ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 09-04-2020

ನಿತ್ಯಭವಿಷ್ಯ : 09-04-2020

- Advertisement -

ಮೇಷರಾಶಿ
ಸಾಂಸಾರಿಕ ನೆಮ್ಮದಿ ಹಾಗೂ ಕೆಲವೊಂದು ಅನುಕೂಲಗಳು ನಡೆಯಲಿವೆ. ಆಕಸ್ಮಿಕ ಧನಪ್ರಾಪ್ತಿ ಯಿಂದ ಸಂತಸ ತರಲಿವೆ. ಮಕ್ಕಳ ಅಭ್ಯಾಸದ ಬಗ್ಗೆ ಗಮನವಿರಲಿ. ಮನಸ್ಸಿನಲ್ಲಿ ಗಾಬರಿ ಆತಂಕ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ವಾಹನ ಯೋಗ, ದೇಹದಲ್ಲಿ ನೋವು-ತುರಿಕೆ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭರಾಶಿ
ಸಾಲಗಾರರಿಂದ ಕಿರಿಕಿರಿ, ಶತ್ರುಗಳ ಮುಂದೆ ಅವಮಾನ, ಬಂಧುಗಳಿಂದ ಮಾನ ಅಪಮಾನ, ಸುಳ್ಳು ಅಪಾದನೆಗೆ ಗುರಿಯಾಗ ಬೇಕಾಗುತ್ತದೆ. ಸಂಚಾರಗಳು ಸಕಾಲವಲ್ಲ. ಮನೋನಿಶ್ಚಿತ ಕೆಲಸ ಕಾರ್ಯಗಳು ನಡೆಯಲಿವೆ. ದಿನಾಂತ್ಯ ಶುಭವಾರ್ತೆ ಇದೆ. ಪತ್ರ ವ್ಯವಹಾರಗಳಿಂದ ನಷ್ಟ-ಸಂಕಷ್ಟ, ಗರ್ಭ ದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ.

ಮಿಥುನರಾಶಿ
ಮಕ್ಕಳಿಂದ ಆರ್ಥಿಕ ನೆರವು, ಕುಟುಂಬದಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಏರುಪೇರಾಗಲು ಜಾಗ್ರತೆವಹಿಸಬೇಕು. ಆರ್ಥಿಕವಾಗಿ ಅಭಿವೃದ್ಧಿ ತೋರಿ ಬರುತ್ತದೆ. ಸರಕಾರಿ ಕೆಲಸಗಳು ವಿಳಂಬ ಗತಿಯಲ್ಲಿ ನಡೆಯಲಿದೆ. ಸ್ಥಿರಾಸ್ತಿ-ವಾಹನ ವ್ಯವಹಾರದಲ್ಲಿ ಮೋಸ, ಮನಸ್ಸಿನಲ್ಲಿ ಭೀತಿ, ಮಾಟ-ಮಂತ್ರದ ಭಯ.

ಕಟಕರಾಶಿ
ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ಸಂಬಂಧಿತರಿಂದ ಸಹಕಾರಗಳು ಸಿಗುತ್ತದೆ. ವೃತ್ತಿರಂಗದಲ್ಲಿ ಅಡಚಣೆಗಳು ತೋರಿಬಂದು ಕಿರಿಕಿರಿ ಇದೆ. ಬಂಧುಗಳಿಂದ ಸ್ಥಿರಾಸ್ತಿ ಮೋಸ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ, ನೆಮ್ಮದಿಗೆ ಭಂಗ, ಸಹೋದರಿಯಿಂದ ವಾಹನ ಲಾಭ.

ಸಿಂಹರಾಶಿ
ಮಕ್ಕಳಿಗೆ ಸಂಬಂಧಿಸಿದ ದುಃಖ ಚಿಂತೆಗಳು ಕಾಡಿಸಲಿದೆ. ಆರ್ಥಿಕವಾಗಿ ಉತ್ತಮ ವಾತಾವರಣ ಇರುತ್ತದೆ. ದೇವತಾ ಕಾರ್ಯಗಳ ಚಿಂತನೆ ಕಾರ್ಯಗತವಾಗಲಿದೆ. ಕಿರಿಯ ಸಹೋದರಿಯಿಂದ ಧನ ನಷ್ಟ, ಅನಗತ್ಯ ಮಾತುಗಳಿಂದ ವೈಮನಸ್ಸು,ಕುಟುಂಬದಲ್ಲಿ ಜಗಳ, ಉದ್ಯೋಗಕ್ಕಾಗಿ ತಿರುಗಾಟ, ಧಾರ್ಮಿಕ ಕಾರ್ಯದಲ್ಲಿ ಒಲವು, ಮೋಜು-ಮಸ್ತಿಗಾಗಿ ಖರ್ಚು.

ಕನ್ಯಾರಾಶಿ
ಮಿತ್ರರಿಂದ ಆರ್ಥಿಕ ಸಮಸ್ಯೆ ಬಗೆಹರಿಯುವುದು, ದೇಹಾರೋಗ್ಯದಲ್ಲಿ ಏರುಪೇರು ಕಾಣಿಸಬಹುದು. ಆಗಾಗ ಹಣದ ಮುಗ್ಗಟ್ಟು ಕಾಣಿಸಬಹುದು. ವೈಯಕ್ತಿಕ ತಪ್ಪು ಅಭಿಪ್ರಾಯದಿಂದ ಅವಕಾಶಗಳಿಗೆ ಭಂಗವಾಗುತ್ತದೆ. ದಾಂಪತ್ಯದಲ್ಲಿ ಸಂಶಯ, ಆಕಸ್ಮಿಕ ಅವಘಡ, ಆಯುಷ್ಯಕ್ಕೆ ಕಂಟಕ ಸಾಧ್ಯತೆ, ಎಚ್ಚರಿಕೆಯಲ್ಲಿರುವುದು ಉತ್ತಮ.

ತುಲಾರಾಶಿ
ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ವಿಪರೀತ ನಷ್ಟ ಮಾಡಿಕೊಳ್ಳುವಿರಿ, ಕೆಟ್ಟ ಜನರ ಸಹವಾಸದಿಂದ ಕೆಟ್ಟ ಹೆಸರನ್ನು ಪಡೆಯದಂತೆ ಜಾಗ್ರತೆ ವಹಿಸಿರಿ. ಅಡಚಣೆಗಳ ನಡುವೆಯೂ ಸಾಂಸಾರಿಕವಾಗಿ ಅಭಿವೃದ್ಧಿ ಗೋಚರಕ್ಕೆ ಬರುತ್ತದೆ. ಮನಸ್ಸಿನಲ್ಲಿ ಆತಂಕ, ಚಿಂತೆಯಿಂದ ನಿದ್ರಾಭಂಗ, ಉದ್ಯೋಗ ಬದಲಾವಣೆಗೆ ಸದಾವಕಾಶ.

ವೃಶ್ಚಿಕರಾಶಿ
ಕಾನೂನು ಬಾಹಿರ ಚಟುವಟಿಕೆಯಿಂದ ಲಾಭ ಗಳಿಸುವಿರಿ, ಶ್ರೀದೇವತಾ ದರ್ಶನ ಭಾಗ್ಯದಿಂದ ಸಂತಸವಾಗಲಿದೆ. ಹಿರಿಯರಿಗೆ ಶ್ರೀ ದೇವತಾ ದರ್ಶನ ಭಾಗ್ಯದಿಂದ ನೆಮ್ಮದಿ ತಂದೀತು. ಆಗಾಗ ಸಂಧಿನೋವು, ಉದರ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗ್ರತೆ ಮಾಡಿರಿ. ಪ್ರಯಾಣದಲ್ಲಿ ನಷ್ಟ, ತಂದೆಯಿಂದ ಅನಾನುಕೂಲ, ಮೋಜು-ಮಸ್ತಿಗಾಗಿ ಖರ್ಚು.

ಧನಸ್ಸುರಾಶಿ
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆ, ಕೆಲಸ ಕಾರ್ಯಗಳು ಹಂತ ಹಂತವಾಗಿ ನಡೆಯಲಿದೆ. ಅನಿರೀಕ್ಷಿತ ಶುಭ ವಾರ್ತೆ ಕೇಳಲಿದ್ದೀರಿ. ಆರ್ಥಿಕವಾಗಿ ಅಭಿವೃದ್ಧಿ ಇದ್ದರೂ ಖರ್ಚು ವೆಚ್ಚಗಳನ್ನು ನಿಭಾಯಿಸಿರಿ. ಗೃಹದಲ್ಲಿ ಶುಭ ಕಾರ್ಯದ ಚಿಂತನೆ ಇದೆ. ಅತಿಯಾದ ಆಸೆಯಿಂದ ಕೇಡು, ಮಿತ್ರರು-ರಾಜಕೀಯ ಮುಖಂಡರಿಂದ ಮೋಸ, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ಮಕರರಾಶಿ
ಸ್ನೇಹಿತರಿಂದ ಉದ್ಯೋಗದ ಭರವಸೆ, ಪ್ರೇಮ ವಿಚಾರದಲ್ಲಿ ನೆಮ್ಮದಿ, ನೂತನ ವೃತ್ತಿಗೆ ಅವಕಾಶಗಳು ಅರಸಿ ಬರಲಿದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಂತಹ ಪ್ರಸಂಗ ಬರಬಹುದು. ಆಗಾಗ ಮಾನಸಿಕ ಖನ್ನತೆಯಿಂದ ಬಳಲಲಿದ್ದೀರಿ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಅನಗತ್ಯ ಪ್ರಯಾಣ, ಅಧಿಕ ತಿರುಗಾಟ.

ಕುಂಭರಾಶಿ
ಸಾಂಸಾರಿಕವಾಗಿ ಮಾನಸಿಕವಾಗಿ ನೆಮ್ಮದಿ ಇರಲಾರದು. ವೃತ್ತಿರಂಗದಲ್ಲಿ ಕಾರ್ಯಸ್ಥಗಿತದಿಂದ ಒತ್ತಡಗಳು ಜಾಸ್ತಿಯಾಗಲಿವೆ. ದಾಂಪತ್ಯದಲ್ಲಿ ಅನಾವಶ್ಯಕ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಿರಿ. ಕೆಳ ದರ್ಜೆಯ ನೌಕರರ ತಪ್ಪಿಂದ ತೊಂದರೆ, ಉದ್ಯೋಗಕ್ಕೆ ಕಂಟಕವಾಗುವ ಸಾಧ್ಯತೆ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ ಮಾಡುವಿರಿ, ಸಂಧಿವಾತ-ರಕ್ತದೋಷ ಸಮಸ್ಯೆ, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ.

ಮೀನರಾಶಿ
ಆಕಸ್ಮಿಕವಾಗಿ ಗೌರವ, ಬಡ್ತಿ ಪ್ರಾಪ್ತಿ, ಸ್ನೇಹಿತರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಆಗಾಗ ಕಾರ್ಯಗಳಲ್ಲಿ ಅಡಚಣೆಗಳು ಕಂಡುಬಂದೀತು. ಹಣದ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಅನ್ಯರೊಂದಿಗೆ ಮನಸ್ತಾಪ ಬಾರದಂತೆ ಜಾಗ್ರತೆ ಮಾಡಿರಿ. ಶುಭವಿದೆ. ಮಕ್ಕಳ ವಿಚಾರವಾಗಿ ಕಲಹ, ದಾಂಪತ್ಯದಲ್ಲಿ ವೈಮನಸ್ಸು.


Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular