ಮಂಗಳವಾರ, ಏಪ್ರಿಲ್ 29, 2025
HomeBreakingHoroscope Today : ದಿನಭವಿಷ್ಯ : ಜೂನ್‌ 26-06-2023

Horoscope Today : ದಿನಭವಿಷ್ಯ : ಜೂನ್‌ 26-06-2023

- Advertisement -

ಮೇಷರಾಶಿ
(Horoscope Today) ಹೂಡಿಕೆ ಮಾಡುವ ಮೊದಲು ವಿಶ್ವಾಸಾರ್ಹತೆಯನ್ನು ಪರೀಕ್ಷಿಸಿಕೊಳ್ಳಿ. ದೊಡ್ಡ ಯೋಜನೆಯ ಕುರಿತ ನಿಮ್ಮ ಯೋಚನೆ ಫಲಕಾರಿಯಾಗಲಿದೆ. ನಿಮ್ಮ ಗುರಿಯನ್ನು ಸಾಧಿಸಲು ಉತ್ತಮ ಅವಕಾಶ ದೊರೆಯಲಿದೆ. ಸಂಗಾತಿಯೊಂದಿಗೆ ಸುಂದರ ಸಮಯವನ್ನು ಕಳೆಯುವಿರಿ. ಆರೋಗ್ಯವನ್ನು ಉತ್ತಮವಾಗಿದ್ದು, ಮಾನಸಿಕ ನೆಮ್ಮದಿ ದೊರೆಯಲಿದೆ.

ವೃಷಭರಾಶಿ
ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಕೆಲಸದ ಸ್ಥಳದಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಮಾತನಾಡ ಬೇಡಿ. ಹಳೆಯ ಹೂಡಿಕೆಯಿಂದ ನೆಮ್ಮದಿಗೆ ಭಂಗ ಬರುವ ಸಾಧ್ಯತೆಯಿದೆ. ಸಂಗಾತಿಯೊಂದಿಗಿನ ಜೀವನವು ಕಠಿಣವಾಗಿರತ್ತದೆ. ಕುಟುಂಬ ಸದಸ್ಯರ ಜೊತೆಗೆ ವಿಶ್ರಾಂತಿಯನ್ನು ಪಡೆಯಲು ಬಯಸುವಿರಿ.

ಮಿಥುನರಾಶಿ
ರಾತ್ರಿಯ ವೇಳೆಯಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸಂಗಾತಿಯಿಂದಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ದಿನ. ಸಂಗಾತಿಯ ಆರೋಗ್ಯ ಕೈಕೊಡುವ ಸಾಧ್ಯತೆಯಿದೆ. ಇದನ್ನೂ ಓದಿ : Monsoon Fungal Infections : ಮಳೆಗಾಲದಲ್ಲಿ ಉಂಟಾಗುವ ಫಂಗಲ್ ಸೋಂಕಿನಿಂದ ಚರ್ಮದ ಕಿರಿಕಿರಿಯೇ ಇಲ್ಲಿದೆ ಪರಿಹಾರ

ಕರ್ಕಾಟಕರಾಶಿ
ದೀರ್ಘಕಾಲದ ಕಾರ್ಯ ನಿಮಗೆ ಅದೃಷ್ಠವನ್ನು ತಂದುಕೊಡಲಿದೆ. ಮನೆಯಲ್ಲಿ ಇಂದು ಹಬ್ಬದ ವಾತಾವರಣ ಇರಲಿದೆ. ಪ್ರವಾಸಕ್ಕೆ ತೆರಳುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ದೂರದ ಸಂಬಂಧಿಗಳು ಇಂದು ಮನೆಗೆ ಭೇಟಿ ನೀಡಲಿದ್ದಾರೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ.

ಸಿಂಹರಾಶಿ
ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುವ ನಿಮಗೆ ಇಂದು ವಿಶ್ರಾಂತಿಯ ಅಗತ್ಯವಿದೆ. ನಿಮಗೆ ಇಂದು ಹಣಕಾಸಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ನಿಮ್ಮ ಪ್ರೇಮಿಯನ್ನು ನಿರಾಸೆಗೊಳಿಸಬೇಡಿ. ತುರ್ತು ಕೆಲಸದಿಂದಾಗಿ ನಿಮ್ಮ ಇಡೀ ದಿನದ ಯೋಜನೆಗಳು ಹಾಳಾಗುವ ಸಾಧ್ಯತೆಯಿದೆ. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಇಂದು ಸಕಾಲವಲ್ಲ.

ಕನ್ಯಾರಾಶಿ
ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಸಂಕಷ್ಟದಲ್ಲಿ ಪರಿಸ್ಥಿತಿ ಅನುಭವಿಸುತ್ತಿರುವ ನಿಮಗೆ ಹಣವು ಸಹಾಯವನ್ನು ಮಾಡುತ್ತದೆ. ಹೂಡಿಕೆ ಮಾಡಲು ಇದು ಸಕಾಲ. ಪ್ರೀತಿ ಪಾತ್ರರ ಜೊತೆಗೆ ಪ್ರವಾಸಕ್ಕೆ ತೆರಳುವುದರಿಂದ ಮಾನಸಿಕ ನೆಮ್ಮದಿ ಸಾಧ್ಯ. ಬಿಡುವಿನ ವೇಳೆಯಲ್ಲಿ ಹೊಸತನ್ನು ಪಡೆಯಲು ಯೋಚಿಸುವ ನಿಮಗೆ ಹೊಸ ಯೋಜನೆಯೊಂದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ. ಸಂಗಾತಿಗೆ ಯಾವುದೇ ಕಾರಣಕ್ಕೂ ನೋಯಿಸಬೇಡಿ. ಇದನ್ನೂ ಓದಿ : Kantara Manasi Sudhir : ಮತ್ತೆ ಬಂದರು ಕಾಂತಾರ ಮಾನಸಿ, ಸಂವಿಧಾನದ ಮಹತ್ವ ಸಾರುತ

ತುಲಾರಾಶಿ
ನಿಮ್ಮ ಕುಟುಂಬ ಸದಸ್ಯರ ವಿಚಾರದಲ್ಲಿ ಅಸಮಧಾನ ಮೂಡಬಹುದು. ಬುದ್ದಿವಂತಿಕೆಯ ಜೊತೆಗೆ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡ್ರೆ ನಿಜಕ್ಕೂ ನೀವು ಇಂದು ಅದೃಷ್ಟವಂತರು. ಸೃಜನಾತ್ಮಕತೆಯಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಹೊಸ ಸ್ನೇಹಿತರು ನಿಮಗೆ ಇಂದು ಸಹಾಯವನ್ನು ಮಾಡಲಿದ್ದಾರೆ. ಕಾರಣವಿಲ್ಲದೇ ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ಇಳಿಯಬೇಡಿ.

ವೃಶ್ಚಿಕರಾಶಿ
ಆದಾಯದ ಹೊಸ ಮೂಲವು ಗೋಚರಕ್ಕೆ ಬರಲಿದೆ. ಒಂದೇ ರೀತಿಯ ಅಭಿರುಚಿ ಹೊಂದಿರುವ ಜನರೊಂದಿಗಿನ ಸಂಪರ್ಕ ನಿಮಗೆ ಲಾಭವನ್ನು ತಂದು ಕೊಡಲಿದೆ. ಕಚೇರಿಯಲ್ಲಿ ನಿಮ್ಮ ಮನಸಿಗೆ ನೆಮ್ಮದಿ ತರುವ ಕಾರ್ಯಗಳು ನಡೆಯಲಿದೆ. ಸಂಗಾತಿಯೊಂದಿಗೆ ಉದ್ದೇಶಪೂರ್ವಕವಾಗಿ ಜಗಳಕ್ಕೆ ಇಳಿಯಬೇಡಿ. ಇತರರಿಂದ ಹೊಸ ವಿಚಾರವನ್ನು ಕಲಿಯಲಿದ್ದೀರಿ.

ಧನಸ್ಸುರಾಶಿ
ಆರ್ಥಿಕ ಬಿಕ್ಕಟ್ಟು ಇಂದು ನಿಮ್ಮನ್ನು ಅಸಮಧಾನಗೊಳಿಸಬಹುದು. ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಭವಿಷ್ಯ ಯೋಜನೆಗಳನ್ನು ರೂಪಿಸಲು ಇಂದು ಸಕಾಲ. ಉದ್ದೇಶ ಪೂರ್ವಕವಾಗಿಯೇ ಸಂಗಾತಿ ನಿಮ್ಮನ್ನು ನೋಯಿಸುವ ಸಾಧ್ಯತೆಯಿದೆ. ಪ್ರಿಯತಮೆಯೊಂದಿಗೆ ಸೌಮ್ಯವಾಗಿ ನಡೆದುಕೊಳ್ಳಿ. ವಿದ್ಯಾರ್ಥಿಗಳು ಇಂದು ಶುಭವಾರ್ತೆ ಯನ್ನು ಕೇಳಲಿದ್ದೀರಿ. ಇದನ್ನೂ ಓದಿ : Maruti Suzuki Fronx : ಮಾರುತಿ ಸುಜುಕಿಯ ಹೊಸ ಕಾಂಪಾಕ್ಟ್‌ SUV ಕಾರು ಫ್ರಾಂಕ್ಸ್‌ನ ವೈಶಿಷ್ಟ್ಯಗಳು

ಮಕರರಾಶಿ
ಸಹೋದ್ಯೋಗಿಗಳ ಸಹಕಾರ ನಿಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ. ಮನೆಯ ಇತರರ ಜೊತೆಗೆ ಚರ್ಚೆ ಮಾಡುವುದರಿಂದ ನೆಮ್ಮದಿ ದೊರೆಯಲಿದೆ. ನಿಮ್ಮ ಬಿಡುವಿನ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನಿಮ್ಮ ಬಗ್ಗೆ ತಪ್ಪು ತಿಳಿಯುವ ಸಾಧ್ಯತೆಯಿದೆ. ಯಾರ ಜೊತೆಗೂ ಘರ್ಷಣೆಗೆ ಇಳಿಯಬೇಡಿ. ಕೆಲಸದ ಒತ್ತಡದ ನಡುವೆ ವಿಶ್ರಾಂತಿಯನ್ನು ಪಡೆಯಲು ಪ್ರುಯತ್ನಿಸಿ.

ಕುಂಭರಾಶಿ
ನೀವು ಸ್ನೇಹಿತರನ್ನು ತಪ್ಪಾಗಿ ಅರ್ಥೈಯಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸಿ, ಮಕ್ಕಳ ಜೊತೆಗೆ ತಾಳ್ಮೆಯಿಂದ ವರ್ತಸಿ, ನಿಮ್ಮ ಪ್ರಣಯ ಜೀವನ ಇಂದು ಬದಲಾವಣೆಯನ್ನು ಕಾಣಲಿದೆ. ನಿಮ್ಮ ಕೌಶಲ್ಯದಿಂದಾಗಿ ವೃತ್ತಿ ರಂಗದಲ್ಲಿ ಹೊಸ ಅವಕಾಶಗಳು ಒದಗಿ ಬರಲಿದೆ. ತಾಳ್ಮೆಯಿಂದ ವರ್ತಿಸಿ ಇಲ್ಲವಾದ್ರೆ ಜೀವನದಲ್ಲಿ ನೀವಿಂದು ನಿಜವಾದ ಪ್ರೀತಿಯನ್ನು ಕಳೆದುಕೊಳ್ಳುವಿರಿ.

ಮೀನರಾಶಿ
ಪ್ರೀತಿಯ ಕನಸು ನನಸಾಗುತ್ತದೆ. ನಿಮ್ಮ ಉತ್ಸಾಹವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಅತಿಯಾದ ಸಂತೋಷ ನಿಮಗೆ ಹಲವು ಸಮಸ್ಯೆಗಳನ್ನು ತಂದುಕೊಡಲಿದೆ. ಹಣ ಉಳಿಕೆ ಮಾಡುವ ನಿಮ್ಮ ಪ್ರಯತ್ನಗಳು ಇಂದು ವಿಫಲವಾಗುವ ಸಾಧ್ಯತೆಯಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಇಂದು ಉತ್ತಮ ವೇದಿಕೆ ದೊರೆಯಲಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಸಂವಹನದಲ್ಲಿ ತೀರಾ ಎಚ್ಚರಿಕೆಯನ್ನು ವಹಿಸಿ, ಇದರಿಂದಲೇ ತೊಂದರೆ ಅನುಭವಿಸುವ ಸಾಧ್ಯತೆಯಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular