ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 02-04-2020

ನಿತ್ಯಭವಿಷ್ಯ : 02-04-2020

- Advertisement -

ಮೇಷರಾಶಿ
ದೈಹಿಕ ವಿಷಯಾಸಕ್ತಿ ಹೆಚ್ಚು, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸಲಿದೆ. ಮಕ್ಕಳಿಂದ ನೌಕರ ವರ್ಗದವರಿಂದ ಅಡಚಣೆಗಳು ಕಂಡುಬಂದೀತು. ರಾಜಕೀಯ ವರ್ಗದವರಿಗೆ ತಮ್ಮ ಕ್ಷೇತ್ರದಲ್ಲಿ ಅಪವಾದ ಭೀತಿ ಕಂಡುಬಂದೀತು. ತಂದೆಯೊಂದಿಗೆ ಶತ್ರುತ್ವ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ವೃಷಭರಾಶಿ
ಗ್ರಹ ನಿರ್ಮಾಣದಂತಹ ನೂತನ ಕೆಲಸ ಕಾರ್ಯಗಳಿಗೆ ದುಡುಕದಿರಿ. ಪರದೇಶೀ ಉದ್ಯೋಗಿಗಳಿಗೆ ವಿಶೇಷ ಶ್ರಮ ಪಡಬೇಕಾದೀತು. ಎಲ್ಲವನ್ನೂ ಆತ್ಮಸ್ಥೈರ್ಯದಿಂದ ಎದುರಿಸಿರಿ. ದೇವತಾ ಕಾರ್ಯದ ಚಿಂತನೆ ತಂದೀತು. ಶುಗರ್, ಹೃದಯ ಸಂಬಂಧಿತ ಸಮಸ್ಯೆ, ಸಾಲ, ಶತ್ರು, ಸೇವಕರ ಬಾಧೆ, ಬಂಧುಗಳಿಂದ ಲಾಭ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರದಲ್ಲಿ ಉತ್ತಮ ಫಲ.

ಮಿಥುನರಾಶಿ
ಸಂಗಾತಿಯಿಂದ ಧನ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಮಾನಸಿಕ ಅಸ್ಥಿರತೆಯಿಂದ ಬಳಲುವಿರಿ. ನಿಮ್ಮ ಪರಿಶ್ರಮಕ್ಕೆ ಸರಿಯಾದ ಫ‌ಲಿತಾಂಶ ಸಿಗಲಾರದು. ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದೀತು. ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ. ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಭಾವನೆ ಆಸೆ ಆಕಾಂಕ್ಷೆಗಳು, ಮನೋರಂಜನೆಯಲ್ಲಿ ತೊಡಗುವಿರಿ, ಅಲಂಕಾರಿಕ ವಸ್ತುಗಳಿಗೆ ಖರ್ಚು.

ಕಟಕರಾಶಿ
ಸ್ಥಿರಾಸ್ತಿ ಖರೀದಿ, ಮನೆ ನಿರ್ಮಾಣದ ಯೋಚನೆ, ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಕೆಲಸದ ಒತ್ತಡವಿದೆ. ಸಾಮಾಜಿಕ ರಂಗದಲ್ಲಿ ಹಿನ್ನಡೆ ಕಂಡುಬರಲಿದೆ. ವಿದ್ಯಾರ್ಥಿಗಳು ನಿರುತ್ಸಾಹ ಹೊಂದಲಿದ್ದಾರೆ. ಕೆಲಸ ಕಾರ್ಯಗಳು ಅಡೆತಡೆಯಿಂದ ಮುನ್ನಡೆಯಲಿದೆ. ಸ್ವಯಂಕೃತ ಅಪರಾಧಗಳಿಂದ ತೊಂದರೆ, ಶತ್ರುಗಳ ಬಾಧೆ, ರೋಗ ಬಾಧೆ, ನೆರೆಹೊರೆಯವರಿಂದ ಸಂಕಷ್ಟ.

ಸಿಂಹರಾಶಿ
ಸದ್ಯದ ಸ್ಥಿತಿಯಲ್ಲಿ ದೂರ ಸಂಚಾರ ಉತ್ತಮವಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಉತ್ತಮ ಫ‌ಲಿತಾಂಶ ದೊರಕಲಾರದು. ಶೀತ, ಕಫ‌ ಬಾಧೆಗಳು ಕಂಡುಬಾರದಂತೆ ಜಾಗ್ರತೆ ವಹಿಸಿರಿ. ಗ್ರಹಿಸಿದ ಕಾರ್ಯದಲ್ಲಿ ಜಯ. ಮಕ್ಕಳಿಗಾಗಿ ಸೌಂದರ್ಯ ವರ್ಧಕಗಳಿಗೆ ಖರ್ಚು, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಸ್ಥಳ – ಉದ್ಯೋಗ ಬದಲಾವಣೆ ಆಲೋಚನೆ, ಅಪಘಾತ, ಸೋಲು ನಿರಾಸೆ ಕಾಡುವುದು,

ಕನ್ಯಾರಾಶಿ
ಸ್ಥಿರಾಸ್ತಿ, ಗೃಹ, ವಾಹನ ಖರೀದಿಗೆ ಆಲೋಚನೆ, ಪಾಲುದಾರಿಕೆಯಲ್ಲಿ ಆರ್ಥಿಕ ಸಮಸ್ಯೆ, ವ್ಯವಹಾರದಲ್ಲಿ ಎಚ್ಚರಿಕೆ, ಆಗಾಗ ಅಡೆತಡೆಗಳು ತೋರಿಬಂದು ಮನಸ್ಸಿಗೆ ನೆಮ್ಮದಿ ಸಿಗಲಾರದು. ಮುಖ್ಯವಾಗಿ ಯಾವುದೇ ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ಶುಭಮಂಗಲ ಕಾರ್ಯಗಳಿಗೆ ಅಡಚಣೆಗಳು ಬಂದಾವು. ಮಾತೃವಿನಿಂದ ಅನುಕೂಲ, ಗೌರವ ಸನ್ಮಾನ ಪ್ರಾಪ್ತಿ.

ತುಲಾರಾಶಿ
ಸ್ವಂತ ವ್ಯಾಪಾರ ಉದ್ಯಮದಲ್ಲಿ ನಷ್ಟ, ಅನಾರೋಗ್ಯ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಆಗಾಗ ಮಾನಸಿಕ ಸ್ಥಿತಿ ಏರುಪೇರಾದೀತು. ನಿಶ್ಚಿತ ಗುರಿ ಇಲ್ಲದ ಕಾರ್ಯಗಳು ನಡೆಯಲಾರದು. ವೈಯಕ್ತಿಕವಾಗಿ ಉದರ ಸಂಬಂಧಪಟ್ಟ ಸಮಸ್ಯೆಗಳು ಕಂಡುಬಂದಾವು. ವಿದ್ಯಾರ್ಥಿಗಳಿಗೆ ಉದಾಸೀನತೆ ಕಾಡಲಿದೆ. ಉದ್ಯೋಗ ನಿಮಿತ್ತ ಪ್ರಯಾಣ, ಶತ್ರುಗಳಿಂದ ಸೋಲು ನಷ್ಟ.

ವೃಶ್ಚಿಕರಾಶಿ
ಐಷಾರಾಮಿ ಜೀವನ, ಮೃಷ್ಟಾನ್ನ ಭೋಜನ, ಅಧಿಕವಾದ ಖರ್ಚು, ಗುರುಬಲವಿಲ್ಲದಿದ್ದರೂ ಶನಿಬಲ ನಿಮ್ಮನ್ನು ಕಾಪಾಡಲಿದೆ. ನಿಮ್ಮ ಪ್ರಯತ್ನ ಬಲವೇ ಎಲ್ಲಾ ರೀತಿಯ ಮುನ್ನಡೆಗೆ ಸಾಧಕವಾದೀತು. ಆಗಾಗ ಖರ್ಚುವೆಚ್ಚಗಳು ಹೆಚ್ಚಿದರೂ ಧನಾಗಮನಕ್ಕೆ ತೊಂದರೆ ಆಗಲಾರದು. ಮೋಜು ಮಸ್ತಿಯಲ್ಲಿ ವಿಹಾರ, ತಂದೆಯಿಂದ ಲಾಭ, ಪಿತ್ರಾರ್ಜಿತ ಕಲಹಗಳಿಂದ ಮುಕ್ತಿ.

ಧನಸ್ಸುರಾಶಿ
ಬೆವರು ದೋಷ, ಶೀತ ಕೆಮ್ಮು, ಸಂಧಿವಾತ ಬಾಧೆ, ಶತ್ರುಗಳೇ ಮಿತ್ರರಾಗುವ ಸಾಧ್ಯತೆ, ಕಾರ್ಮಿಕರಿಂದ ಉತ್ತಮ ಫಲ, ಮೋಜು ಮಸ್ತಿಯಿಂದ ತೊಂದರೆ. ಗ್ರಹ ನಿರ್ಮಾಣ ಕಾರ್ಯಗಳಿಗೆ ಅವಸರಿಸದಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಬೇಕು. ದೂರ ಸಂಚಾರದಲ್ಲಿ ಸಮಸ್ಯೆಗಳು ಕಂಡುಬಂದಾವು. ನಿರುದ್ಯೋಗಿಗಳಿಗೆ ಬಂದ ಅವಕಾಶಗಳು ನಿಪ್ಫಲವಾದೀತು.

ಮಕರರಾಶಿ
ಆಗಾಗ ಸಮಸ್ಯೆಗಳು ತೋರಿಬಂದರೂ ಕೆಲಸ ಕಾರ್ಯಗಳು ನಿಶ್ಚಿತ ರೂಪದಲ್ಲಿ ನಡೆಯಲಿರುವುದು. ಇದಕ್ಕೆಲ್ಲಾ ಕಾರಣ ನಿಮ್ಮ ಪ್ರಯತ್ನ ಬಲ ಹಾಗೂ ದೃಢ ನಿರ್ಧಾರಗಳು. ಆರೋಗ್ಯ ಭಾಗ್ಯದಲ್ಲಿ ಏರುಪೇರಾದೀತು. ಸಂತಾನ ದೋಷ, ಗರ್ಭಿಣಿಯರು ಎಚ್ಚರ, ಉದ್ಯೋಗ-ಸ್ಥಳ ಬದಲಾವಣೆಗೆ ಅವಕಾಶ, ಐಷಾರಾಮಿ ಜೀವನ, ದುಶ್ಚಟಗಳಿಂದ ನಷ್ಟ ಸಾಧ್ಯತೆ.

ಕುಂಭರಾಶಿ
ಆಕಸ್ಮಿಕ ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಮಾನಸಿಕವಾಗಿ ನೆಮ್ಮದಿ ಇಲ್ಲದಂತಹ ದಿನಗಳಿವು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ಮಾನಸಿಕವಾಗಿ ಅಸ್ಥಿರತೆಗಳು ಕಂಡುಬಂದಾವು. ಆರ್ಥಿಕವಾಗಿ ಚೇತರಿಕೆ ಕಂಡುಬಂದು ಸಮಾಧಾನವಿದೆ. ವಾಹನದಿಂದ ತೊಂದರೆ, ಮಾತೃವಿನಿಂದ ಬೈಗುಳ, ಮಿತ್ರರಿಂದ ಸಂಕಷ್ಟಕ್ಕೆ ಸಿಲುಕುವಿರಿ.

ಮೀನರಾಶಿ
ಎಲ್ಲದಕ್ಕೂ ನಿಮ್ಮ ಪ್ರಯತ್ನ ಬಲವೇ ಉತ್ತಮ ಫ‌ಲವನ್ನು ನೀಡಲಿದೆ. ಆರ್ಥಿಕವಾಗಿ ಮುನ್ನಡೆ ಇದ್ದರೂ ಖರ್ಚು ವೆಚ್ಚಗಳಲ್ಲಿ ನಿಗಾ ಇರಲಿ. ಅನಿರೀಕ್ಷಿತ ಶುಭವಾರ್ತೆ ನಿಮ್ಮನ್ನು ಉತ್ಸಾಹಶೀಲರನ್ನಾಗಿಸಲಿದೆ. ಮಕ್ಕಳಿಂದ ಸಂಕಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ದಾಂಪತ್ಯ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಬಂಧುಗಳಿಂದ ಆತ್ಮೀಯತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular