ಮಂಗಳವಾರ, ಏಪ್ರಿಲ್ 29, 2025
HomeBreakingನಿತ್ಯಭವಿಷ್ಯ : ಈ ರಾಶಿಯವರಿಗೆ ಮಾತಿನ ಮೇಲೆ ಹಿಡಿತವಿರಲಿ

ನಿತ್ಯಭವಿಷ್ಯ : ಈ ರಾಶಿಯವರಿಗೆ ಮಾತಿನ ಮೇಲೆ ಹಿಡಿತವಿರಲಿ

- Advertisement -

ಮೇಷರಾಶಿ
ಸಹೋದರರಿಂದ ಆಸ್ತಿಯ ವಿವಾದಗಳು ಉಂಟಾಗ ಬಹುದು. ವಾಹನಗಳ ಬಗ್ಗೆ ಹುಷಾರಾಗಿರಿ. ರಾತ್ರಿಯಲ್ಲಿ ಪ್ರಯಾಣ ಮಾಡುವುದು ಸೂಕ್ತವಲ್ಲ.  ಔಷಧೀಯ ವಸ್ತುಗಳನ್ನು ಮಾರಾಟ ಮಾಡುವವರಿಗೆ  ಲಾಭ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ .

ವೃಷಭರಾಶಿ
ಅನಿರೀಕ್ಷಿತವಾಗಿ ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಆತಂಕ ತಳಮಳ, ಬಂಧುಗಳಲ್ಲಿ ಭಿನ್ನಾಬಿಪ್ರಾಯಗಳು ಬರುವ ಸಾಧ್ಯತೆಯಿದೆ. ಹೆಂಡತಿ-ಮಕ್ಕಳ ಖರ್ಚು ವೆಚ್ಚಗಳು ಮಿತಿಮೀರಲಿವೆ.

ಮಿಥುನರಾಶಿ
ಪತ್ರಿಕಾರಂಗದಲ್ಲಿರುವವರಿಗೆ  ಆರ್ಥಿಕ ಮುಗ್ಗಟ್ಟಿದ್ದರೂ ದೈನಂದಿನ ಜೀವನಕ್ಕೇನೂ ತೊಂದರೆ ಇರುವದಿಲ್ಲ. ಬಂಧುಗಳೊಂದಿಗೆ ಮಾತನಾಡುವಾಗ ತುಸು ವ್ಯತ್ಯಾಸವಾಗದಂತೆ ತಾಳ್ಮೆಯಿಂದ ವರ್ತಿಸಿ, ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಿ. ಇಂದು ಅತಿಯಾದ ಭೋಜನ ಒಳ್ಳೆಯದಲ್ಲ.

ಕರ್ಕಾಟಕ ರಾಶಿ
ಹೊಸ ಯೋಜನೆಗಳಿಗೆ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಿ, ಮಾರಾಟವಾಗದೇ ಇದ್ದ ಆಸ್ತಿ ವಿಚಾರ ಈ ವಾರದಲ್ಲೇ ಇತ್ಯರ್ಥವಾಗಲಿದೆ. ನಿರುದ್ಯೋಗಿಗಳಿಗೆ ನೌಕರಿ ಸಿಗಲಿದೆ, ಹಿರಿಯರೊಂದಿಗೆ ವಾಗ್ವಾದ ಬೇಡ,  ಬೇರೆಯವರ ವೈಯುಕ್ತಿಕ ವಿಚಾರದಲ್ಲಿ ಕುತೂಹಲ ಬೇಡ.

ಸಿಂಹರಾಶಿ
ಬ್ಯಾಂಕ್‌ ನೌಕರರಿಗೆ ಕರ್ತವ್ಯ ನಿರ್ವಹಿಸಲು ಮೇಲಾಧಿಕಾರಿಗಳಿಂದ ಅನೇಕ ಅಡಚಣೆಗಳು ಉಂಟಾಗಲಿದೆ. ಲೇವಾದೇವಿ ವ್ಯವಹಾರ ಅಷ್ಟು ಲಾಭ ದಾಯಕವಲ್ಲ. ಬೆಂಕಿ, ವಿದ್ಯುತ್‌ ಮೊದಲಾದ ಕಡೆ ಬಹಳ ಎಚ್ಚರದಿಂದಿರಿ ಗೆಳೆಯರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಿ.

ಕನ್ಯಾರಾಶಿ
ನೀವಾಡುವ ನೇರ ಮಾತುಗಳು ಬೇರೆಯವರಿಗೆ ನೋಟವನ್ನು ಉಂಟುಮಾಡಲಿದೆ. ಕಲೆ ಸಂಗೀತ ಕಲಾವಿದರಿಗೆ ಉತ್ತಮವಾಗಿದೆ,  ಆಸ್ತಿ ಖರೀದಿ ವಿಚಾರದಲ್ಲಿ ಕುಟುಂಬದ ಸದಸ್ಯರಿಂದ ಸಹಕಾರ, ತೆಗೆದುಕೊಳ್ಳಿ.

ತುಲಾರಾಶಿ
ಚಾಡಿ ಮಾತುಗಳನ್ನು ನಂಬಿ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳಬೇಡಿ ಎಂಬ ಮುಕ್ತ ಮಾತುಕತೆಯಿಂದ ಬಗೆಹರಿಸಿಕೊಳ್ಳಿ.ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿಡಿ. ಸಾಕು ಪ್ರಾಣಿಗಳಿಂದ ಚಿಕ್ಕಮಕ್ಕಳಿಗೆ ಅಪಾಯವಾಗದಂತೆ ನೋಡಿಕೊಳ್ಳಿ.

ವೃಶ್ಚಿಕರಾಶಿ
ಕೈಗಾರಿಕಾ ಉದ್ಯಮಿಗಳು ತಾಳ್ಮೆಯಿಂದ ನಿಮ್ಮ ಕೆಲಸವನ್ನು ಸಾಧಿಸಿ ಕೊಳ್ಳಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವಿರಲಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಅವಕಾಶವಿದೆ. ಅತಿಯಾದ ಮನೋರಂಜನೆ ಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು. ವಾಹನವನ್ನು ಚಲಾಯಿಸುವಾಗ ಎಚ್ಚರದಿಂದ ಇರಿ.

ಧನುರಾಶಿ
ಹೊಸ ಮನೆ ಕಟ್ಟುವ ವಿಚಾರದಲ್ಲಿ ಹಿರಿಯರ ನಿರ್ಣಯ ತೆಗೆದುಕೊಳ್ಳಿ. ಮನೆಯಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಬಹುದು. ಆರೋಗ್ಯದ ಕಡೆ ಗಮನವಿರಲಿ . ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಎಚ್ಚರಿಕೆಯಿಂದ ಇರಿ.

ಮಕರರಾಶಿ
ಹಣಕಾಸಿನ ವಿಚಾರದಲ್ಲಿ ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಿ. ಹಿರಿಯರ ಆಶೀರ್ವಾದದಿಂದ ಮಂಗಳ ಕಾರ್ಯಗಳು ಸುಸೂತ್ರವಾಗಿ ನಡೆಯಲಿವೆ. ಹಾಲು ಹಣ್ಣು ತರಕಾರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭದಾಯಕವಾಗಿದೆ.

ಕುಂಭರಾಶಿ
ಈ ದಿನ ರಾಜಕಾರಣಿಗಳಿಗೆ  ತೊಂದರೆಯಿದ್ದು ಹಿರಿಯರ ಅಥವಾ ಅನುಭವವಿರುವವರ ಸಲಹೆಯನ್ನು ತೆಗೆದುಕೊಳ್ಳಿ . ಅನಾವಶ್ಯಕವಾಗಿ ಬಿಡದೆ ಇರುವ ವಸ್ತುಗಳನ್ನು ಖರೀದಿಸುವುದು, ಮೋಜು ಮಸ್ತಿಗಾಗಿ ಸಾಲಗಳನ್ನು ಮಾಡಿಕೊಳ್ಳಬೇಡಿ

ಮೀನರಾಶಿ
ಈ ದಿನ ನಿಮ್ಮ ಜೀವನದಲ್ಲಿ ಹಳೆಯ ಘಟನೆಗಳ ಬಗ್ಗೆ ಮನೆಯಲ್ಲಿ  ಮನಸ್ತಾಪಗಳು ಉಂಟಾಗಬಹುದು. ದೂರದ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ, ಪಾದರಸ, ದರ್ಪಣಾಂಜನ ಜ್ಯೋತಿಷ್ಯರು
ಮೊ : 8746999333, 6363005876

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular