ಮಂಗಳವಾರ, ಏಪ್ರಿಲ್ 29, 2025
HomehoroscopeHoroscope Today : ದಿನಭವಿಷ್ಯ : ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

Horoscope Today : ದಿನಭವಿಷ್ಯ : ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

- Advertisement -

ಮೇಷರಾಶಿ
ಹಿಂದಿನ ಉದ್ಯಮಗಳ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರ ಜೊತೆಗೆ ಪ್ರವಾಸಕ್ಕೆ ತೆರಳುವಿರಿ, ಇಂದು ಅಧಿಕ ಹಣವನ್ನು ಖರ್ಚು ಮಾಡುವಿರಿ, ಕೋಪವನ್ನು ಕಡಿಮೆ ಮಾಡಿಕೊಳ್ಳಿ, ಕೆಲವರಿಗೆ ವೃತ್ತಿಪರ ಪ್ರಗತಿ. ಸಂಗಾತಿಯೊಂದಿಗೆ ನೀವು ಸಮಯವನ್ನು ಕಳೆಯುವಿರಿ, ಸಂಬಂಧದಲ್ಲಿ ಅಪಸ್ವರ ಕೇಳಿಬರಲಿದೆ, ಹೊಂದಾಣಿಕೆ ಯಿಂದ ಕಾರ್ಯ ಸಾಧನೆಯಾಗಲಿದೆ.

ವೃಷಭರಾಶಿ
ಆರೋಗ್ಯವು ಉತ್ತಮವಾಗಿರಲಿದೆ, ಸ್ನೇಹಿತರೊಂದಿಗೆ ಕಾಳ ಕಳೆಯುವಿರಿ, ಸಹೋದರ, ಸಹೋದರಿಯಿಂದ ಲಾಭವನ್ನು ಪಡೆಯುವಿರಿ, ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸಲಿದೆ, ಸಹವರ್ತಿಗಳು ಕಿರಿಕಿರಿಗೊಳ್ಳುವ ಸಾಧ್ಯತೆಯಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ, ಸಂಗಾತಿಯಿಂದ ನೀವು ಅದ್ಬುತವಾದ ಸುದ್ದಿಯೊಂದನ್ನು ಕೇಳುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಮಿಥುನರಾಶಿ
ದ್ವೇಷದ ಭಾವನೆ ದುಬಾರಿಯಾಗಿ ಪರಿಣಮಿಸಲಿದೆ, ವಿವೇಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ, ಸಂಬಂಧದಲ್ಲಿ ಬಿರುಕು ಕಾಣಿಸಲಿದೆ, ನೀವಿಂದು ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ, ಆಕ್ರಮಣಕಾರಿ ಸ್ವಭಾವದಿಂದಾಗಿ ಎಣಿಕೆಯಂತೆ ಲಾಭ ದೊರೆಯಲಾರದು, ಕೆಲಸದ ಸ್ಥಳದಲ್ಲಿ ಪಿತೂರಿ ನಡೆಯುವ ಸಾಧ್ಯತೆಯಿದೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಸಂಗಾತಿಯಿಂದ ನೀವು ಅದ್ಬುತವಾದುದದನ್ನು ಪಡೆಯುವಿರಿ.

ಕರ್ಕಾಟಕರಾಶಿ
ವಿರಾಮದ ವೇಳೆಯಲ್ಲಿ ಆನಂದವನ್ನು ಪಡೆಯುವಿರಿ, ಹಣಕಾಸಿನ ವಿಚಾರದಲ್ಲಿ ಯೋಚಿಸಿ ಹೆಜ್ಜೆಯನ್ನಿಡಿ, ಮಗುವಿನ ಸಾಧನೆಯನ್ನು ಜನರು ಕೊಂಡಾಡಲಿದ್ದಾರೆ, ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕನಸು ನನಸಾಗಲಿದೆ, ಪ್ರಯಾಣದ ವೇಳೆಯಲ್ಲಿ ಆಹ್ಲಾದಕರ ಘಟನೆ ನಡೆಯಲಿದೆ, ಮದುವೆಯ ವಿಚಾರದಲ್ಲಿ ಸಂತಸದ ಸುದ್ದಿಯೊಂದನ್ನು ಕೇಳುವಿರಿ, ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ.

ಸಿಂಹರಾಶಿ
ಮನರಂಜನೆ ಹಾಗೂ ಮೋಜಿನ ದಿನ, ಇತರರ ನೆರವಿನ ಮೇಲೆ ಹಣದ ಹೂಡಿಕೆಯನ್ನು ಮಾಡುವಿರಿ, ಪ್ರೇಮಿಗೆ ಇಷ್ಟವಾಗದ ಬಟ್ಟೆಯನ್ನು ಧರಿಸಬೇಡಿ, ಕೆಲಸದ ಮೇಲೆ ಗಮನ ಹರಿಸಿದರೆ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗಲಿದೆ, ಹಳೆಯ ಸ್ನೇಹಿತರು ನಿಮ್ಮನ್ನು ಬಿಡುವಿನ ವೇಳೆಯಲ್ಲಿ ಭೇಟಿಯಾಗುವರು, ಯಾವುದೇ ಯೋಜನೆ ಆರಂಭಕ್ಕೂ ಮುನ್ನ ಸಂಗಾತಿಯ ಸಹಕಾರ ಪಡೆಯಿರಿ.

ಕನ್ಯಾರಾಶಿ
ತುಂಬಾ ಸಕ್ರಿಯ ಮತ್ತು ಚುರುಕಾಗಿ ಉಳಿಯುತ್ತೀರಿ. ಆರೋಗ್ಯದಕ್ಕೆ ಚೇತರಿಕೆ ಕಂಡುಬರಲಿದೆ, ವಿತ್ತೀಯ ವಹಿವಾಟುಗಳು ದಿನವಿಡೀ ನಿರಂತರವಾಗಿ ನಡೆಯುತ್ತವೆ. ಮಕ್ಕಳ ಸಮಸ್ಯೆಯನ್ನು ಪರಿಹಾರ ಮಾಡುವತ್ತ ಗಮನ ಹರಿಸಿ. ಅಮೂಲ್ಯವಾದ ಸಮಯವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ, ಸಂಗಾತಿಯು ನಿಮ್ಮ ಸಹಕಾರಕ್ಕೆ ಧಾವಿಸಲಿದ್ದಾರೆ. ಸ್ನೇಹಿತರಿಗೆ ಸಹಕಾರ ಮಾಡುವುದರಿಂದ ಅನುಕೂಲವಾಗಲಿದೆ.

ತುಲಾರಾಶಿ
ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಆರೋಗ್ಯವು ಉತ್ತಮವಾಗಿರುತ್ತದೆ. ಮನೆಯ ಕಾರ್ಯಕ್ರಮಕ್ಕಾಗಿ ಅಧಿಕ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಕೌಟುಂಬಿಕ ಒತ್ತಡವನ್ನು ಬೇರೆಡೆಗೆ ವರ್ಗಾಯಿಸಲು ಯತ್ನಿಸಿ, ಆತ್ಮಾನುಕಂಪದಲ್ಲಿ ತೊಡಗುವ ಕ್ಷಣವನ್ನು ವ್ಯರ್ಥ ಮಾಡಬೇಡಿ, ಜೀವನ ಏನು ಅನ್ನೋದ್ರ ಪಾಠವನ್ನು ಕೇಳುವಿರಿ, ಪ್ರೀತಿಯ ಜೀವನವು ಉತ್ತಮವಾದ ತಿರುವನ್ನು ಪಡೆದುಕೊಳ್ಳಲಿದೆ.

ವೃಶ್ಚಿಕರಾಶಿ
ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿ ಆರೋಗ್ಯವು ಉತ್ತಮವಾಗಿರಲಿದೆ, ಮನೆಯಲ್ಲಿ ಸಮಾರಂಭವನ್ನು ಆಯೋಜಿಸುವ ಸಾಧ್ಯತೆಯಿದೆ, ನಿಮ್ಮ ಆರ್ಥಿಕ ಸ್ಥಿತಿಯು ಋಣಾತ್ಮಕ ಪರಿಣಾಮ ಉಂಟಾಗಲಿದೆ, ಕೌಟುಂಬಿಕ ಒತ್ತಡವನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿ, ಪ್ರೀತಿಯ ಜೀವನವು ಇಂದು ಉತ್ತಮ ತಿರುವು ಪಡೆದುಕೊಳ್ಳಲಿದೆ, ಆರೋಗ್ಯದ ವಿಚಾರದಲ್ಲಿ ಫಿಟ್‌ ಆಗಿರಲು ಯತ್ನಿಸಿ.

ಧನಸುರಾಶಿ
ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ಸಾಲ ಮರುಪಾವತಿಯಾಗಲಿದೆ, ಸಂಬಂಧಿಕರು ಹಾಗೂ ಆಪ್ತರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳಿ, ಮನಸ್ಸಿಗೆ ಹೊಳೆಯುವ ಹೊಸ ಯೋಜನೆಗೆ ಹಣಕಾಸಿನ ಹೂಡಿಕೆಯನ್ನು ಮಾಡಿ, ಬಿಡುವಿನ ವೇಳೆಯಲ್ಲಿ ನಿಮ್ಮ ಮೆಚ್ಚಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ, ಸಂಗಾತಿಯೊಂದಿಗೆ ಅದ್ಬುತ ದಿನವಾಗಿರಲಿದೆ, ನಿಮ್ಮ ನೆಚ್ಚಿನ ಚಟುವಟಿಕೆಯನ್ನು ಕೈಗೊಳ್ಳಲು ಇಷ್ಟಪಡುವಿರಿ.

ಮಕರರಾಶಿ
ಆಧ್ಯಾತ್ಮಿಕ ಮತ್ತು ದೈಹಿಕ ಲಾಭಕ್ಕಾಗಿ ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡಬೇಕು. ನಿಮ್ಮ ವೈಯಕ್ತಿಕ ಜೀವನ ಇಂದು ನೆಮ್ಮದಿಯನ್ನು ತರಲಿದೆ, ಅಲ್ಲದೇ ಕುಟುಂಬಸ್ಥರಿಗೆ ಸಂತಸವನ್ನು ಮೂಡಿಸಲಿದೆ, ಗಂಭೀರವಾದ ಸಮಸ್ಯೆಯನ್ನು ನೀವಿಂದು ಎದುರಿಸಲಿದ್ದೀರಿ, ಅತಿಯಾದ ದಟ್ಟಣೆಯು ನಿಮ್ಮ ಪ್ರಯತ್ನಗಳನ್ನು ಹಾಳು ಮಾಡಲಿದೆ, ಸಂಗಾತಿ ಯೊಂದಿಗೆ ಕಡಿಮೆ ಆರೋಗ್ಯವು ಕಲಸಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

ಕುಂಭರಾಶಿ
ಕೆಲಸದ ವಿಚಾರದಲ್ಲಿ ಹಿರಿಯರ ಸಲಹೆಯನ್ನು ಆಲಿಸಿ, ಒತ್ತಡದಿಂದಾಗಿ ಕೆಲಸದಲ್ಲಿನ ನಿಮ್ಮ ಏಕಾಗ್ರತೆಗೆ ಭಂಗ ಬರಲಿದೆ, ನೀವಿಂದು ಸಾಲವನ್ನು ಪಡೆಯಲು ಮುಂದಾಗುವ ಸಾಧ್ಯತೆ, ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ, ಪ್ರೀತಿಸುವ ಜನರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡಿ, ಎಲ್ಲಾ ವಿಚಾರದಲ್ಲಿಯೂ ಜಾಗೃತರಾಗಿರಿ, ಯೋಜನೆಗಳಲ್ಲಿ ಅಧಿಕ ಲಾಭ ದೊರೆಯಲಿದೆ,

ಮೀನರಾಶಿ
ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ವ್ಯವಹಾರ ಕ್ಷೇತ್ರದಲ್ಲಿಂದು ಅಧಿಕ ಲಾಭ ದೊರೆಯಲಿದೆ, ಹಳೆಯ ಸ್ನೇಹಿತರ ಭೇಟಿಯಿಂದ ನಿಮಗೆ ನಿಮ್ಮ ಬಾಳಲ್ಲಿ ಹೊಸ ಕನಸು ಮೂಡಲಿದೆ, ಅಧ್ಯಯನದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ, ನೀವು ಇಂದು ಪ್ರವಾಕ್ಕೆ ಹೋಗಿರುವ ಸಾಧ್ಯತೆಯಿದೆ, ಕೆಲಸ ಮತ್ತು ಮನೆಯಲ್ಲಿನ ಒತ್ತಡವು ನಿಮ್ಮನ್ನು ಕಡಿಮೆ ಕೋಪಗೊಳಿಸಬಹುದು.

(Horoscope today astrological prediction for November 17)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular