ ಬಗ್ಗೆ ಚಿಂತೆ ಬಿಟ್ಟುಬಿಡಿ, ನಿಮ್ಮ ವರ್ತನೆ ಪ್ರೀತಿ ಪಾತ್ರರ ಜೊತೆ ವಾಗ್ವಾದಕ್ಕೆ ಕಾರಣವಾಗಲಿದೆ.

ವೃಶ್ಚಿಕರಾಶಿ
ಹಣಕಾಸಿನ ಸಮಸ್ಯೆಗಳು ಒತ್ತಡದ ಮೂಲವಾಗಲಿದೆ, ಅನಿರೀಕ್ಷಿತ ಬಿಲ್‌ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ, ಸೃಜನಶೀಲ ಕೆಲಸವು ಸುತ್ತಮುತ್ತಲಿನ ಜನರನ್ನು ವಿಸ್ಮಯಗೊಳಿಸಲಿದೆ, ಅಪಾರ ಜನಮೆಚ್ಚುಗೆಯನ್ನು ಗಳಿಸುವಿರಿ, ಜನರು ಇಂದು ನಿಮ್ಮ ಬಗ್ಗೆ ಯೋಚನೆ ಮಾಡಲಿದ್ದಾರೆ. ಕೃಷಿ ಕಾಯಕ ಮಾಡುವವರು ಹೆಚ್ಚಿನ ಲಾಭವನ್ನು ಗಳಿಸಲಿದ್ದಾರೆ. ಮೇಲಾಧಿಕಾರಿಗಳ ಪ್ರಶಂಸೆ ನಿಮಗೆ ಸಂತಸವನ್ನು ನೀಡಲಿದೆ.

ಧನಸುರಾಶಿ
ಪ್ರಭಾವ ಶಾಲಿ ಜನರ ಬೆಂಬಲ ನಿಮಗೆ ನೈತಿಕವಾಗಿ ದೊಡ್ಡ ಪ್ರಯೋಜನ ನೀಡಲಿದೆ, ಸಾಲಕ್ಕಾಗಿ ನಿಮ್ಮನ್ನು ಆಶ್ರಯಿಸುವ ಜನರನ್ನು ದೂರವಿಡಿ, ಹಾಸ್ಯ ಸ್ವಭಾವವು ನಿಮ್ಮನ್ನು ಸಾಮಾಜಿಕ ಕೂಟಗಳಲ್ಲಿ ಜನಪ್ರಿಯಗೊಳಿಸುತ್ತದೆ. ಉದ್ಯಮಿಗಳು ವ್ಯಾಪಾರದ ಸೀಕ್ರೆಟ್‌ ಹಂಚಿಕೊಳ್ಳಬೇಡಿ, ಉದ್ಯಮಿಗಳು ತೊಂದರೆಗೆ ಸಿಲುಕುವ ಸಾಧ್ಯತೆಯಿದೆ, ಸಕಾರಾತ್ಮಕ ಬದಲಾವಣೆಯನ್ನು ರೂಢಿಸಿಕೊಳ್ಳಿ.

ಮಕರರಾಶಿ
ಅನಿರೀಕ್ಷಿತ ಪ್ರಯಾಣ ದಣಿಯುವಂತೆ ಮಾಡುತ್ತದೆ. ಸ್ನಾಯುಗಳ ಸಮಸ್ಯೆ ಪರಿಹಾರಕ್ಕೆ ಎಣ್ಣೆಯಿಂದ ಮಸಾಜ್ ಮಾಡಿ, ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ವೈಯಕ್ತಿಕ ವಿಚಾರಗಳನ್ನು ಅಷ್ಟಾಗಿ ಹೇಳಿಕೊಳ್ಳಬೇಡಿ, ಪ್ರೀತಿ ಪಾತ್ರರರನ್ನು ನೋಯಿಸದಂತೆ ನೋಡಿಕೊಳ್ಳಿ, ದೂರದ ಬಂದುಗಳು ಅಮೂಲ್ಯ ಉಡುಗೊರೆಯೊಂದನ್ನು ನೀಡುತ್ತಾರೆ, ಬ್ಯಾಂಕಿಂಗ್ ಕ್ಷೇತ್ರದ ವೃತ್ತಿಪರರು ಶುಭಸುದ್ದಿಯನ್ನು ಕೇಳಲಿದ್ದಾರೆ.

ಕುಂಭರಾಶಿ
ನಿಮ್ಮ ಆರೋಗ್ಯ ವೃದ್ದಿಸಲಿದೆ, ಆಸ್ತಿ ವಿಚಾರಕ್ಕೆ ಹಣದ ಖರ್ಚು, ದಿನ ಉತ್ತರಾರ್ಧದಲ್ಲಿ ವಿಶ್ರಾಂತಿಯನ್ನು ಪಡೆಯುವಿರಿ, ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವಿರಿ, ಕಠಿಣ ಮಾತುಗಳು ಶಾಂತಿಯನ್ನು ಹಾಳು ಮಾಡಲಿದೆ, ಪ್ರಿಯತಮೆಯೊಂದಿಗೆ ಉತ್ತಮ ಸಂಬಂಧ ರೂಢಸಿಕೊಳ್ಳಿ, ಮಾತನ್ನು ನಿಯಂತ್ರಿಸಲು ಯತ್ನಿಸಿ, ಕ್ಷಿಷ್ಟಕರವಾದ ಸಮಸ್ಯೆಗಳು ಪರಿಹಾರ ಕಾಣಲಿದೆ, ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಪುಸ್ತಕ ಓದುವಲ್ಲಿ ಗಮನವಿರಲಿ.

ಮೀನರಾಶಿ
ರಿಯಲ್‌ ಎಸ್ಟೇಟ್‌ ಹೂಡಿಕೆ ಲಾಭವನ್ನು ತರಲಿದೆ, ಕುಟುಂಬ ಸದಸ್ಯರ ಅಗತ್ಯತೆಗಳಿಗೆ ಆದ್ಯತೆ ನೀಡಿ, ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಪ್ರೀತಿ ಪಾತ್ರರ ಜೊತೆಗೆ ದ್ವೇಷ ಹೆಚ್ಚಲಿದೆ, ಇಂದು ಕೆಲಸದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು, ಕೈಯಲ್ಲಿರುವ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ, ಹಳೆಯ ಸ್ನೇಹಿತರ ಭೇಟಿ, ಹೊಸ ಹೂಡಿಕೆಯ ಬಗ್ಗೆ ಚರ್ಚೆ ನಡೆಸುವಿರಿ.

ಇದನ್ನೂ ಓದಿ : ದುರಿತಗಳ ಅಳಿಸಿ ಭಕ್ತಕೋಟಿಯ ಬೆಳೆಸಿದ ಯತಿ ಶ್ರೀಶ್ರೀಧರರು…!!

ಇದನ್ನೂ ಓದಿ : ನಾಗದೋಷ, ಕಾಳಸರ್ಪ ದೋಷವನ್ನುನಿವಾರಣೆ ಮಾಡ್ತಾನೆ ನಾಗರಾಜ : ಇಲ್ಲಿ ಭಕ್ತರನ್ನು ಕಾಯುತ್ತೆ 30 ಸಾವಿರ ಸರ್ಪಗಳು

( Horoscope today astrological prediction for September 30 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular