ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 18 ನವೆಂಬರ್‌ 2023 : ರವಿ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಬಾಗಿಲು ತೆರೆಯಲಿದೆ

ದಿನಭವಿಷ್ಯ 18 ನವೆಂಬರ್‌ 2023 : ರವಿ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಬಾಗಿಲು ತೆರೆಯಲಿದೆ

- Advertisement -

Horoscope Today : ದಿನಭವಿಷ್ಯ 18 ನವೆಂಬರ್‌ 2023 ಶುಕ್ರವಾರ. ದ್ವಾದಶರಾಶಿಗಳ ಮೇಲೆ ಇಂದು ಉತ್ತರಾಷಾಢ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಸರ್ವಾರ್ಥ ಸಿದ್ದಿ ಯೋಗ ಹಾಗೂ ರವಿ ಯೋಗ ಹಲವು ರಾಶಿಯವರಿಗೆ ಶುಭಫಲಗಳನ್ನು ತರಲಿದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಚೈತನ್ಯದಾಯಕವಾದ ದಿನವಾಗಿರಲಿದೆ. ವ್ಯವಹಾರ ಕ್ಷೇತ್ರದಲ್ಲಿ ಅನಿರೀಕ್ಷಿತವಾದ ಲಾಭವನ್ನು ಪಡೆಯುವಿರಿ. ಸಕಾರಾತ್ಮಕ ಬದಲಾವಣೆ ಕಂಡು ಬರಲಿದೆ. ಸಂಗಾತಿಯ ನಡುವೆ ವಿಶ್ವಾಸದ ಕೊರತೆ ಇರುತ್ತದೆ. ವೈವಾಹಿಕ ಸಂಬಂಧಗಳಲ್ಲಿ ಬಿರುಕು ಮೂಡಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ವೃಷಭರಾಶಿ ದಿನಭವಿಷ್ಯ
ಸಂಗಾತಿಯ ಜೊತೆಗೆ ಸುಂದರ ಸಂಜೆಯನ್ನು ಕಳೆಯುವಿರಿ. ದೂರ ಪ್ರಯಾಣವನ್ನು ಆದಷ್ಟು ತಪ್ಪಿಸಿ. ಹಣ ಸಂಗ್ರಹಣೆಯ ಕಡೆಗೆ ಗಮನ ಹರಿಸುವಿರಿ. ಹಣಕಾಸಿನ ಖರ್ಚು ವೆಚ್ಚಗಳ ಮೇಲೆ ಹಿಡಿತ ಇರಲಿ. ವ್ಯವಹಾರಿಕ ಕ್ಷೇತ್ರದಲ್ಲಿ ಹೊಸ ಕನಸು ಮೂಡಲಿದೆ.

ಮಿಥುನರಾಶಿ ದಿನಭವಿಷ್ಯ
ಅನಿರೀಕ್ಷಿತ ಒತ್ತಡ ಉದ್ವೇಗವನ್ನು ತರಲಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯಕ್ಕೆ ಕೊರತೆ ಉಂಟಾಗಲಿದೆ. ದೀರ್ಘಕಾಲದಿಂದಲೂ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದವರು ಸಮಸ್ಯೆಯಿಂದ ಕೊಂಚ ಪರಿಹಾರ ಕಾಣುವ ಸಾಧ್ಯತೆಯಿದೆ. ಕುಟುಂಬ ಸದಸ್ಯರ ಸಲಹೆ ಪಡೆಯುವುದು ಉತ್ತಮ.

ಕರ್ಕಾಟಕರಾಶಿ ದಿನಭವಿಷ್ಯ
ಕೌಟುಂಬಿಕವಾಗಿ ಸಂತೋಷವನ್ನು ಕಾಣುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ. ವೈವಾಹಿಕ ಜೀವನದಲ್ಲಿ ಅಡೆತಡೆಗಳು ಕಂಡು ಬರಲಿದೆ. ಗುರುವನ್ನು ಭೇಟಿ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಸಿಂಹರಾಶಿ ದಿನಭವಿಷ್ಯ
ಜೀವನ ಸಂಗಾತಿಗೆ ಇಂದು ಸಾಮಾನ್ಯಕ್ಕಿಂತ ವಿಶೇಷವಾದ ದಿನವಾಗಿರಲಿದೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಹಣವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಪ್ರೀತಿ ಪಾತ್ರರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ದೂರದ ಬಂಧುಗಳ ಭೇಟಿಯಿಂದ ನೆಮ್ಮದಿ.

ಇದನ್ನೂ ಓದಿ : ಯಕ್ಷಗಾನ ಲೋಕಕ್ಕೆ ಮಕ್ಕೆಕಟ್ಟು ಮೇಳ ಎಂಟ್ರಿ : ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ಆರೂಢ ಪ್ರಶ್ನೆ !

ಕನ್ಯಾರಾಶಿ ದಿನಭವಿಷ್ಯ
ಆರೋಗ್ಯ ಚೆನ್ನಾಗಿರುತ್ತದೆ. ಯಾವುದೇ ಕಾರಣಕ್ಕೂ ಬದುಕನ್ನು ಲಘುವಾಗಿ ಪರಿಗಣಿಸಬೇಡಿ. ಸಾಮಾಜಿಕ ಜೀವನವನ್ನು ನಿರ್ಲಕ್ಷ್ಯ ಮಾಡಬೇಡಿ. ಕುಟುಂಬ ಸದಸ್ಯರು ನಿಮ್ಮ ಜೊತೆಗೆ ಹಲವು ಸಮಸ್ಯೆಗಳನ್ನು ಹಂಚಿಕೊಳ್ಳಲಿದ್ದಾರೆ. ನಿಮ್ಮ ಶ್ರಮದ ಹಿಂದೆ ಉತ್ತಮ ಪ್ರತಿಫಲ ದೊರೆಯಲಿದೆ.

Horoscope Today 18 November 2023 Zordic Sign 
Image credit to Original Source

ತುಲಾರಾಶಿ ದಿನಭವಿಷ್ಯ
ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಸಕಾಲ. ನಿಮಗೆ ಇಂದು ಅಚ್ಚರಿಯ ಉಡುಗೊರೆಯೊಂದು ದೊರೆಯುವ ಸಾಧ್ಯತೆಯಿದೆ. ವೈವಾಹಿಕ ಸಂತೋಷಗಳಿಗೆ ನೀವು ಅಚ್ಚರಿಯನ್ನು ಪಡುತ್ತೀರಿ. ಒಂದಕ್ಕಿಂತ ಹೆಚ್ಚು ಆದಾಯ ಮೂಲಕಗಳಿಂದ ಹಣಕಾಸಿನ ನೆರವು ನಿಮಗೆ ದೊರೆಯಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆಯನ್ನು ವಹಿಸಿ. ಮದುವೆಗೆ ಸಂಬಂಧಿಸಿದಂತೆ ಮನೆಯ ಹಿರಿಯರ ಸಲಹೆ ಪಡೆಯುವುದು ಉತ್ತಮ. ಯಾವುದೇ ಕಾರಣಕ್ಕೂ ಅಮೂಲ್ಯವಾದ ಸಮಯವನ್ನು ನೀವು ವ್ಯರ್ಥ ಮಾಡಬೇಡಿ. ಸಂಗಾತಿಯ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ.

ಇದನ್ನೂ ಓದಿ : ಐಪಿಎಲ್ 2024 : ನಿವೃತ್ತಿ ಘೋಷಿಸಿದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಆಟಗಾರ

ಧನಸ್ಸುರಾಶಿ ದಿನಭವಿಷ್ಯ
ತಂದೆ, ತಾಯಿಯ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ, ಹಣಕಾಸಿನ ಸ್ಥಿತಿಯು ಹದಗೆಡುವ ಸಾಧ್ಯತೆಯಿದೆ. ವೈವಾಹಿಕ ಸಂಬಂಧಗಳನ್ನು ಗಟ್ಟಿಯಾಗಿಸಲು ಪ್ರಯತ್ನಿಸಿ, ಸಂಗಾತಿಯು ನಿಮಗೆ ಇಂದು ಅದ್ಬುತವಾದ ಸುದ್ದಿಯನ್ನು ನೀಡಲಿದ್ದಾರೆ. ಇಂದು ಪೂರ್ಣಗೊಳಿಸಲು ಸಾಧ್ಯವಾಗದ ಕೆಲಸವನ್ನು ನಾಳೆಗೆ ಮುಂದೂಡಬೇಡಿ.

ಮಕರರಾಶಿ ದಿನಭವಿಷ್ಯ
ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಮಾಧಾನವಾಗಲಿದೆ. ಹಣಕಾಸಿನ ವಿಚಾರದಲ್ಲಿ ನೆಮ್ಮದಿಯ ದಿನ. ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಇಂದು ಶುಭ ಸುದ್ದಿಯೊಂದು ಕಾದಿದೆ.

ಕುಂಭರಾಶಿ ದಿನಭವಿಷ್ಯ
ಪ್ರೀತಿ ಪಾತ್ರರು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಯಿದೆ. ನಿಮ್ಮ ಪಾಲಿಗೆ ಇಂದು ಅನುಕೂಲಕರವಾದ ದಿನ. ಅಪರಿಚಿತರನ್ನು ಭೇಟಿಯಾಗುವ ಸಾಧ್ಯತೆಯಿದೆ. ಕೋಪವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಆರ್ಥಿಕ ಕಲಹ ಉಂಟಾಗುವ ಸಾಧ್ಯತೆಯಿದ್ದು, ಸಹೋದ್ಯೋಗಿಗಳ ಜೊತೆಗೆ ಎಚ್ಚರವಾಗಿರಿ.

ಇದನ್ನೂ ಓದಿ : ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಆರ್‌ ಅಶೋಕ್‌ ಆಯ್ಕೆ : ಉತ್ತರ ಕರ್ನಾಟಕ ಭಾಗಕ್ಕೆ ನಿರಾಸೆ

ಮೀನರಾಶಿ ದಿನಭವಿಷ್ಯ
ಯಾವುದೇ ವಿಚಾರದಲ್ಲಿಯೂ ನೀವು ಅಸಮಾಧಾನಗೊಳ್ಳಬೇಡಿ. ಹೊಸ ಪುಸ್ತಕವನ್ನು ಖರೀದಿ ಮಾಡುವ ಸಾಧ್ಯತೆಯಿದೆ. ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಎಲ್ಲಾ ವಿಚಾರದಲ್ಲಿಯೂ ಲೆಕ್ಕಾಚಾರ ಇಡುವುದನ್ನು ಮರೆಯಬೇಡಿ.

Horoscope Today 18 November 2023 Zordic Sign 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular