ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (19-10-2020)

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (19-10-2020)

- Advertisement -

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಅಶ್ವಯುಜ ಮಾಸೆ, ಶುಕ್ಲ ಪಕ್ಷದ ತೃತೀಯ ತಿಥಿ, ವಿಶಾಖ ನಕ್ಷತ್ರ, ಆಯುಷ್ ಮಾನ್ ಯೋಗ, ತೈ ತುಲಾ ಕರಣ, ಅಕ್ಟೋಬರ್ 19 , ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ 6 ಗಂಟೆ 27 ನಿಮಿಷದಿಂದ 7 ಗಂಟೆ 56 ನಿಮಿಷದವರೆಗೂ ಇದೆ.

ಇಂದು ದೇವಿಯ ಮೂರನೆಯ ಅವತಾರ. ಮದುವೆಯಾಗುವ ಸಂದರ್ಭದ ಅವತಾರವೇ ಚಂದ್ರಘಂಟಾ ದೇವಿ ಅವತಾರ. ಪಾರ್ವತಿ ದೇವಿಯು ಹದಿನಾರು ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿ ಶಿವನನ್ನು ಮೆಚ್ಚಿಸಿ ಮದುವೆಗೆ ಸಿದ್ಧತೆಗಳು ನಡೆಯುತ್ತವೆ. ಚಂದ್ರಘಂಟಾ ದೇವಿಯ ಮೂರನೇ ದಿನದಂದು ಸುಮಂಗಲೆಯರು ಮತ್ತು ಕುಮಾರಿಯರು ದೇವಿ ಪೂಜೆಯನ್ನು ಮಾಡುವುದರಿಂದ ಅದ್ಭುತವಾದ ಫಲಿತಾಂಶವನ್ನು ಪಡೆಯುತ್ತೀರಿ. ಚಂದ್ರಘಂಟಾ ದೇವಿಯ ತಾಯಿ ಮಾಯೆಯ ಶಿವನನ್ನು ನೋಡಿ ಪ್ರಜ್ಞೆ ತಪ್ಪಿ ಬೀಳುತ್ತಾರೆ.

ಆಗ ಪಾರ್ವತಿ ದೇವಿಯು ಚಂದ್ರಘಂಟಾ ದೇವಿಯ ರೂಪವಾಗಿ ತಲೆಯಲ್ಲಿ ಚಂದ್ರನನ್ನು ಧರಿಸಿ ಶಿವನನ್ನು ಪ್ರಾರ್ಥಿಸುತ್ತಾರೆ. ತಂಪಾದ ಹಾಗೆ, ಸಮಾಧಾನಚಿತ್ತವಾಗಿ, ರಾಜಕುಮಾರನ ಹಾಗೆ, ಧೈರ್ಯ ತುಂಬಿಸುವ ಹಾಗೆ, ರೂಪವನ್ನು ತೋರಿಸಿ ನಮ್ಮ ಅಮ್ಮ ಖುಷಿ ಪಡಲಿ ಎಂದು ಕೇಳಿಕೊಳ್ಳುತ್ತಾರೆ. ಆಗ ಶಿವ ಮೋಹಕ ರಾಜಕುಮಾರನ ರೂಪದಲ್ಲಿ ಪ್ರತ್ಯಕ್ಷರಾಗುತ್ತಾರೆ. ಆಗ ಪಾರ್ವತಿ ದೇವಿಯ ತಾಯಿ ಅವರಿಬ್ಬರ ಜೋಡಿಯನ್ನು ನೋಡಿ ಖುಷಿ ಪಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ. ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ
ಚೆನ್ನಾಗಿದೆ ಹಳೆಯ ಕಮಿಟ್ಮೆಂಟ್ ಗಳ ಒದ್ದಾಟ ಎಳೆದಾಟ ವಿರುತ್ತದೆ. ಅಪವಾದಗಳ ಪ್ರಭಾವವೂ ಇದೆ ಎಚ್ಚರಿಕೆ. ಭೂಮಿ ವಿಚಾರ ದಲ್ಲೊಂದು ತೊಳಲಾಟ ಎಚ್ಚರಿಕೆ.

ವೃಷಭ ರಾಶಿ
ಇರುವ ಕಮಿಟ್ ಮೆಂಟ್ ಗಳನ್ನು ಸರಿ ಮಾಡಿಕೊಳ್ಳುವ, ನಿವಾರಣೆ ಮಾಡಿಕೊಳ್ಳುವಂತೆ ಶಕ್ತಿ ಇದೆ.

ಮಿಥುನ ರಾಶಿ
ಕಡು ಕಷ್ಟದಲ್ಲೂ ಭಗವತಿ ನಿಮಗೆ ಒಳ್ಳೆಯ ದಾರಿಯನ್ನು ಕಲ್ಪಿಸಿಕೊಡುತ್ತಾರೆ.

ಕರ್ಕಾಟಕ ರಾಶಿ
ಮಕ್ಕಳ ವಿಚಾರದಲ್ಲಿ ಬೆಳವಣಿಗೆಯನ್ನು ನೋಡುವಂತಹ ಅದ್ಭುತವಾದ ದಿನ. ತುಂಬಾ ಇನ್ವೆಸ್ಟ್ ಮಾಡಲು ಹೋಗಬೇಡಿ.

ಸಿಂಹ ರಾಶಿ
ಮಕ್ಕಳ ಆರೋಗ್ಯದ ಬಗ್ಗೆ ವಿದ್ಯೆಯ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತೀರಿ, ಪ್ರಕೃತಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತದೆ ಯೋಚನೆ ಮಾಡುವುದನ್ನು ಬಿಡಿ.

ಕನ್ಯಾ ರಾಶಿ
ಐದು ಜನ ಸದ್ಬ್ರಾಹ್ಮಣರಿಗೆ ಕೈ ಎತ್ತಿ ಕೊಡುವಂತಹ ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ ಮಾಡಿ.

ತುಲಾ ರಾಶಿ
ಮನೆಯವರಿಗೂಸ್ಕರ ಜಾರಿಗೋಸ್ಕರ ಸಣ್ಣ ಹೊರೆಯ ಬಾಧೆಯಲ್ಲಿ ಬೀಳುತ್ತೀರಿ ತೊಂದರೇನೂ ಇಲ್ಲ.

ವೃಶ್ಚಿಕ ರಾಶಿ
ಯಾವುದೋ ಒಂದು ಗುರು ಸ್ವರೂಪದಲ್ಲಿ ನಿಮಗೆ ಕಾವಲಾಗಿ ಬಂದು ನಿಲ್ಲುತ್ತದೆ. ನಾವು ಮಾಡಿದ ಧರ್ಮ ಒಂದಲ್ಲ ಒಂದು ದಿನ ನಮ್ಮನ್ನು ಕಾಪಾಡುತ್ತದೆ.

ಧನಸ್ಸು ರಾಶಿ
ಪರಿಶ್ರಮ ಜಾಸ್ತಿ ಪ್ರತಿಫಲ ಅರ್ಥ ಮಾತ್ರ ಇರುತ್ತದೆ.

ಮಕರ ರಾಶಿ
ಧರ್ಮ ಮಾರ್ಗದ ಸಂಪಾದನೆಯಲ್ಲಿ ಬಹುದೊಡ್ಡ ಪ್ರಗತಿಯನ್ನು ಸಂಪಾದನೆಯನ್ನು ಪಡೆಯುತ್ತೀರಿ.

ಕುಂಭ ರಾಶಿ
ಜಡ್ಜ್, ಅಡ್ವೈಸರ್, ಟೀಚರ್, ಲಾಯರ್, ಡಾಕ್ಟರ್, ನರ್ಸ್, ಪುರೋಹಿತರಾಗಿ, ಆಚಾರ್ಯರಾಗಿ ಇರುವಂತಹವರಿಗೆ ಅದ್ಭುತವಾದ ದಿನ.

ಮೀನ ರಾಶಿ
ಚೆನ್ನಾಗಿದೆ, ವಿಶೇಷವಾದ ಬಲ ಇರುವಂತಹ ದಿನ. ಗುರುವಿನ ಸಾರದಲ್ಲಿ ಚಂದ್ರನ ಇರುವುದರಿಂದ ಗುರು ಕೇಂದ್ರದಲ್ಲೇ ಇರುವುದರಿಂದ ವೃತ್ತಿಪರವಾಗಿ ಒಂದು ಸಣ್ಣ ತೊಳಲಾಟ ವಿದ್ದರೂ ಗೆದ್ದು ಬರುತ್ತೀರಿ ಒಳ್ಳೆಯದೆ ಆಗುತ್ತದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular