ಸೋಮವಾರ, ಏಪ್ರಿಲ್ 28, 2025
HomehoroscopeHoroscope Today : ದಿನಭವಿಷ್ಯ : ಜುಲೈ 10-07-2023

Horoscope Today : ದಿನಭವಿಷ್ಯ : ಜುಲೈ 10-07-2023

- Advertisement -

Horoscope Today : ದ್ವಾದಶ ರಾಶಿಗಳ ಮೇಲೆ ರೇವತಿ ನಕ್ಷತ್ರದ ಪ್ರಭಾವ ಇರುತ್ತದೆ. ಮೇಷರಾಶಿಯವರ ಮೇಲೆ ಪರಿಣಾಮ ಬೀರಲಿದ್ದು, ಮಿಥುನ ರಾಶಿಯವರು ಮಿಶ್ರ ಫಲಗಳನ್ನು ಪಡೆಯಲಿದ್ದಾರೆ. ಹಾಗಾದ್ರೆ ಇಂದು ಮೇಷರಾಶಿಯಿಂದ ಹಿಡಿದು 12ರಾಶಿಗಳ ಫಲಾಫಲ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳೋಣಾ.

ಮೇಷ ರಾಶಿ (Aries Horoscope Today)
ಉದ್ಯಮಿಗಳು ಮಾಡುವ ಕೆಲಸಗಳಲ್ಲಿ ಯಶಸ್ವಿಯಾಗುತ್ತಾರೆ. ಸಂಗಾತಿಯೊಂದಿಗೆ ಕಾಲ ಕಳೆಯಲು ಸಮಯ ಸಿಗುವುದಿಲ್ಲ. ಆತ್ಮಗೌರವ ವೃದ್ದಿಯಾಗಲಿದೆ. ವ್ಯಾಪಾರಿಗಳು ಇಂದು ವಾದಕ್ಕೆ ಇಳಿಯಬೇಕಾದ ಅಗತ್ಯವಿಲ್ಲ. ಕಾನೂನು ವಿಚಾರದಲ್ಲಿ ಗೆಲವು ಧಕ್ಕಲಿದೆ. ಸಂಜೆಯ ವೇಳೆಗೆ ಪೋಷಕರೊಂದಿಗೆ ಸಮಯ ಕಳೆಯುವಿರಿ.

ವೃಷಭ ರಾಶಿ (Taurus Horoscope Today)
ಹೊಸ ಆಸ್ತಿ ಖರೀದಿ ಯೋಗವಿದೆ. ವ್ಯಾಪಾರದಲ್ಲಿ ಹಣಕಾಸಿನ ನೆರವು ಹರಿದು ಬರಲಿದೆ. ಹೊಸ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವ್ಯಾಪಾರದಲ್ಲಿ ಹೊಸ ಯೋಜನೆಯನ್ನು ಆರಂಭಿಸಲು ಇದು ಸಕಾಲ. ಅಧಿಕ ಲಾಭವಿದ್ದರೂ ಕೂಡ ಖರ್ಚುಗಳ ಮೇಲೆ ಹಿಡಿತವಿರಲಿ. ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗಕ್ಕೆ ಅನುಕೂಲಕರ.

ಮಿಧುನ ರಾಶಿ (Gemini Horoscope Today)
ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ನಿಮ್ಮ ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಮನೆಯಲ್ಲಿ ಮದುವೆ ಕಾರ್ಯದ ಕುರಿತು ಮಾತುಕತೆ ನಡೆಯಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ದೊರೆಯಲಿದೆ. ಅತಿಥಿಗಳು ಇಂದು ಸಂಜೆಯ ವೇಳೆಗೆ ಮನೆಗೆ ಆಗಮಿಸುವ ಸಾಧ್ಯತೆಯಿದೆ. ಅಧಿಕ ಹಣ ಖರ್ಚಾಗಲಿದ್ದು, ಎಚ್ಚರಿಕೆ ವಹಿಸಿ.

ಕರ್ಕಾಟಕ (Cancer Horoscope Today)
ಈ ದಿನ ನೀವು ಅದೃಷ್ಟವಂತರು. ವಿವಾಹಿತ ಮಕ್ಕಳ ಕಡೆಯಿಂದ ಶುಭವಾರ್ತೆಯನ್ನು ಕೇಳುವಿರಿ. ಉದ್ಯೋಗಳಿಗೆ ಪಾರ್ಟ್‌ಟೈಮ್‌ ಕೆಲಸ ಕಾರ್ಯಗಳಿಂದ ಅನುಕೂಲ. ಸಂಗಾತಿಯ ಕಡೆಯಿಂದ ಸ್ವಲ್ಪ ಒತ್ತಡ. ಹಲವು ಸಮಯದಿಂದಲೂ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿದೆ. ಈ ದಿನ ನಿಮಗೆ ಸಹೋದರರ ಸಹಕಾರದ ಅಗತ್ಯವಿದೆ.

ಸಿಂಹ ರಾಶಿ (Leo Horoscope Today)
ಕೆಲಸ ಕಾರ್ಯಗಳನ್ನು ಮುಂದೂಡುವುದರಿಂದ ನಷ್ಟ ಉಂಟಾಗಲಿದೆ. ಉದ್ಯೋಗಿಗಳಿಗೆ ಆಹ್ಲಾದಕರ ವಾತಾವರಣ. ಶುಭವಾರ್ತೆಯೊಂದು ಕೇಳಿಬರಲಿದೆ. ಉದ್ಯಮಿಗಳಿಗೆ ಹೂಡಿಕೆ ಮಾಡಲು ಅನುಕೂಲಕರ. ಸಂಗಾತಿಯೊಂದಿಗೆ ದೂರ ಪ್ರಯಾಣ ಮನಸಿಗೆ ನೆಮ್ಮದಿ ಕೊಡಲಿದೆ. ಗೋ ಮಾತೆಯ ಪೂಜೆ ಮಾಡುವುದರಿಂದ ಹೆಚ್ಚು ಲಾಭವನ್ನು ಪಡೆಯುವಿರಿ.

ಕನ್ಯಾ ರಾಶಿ (Virgo Horoscope Today)
ವ್ಯಾಪಾರಸ್ಥರಿಗೆ ಹೆಚ್ಚಯ ಅನುಕೂಲಕರವಾದ ದಿನ. ವಾದ ವಿವಾದಗಳಿಂದ ದೂರ ಇರುವುದು ಉತ್ತಮ. ಬುದ್ದಿವಂತಿಕೆಯಿಂದ ಇತರರಿಗೆ ಸಹಕಾರ ಮಾಡುವಿರಿ. ಕೋಪವನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಉತ್ತಮವಾದ ದಿನ. ಕುಟುಂಬ ಸದಸ್ಯರ ಜೊತೆಗೆ ವಾಗ್ವಾದ ನಡೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

ತುಲಾ ರಾಶಿ (Libra Horoscope Today)
ತುಲಾರಾಶಿಯವರ ಪಾಲಿಗೆ ಇಂದು ಸಂತೋಷದ ದಿನ. ಆದರೆ ಆದಾಯಕ್ಕೂ ಮೀರಿದ ವೆಚ್ಚ ನಿಮ್ಮನ್ನು ಕಂಗೆಡಿಸಲಿದೆ. ಜೀವನ ಸಂಗಾತಿಯೊಂದಿಗೆ ಆನಂದದ ಕ್ಷಣವನ್ನು ಕಳೆಯುವಿರಿ. ಪ್ರೀತಿಯ ಸ್ನೇಹಿತರು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ವೃಶ್ಚಿಕ ರಾಶಿ (Scorpio Horoscope Today)
ಕುಟುಂಬ ಸದಸ್ಯರು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಈ ದಿನ ನೀವು ತಜ್ಞರ ಸಹಾಯ ಪಡೆದು ಕೆಲಸ ಕಾರ್ಯಗಳನ್ನು ಮಾಡುವುದರಿಂದ ಅನುಕೂಲಕರ. ಕುಟುಂಬ ಸದಸ್ಯರ ಆಶಯಗಳನ್ನು ಈಡೇರಿಸುತ್ತಾರೆ. ಈ ಕಾರಣದಿಂದಾಗಿ ನೀವು ಹೆಚ್ಚು ಸಂತೋಷವಾಗಿ ಇರುತ್ತೀರಿ. ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಸುಲಿದ್ದೀರಿ. ತಂದೆಯ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರಿಕೆ ಅಗತ್ಯ.

ಧನಸ್ಸು ರಾಶಿ (Sagittarius Horoscope Today)
ಆಕಸ್ಮಿಕವಾಗಿ ಇಂದು ಧನಸ್ಸು ರಾಶಿಯವರು ದೊಡ್ಡ ಮೊತ್ತದ ಹಣವನ್ನು ಪಡೆಯಲಿದ್ದಾರೆ. ನಿಮ್ಮ ಸಂಪತ್ತು ವೃದ್ದಿಸಲಿದೆ. ಆರ್ಥಿಕವಾಗಿಯೂ ಸುಧಾರಣೆಯನ್ನು ಕಾಣಲಿದ್ದೀರಿ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತಮ ದಾರಿ ಗೋಚರಿಸಲಿದೆ. ದಿನನಿತ್ಯ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿರಿ. ನಿಮ್ಮ ಆದಾಯವನ್ನು ಅವಲಂಭಿಸಿ ಭವಿಷ್ಯದಲ್ಲಿ ನಿಮ್ಮ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅವಿವಾಹಿತರಿಗೆ ಅನುಕೂಲಕರ.

ಮಕರ ರಾಶಿ (Capricorn Horoscope Today)
ಬೆಳಗಿನ ವೇಳೆಯಲ್ಲಿ ನೀವು ನಿರುತ್ಸಾಹದ ಸುದ್ದಿಗಳನ್ನು ಕೇಳಬಹುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವತ್ತ ಪ್ರಯತ್ನಿಸಿ. ಮಧ್ಯಾಹ್ನದ ವೇಳೆಗೆ ಒಪ್ಪಂದವನ್ನು ಮುಕ್ತಾಯಗೊಳಿಸುವುದರಿಂದ ಒತ್ತಡ ಕಡಿಮೆಯಾಗಲಿದೆ. ಉದ್ಯೋಗಿಗಳು ಸ್ನೇಹಿತರ ಸಹಾಯಕಾರದಿಂದ ಉದ್ಯಮವನ್ನು ವೃದ್ದಿಸಿಕೊಳ್ಳಲದ್ದಾರೆ. ಈ ದಿನ ವಿವಾದಗಳಿಂದ ದೂರ ಉಳಿಯಿರಿ.

ಕುಂಭ ರಾಶಿ (Aquarius Horoscope Today)
ಯೋಗ ಮಾಡುವುದರಿಂದ ಆರೋಗ್ಯದ ದೃಷ್ಟಿಯಿಂದ ಹೆಚ್ಚು ವಿಶೇಷ ಅನುಕೂಲತೆಗಳನ್ನು ಪಡಯಲಿದ್ದೀರಿ. ಪ್ರತೀ ಕೆಲಸ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಸಮಬಂಧಿಸಿದಂತೆ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಲಿದ್ದೀರಿ. ಇದರಿಂದ ನಿಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ.

ಮೀನ ರಾಶಿ (Pisces Horoscope Today)
ಈ ದಿನ ಶುಭ ಕಾರ್ಯಗಳನ್ನು ನಡೆಸಲಿದ್ದೀರಿ. ಕುಟುಂಬದ ಸದಸ್ಯರೆಲ್ಲರೂ ಉತ್ಸಾಹದಿಂದಲೇ ಶುಭ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಮೂಡಲಿದೆ. ಉದ್ಯೋಗಿಗಳಿಗೆ ಹೆಚ್ಚು ಅನುಕೂಲಕರ. ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆದು, ಮುಂಬಡ್ತಿ ದೊರೆಯಲಿದೆ. ಅನಿರೀಕ್ಷಿತ ಧನಲಾಭ, ವ್ಯವಹಾರದಲ್ಲಿ ಚೇತರಿಕೆ. ವಿದೇಶಿ ಪ್ರಯಾಣದ ಅವಕಾಶ ದೊರೆಯಲಿದೆ. ಒತ್ತದ ಕಡಿಮೆ ಮಾಡಿಕೊಳ್ಳಲು ಯತ್ನಿಸಿ.
ಈ ರಾಶಿಯವರು ಈ ದಿನ ಕೆಲವು ಶುಭ ಕಾರ್ಯಕ್ರಮಗಳನ್ನು ನಡೆಸಬಹುದು.

ಇದನ್ನೂ ಓದಿ : Gruha Jyoti scheme : ಗೃಹ ಜ್ಯೋತಿ ಯೋಜನೆ : ನಿಮ್ಮ ಅರ್ಜಿ ಸ್ವೀಕರಿಸಿದೆಯೋ ಇಲ್ಲವೋ ಎಂಬುದನ್ನು ಇಲ್ಲಿ ಪರಿಶೀಲಿಸಿ

ಇದನ್ನೂ ಓದಿ : Udupi News : ಬಾರಕೂರು : ಹ್ವಾಯ್ ಕೆಸ್ರ್ ಗದ್ದೆಗೆ ಹೋಪ ಕ್ರೀಡಾಕೂಟ : ಕೆಸರಲ್ಲಿ ಮಿಂದೆದ್ದ ಮಹಿಳೆಯರು

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular