ಶನಿವಾರ, ಏಪ್ರಿಲ್ 26, 2025
Homehoroscopeದಿನಭವಿಷ್ಯ ಜನವರಿ 29 2025 : ಮೌನಿ ಅಮವಾಸ್ಯೆ ಮೇಷರಾಶಿ - ಮಿಥುನರಾಶಿಗೆ ಅದೃಷ್ಟ

ದಿನಭವಿಷ್ಯ ಜನವರಿ 29 2025 : ಮೌನಿ ಅಮವಾಸ್ಯೆ ಮೇಷರಾಶಿ – ಮಿಥುನರಾಶಿಗೆ ಅದೃಷ್ಟ

ಮೌನಿ ಅಮವಾಸ್ಯೆ (Mauni Amavasya 2025) ನಡೆಯಲಿದ್ದು, ಸಿದ್ದಿಯೋಗ, ತ್ರಿಗ್ರಾಹಿ ಯೋಗ, ಶಿವ ಯೋಗಳು ಕೆಲವೊಂದು ರಾಶಿಯವರಿಗೆ ಅದೃಷ್ಟ ತರಲಿದೆ.

- Advertisement -

Horoscope Today 25 January 2025 : ದಿನಭವಿಷ್ಯ ಜನವರಿ 29 2025 ಬುಧವಾರ. ಜ್ಯೋತಿಷ್ಯದ ಪ್ರಕಾರ, ಉತ್ತರಾಷಾಢ ಹಾಗೂ ಪೂರ್ವಾಷಾಢ ನಕ್ಷತ್ರಗಳು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಶ್ರವಣ ನಕ್ಷತ್ರದಲ್ಲಿ ಮೌನಿ ಅಮವಾಸ್ಯೆ (Mauni Amavasya 2025) ನಡೆಯಲಿದ್ದು, ಸಿದ್ದಿಯೋಗ, ತ್ರಿಗ್ರಾಹಿ ಯೋಗ, ಶಿವ ಯೋಗಳು ಕೆಲವೊಂದು ರಾಶಿಯವರಿಗೆ ಅದೃಷ್ಟ ತರಲಿದೆ. ಮೇಷರಾಶಿ ಯಿಂದ ಮೀನರಾಶಿಯ ವರೆಗೆ ಒಟ್ಟು ಹನ್ನೆರಡು ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ (Horoscope Today )

ಪೂರ್ವಿಕರ ಆಸ್ತಿಯಿಂದ ಹಣವನ್ನು ಪಡೆಯುತ್ತೀರಿ. ಮನೆಗೆ ಅತಿಥಿಗಳ ಆಗಮನ ನಿಮಗೆ ಸಂತಸವನ್ನು ತರಲಿದೆ. ಉದ್ಯೋಗಿಗಳಿಗೆ ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಫಲಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ವೃಷಭರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕು. ನಿಮ್ಮ ಆಹಾರ ಸೇವನೆಯ ಕಡೆಗೆ ಹೆಚ್ಚಿನ ಗಮನ ಹರಿಸಿ. ದೂರ ಪ್ರಯಾಣದ ವೇಳೆಯಲ್ಲಿ ಎಚ್ಚರವಾಗಿ ಇರಬೇಕು. ಮಕ್ಕಳ ವಿಚಾರದಲ್ಲಿ ನೀವಿಂದು ಸಕಾರಾತ್ಮಕ ಸುದ್ದಿಯನ್ನು ಕೇಳುತ್ತೀರಿ.

ಮಿಥುನರಾಶಿ ದಿನಭವಿಷ್ಯ
ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಹಲವು ಬಾರಿ ಪರಿಶೀಲಿಸಿ. ವ್ಯವಹಾರದ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸುವ ಸಾಧ್ಯತೆಯಿದೆ. ಪಾಲುದಾರಿಕೆಯಲ್ಲಿ ಹೊಂದಾಣಿಕೆ ಅತೀ ಅಗತ್ಯ. ದೂರದ ಬಂಧುಗಳ ಆಗಮನ ಸಂತಸವನ್ನು ತರಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಸಂಗಾತಿಯಿಂದ ಎಲ್ಲಾ ವಿಚಾರಗಳಲ್ಲಿಯೂ ಬೆಂಬಲ ದೊರೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ವೇಳೆಯಲ್ಲಿ ಎಚ್ಚರಿಕೆಯನ್ನು ವಹಿಸಿ. ವ್ಯವಹಾರಿಕವಾಗಿ ನೀವು ಇಂದು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಮಕ್ಕಳೊಂದಿಗೆ ಸಂತಸದ ಕ್ಷಣ.

ಸಿಂಹರಾಶಿ ದಿನಭವಿಷ್ಯ
ಸಂಗಾತಿಯ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ಹಳೆಯ ಸ್ನೇಹಿತರ ಭೇಟಿಯಿಂದ ನಿಮಗೆ ಸಂತಸ ತರಲಿದೆ. ಯಾವುದೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿ ಆಗುತ್ತೀರಿ. ಕುಟುಂಬ ಸದಸ್ಯರು ನಿಮಗೆ ಅಚ್ಚರಿಯ ಪಾರ್ಟಿಯನ್ನು ನೀಡುತ್ತಾರೆ.

ಕನ್ಯಾರಾಶಿ ದಿನಭವಿಷ್ಯ
ರಾಜಕಾರಣಿಗಳಿಗೆ ಇಂದು ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ನೆಮ್ಮದಿ. ಮಹಾನ್‌ ವ್ಯಕ್ತಿಯನ್ನು ಇಂದು ನೀವು ಭೇಟಿಯಾಗಲಿದ್ದು, ಮಹತ್ವದ ವಿಚಾರದ ಕುರಿತು ಚರ್ಚೆ ನಡೆಸಲಿದ್ದೀರಿ.

ತುಲಾರಾಶಿ ದಿನಭವಿಷ್ಯ
ಯಾವುದೇ ವ್ಯವಹಾರದಲ್ಲಿ ಇಂದು ನಿಮಗೆ ಲಾಭ ದೊರೆಯಲಿದೆ. ಸಾಲವಾಗಿ ನೀಡಿರುವ ಹಣವನ್ನು ಮರಳಿ ಪಡೆಯಲಿದ್ದೀರಿ. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಕುಟುಂಬ ಸದಸ್ಯರ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ.

ವೃಶ್ಚಿಕರಾಶಿ ದಿನಭವಿಷ್ಯ
ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುತ್ತೀರಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಚ್ಚರಿಯ ಫಲತಾಂಶ. ಯಾವುದೇ ಕೆಲಸ ಕಾರ್ಯಗಳನ್ನು ನೀವು ಇಂದು ಮುಂದೂಡಬೇಡಿ. ಹಳೆಯ ಹೂಡಿಕೆ ಇಂದು ಲಾಭವನ್ನು ತರುವ ಸಾಧ್ಯತೆಯಿದೆ.

ಧನಸ್ಸುರಾಶಿ ದಿನಭವಿಷ್ಯ
ಉದ್ಯಮಿಗಳು ಹೊಸ ವ್ಯವಹಾರದಲ್ಲಿ ಹಣವನ್ನು ಹೂಡಿಕೆ ಮಾಡುವ ಸಾಧ್ಯತೆಯಿದೆ. ಕೌಟುಂಬಿಕ ಜೀವನದ ವಿಚಾರದಲ್ಲಿ ಕೆಟ್ಟ ಸುದ್ದಿಯೊಂದನ್ನು ಕೇಳುವ ಸಾಧ್ಯತೆಯಿದೆ. ಮಕ್ಕಳಿಂದ ನೆಮ್ಮದಿ ದೊರೆಯಲಿದೆ.

ಇದನ್ನೂ ಓದಿ : Jiophone Prima 2: ಕೇವಲ 2799ರೂ.ಗೆ ಸಿಗಲಿದೆ 4G ಮೊಬೈಲ್‌

ಮಕರರಾಶಿ ದಿನಭವಿಷ್ಯ
ಈ ರಾಶಿಯವರಿಗೆ ಸಿದ್ದಿಯೋಗದ ಪ್ರಭಾವದ ಪ್ರಯೋಜನ ದೊರೆಯಲಿದೆ. ವ್ಯಾಪಾರಿಗಳು ಇಂದು ಕೆಲಸ ವಿಚಾರದಲ್ಲಿ ಎಚ್ಚರವಾಗಿ ಇರಬೇಕು. ಆರ್ಥಿಕವಾಗಿ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ತಾಯಿಯಿಂದ ಸಹಾಯ ದೊರೆಯಲಿದೆ.

ಕುಂಭರಾಶಿ ದಿನಭವಿಷ್ಯ
ಆಸ್ತಿಗೆ ಸಂಬಂಧಿಸಿದ ವಿವಾದಗಳು ಇಂದು ಬಗೆ ಹರಿಯಲಿದೆ. ಮೇಲಾಧಿಕಾರಿಗಳಿಂದ ಸಹಾಯವನ್ನು ಪಡೆಯಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತೀರಿ. ಹೂಡಿಕೆ ವಿಚಾರದಲ್ಲಿ ನೀವು ಅತೀ ದೊಡ್ಡ ಲಾಭವನ್ನು ಪಡೆಯುತ್ತೀರಿ.

ಇದನ್ನೂ ಓದಿ : ಮಹಿಳೆಯರಿಗೆ ಗುಡ್‌ನ್ಯೂಸ್‌ : ಕೇಂದ್ರ ಸರಕಾರ ನೀಡಲಿದೆ 6 ಯೋಜನೆಯಡಿ ಸಾಲ

ಮೀನರಾಶಿ ದಿನಭವಿಷ್ಯ
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಂದು ಸಂತಸದ ಘಟನೆಗಳು ನಡೆಯಲಿದೆ. ಕೌಟುಂಬಿಕವಾಗಿ ಯಾವುದೇ ಸಮಸ್ಯೆ ಉಂಟಾದರೂ ಕೂಡ ನೀವು ಇಂದು ಮೌನವಾಗಿ ಇರಬೇಕು. ಸಂಬಂಧಿಕರು ನಿಮಗೆ ಇಂದು ಸಹಕಾರವನ್ನು ನೀಡಲಿದ್ದಾರೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

Horoscope Today 25 January 2025 Mauni Amavasya 2025

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular