ಮಂಗಳವಾರ, ಏಪ್ರಿಲ್ 29, 2025
HomehoroscopeHoroscope : ದಿನಭವಿಷ್ಯ : ತಂದೆಯ ಸಲಹೆ ಪ್ರಯೋಜನಕ್ಕೆ ಬರಲಿದೆ

Horoscope : ದಿನಭವಿಷ್ಯ : ತಂದೆಯ ಸಲಹೆ ಪ್ರಯೋಜನಕ್ಕೆ ಬರಲಿದೆ

- Advertisement -

ಮೇಷರಾಶಿ
ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಬಾಕಿಯಿರುವ ಸಮಸ್ಯೆಗಳು ಪರಿಹಾರವಾಗಲಿದೆ, ಖರ್ಚಿನ ಮೇಲೆ ಹಿಡಿತವಿರಲಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಸಹೋದ್ಯೋಗಿ ಗಳ ಸಹಕಾರ ದೊರೆಯಲಿದೆ, ಕೆಲಸದ ನಡುವಲ್ಲೇ ಬಿಡುವು ಮಾಡಿಕೊಳ್ಳಿ. ಹೊಂದಾಣಿಕೆಯಿಂದ ಲಾಭ ದೊರೆಯಲಿದೆ.

ವೃಷಭರಾಶಿ
ಎಲೆಕ್ಟ್ರಾನಿಕ್‌ ವಸ್ತುಗಳ ದುರಸ್ಥಿಗೆ ಹಣ ವ್ಯಯವಾಗಲಿದೆ, ಬಿಡುವಿನ ಸಮಯವನ್ನು ಆನಂದದಿಂದ ಕಳೆಯುವಿರಿ, ಮಕ್ಕಳಿಂದ ಅನಿರೀಕ್ಷಿತ ಸುದ್ದಿ ಕೇಳುವಿರಿ, ಇಡೀ ದಿನ ಪ್ರೀತಿ ಯಿಂದ ತುಂಬಿರಲಿದೆ, ರಾತ್ರಿಯ ವೇಳೆಯಲ್ಲಿ ಕ್ಷುಲಕ ವಿಚಾರಕ್ಕೆ ಸಂಗಾತಿಯೊಂದಿಗೆ ಜಗಳ, ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ.

ಮಿಥುನರಾಶಿ
ಹಿರಿಯರ ಸಲಹೆಯನ್ನು ಆಲಿಸಿ, ಹೊಸ ಹಣಕಾಸು ಒಪ್ಪಂದ ಲಾಭವನ್ನು ತರಲಿದೆ, ಕೆಟ್ಟ ಅಭ್ಯಾಸದಿಂದ ಕಿರಿಕಿರಿ ಅನುಭವಿಸುವಿರಿ, ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಕುಟುಂಬದ ಜವಾಬ್ದಾರಿಯು ಹೆಚ್ಚಲಿದೆ, ದೂರ ಪ್ರಯಾಣ ನಿಮಗೆ ಅಧಿಕ ಲಾಭವನ್ನು ತಂದುಕೊಡಲಿದೆ.

ಕರ್ಕಾಟಕರಾಶಿ
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ಬುದ್ದಿವಂತಿಕೆಯಿಂದ ಮಾಡಿದ ಹೂಡಿಕೆ ಲಾಭವನ್ನು ತರಲಿದೆ, ಶ್ರಮವಹಿಸಿ ದುಡಿದ ಹಣವನ್ನು ಎಲ್ಲಿ ಇಟ್ಟಿದ್ದೀರೆಂದು ಖಚಿತ ಪಡಿಸಿಕೊಳ್ಳಿ, ಸಂಜೆಯ ವೇಳೆಗೆ ಅತಿಥಿಗಳು ಆಗಮಿಸಲಿದ್ದಾರೆ. ಪ್ರಯಾಣದ ವೇಳೆಯಲ್ಲಿ ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳಿ.

ಸಿಂಹರಾಶಿ
ಧಾರ್ಮಿಕ ಕಾರ್ಯಗಳ ಕುರಿತು ಭಾವನೆ ಮೂಡಲಿದೆ ಪವಿತ್ರ ವ್ಯಕ್ತಿಯಿಂದ ದೈವಿಕ ಜ್ಞಾನ ಪಡೆಯುವಿರಿ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಸಾಂದರ್ಬಿಕ ಪರಿಚಿತರ ಜೊತೆಗೆ ವೈಯಕ್ತಿಕ ವಿಷಯ ಹಂಚಿಕೊಳ್ಳಬೇಡಿ, ಹೊಸ ಅವಕಾಶಗಳು ದೊರೆಯಲಿದೆ, ಸಂಗಾತಿಯಿಂದ ದಿನ ಸಂತಸದಿಂದ ಕೂಡಿರಲಿದೆ.

ಇದನ್ನೂಓದಿ : ದುರಿತಗಳ ಅಳಿಸಿ ಭಕ್ತಕೋಟಿಯ ಬೆಳೆಸಿದ ಯತಿ ಶ್ರೀಶ್ರೀಧರರು

ಕನ್ಯಾರಾಶಿ
ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಸ್ನೇಹಿತರ ಸಂಬಂಧಿಕರ ಜೊತೆಗೆ ಸಮಯ ಕಳೆಯುವಿರಿ, ನಿಗದಿತ ಸಮಯಕ್ಕಿಂತಲೂ ಮೊದಲೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ, ಅನಗತ್ಯ ಚಿಂತೆಯನ್ನು ದೂರ ಮಾಡಿ, ಭಿನ್ನಾಭಿಪ್ರಾಯಗಳಿಂದ ದೂರವಿರಿ, ಸಂಗಾತಿಯೊಂದಿಗೆ ಹೊಂದಾಣಿಕೆ ಮುಖ್ಯ.

ತುಲಾರಾಶಿ
ಕುಟುಂಬದವರೊಂದಿಗೆ ಸಮಯವನ್ನು ಕಳೆಯುವಿರಿ, ಒಂಟಿ ಭಾವನೆಯನ್ನು ದೂರ ಮಾಡಿ, ಕೆಲಸದ ಒತ್ತಡ ನಿಮ್ಮ ಮನಸ್ಸನ್ನು ಮುಚ್ಚಿಡುತ್ತದೆ, ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಸಮಯವನ್ನು ನೀಡಿ, ಹಿರಿಯರು ದೇವರಂತೆ ವರ್ತಿಸಲಿದ್ದಾರೆ, ವೃತ್ತಿ ಜೀವನವು ಉತ್ತುಂಗಕ್ಕೆ ಏರಲಿದೆ, ಸ್ನೇಹಿತರೊಂದಿಗೆ ಸುತ್ತಾಡಲು ಸಮಯವನ್ನು ವ್ಯರ್ಥ ಮಾಡಬೇಡಿ.

ವೃಶ್ಚಿಕರಾಶಿ
ತಂದೆಯ ಸಲಹೆ ಕೆಲಸದ ಸ್ಥಳದಲ್ಲಿ ಪ್ರಯೋಜನಕ್ಕೆ ಬರಲಿದೆ, ಕಡಿಮೆ ಅನುಭವ ಹೊಂದಿರುವವರು ತಾಳ್ಮೆಯಿಂದಿರಿ, ತಪ್ಪು ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಒಳಿತು, ತಜ್ಞರ ಸಲಹೆಯನ್ನು ಪಡೆದು ಹೊಸ ವ್ಯವಹಾರದಲ್ಲಿ ಹೂಡಿಕೆಯನ್ನು ಮಾಡಿ, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ.

ಇದನ್ನೂ ಓದಿ : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

ಧನಸುರಾಶಿ
ಕಚೇರಿಯಿಂದ ಬೇಗ ಮನೆಗೆ ಬರಲು ಯತ್ನಿಸಿ, ಷೇರು, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯಿಂದ ಲಾಭ, ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವಿರಿ, ಮಾಧ್ಯಮ ವ್ಯಕ್ತಿಗಳಿಗೆ ಮನ್ನಣೆ ದೊರೆಯಲಿದೆ, ಸುತ್ತಮುತ್ತಲಿನ ಜನರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ಮಕರರಾಶಿ
ವಿಶ್ವಾಸವನ್ನು ಸದುಪಯೋಗ ಪಡಿಸಿಕೊಳ್ಳಲು ಯತ್ನಿಸಿ, ಒತ್ತಡದ ಹೊರತಾಗಿ ನಿಮ್ಮ ಶಕ್ತಿಯು ವೃದ್ದಿಸಲಿದೆ, ಖರ್ಚುಗಳ ಮೇಲೆ ಹಿಡಿತವಿರಲಿ, ಗೃಹೋಪಕರಣಗಳ ಖರೀದಿ ಸಾಧ್ಯತೆ, ಕುಟುಂಬದ ಬೆಂಬಲ ದೊರೆಯಲಿದೆ, ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುವಿರಿ, ಇತರರ ಸಹಕಾರ ದೊರೆಯಲಿದೆ.

ಕುಂಭರಾಶಿ
ಉತ್ತಮ ಆರೋಗ್ಯ, ಅತೀಯಾದ ಖರ್ಚು ಚಿಂತೆಗೆ ಕಾರಣವಾಗಲಿದೆ, ಕುಟುಂಬದ ಸದಸ್ಯರ ನಿರೀಕ್ಷೆಯನ್ನು ಪೂರೈಸುವಿರಿ, ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬೇಡಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಯತ್ನಿಸಿ, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ.

ಮೀನರಾಶಿ
ಮೋಜು ಮಾಡಲು ಹೊರಟವರಿಗೆ ಸಂತೋಷ ಆನಂದ ದೊರೆಯಲಿದೆ, ಬ್ಯಾಂಕ್‌ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ, ನಿಮ್ಮ ನಿರೀಕ್ಷೆಯನ್ನು ಈಡೇರಿಸುವುದರಿಂದ ನಿಮ್ಮ ಕನಸು ನನಸಾಗಲಿದೆ, ನಿಮ್ಮ ಸಾಮರ್ಥ್ಯಕ್ಕೆ ಮನ್ನಣೆ ದೊರೆಯಲಿದೆ, ಹಿಂದೆ ಮಾಡಿದ ತಪ್ಪಿನ ಬಗ್ಗೆ ಜ್ಞಾನೋದಯ ವಾಗಲಿದೆ.

ಇದನ್ನೂ ಓದಿ : ಗರ್ಭಿಣಿ ಶವದ ಸಮಾಧಿ ಮೇಲೆ ಕುಳಿತು ತಪಸ್ಸು…ಮದುವೆಯಾಗಿದ್ದರೂ ಕನ್ಯೆಯಾಗಿಯೇ ಉಳಿದಿರುವ ಹೆಣ್ಣಿನ ಬಲಿ..!

ಇದನ್ನೂ ಓದಿ : Yoga Tips : ಚಕ್ರಾಸನದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಚಕ್ರಾಸನ ಮಾಹಿತಿ ನಿಮಗಾಗಿ

( Horoscope today astrological prediction for October 11)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular