Horoscope : ದಿನಭವಿಷ್ಯ- ಈ ರಾಶಿಯವರು ಆರೋಗ್ಯ ಬಗ್ಗೆ ಕಾಳಜಿ ವಹಿಸಿ

ಮೇಷರಾಶಿ
ಇತರರ ಜೊತೆಗೆ ಸಂತೋಷದ ಕ್ಷಣವನ್ನು ಹಂಚಿಕೊಳ್ಳುವಿರಿ, ಅನಿರೀಕ್ಷಿತ ಲಾಭಗಳು, ಅಭ್ಯಾಸವನ್ನು ಬದಲಾಯಿಸಿಕೊಳ್ಳಿ, ಕೌಶಲ್ಯದಿಂದ ಅಧಿಕ ಲಾಭವನ್ನು ಗಳಿಸುವಿರಿ, ವೈವಾಹಿಕ ಜೀವನದ ಆನಂದದ ದಿನವನ್ನು ಅನುಭವಿಸುವಿರಿ, ಆಲಸ್ಯ ಬಿಟ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ, ಧೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧ್ಯ.

ವೃಷಭರಾಶಿ
ಕಣ್ಣಿನ ಬಗ್ಗೆ ಜಾಗೃತೆ ಇರಲಿ, ದುಶ್ಚಟ ಅನಾರೋಗ್ಯಕ್ಕೆ ಕಾರಣವಾಗಲಿದೆ, ಆಕಸ್ಮಿಕ ಧನಲಾಭ, ಕುಟುಂಬದ ಬಗ್ಗೆ ಕಾಳಜಿವಹಿಸಿ, ಇಂದು ಸಂತೋಷದ ಕ್ಷಣವನ್ನು ಅನುಭವಿಸುವಿರಿ, ಪ್ರೀತಿ ಪಾತ್ರರಿಗೆ ಸಮಯವನ್ನು ನೀಡಲು ಮರೆಯದಿರಿ, ಸಂಗಾತಿಯಿಂದ ಸಂತೋಷ ಅನುಭವಿಸುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಮಿಥುನರಾಶಿ
ಸಂತೋಷದ ಕ್ಷಣವನ್ನು ಅನುಭವಿಸುವಿರಿ, ಆರೋಗ್ಯದ ಕಡೆಗೆ ಗಮನ ಹರಿಸಿ, ಸ್ನೇಹಿತರ ಜೊತೆಯಲ್ಲಿ ಪ್ರವಾಸಕ್ಕೆ ಹೋಗುವಿರಿ, ವೈವಾಹಿಕ ಜೀವನ ಸುಖಮಯವಾಗಿರಲಿದೆ, ಹೊಂದಾಣಿಕೆಯಿಂದ ವ್ಯವಹಾರದಲ್ಲಿ ಅಧಿಕ ಲಾಭ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಪುಣ್ಯಕ್ಷೇತ್ರಗಳ ದರ್ಶನದಿಂದ ನೆಮ್ಮದಿ.

ಕರ್ಕಾಟಕರಾಶಿ
ಇಂದು ನಿಮ್ಮ ಪಾಲಿಗೆ ವಿಶೇಷವಾದ ದಿನ, ಅಸಮಾನ್ಯವಾದುದನ್ನು ಮಾಡಲು ಅವಕಾಶ ನೀಡುತ್ತದೆ. ಕೆಲಸದ ಕಡೆಗೆ ಗಮನ ಹರಿಸಿ, ಒತ್ತಡದ ನಡುವಲ್ಲೇ ಕಾರ್ಯಸಾಧನೆ, ಸಾಮಾಜಿಕವಾಗಿ ಮನ್ನಣೆ, ರಾಜಕಾರಣಿಗಳಿಗೆ ಅನುಕೂಲ, ಹೊಸ ಹೂಡಿಕೆಯು ಲಾಭವನ್ನು ತರಲಿದೆ, ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ.

ಸಿಂಹರಾಶಿ
ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಬುದ್ದಿವಂತಿಕೆಯನ್ನು ಉಪಯೋಗಿಸಿ, ಕುಟುಂಬ ಸದಸ್ಯರಿಂದ ಸಹಕಾರ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಬಿಡುವಿಲ್ಲದ ದಿನಚರಿಯಿಂದ ಬೇಸರ, ಉದ್ಯೋಗದಲ್ಲಿ ಪ್ರಗತಿ, ಹೊಂದಾಣಿಕೆಯಿಂದ ಕಾರ್ಯಾನುಕೂಲ, ರಾಜಕಾರಣಿಗಳಿಂದ ಲಾಭ ಪಡೆಯುವಿರಿ.

ಕನ್ಯಾರಾಶಿ
ಆರೋಗ್ಯದಲ್ಲಿ ಚೇತರಿಕೆ, ಹಣಕಾಸಿನ ಸಹಕಾರ ದೊರೆಯಲಿದೆ, ದಿನಾಂತ್ಯಕ್ಕೆ ಸಾಕಷ್ಟು ಉಳಿತಾಯ ಮಾಡುವಿರಿ, ವೈವಾಹಿಕ ಜೀವನದಲ್ಲಿ ನೆಮ್ಮದಿ, ಆಹಾರ ಸೇವನೆಯ ಕಡೆಗೆ ಗಮನ ಹರಿಸಿ, ಮನೆಯಲ್ಲಿ ಮಂಗಳ ಕಾರ್ಯ, ಅದ್ಬುತ ಅವಕಾಶವೊಂದು ನಿಮಗೆ ದೊರೆಯಲಿದೆ, ಸಂಗಾತಿಯೊಂದಿಗೆ ಸುಂದರ ಕ್ಷಣ.

ತುಲಾರಾಶಿ
ಔಷಧದ ಅವಲಂಭನೆಯನ್ನು ಕಡಿಮೆ ಮಾಡಿ, ಸಾಲಗಾರರ ಕಿರಿಕಿರಿ ಸಾಧ್ಯತೆ, ಆರ್ಥಿಕ ಸಂಕಷ್ಟಗಳು ಎದುರಾಗುವ ಸಾಧ್ಯತೆ, ಸಾಲ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ, ಕುಟುಂಬ ಸದಸ್ಯರ ಅಗತ್ಯತೆಯ ಕಡೆಗೆ ಗಮನಹರಿಸಿ, ಸಂಗಾತಿಯ ವರ್ತನೆ ನಿಮಗೆ ಕಿರಿಕಿರಿ ತರಲಿದೆ, ಯೋಜನೆಯ ಕಾರ್ಯದ ಅಡ್ಡಪರಿಣಾಮದ ಬಗ್ಗೆ ಚಿಂತಿಸಿ.

ವೃಶ್ವಿಕರಾಶಿ
ಯೋಗ, ಧ್ಯಾನದಿಂದ ದಿನವನ್ನು ಆರಂಭಿಸಿ, ದೀರ್ಘಾವಧಿಯ ಹೂಡಿಕೆಗಳನ್ನು ತಪ್ಪಿಸಿ, ಸ್ನೇಹಿತರೊಂದಿಗೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ, ಸಂವಹನದ ಕೊರತೆ ನಿಮ್ಮನ್ನು ಖಿನ್ನತೆಗೆ ದೂಡುತ್ತದೆ, ಅನಿರೀಕ್ಷಿತ ಹಣಕಾಸಿನ ಸಹಕಾರ ದೊರೆಯಲಿದೆ, ಮನೆಯಲ್ಲಿ ಧಾರ್ಮಿಕ ಕಾರ್ಯಗಳ ಬಗ್ಗೆ ಸಿದ್ದತೆ.

ಧನಸುರಾಶಿ
ಸ್ನೇಹಿತರ ಸಹಕಾರದಿಂದ ಹಣಕಾಸಿನ ಸಮಸ್ಯೆ ಕಡಿಮೆಯಾಗಲಿದೆ, ಆರೋಗ್ಯ ಸಮಸ್ಯೆಗಳು ತೊಂದರೆಯನ್ನುಂಟು ಮಾಡಲಿದೆ, ಕುಟುಂಬ ಸದಸ್ಯರ ಜೊತೆಗೆ ಮಹತ್ವದ ನಿರ್ಧಾರ ಕೈಗೊಳ್ಳುವಿರಿ, ದೀರ್ಘಾವಧಿಯ ಯೋಜನೆಯೊಂದಕ್ಕೆ ಕೈ ಹಾಕುವಿರಿ, ಹೊಸ ಹೂಡಿಕೆಗಳು ನಿಮಗೆ ಅಧಿಕ ಲಾಭವನ್ನು ತರಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಮಕರರಾಶಿ
ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ವೃದ್ದಿಸಲಿದೆ, ಹೂಡಿಕೆಗಳ ಬಗ್ಗೆ ಎಚ್ಚರವಾಗಿರಿ, ಅಭ್ಯಾಸಗಳನ್ನು ಬದಲಾಯಿಸುವುದು ಉತ್ತಮ, ಸಂಗಾತಿಯಿಂದ ಸಹಕಾರ ದೊರೆಯಲಿದೆ, ಮನಸ್ಸಿಗೆ ನೆಮ್ಮದಿ ನೀಡುವ ಕಾರ್ಯಗಳು ನಡೆಯಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ.

ಕುಂಭರಾಶಿ
ಬಾಲ್ಯದ ನೆನಪುಗಳು ನಿಮ್ಮನ್ನು ಕಾಡಲಿದೆ, ಮಾನಸಿಕ ಒತ್ತಡ ಹೆಚ್ಚಲಿದೆ, ಅಪರಿಚಿತರ ಸಲಹೆಯಂತೆ ಹೂಡಿಕೆ ಮಾಡಬೇಡಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ, ದೂರ ಪ್ರಯಾಣದಿಂದ ಅಧಿಕ ಲಾಭ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ತಂದೆಯಿಂದ ಅನುಕೂಲಕರ, ಆಸ್ತಿ ಖರೀದಿ ಯೋಗ.

ಮೀನರಾಶಿ
ಮನೆ ನಿರ್ಮಾಣದ ಕಾರ್ಯಕ್ಕೆ ಚಾಲನೆ, ಬಾಕಿ ಉಳಿದಿರುವ ಕಾರ್ಯಗಳು ಪೂರ್ಣಗೊಳ್ಳಲಿದೆ, ವ್ಯವಹಾರದ ಅಭಿವೃದ್ದಿಗಾಗಿ ಸಾಕಷ್ಟು ಶ್ರಮವಹಿಸುವಿರಿ, ಪಾಲುದಾರರ ಜೊತೆಗೆ ಹೊಸ ಒಪ್ಪಂದ ಮಾಡಿಕೊಳ್ಳುವಿರಿ, ಹತ್ತಿರದ ಬಂಧುಗಳು ಆರ್ಥಿಕ ಸಹಕಾರವನ್ನು ಮಾಡಲಿದ್ದಾರೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗುವಿರಿ.

ಇದನ್ನೂ ಓದಿ : ಶ್ರೀ ಕೃಷ್ಣನ ಜನ್ಮಸ್ಥಳದ 10 ಕಿ.ಮೀ ಪ್ರದೇಶ ʼತೀರ್ಥಕ್ಷೇತ್ರʼವೆಂದು ಘೋಷಣೆ: ಯೋಗಿ ಮಹತ್ವದ ನಿರ್ಧಾರ

ಇದನ್ನೂ ಓದಿ : ಕೋವಿಡ್, ಡೆಲ್ಟಾ ನಡುವೆ ಆತಂಕ ಮೂಡಿಸಿದ ಡೆಂಗ್ಯೂ : ರಾಜ್ಯದಲ್ಲಿ 2,736 ಜನರಲ್ಲಿ ಸೋಂಕು ಪತ್ತೆ

(Horoscope today astrological prediction for September 11)

Comments are closed.