ಬುಧವಾರ, ಮೇ 7, 2025
HomehoroscopeHoroscope Today : ದಿನಭವಿಷ್ಯ : ಗ್ರಹಣದ ದಿನದಂದು ಯಾವ ರಾಶಿಗೆ ಶುಭಫಲ

Horoscope Today : ದಿನಭವಿಷ್ಯ : ಗ್ರಹಣದ ದಿನದಂದು ಯಾವ ರಾಶಿಗೆ ಶುಭಫಲ

- Advertisement -

ಮೇಷರಾಶಿ
ಆಹಾರ ಸೇವನೆಯ ವೇಳೆಯಲ್ಲಿ ಎಚ್ಚರಿಕೆ ಇರಲಿ, ಅಜಾಗರೂಕತೆ ನಿಮ್ಮನ್ನು ಅಸ್ವಸ್ಥಗೊಳಿಸಲಿದೆ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ, ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ, ಇಂದು ನಿಮಗೆ ಯಾರಾದ್ರೂ ದ್ರೋಹ ಮಾಡುವ ಸಾಧ್ಯತೆಯಿದೆ, ಅನುಕೂಲಕರ ಗ್ರಹಗಳು ನಿಮಗೆ ಸಂತೋಷವನ್ನು ನೀಡಲಿವೆ, ಸುತ್ತಮುತ್ತಲಿನ ಜನರ ಸಹಕಾರ ನಿಮಗೆ ದೊರೆಯಲಿದೆ.

ವೃಷಭರಾಶಿ
ಹಣವನ್ನು ಖರ್ಚು ಮಾಡುವ ವೇಳೆಯಲ್ಲಿ ಎಚ್ಚರಿಕೆ ವಹಿಸಿ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅತೀ ಅಗತ್ಯ, ಹಣಕಾಸಿನ ಸಮಸ್ಯೆ ಪರಿಹಾರಕ್ಕೆ ಚಾಣಾಕ್ಷತೆಯನ್ನು ರೂಪಿಸಬೇಕಾಗುತ್ತದೆ, ಬಿಡುವಿನ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರಿಕೆಯನ್ನು ವಹಿಸಿ, ಸಂಗಾತಿಯೊಂದಿಗೆ ರಾಜಿ ಮಾಡಿಕೊಳ್ಳುವುದು ತುಂಬಾ ಉತ್ತಮ.

ಮಿಥುನರಾಶಿ
ದೀರ್ಘಕಾಲದ ಅನಾರೋಗ್ಯದಿಂದ ಮುಕ್ತರಾಗಬಹುದು. ಉದ್ಯಮ, ವ್ಯವಹಾರದಲ್ಲಿ ಭಾರಿ ಲಾಭವನ್ನು ಕಾಣುವಿರಿ, ಹೊಸ ವ್ಯವಹಾರ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಿದೆ, ಹಳೆಯ ಸಂಪರ್ಕವು ನಿಮಗೆ ಕೆಲವು ಸಮಸ್ಯೆಗಳನ್ನು ಉಂಟು ಮಾಡಲಿದೆ, ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಅನುಭವಿಸುವಿರಿ, ಮೇಲಾಧಿಕಾರಿಗಳು ನಿಮಗೆ ಸಹಕಾರವನ್ನು ನೀಡಲಿದ್ದಾರೆ.

ಕರ್ಕಾಟಕರಾಶಿ
ಬೇರೆಯವರನ್ನು ಟೀಕಿಸುವುದರಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ, ಪೋಷಕರ ಸಹಕಾರದಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ, ಆಭರಣ ಹಾಗೂ ಗ್ರಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ, ಸಹೋದ್ಯೋಗಿಗಳಿಂದ ಟೀಕೆಯನ್ನು ಅನುಭವಿಸಲಿದ್ದೀರಿ, ಸಂಗಾತಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡು ಮಾಡಲಿದೆ, ವಿಭಿನ್ನ ರೀತಿಯ ಪ್ರಣಯವನ್ನು ಅನುಭವಿಸುವಿರಿ.

ಸಿಂಹರಾಶಿ
ದೀರ್ಘಕಾಲದ ಅನಾರೋಗ್ಯದಿಂದ ಮುಕ್ತರಾಗಬಹುದು, ತಂದೆಯ ಸಲಹೆ ಕೆಲಸದ ಸ್ಥಳದಲ್ಲಿ ಪ್ರಯೋಜನಕ್ಕೆ ಬರಲಿದೆ, ಕುಟುಂಬದ ಯೋಗಕ್ಷೇಮಕ್ಕಾಗಿ ಶ್ರಮಿಸಿ. ಪ್ರಾಮಾಣಿಕತೆ ಪ್ರಶಂಸೆಗೆ ಒಳಗಾಗಲಿದೆ, ಅಗತ್ಯವಿರುವವರು ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ, ಸಂಗಾತಿಯ ಪ್ರೀತಿಯು ನಿಮಗೆ ಸಿಗಲಿದೆ, ಇತರರಿಗೆ ಅಭಿಪ್ರಾಯವನ್ನು ನೀಡುವುದರಿಂದ ಲಾಭವನ್ನು ಪಡೆಯುತ್ತೀರಿ.

ಕನ್ಯಾರಾಶಿ
ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ವ್ಯಾಪಾರದಲ್ಲಿನ ಲಾಭವು ನಿಮಗೆ ಸಂತೋಷವನ್ನು ತರಲಿದೆ, ಮಕ್ಕಳ ಅಗತ್ಯತೆಗಳನ್ನು ನೋಡಿಕೊಳ್ಳಿ, ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ನಿಮಗೆ ಅಧಿಕ ಲಾಭ ದೊರೆಯಲಿದೆ, ಬಿಡುವಿನ ವೇಳೆಯಲ್ಲಿ ತಾಯಿ ಅಗತ್ಯಗಳನ್ನು ಪೂರೈಸಲು ಯತ್ನಿಸಿ, ಸರಿಯಾದ ಧಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದರೆ ನಿಮಗೆ ತಕ್ಕ ಪ್ರತಿಫಲ ದೊರೆಯಲಿದೆ.

ತುಲಾರಾಶಿ
ಅತಿಯಾಗಿ ತಿನ್ನುವುದನ್ನು ತಪ್ಪಿಸಿ, ದೇಹದ ತೂಕವನ್ನು ಒಮ್ಮೆ ಪರಿಶೀಲಿಸಿ, ರಿಯಲ್‌ ಎಸ್ಟೇಟ್‌ ಉದ್ಯಮ ಲಾಭದಾಯಕವೆನಿಸಲಿದೆ, ಕುಟುಂಬ ಸದಸ್ಯರ ಬಗ್ಗೆ ಟೀಕೆ ಕೇಳಿಬರಲಿದೆ, ಕ್ಲುಲಕ ವಿಚಾರವನ್ನು ಪ್ರೀತಿಯ ಜೀವನದಲ್ಲಿ ಕ್ಷಮಿಸಿ ಬಿಡಿ, ಪಾಲುದಾರರನ್ನು ಯಾವುದೇ ಕಾರಣಕ್ಕೂ ಲಘುವಾಗಿ ತೆಗೆದುಕೊಳ್ಳಬೇಡಿ, ಈ ರಾಶಿಯವರು ಹೆಚ್ಚು ಆಸಕ್ತಿದಾಯಕರಾಗಿರುತ್ತಾರೆ, ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟ ಪಡುತ್ತಾರೆ.

ವೃಶ್ಚಿಕರಾಶಿ
ನೀವಿಂದು ಶಕ್ತಿಯಿಂದ ತುಂಬಿರುತ್ತೀರಿ, ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಅಳಿವು ಉಳಿವನ್ನು ನಿರ್ಧಾರ ಮಾಡಲಿದೆ, ಕುಟುಂಬದವರಿಗೆ ಸಮಯವನ್ನು ನೀಡಿ, ನಿಮ್ಮ ಬಗ್ಗೆ ದೂರು ನೀಡಲು ಯಾರಿಗೂ ಅವಕಾಶವನ್ನು ನೀಡಬೇಡಿ, ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಜನರೊಂದಿಗೆ ಸ್ನೇಹದಿಂದ ಇರುವುದರಿಂದ ತಪ್ಪಿಸಿ, ಒತ್ತಡ ವೇಳಾಪಟ್ಟಿ ನಿಮ್ಮ ಸಂಗಾತಿಯ ನಿಷ್ಠೆಯನ್ನು ಪ್ರಶ್ನಿಸಬಹುದು, ಯಾವುದೇ ವಿಚಾರದಲ್ಲಿ ಕೋಪಗೊಳ್ಳಬೇಡಿ.

ಧನಸ್ಸುರಾಶಿ
ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ, ಸ್ವತಃ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ, ಮನೆಯ ಹಿರಿಯರು ನಿಮಗೆ ಹಣಕಾಸಿನ ಸಹಾಯವನ್ನು ಮಾಡಲಿದ್ದಾರೆ, ಸಂಬಂಧಿಕರು ಮನೆಗೆ ಭೇಟಿ ನೀಡುವುದರಿಂದ ಮನದಲ್ಲಿ ಸಂತಸ ಮೂಡಲಿದೆ, ಸಂಗಾತಿಯ ಮನಸ್ಸು ಚೆನ್ನಾಗಿದೆಯೇ ಇಲ್ಲವೇ ಅನ್ನೋದನ್ನು ಅರಿತುಕೊಳ್ಳಿ, ಏಕಾಂಗಿಯಾಗಿ ಸಮಯವನ್ನು ಕಳೆಯುವುದು ಉತ್ತಮ, ಸಂಗಾತಿಯ ಸಭ್ಯತೆ ಇಂದು ನಿಮ್ಮ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಲಿದೆ.

ಮಕರರಾಶಿ
ಉದ್ವೇಗದಿಂದ ಮುಕ್ತಿ ಪಡೆಯಬಹುದು. ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ, ನೀವಿಂದು ದಾನವನ್ನು ಮಾಡುವುದು ಉತ್ತಮ, ಪತ್ರಗಳನ್ನು ಸಂಪೂರ್ಣವಾಗಿ ಓದದೆ ಯಾವುದೇ ವ್ಯವಹಾರ ಅಥವಾ ಕಾನೂನು ದಾಖಲೆಗಳಿಗೆ ಸಹಿಯನ್ನು ಮಾಡಬೇಡಿ, ಬಿಡುವಿನ ಸಮಯವನ್ನು ಸಂಗಾತಿಯೊಂದಿಗೆ ಕಳೆಯುವಿರಿ, ಕೆಲಸದಲ್ಲಿ ಹೆಚ್ಚು ಮುಳುಗುವ ಸಾಧ್ಯತೆಯಿದೆ, ಇದು ನಿಮ್ಮ ಸಂಗಾತಿಗೆ ಬೇಸರವನ್ನುಂಟು ಮಾಡುವ ಸಾಧ್ಯತೆಯಿದೆ.

ಕುಂಭರಾಶಿ
ಒಳ್ಳೆಯ ಭಾವನೆ ಮೂಡಿಸುವಂತಹ ಕೆಲಸಗಳನ್ನು ಮಾಡಲು ಅದ್ಭುತ ದಿನ. ತಾಯಿಯ ಕಡೆಯಿಂದ ನೀವು ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಬಂಧಗಳೊಂದಿಗೆ ಸಂಬಂಧುಗಳು ಕೂಡ ಬೆಸೆಯುವ ದಿನವಾಗಿದೆ, ಹೃದಯವನ್ನು ಆಕರ್ಷಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ, ನೀವಿಂದು ಕೆಲಸದಲ್ಲಿ ಪ್ರಗತಿಯನ್ನು ಕಾಣಬಹುದು. ಗಾಸಿಪ್ ಮತ್ತು ವದಂತಿಗಳಿಂದ ದೂರವಿರಿ. ನಿಮ್ಮ ಜೀವನ ಸಂಗಾತಿ ಇಂದು ನಿಮ್ಮನ್ನು ಅತ್ಯಂತ ಸಂತೋಷದಿಂದ ಇರುವಂತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ.

ಮೀನರಾಶಿ
ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಅನುಸರಿಸಲು ಉತ್ತಮ ದಿನವಾಗಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ, ಸಾಮೂಹಿಕ ಗುರಿಯತ್ತ ಕೆಲಸ ಮಾಡಲು ನೀವು ಬಲವಾದ ಸ್ಥಾನದಲ್ಲಿರುತ್ತೀರಿ. ಕಳೆದ ಕೆಲವು ದಿನಗಳಿಂದ ತುಂಬಾ ಕಾರ್ಯನಿರತರಾಗಿದ್ದವರು ಅಂತಿಮವಾಗಿ ತಮ್ಮದೇ ಆದ ಸಮಯವನ್ನು ಆನಂದಿಸುತ್ತಾರೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ, ನಿಮ್ಮ ಸಂಗಾತಿಯು ಇದನ್ನು ಇಂದು ನಿಮಗೆ ಸಾಬೀತುಪಡಿಸುತ್ತಾರೆ. ದಿನಾಂತ್ಯಕ್ಕೆ ಶುಭವಾರ್ತೆಯೊಂದನ್ನು ಕೇಳುವಿರಿ.

(Horoscope today astrological prediction for November 19)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular